ರಮಾನಂದ ಐನಕೈಯವರು ಹೇಳುವ ನಾನು, ನಾವು ಕಾನ್ಸೆಪ್ಟ್ ಈ ದೇಶವನ್ನು ಬೇರೆ ದೇಶಗಳಿಂದ ವಿಭಿನ್ನವಾಗಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ. ವಿಷಾದನೀಯ ಸಂಗತಿಯೆಂದರೆ ನಮ್ಮ ಪೂರ್ವಜರು ಸಾಧಿಸಿದ್ದಷ್ಟನ್ನೇ ಆಧಾರವಾಗಿಸಿ ಈ ಎರಡು ಶತಮಾನಗಳಲ್ಲಿ ಡಾಲರ್ಸ್ ಕಾಲೋನಿ ಯಲ್ಲಿ ಮಠ ಕಟ್ಟುವ ಮಂದಿ, ಡಾಲರ್ಸ್ ಕಾಲೋನಿ ಯಲ್ಲಿ ಸೈಟ್ ಗಿಟ್ಟಿಸುವ ಸಾಹಿತಿಗಳು ಹೆಚ್ಚಿನವರಾಗಿದ್ದಾರೆ. ಡಾಲರ್ಸ್ ಜೋಬಿನಲ್ಲಿಟ್ಟಿದ್ದಾರೆ ಎಂದರೆ ಕರೆದು ಸನ್ಮಾನಿಸುವ , ಆಶೀರ್ವದಿಸುವ ಮತ್ತು ಆ ಡಾಲರ್ಸ್ ಪತಿಗಳ ಇಶಾರೆಗೆ ನರ್ತಿಸುವ ಸ್ವಾಮಿeಜಿಗಳ ದಂಡೇ ಈ ಎರಡು ಶತಮಾನಗಳಲ್ಲಿ ಹುಟ್ಟಿಕೊಂಡಿದ್ದಾರೆ. ಹಾಗಾದರೆ ಸನಾತನ ಧರ್ಮದಲ್ಲಿ ಹೇಳಿದಂತಹ ಅಧ್ಯಾತ್ಮವನ್ನು ಅನೂಚಾನಾಗಿ ಅನುಸರಿಸುವವರು ಇಲ್ಲವೇ ಎಂದರೆ ಇದ್ದಾರೆ ಎಂಬ ಉತ್ತರವಿದೆ. ಅವರೆಲ್ಲ ತಮ್ಮ ತಮ್ಮ ಆಧ್ಯಾತ್ಮಿಕ ಸಾಧನೆಗಳಿಗಾಗಿ ದೂರದ , ಜನಸಂಪರ್ಕವಿಲ್ಲದ ಗುಡ್ಡ ಗಾಡುಗಳಲ್ಲಿ ಕಂದ ಮೂಲಾಹಾರಗಳನ್ನು ಸೇವಿಸುತ್ತ ಸಾಧನೆಗೈಯುತ್ತಿದ್ದಾರೆ. ಈ ಹೇಳಿಕೆಯ ಸತ್ಯಾಸತ್ಯತೆಯನ್ನರಿಯಲು ಒಮ್ಮೆ ಹನ್ನೆರಡು ವಷಗಳಿಗೊಮ್ಮೆ ನಡೆಯುವ ಕುಂಭ ಮೇಳದತ್ತ ನೋಟ ಹರಿಸಬೇಕು. ಅಲ್ಲಿ ಈ ದೇಶದ ಸನಾತನೀಯ ಸಂಪತ್ತಾದ ಆಧ್ಯಾತ್ಮಿಕ ಪ್ರಗತಿಯನ್ನು ಕಾಣಬಹುದು. ಮತ್ತೆ ಅಲ್ಲಿಯೂ ಟೊಯೋಟಾ, ಫೋರ್ಸ್ ಒನ್, ವೊಲ್ಕ್ಸ್ ವ್ಯಾಗನ್ ಐಶಾರಾಮೀ ವಾಹನಗಳಲ್ಲಿ ಸುತ್ತಾಡುವ ಸ್ವಾಮೀಜಿಗಳ ಬಗೆಗೆ ನಾನು ಹೇಳಿದ್ದಲ್ಲ.
ಇನ್ನು ಐನಕೈಯವರು ಪ್ರಸ್ತಾಪಿಸುವ ವಿಷಯದಲ್ಲಿ ಬಹಳ ಅಂಶಗಳನ್ನು ಹೇಳಿಲ್ಲ. ಸುಮಾರು ಒಂದು, ಒಂದೂವರೆ ಸಾವಿರ ವರ್ಷಗಳ ಜಾಗತಿಕ ಇತಿಹಾಸ, ಜನಸಂಖ್ಯಾ ಅಂಕಿ ಅಂಶಗಳನ್ನು ಅವಲೋಕಿಸಿದರೆ, ಯಾವತ್ತೂ ಯುರೇಸಿಯಾ ( ಏಷ್ಯಾ ಅಂಡ್ ಯುರೋಪ್ ಖಂಡಗಳು ಸೇರಿ ಯುರೇಸಿಯಾ ಎನ್ನುತ್ತಾರೆ. ) ಜನಸಂಖ್ಯೆ ಜಾಗತಿಕ ಜನಸಂಕ್ಯೆಯ ಬಹುಪಾಲು ಒಳಗೊಂಡಿದೆ. ಜನಸಂಖ್ಯೆ ಜಾಸ್ತಿಯಿರುವ ಪ್ರದೇಶಗಳಲ್ಲಿ ಒಬ್ಬ ದುಡಿದರೆ ಹಲವಾರು ಮನೆ ಮಂದಿ ಆ ದುಡಿತದ ಆದಾಯವನ್ನವಲಂಬಿಸಿ ಬದುಕುತ್ತಾರೆ. ಅದೇ ಜನಸಂಕ್ಯೆ ಕಡಿಮೆ ಇರುವ ಪ್ರದೇಶದಲ್ಲಿ ಪ್ರತಿಯೊಬ್ಬರೂ ದುಡಿಯುವ ಅವಕಾಶಗಳು ಜಾಸ್ತಿ ಇರುತ್ತವೆ ಮತ್ತು ಜೀವನ ಪರಿಸ್ತಿತಿಗಳು ಪ್ರತಿಯೊಬ್ಬರನ್ನು ದುಡಿಯಲು ಹಚ್ಚುತ್ತವೆ. ಜಾಗತಿಕ ಭೌಗೋಲಿಕ ಸ್ತಿತಿ ಗತಿಗಳನ್ನು ಅವಲೋಕಿಸಿದರೆ , ಪಾಶ್ಚಿಮಾತ್ಯ ಪ್ರದೇಶಗಳಲ್ಲಿ ಆಗಾಗ ಬಂದೊದಗುವ ಪ್ರಕ್ರತಿ ವಿಕೋಪಗಳನ್ನು ಗಮನಿಸಿದಾಗ , ಪುನಶ್ಚೇತನ ಕಾರ್ಯಗಳಿಗೆ ಬಹು ಶ್ರಮ ಮತ್ತು ಧನ, ಸಂಪತ್ತು ಆಗಾಗ ವಿನಿಯೋಗವಾಗುವದರಿಂದ ಧನ ಗಳಿಕೆಗೆ ಹೆಚ್ಚಿನ ಒತ್ತು ಕೊಡುವ ಅವಶ್ಯಕತೆಯೂ ಆ ಪ್ರದೇಶಗಳಲ್ಲಿರುತ್ತವೆ. ಈ ಎಲ್ಲ ಅಂಶಗಳೂ ದಿನ ನಿತ್ಯದ ಜೀವನ ಪದ್ಧತಿಯ ಮೇಲೆ ಪ್ರಭಾವ ಬೀರುತ್ತವೆ ಹಾಗು ಜೀವನ ಪದ್ಧತಿಯನ್ನು ರೂಪಿಸುತ್ತವೆ.
ಇನ್ನೊಂದು ಅಂಶ ಆಲಸ್ಯದ ಬಗ್ಗೆ. ಭೂ ಮಧ್ಯ ರೇಖೆಯ ಸುತ್ತ ಮುತ್ತ ವಾಸಿಸುವ ಜನಾಂಗದ ಜನರು ಸೂರ್ಯ ಕಿರಣಗಳನ್ನು ನೇರವಾಗಿ ಪಡೆಯುವದರಿಂದ ಅಲ್ಲಿಯ ಜನರ ಚರ್ಮ ಸದಾ ಕಪ್ಪು ಬಣ್ಣದಿಂದಿರುತ್ತದೆ. ಆದರೆ ಆ ಜನರು ಸದಾ ಚುರುಕಾಗಿ , ಹೆಚ್ಚಿನ ದೈಹಿಕ ಶಕ್ತಿಯನ್ನು ಹೊಂದಿ , ಹೆಚ್ಚಿನ ಆಯಸ್ಸನ್ನು ಪಡೆದು ಬದುಕುತ್ತಾರೆ. ಅದೇ ಭೂಮಧ್ಯ ರೇಖೆಯಿಂದ ದೂರವಿರುವ, ದಟ್ಟ ಅರಣ್ಯ ಪ್ರದೇಶದಲ್ಲಿ ಬದುಕುವ ಜನರು ಆಲಸ್ಯದಿಂದೊಡಗೂಡಿ , ರೋಗ ರುಜನಿಗಳಿಗೊಳಗಾಗಿ ಸರ್ವೇ ಸಾಮಾನ್ಯವಾಗಿ ಕಡಿಮೆ ಅಯುರ್ದಾಯ ಹೊಂದಿದವರಾಗಿರುತ್ತಾರೆ. ಯಾವುದೇ ಪೂರ್ವಾಗ್ರಹವಿಲ್ಲದೆ, ಕೇವಲ ಅಭ್ಯಾಸದ ದೃಷ್ಟಿಯಿಂದ ಯೋಚಿಸುವದಾದರೆ ಸರಳ ಉದಾಹರಣೆಯಾಗಿ ನಮ್ಮ ಕರಾವಳಿ ಪ್ರದೇಶ ಮತ್ತು ಮಲೆನಾಡು ಪ್ರದೇಶವನ್ನು ಹೆಸರಿಸಬಹುದು.
ಸಾಕು, ಸಾಕು, ವಿಮರ್ಶೆಯೇ ಲೇಖನಕ್ಕಿಂತ ಉದ್ದವಾಗಬಾರದು. ಲೇಖನ ಓದಲು ಈ ಲಿಂಕ್ ಬಳಸಿ:
http://epapervijayavani.in/Details.aspx?id=3924&boxid=3145437
ಹಾಗೆ ರಮಾನಂದ ಐನಕೈರವರು ನನಗೆ ವೈಯಕ್ತಿಕವಾಗಿ ಪರಿಚಯವಿಲ್ಲ. ನಿಮ್ಮಲ್ಯಾರಿಗಾದರೂ ಪರಿಚಯವಿದ್ದರೆ ಈ ವಿಮರ್ಶಾತ್ಮಕ ಮಾತುಗಳನ್ನು ಅವರ ಗಮನಕ್ಕೆ ತನ್ನಿ.
ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
www.hariharbhat.blogspot.com
February 16 , 2013.
No comments:
Post a Comment