Friday, November 30, 2012

" ಕನ್ನಡ ಪ್ರಭ "  ದಿನಪತ್ರಿಕೆ   29.11.2012

ನೀವೆಲ್ಲ ಓದಿರುತ್ತೀರಿ. ಮುಖಪುಟದಲ್ಲಿ ಮೈಯ್ಯಾಸ್ ಬಗ್ಗೆ ಒಂದು ವರದಿ ರೂಪದಲ್ಲಿ ಲೇಖನವಿತ್ತು. ಆ ಲೇಖನ   ಕುರಿತು  ನಾನೊಂದು ಪ್ರತಿಕ್ರಿಯೆ ಕಳಿಸಿದ್ದೆ. ನನ್ನಂತೆ ಸಾವಿರಾರು ಜನರು ಪ್ರತಿಕ್ರಿಯಿಸುವದರಿಂದ ಪ್ರಕಟಣೆಗೆ ಅವಕಾಶವಾಗಿರಲಿಕ್ಕಿಲ್ಲ , ಎಂದುಕೊಂಡಿದ್ದೇನೆ  . ನೀವೊಮ್ಮೆ ಓದಿ , ಪ್ರಕಟಣೆಗೆ ಈ ಪ್ರತಿಕ್ರಿಯೆ ಅಹ್ರವಾಗಿತ್ತೆ , ಬರೆಯಿರಿ :

ವಿ. ಭಟ್ ರಿಗೆ ವಂದನೆಗಳು.

ಮಯ್ಯಾಸ್ ಏನೇ ಮಾಡಿದರೂ   ಅಲ್ಲೊಂದು ಹೊಸ ಆವಿಷ್ಕಾರ ಇರುತ್ತದೆ. ಅಲ್ಲದೆ ಆ ಆವಿಷ್ಕಾರ ಜನೋಪಯೋಗಿ ಆಗಿರುತ್ತದೆ. ಹೊಸ ಹೊಸ ಚಿಂತನೆಗಳಿಗೆ   ಮೂರ್ತ ರೂಪ ಕೊಡುವಲ್ಲಿ ಮಯ್ಯರವರು ಯಶಸ್ವಿಯಾಗುತ್ತಾರೆಂಬುದು  ಅಭಿಮಾನದ ಹಾಗು ಸಂತೋಷದ ವಿಷಯ. ಶುಚಿ, ರುಚಿ ಕಾಯ್ದುಕೊಂಡು , ಗಿರಾಕಿಗಳಿಗೆ ಸ್ನೇಹಪರರಾಗಿರುವದು, ನೌಕರರು ಸ್ನೇಹ ರೀತಿಯಿಂದ ಗಿರಾಕಿಗಳ ಜೊತೆ ವ್ಯವಹರಿಸುವಂತೆ ನೋಡಿಕೊಳ್ಳುವದು ಮಯ್ಯರವರ ವಿಶೇಷ ಸಾಮರ್ಥ್ಯ .

ಈಗ ಮುರು, ನಾಲ್ಕು ತಿಂಗಳು ಕಾಯ್ದಿಡಬಹುದಾದ ಆಹಾರ ಪದಾರ್ಥಗಳನ್ನು ಜನರಿಗೆ ನೀಡಬಯಸುವದು ಆಹಾರ ಕ್ರಮದಲ್ಲಿ ಒಂದು ಕ್ರಾಂತಿಯಾದೀತು. ಆದರೆ ಇಲ್ಲೊಂದು ವಿಚಾರ. ಈ ಆವಿಷ್ಕಾರವನ್ನು ಜನತೆಗೆ ಬಿಡುಗಡೆ ಮಾಡುವ ಮುನ್ನ ಸೂಕ್ತ ವೈಜ್ಞಾನಿಕ ವಿಶ್ಲೇಷಣೆಗೊಳಪಡಿಸಿದ್ದಾರೆಯೇ ?   ಪ್ರಾಯೋಗಿಕವಾಗಿ ಬಿಡುಗಡೆ ಮಾಡಿ ಅನುಕೂಲಕರ ಎಂದು ಕಂಡುಕೊಂಡಿದ್ದಾರೆಯೇ ?

ವೈಜ್ಞಾನಿಕವಾಗಿ ಅವಲೋಕಿಸಿದಾಗ ಜೀವ ನೆಲೆಸಿರುವ ದೇಹ ಇರುವದೇ ಜೀವಕೋಶ ( cell  ) ಒಂದರ ಸಾಮರ್ಥ್ಯದ ಮೇಲೆ. ಅಂದರೆ ಆರೋಗ್ಯ ಸಂಪೂರ್ಣವಾಗಿ  , ಈ ಜೀವಕೋಶದ  ಮೇಲೆ ಅವಲಂಬಿತವಾಗಿದೆ. ತಯಾರಿಸಿದ ಆಹಾರ ಶಿತಲಿeಕರಣ ( ರೆಫ್ರಿಜರೇಟರ್ )  ವ್ಯವಸ್ತೆಯಲ್ಲಿ ಶೇಖರಿಸಿಟ್ಟು , ಎರಡರಿಂದ ಮೂರು ತಿಂಗಳುಗಳ ವರೆಗೂ ತಿಂದರೆ ದೇಹದ ಜೀವಕೋಶಗಳ ಮೇಲೆ ಯಾವರೀತಿಯ ಪರಿಣಾಮ ಬೀರೀತು ಎಂಬ ಅಧ್ಯಯನದ ಅವಶ್ಯಕತೆ ಉಂಟಲ್ಲವೇ ? ಅದರಲ್ಲೂ ಈಗಿನ ಮಾರುಕಟ್ಟೆ  ದರಕ್ಕಿಂತ ಕಡಿಮೆಯಲ್ಲಿ ದೊರಕುವ ಹೊಸ ಆವಿಷ್ಕಾರಕ್ಕೆ ಜನ ಮುಗಿ ಬೀಳುವದು ಸಹಜ. ಎಲ್ಲ ಮನೆಗಳಲ್ಲಿ ಶಿತಲಿeಕರಣ ವ್ಯವಸ್ತೆ ಇರುವದಿಲ್ಲ. ಶೀತಲೀಕರಣ ಇದ್ದ ಮನೆಗಳಲ್ಲೂ ಆಗಾಗ ವಿದ್ಯುತ್ ಇರುವದಿಲ್ಲ. ಹಳ್ಳಿ ಗಳಲ್ಲಂತೂ   ಆರರಿಂದ ಎಂಟು ಘಂಟೆ ವಿದ್ಯುತ್ ಇರುವದಿಲ್ಲ.

ಇಸ್ಟೇ ಅಲ್ಲ. ಯೋಚಿಸಿ. ಮನ ಏವ ಮನುಷ್ಯಾಣಾಂ , ಎಂದು ನಮ್ಮ ಹಿರಿಯರು ಸಾರಿ ಸಾರಿ ಹೇಳಿದ್ದಾರೆ .
ಈ ಮನಸ್ಸು ಸರಿಯಾಗಿ ಅಥವಾ ಒತ ಪ್ರೋತವಾಗಿ ನಡೆದುಕೊಳ್ಳುವದು  ನಾವು ತಿನ್ನುವ ಆಹಾರವನ್ನು ಅವಲಂಬಿಸಿದೆ ಎಂದು ಹಲವಾರು ವೈಜ್ಞಾನಿಕ   ಅಭ್ಯಾಸಗಳು , ನಮ್ಮ ಹಿರಿಯರ ನಂಬಿಗೆಗಳನ್ನು ಪುರಸ್ಕರಿಸಿವೆ.  ಇವೆಲ್ಲ ನಮ್ಮ ಮೈಯ್ಯರವರಿಗೆ ಹೊಸ ವಿಚಾರಗಳಲ್ಲ. ಸುಸಂಸ್ಕ್ರತರು , ಸಚ್ಚಾರಿತ್ರರು, ಸಸ್ನೇಹಿಗಳು, ಸರಳ ಜೀವಿಗಳು  ಆಗಿದ್ದಾರೆ   ನಮ್ಮ ಮಯ್ಯರವರು.

ಈಗಾಗಲೇ ನಾವು ಹಿಂದಿನ ಹೊಸ ಆವಿಷ್ಕಾರಗಳಾದ ಫಿಜ್ಜ್ಯಾ , ಬರ್ಗರ್ , ವಿವಿಧ ರೀತಿಯ ಐಸ್ಕ್ರೀಮ್ಸ , ಒಟ್ಟಾರೆ ಧಿಡೀರ್ ಆಹಾರಗಳು  ( ರೆಡಿ ಫುಡ್ಸ್ ) , ಚಿಪ್ಸ್ ನಂತಹ ಎಣ್ಣೆ ಪದಾರ್ಥಗಳು ಇತ್ಯಾದಿ ಆಹಾರ ಆವಿಷ್ಕಾರಗಳಿ0ದಾಗುತ್ತಿರುವ   ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದೇವೆ ಅಲ್ಲದೆ ಆ ಕುರಿತು ಜಗತ್ತಿನ ಜಾಗ್ರತಿಗಾಗಿ ಸಾಕಷ್ಟು ಶ್ರಮಿಸುತ್ತಿದ್ದೇವೆ.  ದೊಡ್ಡ ಪ್ರಮಾಣದಲ್ಲಿ ಜಗತ್ತಿನಲ್ಲಿ ಹಣ ವ್ಯಯವಾಗುತ್ತಿದೆ.

ಈ ರೀತಿ ಸಂದಿಗ್ಧ , ಕಲುಷಿತ ವಾತಾವರಣದಲ್ಲಿ ಮಯ್ಯರವರ ಹೊಸ ಸಾಹಸವನ್ನು ಹೇಗೆ ಸ್ವಾಗತಿಸಬೇಕು ಎಂಬುದು ಗೊಂದಲವನ್ನು೦ಟುಮಾಡುತ್ತಿದೆ.

ಹರಿಹರ ಭಟ್, ಬೆಂಗಳೂರು.
ಶಿಕ್ಷಕ ,  ಚಿಂತಕ  ,  ವಿಮರ್ಶಕ  , ಫೇಸ್ ಬುಕ್ ಬರಹಗಾರ.

Thursday, November 29, 2012

ಮೊನ್ನೆ ರಮಾರಮಣನ ಪತ್ನಿ ಶ್ರೀ ವಲ್ಲಭೆ ಸಿಕ್ಕಿದ್ದಳು. ಬಾವ ನಾಲಗೆ ದಪ್ಪ ಆಗೊeಜು  ಅಂದ್ಲು.  ಬಜೆ ಹತ್ರ ಹೋಗೆ ಅಂದೆ . ಎಂಥದಾ ಬಾವಾ ಅಂದ್ಲು.  ಬಜೆ  ತಿಕ್ಕೆ  ಎಂದೇ.  ಅಯ್ಯೋ.... ಭಾವಾ ,  ಆ  ಬಜೆ ಡಾಕ್ಟರ್ ಸಹವಾಸ ಬ್ಯಾಡದೋ ಅಂದ್ಲು. ಯಾಕೆ ? ಎಂಥಾ ಆತೆ  ಶ್ರೀ ವಲ್ಲಭೆ ಎಂದೆ.

ತಗಾ ಶುರು ಹಚ್ಕ0ಡಳು . ಭಾವ.... ಕೆಳಗಿನ ಮನೆ ಚೆರಬಿ ,  ಆ.......  ಎಂದೆ . ಅದೆಯೋ !  ಚೆನ್ನಿಗರಾಯ ರಮಾರಮಣನ ಬಾ-ಮೈದನ ಹೆಂಡ್ತಿ , ಬಿಜಿ ಬಿಜಿ ರಾಮಕ್ಕ ........ ಒಹೋ ಎಂದೆ. ಹೇಳು ಮತ್ತೆ ಎಂದಾಗ ಶುರುವಾಯ್ತು.  ಆ ರಾಮಕ್ಕನ ಮನೇಲಿ ಮೊನ್ನೆ ಮಳೆ ಬಂದಾಗ ಕೆಂಪಿರವೇ   ಎಲ್ಲ ಕಡೇ  ಹರಡಕಂಡ್ಬಿಟ್ಟಿತ್ತು.  ಅದರ ಮಗಳು ರೂಮಿ , ಅದೇ MBA ಓದ್ತಲಾ , ಅದರ ಮೈಮೇಲೆಲ್ಲ ರಾತ್ರೆ ಕೆಮ್ಪಿರವೇ  ಕಚ್ಚಿ ದಪ್ಪ ದಪ್ಪ ದಡಸ್ಲೆ ಆಗೋಗಿತ್ತು. ಎಂಗೆ ಫೋನ್ ಮಾಡಿದ ರಾಮಕ್ಕ ಹಿಂಗೆಲ್ಲ ಆಗೋತು , ಏನ್ ಮಾಡಲೇ, ಕೂಸು ಉರಿ ಉರಿ ಹೇಳ್ತು ಎಂತು.  ಅಲ್ಲೇ ಹುಣಿಸೆ ಹಣ್ಣು ನೀರ್ ಮಾಡಿ ತಿಕ್ಕೆ ರಾಮಕ್ಕ , ಎಂಗ ಸಣ್ಣಕ್ಕಿದ್ದಾಗ ಅಜ್ಜಿ ಹಿಂಗೆ ಮಾಡ್ತಿತ್ತು. ಹಳೆ ಕಾಲದ ದುಡ್ಡಿನಾಕಾರದ ದಡಸ್ಲೆ ಎಲ್ಲ ಮಾಯಾ ಆಗೊeಗ್ತಿತ್ತು ಹೇಳದೆ.  ಹೌದನೇ ........  ನೋಡು ಮನೇಲಿ ಅಜ್ಜಿ ಇರಾಕು ಹೇಳುದು ಇದಕ್ಕೇ ಹೇಳಿ ಇಪ್ಪತ್ತು ನಿಮಿಷಾ ಮಾತಾಡ್ತು ರಾಮಕ್ಕ.

ತಮಾಷೆ ಇರೋದು ಇಲ್ಲಿ ಮಾರಾಯ್ರೇ. ಇಸ್ಟೆಲ್ಲಾ ಕೇಳದ ರಾಮಕ್ಕ ಮಾಡಿದ್ದೇನು ಗೊತ್ತೇ ? ಕೂಸು ಉರಿ ಉರಿ ಹೇಳ್ತು , ಏನ್ ಮಾಡೋದು ಗೊತ್ತಾಗ್ತಿಲ್ಲೆ  ಎಂದು , ನೆರೆಮನೆ ಸೀತಕ್ಕ ಹೇಳ್ತು ಹೇಳಿ ಆ ಬಜೆ ಡಾಕ್ಟರ ಹತ್ರ  ಹೋತು. ಅಯ್ಯೋ ಅಯ್ಯೋ ಒಳ್ಳೆ ಟೈಮಿಗೆ ಬಂದ್ರಿ , ಇನ್ಫೆಕ್ಷನ್ ( infection ) ಆಗೊಗಿದ್ರೆ ಏನ್ ಮಾಡ್ತಿದ್ರಿ, ಯಾವುದಕ್ಕೂ observation  ನಲ್ಲಿಡೋವಾ , ಎಂದು ಸ್ಪೆಷಲ್ ವಾರ್ಡ್ ಗೆ ಸೇರ್ಸ್ಕೊಂಬಿಟ್ರು , ಬಜೆ ಡಾಕ್ಟರ್ .   ಶುರುವಾಯ್ತು ನೋಡಿ. ಯಾವುರವ್ರು ? ಬೆಂಗಳೂರಿಗೆ ಬಂದು ಎಷ್ಟು ವರ್ಷಾ ಆಯ್ತು ?  ಯಜಮಾನ್ರು ಏನ್   ಕೆಲ್ಸಾ ?  ಮನೆ ಯಾವಾಗ ಕಟ್ಟಿದ್ದು ?  40 x 60 ನಾ ...........?   50 x 80 ನಾ .......... ?  ಜಾತಕಾ ತಗೊಮ್ಬಂದ್ರಾ  ಕೇಳೋದೊಂದೇ ಉಳಿದಿದ್ದು,  ಎಲ್ಲ ವಿವರಣೆ ಸಿಕ್ತು.  ಕೂಸು ಏನ್ ಕಲಿತ್ರಿ .........?   ಒಹ್  MBA ಅಂದ್ರೆ ಈಗಿನ ಕಾಲದಲೀ .........  ಒಳ್ಳೆ ಕೆಲಸ , ಒಳ್ಳೆ ಗಂಡ ಸಿಗ್ತು ಬಿಡಿ ಎಂಬ ಆಶೀರ್ವಾದ.

ತಂಗೀ , ಎಲ್ಲೆಲ್ಲೆಲ್ಲ ದಡಸ್ಲೆ ಆಯ್ದು ನೋಡವಾ, ನಿಂಗಳು waiting room ನಲ್ಲಿ ಕೂಡ್ರಿ , ಡಾಕ್ಟರ್ ಆಜ್ಞೆ. ಆನೊಬ್ಬ ಇರ್ತೆ ಡಾಕ್ಟ್ರೆ ....... , ರಾಮಕ್ಕ ಹೇಳ್ದ ಮಾತು.  ಏನಿಲ್ಲ, ಎಲ್ಲ ಅಲ್ಲೇ ಕುತ್ಗಳಿe..... ಎಂದರು. ತಿರುಗಿ ಏನು ಹೇಳದೆ ರಾಮಕ್ಕ, ರಾಮಕ್ಕನ ಅಣ್ಣ ಆಚೆ ಬಂದು ನಿಂತರು. ಇತ್ತ ಡಾಕ್ಟರ್ ವಿವಿಧ ರೀತಿ ಹತ್ತಾರು ಟೆಸ್ಟ್ , ಅರ್ಧ ಗಂಟೇಲಿ ಮುಗಿಸಿದರು. ಆರು ಚೂರ್ಣ , ಮುರು ನಿeರೌಶದ  ಆಸ್ಪತ್ರೆ ಅಂಗಡಿಯಿಂದ ತರುವಂತೆ ಆಣತಿ ನೀಡಿ ಹೋದರು. ರಾಮಕ್ಕ ಕೂಸಿನ ಹತ್ರ ಬಂದಾಗ ಕೂಸಿನ ಕಣ್ಣಲ್ಲಿ ನೀರು. ಎಂತಾ ಆತೆ ಕೂಸೆ, ನೋವನೆ, ಅಳ್ತಿದ್ದಿ........ ಎಂದ ರಾಮಕ್ಕಗೆ ಕೂಸಿನಿಂದ  ಒಮ್ಮೆಲೇ ಒತ್ತಾಯ, ಮನೆಗೆ ಹೋಪನ ನಡಿ , ಮನೆಗೆ ಹೋಪನ ಈಗಲೇ.........  ಎಂತದೆ ಕೂಸೆ ,  ಆ  ಬಜೆ ಡಾಕ್ಟರ್ ಹೇಳಿದ್ರು  infection  ಆದ್ರೆ ಕಷ್ಟ , ಎರಡ ದಿವ್ಸ ಇರ್ಲಿ ಹೇಳಿ.  ಕೂಸು ಧಮಕಿ ಕೊಡ್ತು, ನೀ ಇರು ನಾ ಈಗಲೇ ಒಡಿ ಮನೆ ಸೇರ್ಕಂಬವ. ನಮ್ಮನೆ ಬದಿಗಿದ್ದ ಶಾಂತಲ ಲೇಡಿ ಡಾಕ್ಟರ್ ಸಾಕು. ನಡಿ.........  ನಡಿ .............. ಎಂದು ಕೂಸಿನ ಒತ್ತಾಯ. ರಾಮಕ್ಕಂಗೆ ಪೇಚು. ಅಂತು ಇಂತೂ ಡಾಕ್ಟರ್ ಕಡೆ ಮಾತಾಡಿ, ಎಗರಾಡಿ, ಡಾಕ್ಟರಿಗೆ ಧಮಕಿ ಕೊಟ್ಟು ಮನೆಗೆ ಬಂದು ಸೇರ್ಕಂಡ ರಾಮಕ್ಕ ಸುಸ್ತೋ ಸುಸ್ತೋ.  ಎರಡು ದಿನ ರಾಮಕ್ಕಂಗೆ ರೆಸ್ಟು !!!!!!.

ನಮಗೆ ಎಸ್ಟೋ ಸಲ ಜೀವನದಲ್ಲಿ ನಾವು ಅಂದುಕೊಂಡಿರದೆ  ಇದ್ದದ್ದು , ಊಹಿಸಲೂ ಅಸಾದ್ಯವಾದದ್ದು ಆಗಿಹೋಗುತ್ತದೆ. ರಾಮಕ್ಕಳಂತೆ  ನನಗೆ ಒಮ್ಮೆ ಒಬ್ಬ ಬಜೆ ಡಾಕ್ಟರ್ ಗಂಟು ಬಿದ್ದಿದ್ದ.  ಭಾರಿ   ಜನ ಮೆಚ್ಚುವ ಡಾಕ್ಟರ್ ತಾನು ಅಂದುಕೊಂಡವ. ಅಜ್ಜಿ ಹೇಳುವ ಶುಂಟಿ , ಬಜೆ ಕಷಾಯ ಮಾಡಿ, ಚೂರ್ಣ ಮಾಡಿ ಬಾಟಲಿ ತುಂಬಿ ಚೆಂದದ ಹೆಸರು ಹಚ್ಚಿ , ಮುಗ್ಧ ಜನರಿಗೆ ಮಾತಿನ ಮೋಡಿ ಮಾಡಿ , ಇರುವೆ ಕಚ್ಚಿದರೆ infection  ಆದೀತು ಎಂದು ರಾಮಕ್ಕನಂತವಳಿಗೆ ಹೆದರಿಸಿ , ಒಂದು ಚೂರು ಬೆಲ್ಲ ಕಾಯಿಸಿ , food  preservation  ಬೆರಸಿ , ಬಾಟಲಿ ತುಂಬಿ ಎರಡು ರುಪಾಯಿ ಶುಂಟಿ , ಬೆಲ್ಲಕ್ಕೆ ಇಪ್ಪತ್ತು ರುಪಾಯಿ ಕೀಳುವ ಬಜೆ ಡಾಕ್ಟರ್ಗಳು ಎಲ್ಲೆಡೆ ಸಿಗುತ್ತಾರೆ. ನಾವು ಹುಷಾರಾಗಿ, ಜಾಣರಾಗುವದೊಂದೇ   ದಾರಿ. ಅರಿವಿರಲಿ.  ನಾಲಿಗೆ ದಪ್ಪ ಆಗೋದು, ಅಜ್ಜಿ ಬಜೆ ತಿಕ್ಕು ಕೂಸೆ ಎಂಬೋದು ಎಲ್ಲ ಈಗಿನ ಜನಾಂಗದ ಮಕ್ಕಳಿಗೆ ಹೊಸದು.  ಹಳೆಯದೆಂದು ಮೂದಲಿಸದೆ   , ಹೊಸದೆಲ್ಲ ಸ್ವೀಕಾರ ಯೋಗ್ಯ ಎನ್ನದೆ , ವಿಚಾರ ವಿಮರ್ಶೆ ಮಾಡಿ , ಮುಂದಿನ ಜನಾಂಗಕ್ಕೆ ಸೂಕ್ತ ಅರಿವು ಮೂಡಿಸುವದು , ಇಂದಿನ ಜನಾಂಗದ ಕರ್ತವ್ಯ.  ಅರಿವು ನೀಡದಿದ್ದರೆ  ರಾಮಕ್ಕನಿಗೆ ಸಿಕ್ಕಿದಂತ ಬಜೆ ಡಾಕ್ಟರ್ಗಳು ಇನ್ನಸ್ಟು ದುಂಡಗಾಗಿ , ಉಬ್ಬಿ ಎಲ್ಲರನ್ನು ನೋಡಿ ನಗುತ್ತಿರುತ್ತಾರೆ. ಎಚ್ಚರವಿರಲಿ.

ಹರಿಹರ ಭಟ್, ಬೆಂಗಳೂರು.
ಶಿಕ್ಷಕ , ಚಿಂತಕ , ವಿಮರ್ಶಕ , ಫೇಸ್ ಬುಕ್ ಬರಹಗಾರ.
November 30 , 2012.

Tuesday, November 27, 2012

ಚಿಕ್ಕ ಚಿಕ್ಕ  ವಿಚಾರಗಳು, ...................

ನ ಬ್ರೂಯಾತ್ ಸತ್ಯಮಪ್ರಿಯಂ //

ಸತ್ಯವನ್ನು ಅಪ್ರಿಯವಾಗಿ ಹೇಳಬಾರದು.  ಅಂದರೆ ಕೇಳುಗನ ಮನಸ್ಸು   ವಿಕಾರಗೊಂಡು  ನೀವು ಹೇಳಿದ ಸತ್ಯವಾದ ಮಾತು ವ್ಯರ್ಥವಾದೀತು . ಹಾಗಾಗಿ ಅಪ್ರಿಯವಾದ ರೀತಿಯಲ್ಲಿ ಸತ್ಯವನ್ನು ಹೇಳಬಾರದೆಂಬ ಅಭಿಪ್ರಾಯ. ಸತ್ಯವನ್ನೆಂದೂ ಹೇಳದೆ ಇರಬಾರದು ಎಂದಲ್ಲ , ಆದರೆ ಅಪ್ರಿಯವಾಗಿ  ಹೇಳಬಾರದು ಎಂಬುದು ಈ ಮಾತಿನ ತಾತ್ಪರ್ಯ.

ನೋಡಿ ಇತ್ತೀಚೆ ನಮ್ಮ ಮನೆಯ ಪಕ್ಕದಲ್ಲಿ ಒಂದು ಕಿರಾಣಿ ಅಂಗಡಿ ಆರಂಭವಾಗಿದೆ. ನಮಗೆ ಅನುಕೂಲ. ಆದರೆ  ಅಲ್ಲಿ ನಿಂತು ಸಿಗರೇಟು ಸೇದುವವರಿಂದ ಅನಾನುಕೂಲ . ಏನು ಮಾಡುವದು ? ನೇರವಾಗಿ ಹೇಳಿದರೆ ಈ ಕಾಲದಲ್ಲಿ ಯಾರೂ ಕೇಳುವದಿಲ್ಲ. ಹಾಗೆಂದು ಸಹಿಸಲಸಾಧ್ಯವಾದ  ಹೊಗೆಯ ಅನಾನುಕುsಲ.  ನಯವಾಗಿ ಅಂಗಡಿಕಾರನಿಗೆ ಹೇಳಿದೆ. " ನೀವೇನೋ ವ್ಯಾಪಾರ ಮಾಡೋದು ಸರಿ, ನಮಗೆ ಈ ಪರಿ ಕಷ್ಟ , ಏನ ಮಾಡೋದ್ರಿ ?"  ಸರ್ , ನಾನು ಗಿರಾಕಿಗೆ ಹೇಳ್ತೀನಿ ಕೇಳೋದಿಲ್ಲ ?   ಎಂಬುದು ಅಂಗಡಿಕಾರನ ಉತ್ತರ.  ಏನ ಮಾಡೋದು ?  " ಸರಿ ನಾವು ನೀವು ಇಲ್ಲೇ ಇರೋರು ? ಸುಮ್ಮನೆ ಜಗಳ ಯಾಕೆ ? ನಿಮ್ಮ ಗಿರಾಕಿ ಸಿಗರೇಟು ಸೇದುವಾಗ ನಾನು ನಿಮಗೆ ಜೋರಾಗಿ ಹೇಳುತ್ತೇನೆ, ನೀವು ಬೇಸರ ಮಾಡಿಕೊಳ್ಳಬೇಡಿ. ಯಾವ ಸಿಗರೇಟು ಸೇದುವವನೂ ತಿರುಗಿ ದಬಾಯಿಸುವದಿಲ್ಲ. ಮುಂದೆ ನೋಡೋಣ " ಎಂದೆ.  ಸರಿ ಸರಿ , ಸರ್ ಎಂದರು ಅಂಗಡಿಯವರು. ನೀವು ಹೇಳೋದು ಹೇಳಿ, ಇಲ್ಲಿ ಸೇದಬಾರದು ಎಂದು, ಮುಂದೆ ನೋಡೋಣ ಎಂದು ತಿರುಗಿ ಬಂದೆ. ಒಂದೆರಡು ದಿವಸಗಳ ಕಾಲ ಕೀಟಲೆ ಇರಲಿಲ್ಲ. ಮತ್ತೆ ಮೊದಲಿನಂತೆ. ಅಂಗಡಿಯವರು ಯಾಕೆ ಹೇಳುತ್ತಾರೆ ? ಸಿಗರೇಟು ಮಾರಿ, ಸೇದಬೇಡ ಎನ್ನಲಾಗುತ್ತದೆಯೇ ? ಅಂತೆಯೇ ನಾವು ತೊಂದರೆ ಒಮ್ಮೆ ಎರಡು ಬಾರಿ ಆದರೆ ತಡೆದುಕೊಳ್ಳಬಹುದು. ದಿನಾಲು ಅಂಗಡಿ ತೆರೆದಿದ್ದಾಗೆಲ್ಲ  ಈ ಕೀಟಲೆ ನಮಗೆ ಇದ್ದದ್ದೇ  ?  ಯೋಚಿಸಿದೆ. ಸರಿ ಎಂದು ಮರುದಿನ ಗಿರಾಕಿಯೊಬ್ಬ ಸಿಗರೇಟು ಸೇದುತ್ತಿದ್ದಾಗ  ಹೋಗಿ , ಅಂಗಡಿಯವನ ಜೊತೆ ಏರಿದ ದ್ವನಿಯಲ್ಲಿ ಹೇಳತೊಡಗಿದೆ. " ನೀವು ಸಿಗರೇಟು ಮಾರುವವರು ನಿಮ್ಮ ಗಿರಾಕಿಗಳಿಗೆ ಹೇಳ್ಬೇಕ್ರಿ ? ನಾವು ಸಿಗರೇಟು ಸೇದದವರೆeಕೆ ತೊಂದರೆ ಅನುಭವಿಸಬೇಕು ? ನಿಮ್ಮ ಗಿರಾಕಿಗೆ ನೀವು ಹೇಳಬೇಕು . " ಎಂದು ತಿರುಗಿ ಬಂದೆನು.   ನೋಡಿ ಪರಿಣಾಮ , ಈಗ ಸಿಗರೇಟು ಕೊಂಡು ದೂರ ಹೋಗಿ ಸೇದಿ ಪುನಃ ಅಂಗಡಿಗೆ ಬಂದು ಹರಟೆ ಹರಟುತ್ತಾರೆ.

ಇದೆe ರೀತಿ ಸಿಗರೇಟು ಸೇದುವವನೊಬ್ಬ , ಕಿರುದಾಗಿ ನನ್ನ ನೋಡಿ ನಕ್ಕನು. ಇದೆ ಸಮಯ ಎಂದು ಆತನ ಪರಿಚಯ ಮಾಡಿಕೊಂಡೆನು. ಉದ್ಯೋಗ , ಸಂಸಾರ ಎಲ್ಲ ತಿಳಿದೆ. ಸಿಗರೇಟಿನ ಹೊಗೆಯಿಂದ ಸಿಗರೇಟು ಸೇದದವರಿಗೆ ಹೇಗೆ ಆರೋಗ್ಯ ಕೆಡುತ್ತದೆ ಎಂದು ವಿವರಿಸಿದೆ. ಮನೆಯಲ್ಲಿ ಚಿಕ್ಕ ಮಗು ಇದೆ ಎಂದು ತಿಳಿದು, ಮನೆಯಲ್ಲಿ ಸಿಗರೇಟು ಸೇದುವದರಿಂದ ಆ ಮಗುವಿನ ಆರೋಗ್ಯದಲ್ಲಿ ಹೇಗೆ ಏರು ಪೇರು ಆಗುವದು ಎಂದು ವಿವರಿಸಿದೆ. ದಿನವೊಂದಕ್ಕೆ   ಎಷ್ಟು ಸಿಗರೇಟು ಸೇದುತ್ತಿeರಿ ಎಂದು ಕೇಳಿದೆ ? ಹದಿನೈದರಿಂದ ಇಪ್ಪತ್ತು ಎಂದನು. ದಿನವೊಂದಕ್ಕೆ ಒಂದು ನೂರು ರುಪಾಯಿ ಸಿಗರೇಟು, ತಿಂಗಳಿಗೆ ಮುರು ಸಾವಿರ ರುಪಾಯಿ ಖರ್ಚೂ ಅಲ್ಲ ವೇಸ್ಟು , ಎಷ್ಟು ವರ್ಷ ಆತರೀ ?  ಈ ಸಿಗರೇಟು ಎಂದೆ. ಹತ್ತು, ಹನ್ನೆರಡು ವರ್ಷ, ಸರ್  ಎಂದೊಡನೆ ಒಂದು ಸ್ಕೂಟರ್ ಬರುತ್ತಿತ್ತಲ್ರಿe  ಎಂದೆ . ಏನೂ ಮಾತನಾಡಲಿಲ್ಲ ಆ ಮನುಷ್ಯ .

ಮರು ದಿನದಿಂದ ಆ ಮನುಷ್ಯ ಕಂಡಾಗೆಲ್ಲ ಕಾಫಿ ಆಯ್ತೆನ್ರ್ರಿe ? ಎಂದು ಬಿಡುತ್ತೇನೆ. ಸಂತೋಷದಿಂದ ಆಯ್ತು ಸರ್......... ಎಂದು , ನನ್ನ ಯೋಗ ಕ್ಷೇಮ ವಿಚಾರಿಸಿ ಹೋಗುತ್ತಾನೆ.  ಆಶರ್ಯ !!!!!!!!! ಒಂದು ವಾರದ ನಂತರ ಆ ಮನುಷ್ಯ ಹೇಳಿದ್ದು , "  ಸರ್ ಏನೋ ಹೇಳಿದ್ರಿ , ಯಾಕಾಗಬಾರದು ಎಂದು ಯೋಚಿಸಿ ಯೋಚಿಸಿ , ಈಗ ಸಿಗರೇಟು ಕೇವಲ ಎರಡೋ , ನಾಲ್ಕೋ ಸೇದುತ್ತಿದ್ದೇನೆ ಎಂದನು. " ನಾನು ಆತನ ಕೈ ಕುಲುಕಿ , " ಒಮ್ಮೆಲೇ ಬಿಡಲು ಹೋಗಬಾರ್ದ್ರೀ , ಬಿಟ್ಟೆ ಅಂದ್ರೆ ಮತ್ತೆ ಬಂದು ತಗಲಿಕೊಳ್ಳುತ್ತದೆ. ನಿಧಾನಕ್ಕೆ ಒಂದು , ಎರಡು  ...........  ಎಂದು ಹತ್ತಿಪ್ಪತ್ತಾಗಿದ್ದು , ಒಮ್ಮೆಲೇ  ಓಡಿಸಲಾಗುವದಿಲ್ಲ     , ನಿಧಾನಕ್ಕೆ  ಬೇಡ , ಬೇಡ, ಸಾಕು, ಬರಬೇಡ ...........  ಎಂದು ತಿಂಗಳು , ಒಂದೂವರೆ ತಿಂಗಳಲ್ಲಿ ದಿನೇ ದಿನ ಕಡಿಮೆ ಮಾಡುತ್ತಾ ಹೋಗಿರಿ. ಆಮೇಲೆ ಮತ್ತೆ ಬರುವ ಧೈರ್ಯ ಆ ಸಿಗರೆeಟಿಗಿರುವದಿಲ್ಲ. " ಎಂದು ಧೀರ್ಘವಾಗಿ ಬೋದಿಸಿದೆ     .  ಖುಷಿಯೋ, ಖುಷಿ ನೀರು ಬಿಡುವ ಆ  waterman  ಗೆ. 

ಅಂತೂ ಈಗ ಸಮಸ್ಯೆಗೊಂದು ಪರಿಹಾರ ದೊರಕಿದೆ. ಎಷ್ಟು ದಿನ ಕಾದು  ನೋಡೋದೊಂದೆ   ,  ಬೇರೆ ದಾರಿಯಿಲ್ಲ.

ಚಿಕ್ಕ ಚಿಕ್ಕ ವಿಷಯಗಳೂ , ಬಹಳ ಮಹತ್ವ ಹೊಂದಿವೆ,  ಬಹಳ ಮಹತ್ವ ಪಡೆಯುತ್ತವೆ ನಾವದನ್ನು ಅನುಭವಿಸುವಾಗ.

ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
November 28 , 2012. 
ಮಹಾಭಾರತ್ ........ಮಹಾಭಾರತ್ ..........
ದೂರದಿನ್ದೆಲ್ಲೊ ಯಾರದೋ ಮನೆಯ ಟಿ ವಿ ಯಲ್ಲಿ ಮೊಳಗುತ್ತಿತ್ತು . ಒಹ್ ಇನ್ನೂ ಮುಗಿದಿಲ್ಲ ಈ ಮಹಾಭಾರತ್ , ಯಾವಾಗ ಮುಗಿಯುವದೋ ಇನ್ನು .........ಎಂದು ನನ್ನ ಮಿತ್ರ ಸಿಡಿಮಿಡಿ ಗೊಂಡ. ನಾನು ಹೇಳಿದೆ ರಾಮಾಯಣ , ಮಹಾಭಾರತ ಮುಗಿಯುವದು ಎನ್ನುವದಿಲ್ಲ, ಎಲ್ಲಿಯವರೆಗೆ ನಾವೆಲ್ಲಾ ರಾಮಾಯಣ , ಮಹಾಭಾರತದ ಪಾತ್ರಗಳಾಗಿರುತ್ತೆವೋ ಅಲ್ಲಿಯವರೆಗೂ ಈ ಮಹಾಕಾವ್ಯಗಳು ಸತ್ವ ಕಳೆದುಕೊಳ್ಳುವದಿಲ್ಲ ಎಂದೆನು. ಮಿತ್ರನ ಕೀಟಲೆ ಶುರು. ಆರಂಭಿಸಿಬಿಟ್ಯಾ ? ನಿನ್ನ ಉಪ
ನ್ಯಾಸ ಎಂದ. ಕೇಳಲು ನಿeನಿರುವಾಗ , ಇನ್ನೇನು ತಾಳು ಎಂದು ಆರಂಭಿಸಿದೆ.


ಅಂದು ತುಂಬಿದ ಸಭೆಯಲ್ಲಿ ಹಿರಿಯರಾದ ಅಜ್ಜಯ್ಯ ಭೀಷ್ಮ ಪಿತಾಮಹ, ಶ್ರೇಷ್ಟ ಗುರು ದ್ರೋಣಾಚಾರ್ಯ, ಧರ್ಮದ ಪ್ರತಿರೂಪ ಯುಧಿಸ್ಟಿರ , ಕೌರವ ಕುಲ ಶ್ರೇಷ್ಟ ಹಸ್ತಿನಾಪುರಾಧೀಶ್ವರ ದ್ರತರಾಷ್ಟ್ರ , ಪತಿ ಪಾರಾಯಣೆ ಶ್ರೇಷ್ಟ ಸ್ತ್ರೀ ಗಾಂಧಾರಿ ಎಲ್ಲರು ಉಪಸ್ತಿತರಿದ್ದಾಗ ಅಲ್ಲವೇ ಪಾಂಚಾಲೆ ದ್ರೌಪತಿಯ ವಸ್ತ್ರ ಅಪಹರಣಕ್ಕೆ ದುಶ್ಯಾಸನ ಮುಂದಾಗಿದ್ದು ? ಈ ಎಲ್ಲ ಪ್ರಜಾ ಶ್ರೇಷ್ಟರ ಎದುರೆ ಅಲ್ಲವೇ , " ತಮ್ಮಾ ದುಷ್ಯಾಸನಾ, ಎಳೆದು ತಾ , ಆ ಪಂಚಾಲೆಯನ್ನು " ಎಂದು ಆಣತಿ ಇತ್ತಿದ್ದಲ್ಲವೇ ? ಎಂದು ಯಕ್ಷಗಾನ ಶೈಲಿಯಲ್ಲಿ ನನ್ನ ಮಿತ್ರನನ್ನು ಪ್ರಶ್ನಿಸಿದೆ. ನನ್ನ ಮಿತ್ರನೂ ಕಮ್ಮಿಯೇನಿಲ್ಲ. ಅಲ್ಲಯ್ಯಾ ನಾನೇನು ಮಾಡಲಿ ? ಅಲ್ಲಿ ನಾನಿದ್ದೆನೆ ? ಎಂದು ನನಗೆ ತಿರುಗೇಟು ನೀಡಿದ.

ಈಗ ನೀವೊಮ್ಮೆ ಯೋಚಿಸಿ. ಅಂದು ಮಹಾಭಾರತದ ಆ ಘಳಿಗೆಯಲ್ಲಿ ಭೀಷ್ಮ ಪಿತಾಮಹನಾದಿಯಾಗಿ ಯಾರೊಬ್ಬರಾದರೂ ತಾಳು ಧುರ್ಯೋಧನ , ತಾಳ್ಮೆ , ಯೋಚಿಸು ಎಂದಿದ್ದರೆ , ಸಾವಿರ ಸಾವಿರ ಸಂಖ್ಯೆಯಲ್ಲಿ ಪ್ರಜಾ ಜನರು ತಾಳು, ತಾಳು ದೊರೆಯೇ ಎಂದು ಮೊರೆಯಿಡುತ್ತಿದ್ದಿಲ್ಲವೇ ? ವಿಶ್ಲೇಷಕರು ಹೇಳುವಂತೆ ದೊರೆಯ ಅನ್ನವನ್ನು ತಿಂದ ಋಣ ಅವರನ್ನೆಲ್ಲ ಕಟ್ಟಿ ಹಾಕಿತ್ತು. ಅನ್ನ ನೀಡಿದ ದೊರೆ ಮಾಡಿದ ಅನ್ಯಾಯಗಳನ್ನು ಪ್ರತಿಭಟಿಸುವ ಶಕ್ತಿಯನ್ನೇ ಅಂದಿನ ಶ್ರೇಷ್ಟರು ಕಳೆದುಕೊಂಡಿದ್ದಾರೆ ಎಂದಾದರೆ, ಇಂದಿನ ಶ್ರೇಷ್ಟರು ಮಾಡುವದೇನು ನೋಡೋಣ .

ವೈದ್ಯೋ ನಾರಾಯಣೋ ಹರಿ : ಎಂದು ಸಮಾಜ ವೈದ್ಯರಿಗೆ ಮಾನವರಲ್ಲೇ ಹೆಚ್ಚಿನ ಗೌರವ ನೀಡಿದೆ. ಎಸ್ಟೋ ನಮ್ಮ ಹೆಮ್ಮಕ್ಕಳ ಕಥೆ ಕೇಳಿ. ಚೂರ್ಣ ಕೊಡುವ ಡಾಕ್ಟರ್ ಪೂರ್ಣ ತೋರಿಸು ಎಂತಾನೆ , ಸ್ತೆಥೆಸ್ಕೋಪ್ ( stethoscope ) ಹಾರ್ಟಿಗಿಡಬೇಕಾದವನು ಯಾವ್ಯಾವದೋ ಪಾರ್ಟಿಗಿಡುತ್ತಾನೆ, ಬಜೆ ಎಂದರೆ ಸಾಕು ಸಜೆ ಎಂದು ಓಡೋ ಕಾಲ ಬಂದಿದೆ , ಸಜೆ ಯಾಗಿರುವ ಇಂಥ ವ್ಯವಹಾರಗಳು ಬಜೆಗೆಲ್ಲಿ ಅರ್ಥವಾಗಬೇಕು. ಹಾಗೆಂದು ಎಲ್ಲರು ಹಾಗೆ , ಜಗತ್ತೇ ಹಾಗಿದೆ ಎಂದಲ್ಲ. ಅದಕ್ಕೆ ಗೂಢವಾಗಿ ಹೇಳಿದ್ದೇನೆ. ಅಂದಿನ ಮಹಾಭಾರತದ ಶ್ರೇಷ್ಟ ರಂತೆ ಇಂದಿನ ಶ್ರೇಷ್ಟ ರು ವ್ಯವಹರಿಸುತ್ತಾರೆ. ಕೂಡಲೇ ಪತ್ರಿಕಾ ಹೇಳಿಕೆಗಳನ್ನು ನೀಡಿ ಘಟನೆ ಖಂಡಿಸುತ್ತಾರೆ. ಹಿಂದೆ ಅಪರಾಧಿಯನ್ನು ರಕ್ಷಿಸುತ್ತಾರೆ. ಇದೆ ತಾನೇ ಈ ನಾಲ್ಕು ದಶಕಗಳಲ್ಲಿ ನಡೆಯುತ್ತಿರುವದು ? ಈಗ ಹೇಳಿ ಮಹಾಭಾರತ ಸದಾ ಕಾಲ ಪ್ರಸ್ತುತ ಯಾಕೆ ?

ಒಬ್ಬ ಡಾಕ್ಟರ್ ಹುಚ್ಚು ಹುಚ್ಚಾಗಿ ಹೇಳುತ್ತಾನೆ , ಚಳಿಗಾಲ ಬಂದರೆ ಡಾಕ್ಟರುಗಳಿಗೆ ಕೆಲಸ ಕಡಿಮೆ ಅಂದರೆ ಆದಾಯ ಕಡೆಮೆ ಎಂದು ಸೂಚ್ಯವಾಗಿ ಹೇಳೋ ಪ್ರಯತ್ನ. ಚಿಕ್ಕ ಮಗುವಾದರೂ ಗೂಕಿ ಅಜ್ಜಿಯನ್ನೋ, ಆಂಟಿಯನ್ನೋ ಕಂಡೊಡನೆ , " ಡಾಕ್ಟರ್ ಕಂಡ್ರಾ " ಎನ್ನುತ್ತದೆ. ಈ ಗೂಕತನ ( ಅಸ್ತಮಾ ) ಬರುವದು, ಹೆಚ್ಚಾಗುವದೆe ಚಳಿಗಾಲದಲ್ಲಿ. ಈ ಜನಸಂಖ್ಯಾ ಪ್ರವಾಹದಲ್ಲಿ ಸದಾಕಾಲ ಜನರನ್ನು ಹೆರೆಯುವ ಉದ್ಯೋಗವೊಂದಿದ್ದರೆ ಅದು ವೈದ್ಯಕೀಯ . ಸುಮ್ಮನೆ ಶುಂಟಿ ಜಗಿದರೆ ನಿವಾರಣೆ ಯಾಗುವ ದೇಹಾಲಸ್ಯಕ್ಕೆ ಹತ್ತಾರು ಅನಾವಶ್ಯಕ ಔಷಧ ನೀಡಿ ಕಾಸು ಕೀಳುವ ಇಂದಿನ ವೈದ್ಯೋ ನಾರಾಯಣೋ ಹರಿ : , ಸಾಕಷ್ಟು ಮಂದಿ ಕಾಣಬರುತ್ತಾರೆ. ಅಲ್ಲಿ ಶುಂಟಿ , ಬಜೆಗಳೇ ಜಾಸ್ತಿ. ಅಯ್ಯೋ ಡಾಕ್ಟರ್ ಹೇಳಿದ್ದಾರೆ ಕಣ್ರೀ ಎಂದು ನಂಬಿ  ಮಾತ್ರೆ  ನುಂಗೆ ನುಂಗುತ್ತಾರೆ ಸಾಮಾನ್ಯ ಜನ . ಶಿಕ್ಷಣಕ್ಕೆ ತೆರೆದುಕೊಂಡ ಧೂರ್ತರು , ನಮಗ್ಯಾಕ್ರೀ ಎಂದು ಬಾಯ್ಬಿಡದೆ ಸಜ್ಜನರಾಗುತ್ತಾರೆ. ಕಾಲಕ್ರಮೇಣ ಸಮಾಜವೇ ಈ ರೀತಿಯ ಲಫಂಗರಿಂದ ತುಂಬಿರುತ್ತದೆ.

ಈಗ ಹೇಳಯ್ಯ , ಈ ಶುಂಟಿ, ಬಜೆಗಳ ಸಂತತಿ ಜಾಸ್ತಿಯಾಗಲು ಕಾರಣ ಈ ಕಾಲದ ಭೀಷ್ಮ , ದ್ರೋಣರು. ಏನಂತಿಯಾ ಎಂದೆ ? ಮಹಾಭಾರತ ಅಂದೂ ಪ್ರಸ್ತುತ , ಇಂದೂ ಪ್ರಸ್ತುತ , ಎಂದೆಂದೂ ಪ್ರಸ್ತುತ - ಎಲ್ಲಿಯವರೆ ಭೋ ಪರಾಕು ನಿಲ್ಲುವದಿಲ್ಲವೋ, ಎಲ್ಲಿಯವರೆಗೆ ನಿಸ್ಟುರವಾಗಿ ಸತ್ಯ ಹೇಳುವ ಛಾತಿ, ಛಲ ಜನರಲ್ಲಿ ಮನೆಮಾಡುವದಿಲ್ಲವೋ ಅಲ್ಲಿಯವರೆಗೂ ಈ ಮಹಾಭಾರತ್ ಪ್ರಸ್ತುತವಾಗಿರುತ್ತದೆ. ಯೋಚಿಸು ನಮ್ಮ ಹಿರಿಯರು ಹೇಳುವ ಸತ್ಯ ಯುಗದಲ್ಲಿ ಈ ಮಹಾಭಾರತ ಪ್ರಸ್ತುತವಿತ್ತೆe ? .
ಆಗ ಮಹಾಭಾರತ ಯಾಕಿರಲಿಲ್ಲ ಎಂದರೆ ಈ ಭೀಷ್ಮ , ದ್ರೋಣಾದಿಗಳಿರಲಿಲ್ಲ.

ತಿರುಗಿ ನೋಡಿದರೆ ನನ್ನ ಮಿತ್ರ ಮುಸಿ ಮುಸಿ ನಗುತ್ತಿದ್ದ.

ಹರಿಹರ ಭಟ್, ಬೆಂಗಳೂರು.
ಶಿಕ್ಷಕ , ಚಿಂತಕ , ವಿಮರ್ಶಕ, ಫೇಸ್ ಬುಕ್ ಬರಹಗಾರ.
November 27, 2012.
...................... English version of this posting will follow .................

Monday, November 26, 2012

Dr. Giridhar Kaje  :  ( 3 )

Friends,

Dr. Giridhar Kaje has removed my name from his friends list , it seems . I tried to post some appreciative and some critical comments on his posts, but the reply is " permission denied " Ha ..... Ha ........... Ha ................

Harihar Bhat, Bangalore

November 27 , 2012.
Dr. Giridhar Kaje  wrote :   ( 2 )

" Food is like regular class, where as Tonics are like Tuition Classes ! "

Comment by me :

Dr. Kaje, ............. however big or small F - 16 .. s are , the work of honeybees cannot be compared to the work of F - 16 s. Likewise regular class and tuition class. ................. What do U say ?

Another comment by me :

Dr. Kaje .............. I don't subscribe to the street talks that allopathy doctors and ayurvedic doctors are elder and younger brothers of YAMADHARMARAAJAA. But the statements are not absolutely false, I agree . ..... What do U say ?
Dr. Giridhar Kaje  wrote :

" Changing the food base which is continued for generations, such as from Rice to Wheat or Wheat to Rice is not good "

My comment:  

  It is difficult to believe Dr.Kaje. It seems to be a statement from an economist not a medicine man. If I can quote my life experience, I have started with my family members to consume daily three to four rotis twice a day made from wheat for the last twenty five years absolutely without any break in this food habit and I am proud to say that my experience shows that the practice has given me an opportunity to keep good health and avoid the medical practitioner , otherwise the visit would have been frequent. ......... The family to which my parents and brothers belong is traditionally a rice and rice products eater, totally rice being the food habit for generations together and I was also brought up for the first twenty years of my childhood days in that tradition. The fact is that the members of this family are prone to frequent upsets in their health and were made to visit the medical practitioners frequently. ......... A reply is expected from you as this could guide or misguide many face book readers, and in large a considerable numbers of rice eating families........ From : Harihar Bhat , Bangalore.


Reply comment from Dr. Kaje:

  In recent past, people are shifting the food base, thinking that, it will prevent / solve the Diabetes & Obesity. If such notion is true, then : 1. Why many of the north Indians, who depend on wheat are Obese ? 2. Why the south Indian villagers, who depend on rice are Lean ? 3. Why Diabetes is equally present in north & south India ? 4. Why Diabetes is not easily controlled in north India ? So, stick on to the food of your land & your family. That is what Ayurveda explained & people followed for thousands of years. EXCEPTIONS ARE NOT EXAMPLES. Think & analyse all these.. you will understand.. I do not wish to react on personal remarks, because people already know who is Dr Giridhara Kaje & who is Harihar Satyanarayan Bhat..


Reply comment from me:

It seems Dr. Kaje has taken the comments as criticisms of him, I clarify it is wrong notion to derive like that.

If Dr. Kaje is right in his expression, he could make the last person to benefit from his learned knowledge by quoting the studies underta
ken in this regard so as to refer and confirm his findings. He may please quote on - line references available as it would facilitate more number of people who have wrongly understood Dr.Kaje , to make correction immediately in this regard.

I welcome Dr.Kaje to understand that the judgement is not on the medicine given but on the relief that is the result of that medicine , the people love for it.

I am expecting Dr. Kaje 's comments, supported by the reports , he may quote.

Harihar Bhat, Bangalore.
Novemeber 27 , 2012.

Sunday, November 25, 2012

ಇದು ನನ್ನ ಮಗಳ messege , ನನಗೆ ಫೇಸ್ ಬುಕ್ ನಲ್ಲಿ. " Pappa write about how to make kids independent from childhood ( get up early, eat on their own, dressing etc...) "

ನಾವು ನಮ್ಮ ಮಕ್ಕಳು ಹೇಗೆ ಇರಬೇಕೆಂದು ನಿರಿಕ್ಷಿಸುತ್ತೆವೋ ಹಾಗೆ ನಾವು ನಡೆದುಕೊಂಡರಾಯಿತು  . ಜಗತ್ತೇ ಸುಂದರವಾದೀತು . ಸಂಶಯ ಬೇಡ .

ಮಗು ಬೆಳಿಗ್ಗೆ ಪ್ರಾತಃ ಸಮಯದಲ್ಲಿ ಎದ್ದೇಳಬೇಕು , ತಾಯಿ ತಂದೆಯರು ಪ್ರಾತಃ ಸಮಯದಲ್ಲಿ ಎದ್ದೆeಳುವಂತೆ ಅವರ ದಿನಚರಿ ಬದಲಿಸಿಕೊಂಡರಾಯಿತು  . ಅಸ್ಟು  ಸುಲಭ . ಒಮ್ಮೆಲೇ ಸಂತೋಷಪಡಬೇಡಿ.  ಸಂತೋಷ ಕಾಯ್ದಿದೆ ಬರಲು , ನೀವು ಅನುಸರಿಸಿದಾಗ. ಅನುಸರಿಸಿ ನೋಡಿ. ಸರಿಯಾದ ಸಮಯಕ್ಕೆ ಮಕ್ಕಳು ನಿಯಮಿತವಾಗಿ  ಆರೋಗ್ಯಕರವಾದ ಆಹಾರ ಸೇವಿಸಬೇಕು . ಸುಂದರ ವಿಚಾರ . ಬಹಳ ಅಂದ್ರೆ ಶೇಕಡಾ ಎಂಭತ್ತು ಮಕ್ಕಳು ಈ ರೀತಿ ಮಾಡುವದಿಲ್ಲ. ನಿಮ್ಮ ಮಕ್ಕಳು ಮಾಡಬೇಕು. ನೀವು ಮಾಡಿಬಿಡಿ. ಪರಿಣಾಮ   ನೋಡಿ.  ಮಕ್ಕಳು ಮನೆಯಲ್ಲಿರುವಾಗ, ಈಗ ತಿಂಡಿಯ ಸಮಯ, ಈಗ ಊಟದ ಸಮಯ,   hey this is breakfast time, this is lunch time , this is dinner time ಎಂದು ಮಕ್ಕಳನ್ನು ಕೂಡಿಕೊಂಡು ಆಹಾರ ಸೇವನೆ ಮಾಡಿ ನೋಡಿ.  ಸಮಯವಿದ್ದಾಗ ಮಕ್ಕಳ ಮೂಡ್ ನೋಡಿಕೊಂಡು , ಅಜ್ಜಿ ಕತೆ ಹೇಳಿ. ಕತೆಯ ವಿಷಯ ಒಳ್ಳೆ ಆಹಾರ, ಸಮಯಕ್ಕೆ ಸರಿಯಾದ ಆಹಾರ, ಆರೋಗ್ಯಕರವಾದ ಆಹಾರ , body structure, the nutrition required for the healthy body, etc ಅರಿವು ಮಾಡಿ ಕೊಡಿ ನಿಮ್ಮ ಮಕ್ಕಳಿಗೆ. ಇವೆಲ್ಲ ಅರಿವು ಐದರಿಂದ ಆರು ವರುಷಗಳ ಒಳಗೆ ಮಾಡಿ ಕೊಡಿ. ಆಮೇಲೆ ಎಲ್ಲ ಸುಖಗಳ , ಈ ನಿಮ್ಮ ಶ್ರಮದಿಂದ ಬಂದಿದ್ದು, ಜೀವನ ಪರ್ಯಂತ ಸುಖಿಸಿ,  enjoy it,  .  it is really great . Never miss it.

ಬಹಳ ಮುಖ್ಯ  .  ಬಹಳ ಕಷ್ಟದ ಕೆಲಸ. ಡ್ರೆಸ್ ಬಗ್ಗೆ ಮಕ್ಕಳ ಮನಸ್ಸನ್ನು ತಿದ್ದುವದು. ಮಾಡ್ರನ್ ಡ್ರೆಸ್ ಗಳ ಬಗೆಗೆ, ಮಾಡ್ರನ್ ಡ್ರೆಸ್ಸಿಂಗ್ ಬಗೆಗೆ  ನಿಮ್ಮ ಮಕ್ಕಳ , ಮಗು ಎಸ್ಟೇ ಚಿಕ್ಕದಿರಲಿ, ಅಭಿಪ್ರಾಯ ಕೇಳಿ. ನಿಮ್ಮ ಅಭಿಪ್ರಾಯಗಳಿಗೆ ಸರಿ ಹೊಂದದ  ವಿಚಾರಗಳು ಮಗುವಿನದಾದರೆ    ಕೋಪಗೊಳ್ಳಬೇಡಿ . ಸಹನೆ ಕಳೆದುಕೊಳ್ಳಬೇಡಿ  . ಮಗಿವಿನ ಮನಸ್ಸು ಕಂಡಿದ್ದನ್ನು ಅನುಸರಿಸುವದು. ಮನಸ್ಸು ಸಹಜವಾಗಿ ಜೀವನಕ್ಕೆ ಹಾನಿಕರವಾದವುಗಳನ್ನೇ ಬಯಸುತ್ತದೆ. ಅದು ಮನಸ್ಸಿನ ಲಕ್ಷಣ. ಈ ಅರಿವನ್ನು ಕೆಲವು ಸಹಜ ಉದಾಹರಣೆಗಳೊಂದಿಗೆ ತಾಳ್ಮೆಯಿಂದ ಮಗುವಿಗೆ ವಿವರಿಸಿ. ಉದಾಹರಣೆಗಳು ನಿಮ್ಮ level ಗಲ್ಲ , ಮಗುವಿನ level ಗೆ ಇರಲಿ . ಆರು ವರ್ಷದ ಮಗುವಿಗೆ   x x x   site  ತೋರಿಸಿ ಪಾಠ ಹೇಳುವದಲ್ಲ, ಹದಿನಾರು ವರ್ಷದ ಮಗುವಿಗೆ   baby site   ತೋರಿಸಿ ಪಾಠ ಹೇಳುವದಲ್ಲ.   ಜಾಗ್ರತೆ ಇರಲಿ.

ಇನ್ನು ದಿನಚರಿ , ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗುವದು,    homework  ಮಾಡುವದು , ಇತ್ಯಾದಿ ಎಲ್ಲ ನಿಧಾನವಾಗಿ ತಿಳಿಹೇಳಬೇಕು , ಮಗು ಹುಟ್ಟಿದೆ , ನಮ್ಮ ತಾಳ್ಮೆ ಪರೀಕ್ಷಾ ಸಮಯ ಆರಂಭ , ನಾವೇ ಮಕ್ಕಳಿಗೆ role model ,  ಮುದ್ದು ಮುಖದಲಿ ಮುದವ ಕಾಣುತ್ತ ಕಾಣುತ್ತ , ನಾವೇ ಬದಲಾಗುತ್ತ , ಬದಲಾಗುತ್ತ , ಹಿರಿಯರೇ sacrifice , compromise ಆಗುತ್ತಾ ಮಗುವ ತಿದ್ದಿ ತೀಡುತ್ತ ಜೀವನ ಸಾಗಿಸಿದರೆ ಇಳಿ ವಯಸ್ಸಿನಲ್ಲಿ ನಿಮಗೆ ನೀವು ತೋರಿದ  sacrifice , compromise  ಎಲ್ಲ ಸುಖ ಫಲ ನೀಡುವದರಲ್ಲಿ ಸಂಶಯ ಬೇಡಾ ..........  ಇಪ್ಪತ್ತಾರರಿಂದ  ಮೂವತ್ತಾರರ    ಒಳಗಿರುವ  (ವಯಸ್ಸಿನಲ್ಲಿ )  ಜೀವನ  ಸಂಗಾತಿಗಳೇ ..............

ಶುಭವಾಗಲಿ.

ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ್, ಫೇಸ್ ಬುಕ್ ಬರಹಗಾರ.
November 26 , 2012.

chikka chikka vichaaragalu

.........................................................
ಚಿಕ್ಕ ಚಿಕ್ಕ ವಿಚಾರಗಳು ...........................


ಇಂದು ನಾನು hopital  ಗೆ ಅರ್ಜಂಟಾಗಿ ಹೊಯಕ್ಕಾತು.  ಅಲ್ಲೇ ದಾರಿಯಲ್ಲಿ ಕಂಡ ಆಟೋ ಡ್ರೈವರ್ಗೆ , " ನೋಡ್ರಿ ಅರ್ಜ0ಟ, ಆಸ್ಪತ್ರೆಗೆ ಬಿಡ್ತೀರಾ " ಕೇಳ್ದೆ  .     ಬನ್ನಿ ಸರ್ ಎಂದ. ಇಳಿದಾಗ , ಎಷ್ಟು ಕೊಡಲಿ ಎಂದೆ. ಕೊಡಿ ಸರ್ ಎಂದ. ಇಪ್ಪತ್ತು   ಕೊಟ್ಟೆ. ಇನ್ನು ಹತ್ತು ಸರ್ ಎಂದ. ಕೊಟ್ಟು ಹೋದೆ. ಒಳಗೆ ಹೋದೆ ವಾರ್ಡ್ ಬಾಯ್ ಎದುರಾದೆ,  ಬಹುವಚನದಲ್ಲಿ ಮಾತನಾಡಿಸಿದೆ. ಸಂತೋಷದಿಂದ ಹುಡುಗ ಆರಂಬದಿಂದ   ಕೊನೆಯವರೆಗೂ ಬಹು ಪರಿಚಿತನಂತೆ , ಗೌರವದಿಂದ ನಡೆದುಕೊಂಡ. ಸ್ವಚ್ಚತೆಗೆ ಬಂದ ತಾಯಿಯೊಬ್ಬಳನ್ನು ಬಹುವಚನದಲ್ಲಿ ಮಾತನಾಡಿಸಿದೆ. ನಗು ನಗುತ್ತ ಸ್ವಚ್ಚ ಮಾಡಿ ಹೋಗುವಾಗೊಮ್ಮೆ ನನಗೊಂದು ನಮಸ್ಕಾರ  ಗೌರವದಿಂದ ನೀಡಿ ಹೋದಳು.

ನೋಡಿ ಇನ್ನೊಬ್ಬರಿಗೆ, ಯಾರೇ ಆಗಿರಲಿ ಬಹುವಚನದಿಂದ ಮಾತನಾಡಿಸಿ. ಕಸ ಎತ್ತುವ   ಹುಡುಗನನ್ನು ,  " ಏನ್ರಿ ಚೆನ್ನಾಗಿದ್ದೀರಾ   "  ಎಂದು ತಮಾಷೆಯಾಗಿ ಮಾತನಾಡಿಸಿ ನೋಡಿ. ನಿಮಗೆಸ್ಟು ಆನಂದ ಕೊಡುತ್ತಾರೆ, ಅವರೆಸ್ಟು ಸಂಬ್ರಮಿಸುತ್ತಾರೆ.

ಚಿಕ್ಕ ಚಿಕ್ಕ ವಿಷಯಗಳು ನೀಡುವ ಸಂತೋಷ , ಸಂಬ್ರಮ ಅನುಭವಿಸಿ  . ನಿಮ್ಮ ಅನುಭವ ಬರೆಯಿರಿ.

ಹರಿಹರ ಭಟ್, ಬೆಂಗಳೂರು.
ಶಿಕ್ಷಕ,  ಚಿಂತಕ , ವಿಮರ್ಶಕ , ಫೇಸ್ ಬುಕ್ ಬರಹಗಾರ.
November 26 , 2012.
" ............ ಚಿಕ್ಕ ಚಿಕ್ಕ ವಿಚಾರಗಳು --- ದೊಡ್ಡ ದೊಡ್ಡ ಪುರಸ್ಕಾರಗಳು ................".

ಸಂಸಾರದಲ್ಲಿ ಸುಖ ಸಿಗಲು , ಮನಶಾಂತಿ ಲಭಿಸಲು ಚಿಕ್ಕ ಚಿಕ್ಕ ವಿಚಾರಗಳತ್ತ ಹೆಚ್ಚಿನ ಗಮನ ನೀಡಬೇಕು, ನಿಮ್ಮ ಅನುಭವಗಳನ್ನು ಇಲ್ಲಿ ಬರೆಯಿರಿ. ಬಹಳ ಜನರಿಗೆ ಅನುಕೂಲವಾದೀತು. ನಿಮಗೆ ಅವರೆಲ್ಲರ ಆಶೀರ್ವಾದ / ಧನ್ಯವಾದಗಳು ದೊರೆಯುವದು ನಿಶ್ಚಿತ. ಉಪಕ್ರತನಾದವನು ಉಪಕಾರಮಾಡಿದವರ ಸ್ಮರಿಸುವದು ಮಾನವ ಸಹಜ ಗುಣ.

*****************

ಎಲ್ಲ ಮನೆಗಳಲ್ಲಿ ಎಲ್ಲಾದರೂ ಹೊರಡುವ ಮುನ್ನ ವೇಳೆ ನಿಶ್ಚಯಿಸುತ್ತಾರೆ. ವೇಳೆಗೆ ಸರಿಯಾಗಿ ತಯಾರಿಯಾಗದವರ ಬಗ್ಗೆ , ಉಳಿದವರು ಮುನಿಸಿಕೊಳ್ಳುತ್ತಾರೆ. ಕೆಲವೊಮ್ಮೆ ತೀವ್ರ ಮಾತಿನ ಕದನ ಏರ್ಪಡುತ್ತದೆ..

ನಾವು ಮನೆಯಲ್ಲಿ ಗೋಡೆಗೆ ತೂಗುಬಿಟ್ಟ ಗಡಿಯಾರವನ್ನು ಹತ್ತು ನಿಮಿಷ ಮುಂದಿಟ್ಟಿದ್ದೇವೆ. ಹೆಂಡತಿ ಮತ್ತು ಮಗ ಆ ಗಡಿಯಾರ ನೋಡಿ ವೇಳೆ ತಿಳಿಯುತ್ತಾರೆ. ನಾನು ಆ ಗಡಿಯಾರಕ್ಕಿಂತ ಹತ್ತು ನಿಮಿಷಗಳ ಮೊದಲಿನ ವೇಳೆ ಅನುಸರಿಸುತ್ತೇನೆ. ಅಂದರೆ ಎಲ್ಲರು ಸಾರ್ವತ್ರಿಕವಾಗಿ ಅನುಸರಿಸುವ ವೇಳೆ. ನಾನು ಹೆಂಡತಿ ಜೊತೆ ಬೆಳಿಗ್ಗೆ ಹತ್ತು ಮೂವತ್ತಕ್ಕೆ ಹೊರಹೊಗಬೇಕೆನ್ನಿ. ನನ್ನ ಹೆಂಡತಿ ತಿಳಿದುಕೊಳ್ಳುವ ವೇಳೆ ಗೋಡೆ ಗಡಿಯಾರದ ವೇಳೆ. ನನ್ನ ವೇಳೆಗಿಂತ ಹತ್ತು ನಿಮಿಷ ಮೊದಲೇ ನನ್ನ ಹೆಂಡತಿ ತಯಾರಾಗಿರುತ್ತಾಳೆ . ನೋಡಿ ಸಮಸ್ಯೆಗೆ ಸುಲಭ ಪರಿಹಾರ.

******************

Saturday, November 24, 2012

October 14, 2012.

ಹೀಗೆ ಮಾಡಿದರೆ ಹೇಗೆ?

ನಮ್ಮ ಹವ್ಯಕ ಮಹಾಸಭೆಯ membership ಹೀಗಿದ್ದರೆ ಹೇಗೆ ?

1. ಒಂದು ಸಾವಿರ ರೂಪಾಯಿ member with voting rights.

2. ಒಂದು ನೂರು ರೂಪಾಯಿ membership without voting rights.

3. ಹವ್ಯಕ ಮಹಾಸಭೆಯ Director ಆಗಲು member with voting rights ಅಗತ್ಯ.

4. ಹುಟ್ಟಿದ ಶಿಶುವಿನಿಂದ ಹಿಡಿದು ಎಲ್ಲ ಹವ್ಯಕರು ಒಂದು ನೂರು ರೂಪಾಯಿ member ಆಗುವಂತೆ ಆಗ್ರಹಿಸುವದು. ಇದರಿಂದ ಹವ್ಯಕರ ಸಂಕ್ಯೆಯ ಗಣತಿಯೂ ಆದಂತಾಗುತ್ತದೆ. ಎಲ್ಲೆಲ್ಲಿ membership ಒಟ್ಟು ಸಂಕ್ಯೆಯ ಆಧಾರದಲ್ಲಿ Government facilities ಸಿಗುವದೋ ಅದಕ್ಕೂ ಅನುಕೂಲವಾಗುತ್ತದೆ.

5. ಪ್ರತಿ ಕುಟುಂಬಕ್ಕೆ ಒಂದರಂತೆ ಅತಿ ಸರಳವಾದ Application Form ಮಾಡಿದರಾಯಿತು ಅಲ್ಲದೆ online internet registration facility ಇಟ್ಟರಾಯಿತು.

6. ಹವ್ಯಕರು ನೆಲೆಸಿರುವ ಪ್ರತಿ ಗ್ರಾಮಕ್ಕೊಂದು Honorary Member , nominate ಮಾಡಿದರೆ ಈ ಕಾರ್ಯಗಳನ್ನೆಲ್ಲ ಸುಲಭವಾಗಿ ಕಾರ್ಯರೂಪಕ್ಕೆ ತರಬಹುದು.

ಎನಂತಿeರಿ ? ನೀವು ಜಾಸ್ತಿ ಬರೆದಸ್ಟು / ಪ್ರತಿಕ್ರಿಯಿಸಿದಸ್ಟು ಒಳ್ಳೊಳ್ಳೆ ವಿಚಾರಗಳು ಹೊರಹೊಮ್ಮಿ , ಅನುಕೂಲಕರವಾದ ವಾತಾವರಣ ರಚಿತವಾಗುತ್ತದೆ.

ಎಲ್ಲರು facebook ಬಲ್ಲವರಿದ್ದಾರೆ. ನಿಮ್ಮ ವಿಚಾರಗಳಿಗಾಗಿ ಕಾದಿದ್ದಾರೆ. ಬರೆಯಿರಿ.

ಹರಿಹರ ಭಟ್, ಬೆಂಗಳೂರು.
October 14, 2012.

October 14, 2012.

ಶನಿವಾರ October 13, 2012 ರಂದು ಹವ್ಯಕ ಮಹಾಸಭೆ ಯಲ್ಲಿ ಪ್ರಮೀಳಾ ಸಾಮ್ರಾಜ್ಯ. ಅಕ್ಕ, ತಂಗಿ, ಅತ್ಗೆ, ಅತ್ತೆ , ಆಂಟಿ ಯರದೇ ನಗು, ಕೇಕೆ, ಹಾಡು, ನಾಟಕ ಅಂದರೆ skit.

ಮಹಿಳೆಯರಿಂದ ಮಹಿಳೆಯರಿಗಾಗಿ , 57 ನೇ episode. ಅಂದರೆ 57 ನೇ ಕಾರ್ಯಕ್ರಮ. ಸ್ವಲ್ಪ ಯೋಚಿಸಿ : ಹವ್ಯಕ ಮಹಿಳೆಯರು ಪ್ರತಿ ತಿಂಗಳ ಎರಡನೇ ಶನಿವಾರ ನಡೆಸುವ ಕಾರ್ಯಕ್ರಮ , ಮಹಿಳೆಯರು , ಮಹಿಳೆಯರಿಗಾಗಿ,ಮಹಿಳೆಯರಿಂದಲೇ ನಡೆಯುವ ಕಾರ್ಯಕ್ರಮ ಸತತವಾಗಿ 57 ತಿಂಗಳುಗಳಿಂದ , without break ನಡೆದು ಬರುತ್ತಿದೆ.

ಮತ್ತೆ ಪುರುಷರಿಗೆ ಪ್ರವೇಶವಿದೆ, ಪುರುಷರು ಇಲ್ಲಿ ಪ್ರೇಕ್ಷಕರು ಮಾತ್ರ.

ಮಹಾಸಭೆಯ ನೂತನ ಅಧ್ಯಕ್ಷರಾದ ಉತ್ಸಾಹಿ S G Hegde ಯವರು , ಕಾರ್ಯದರ್ಶಿಗಳಾದ ಚುರುಕು ನಡೆಯ Prashaant Bhat ರವರು ಮತ್ತು ನಾನು ಹಾಗು ಒಂದಿಬ್ಬರು ಮಿತ್ರರು ಈ ದಿನದ ಕಾರ್ಯಕ್ರಮದಲ್ಲಿ ಹಾಜರಿದ್ದ ಪುರುಷರು.

ಮತ್ತೆ November 10 ರಂದು , ಕಾರ್ಯಕ್ರಮ ಇದೆ - " ಮಹಿಳೆಯರಿಂದ ಮಹಿಳೆಯರಿಗಾಗಿ ". ತಪ್ಪದೆ ಭಾಗವಹಿಸಿ ಪ್ರೋತ್ಸಾಹಿಸಿ. ರುಚಿಯಾದ , ಶುಚಿಯಾದ ಸಿಹಿ, ಉಪ್ಪಿಟ್ಟು, ಕಾಫಿ ಕೊಡುತ್ತಾರೆ.

ಹರಿಹರ ಭಟ್, ಬೆಂಗಳೂರು.
October 14, 2012.

October 16, 2012.

ನೋಡಿ ,

ನಮ್ಮ ಯುವ ಜನಾಂಗದಲ್ಲಿ ಎಂತಹ ಅದ್ಭುತವಾದ ಶಕ್ತಿ ಇದೆ. facebook page ಗಳನ್ನು ನೋಡಿದರೆ

ಹವ್ಯಕ ಕುಡಿಗಳ " ಕಾವ್ಯ, ಚುಟುಕು, ಹಾಸ್ಯ, ಘೋಸ್ಟಿ , ಅಧುನಿಕ ಪ್ರಪಂಚ ವಿಜ್ಞಾನದ ಜ್ಞಾನ, ಮಿತ್ರ

ಭಾವನೆ, ಸಹ ಜೀವನದ ತುಡಿತ " ಎದ್ದು ಕಾಣುವದು. ನಮ್ಮ ಅಭಿಮಾನದ ಕುಡಿಗಳ ಯುವಶಕ್ತಿ ನಮ್ಮ

ಸಮಾಜಕ್ಕೆ ಪ್ರಪ್ರಥಮವಾಗಿ ಸಲ್ಲಬೇಕಾಗಿದ್ದು. ಇಂದಿನ ವಾಸ್ತವಿಕತೆ ಎಂದರೆ ನಮ್ಮ ಕುಡಿಗಳು

ವಿಶಾಲವಾದ ಮಾನವ ಸಮಾಜದಲ್ಲಿ ಎಲ್ಲೆಡೆಯೂ ಸಲ್ಲುತ್ತ , ಬೆಳಗುತ್ತಿದ್ದಾರೆ. ಎಲ್ಲೆಡೆ ಗೌರವ

ಸಂಪಾದಿಸುತ್ತ ಧನಿಕರಾಗುತ್ತಿದ್ದಾರೆ. ಸಂತೋಷದ ವಿಷಯ.

ಈ ಹವ್ಯಕ ಕುಡಿಗಳನ್ನು ಒಂದೆಡೆ ಸೇರಿಸಿ , ಅವರ ಶಕ್ತಿ ಸಂಚಯವನ್ನು ಸಮಾಜಕ್ಕೆ

ವಿನಿಯೋಗಿಸಬೇಕಲ್ಲವೇ? ಸ್ತ್ರೀ ಶಕ್ತಿ ಒಂದು ಪ್ರಮಾಣದಲ್ಲಿ " ಶ್ರೀ ಅಖಿಲ ಹವ್ಯಕ ಮಹಾಸಭೆ " ಯಲ್ಲಿ

ಹೊರ ಹೊಮ್ಮುತ್ತಿರುವದು ಸಂತೋಷದ ವಿಷಯ. ಅದರಂತೆ ಯುವಶಕ್ತಿ ಒಂದೆಡೆ ಸೇರಿ, ಸಮಾಜಕ್ಕೆ -

ವೈಯಕ್ತಿಕ ಏಳಿಗೆಗೆ , ಸಹಕಾರವಾಗುವಂತಹ ಒಂದು ಕ್ರಿಯಾಶೀಲ ವೇದಿಕೆ ರಚನೆಗೊಳ್ಳುವದು ಮತ್ತು

ಆ ವೇದಿಕೆ ಕ್ರಿಯಾಶೀಲವಾಗಿರುವದು ಇಂದಿನ ಅವಶ್ಯಕತೆಯೆನಿಸುತ್ತದೆ.

ಹವ್ಯಕ್ ಕುಡಿಗಳೆಲ್ಲ ಈ ದಿಶೆಯಲ್ಲಿ ಯೋಚಿಸಿರಿ.

ಹರಿಹರ ಭಟ್, ಬೆಂಗಳೂರು.
October 16, 2012.

October 29, 2012

ಅಖಿಲ ಹವ್ಯಕ ಮಹಾಸಭಾದ ಮುಖಪತ್ರಿಕೆ , ಸಾಮಾನ್ಯವಾಗಿ ನಮ್ಮ ನಿಮ್ಮೆಲ್ಲರ ಕೈಸೇರುವಾಗ ಆಯಾ ತಿಂಗಳ ಎರಡನೇ ವಾರ ಮುಗಿದಿರುತ್ತದೆ. ಆಯಾ ತಿಂಗಳುಗಳ ಕಾರ್ಯಕ್ರಮ ಹವ್ಯಕ ಮಹಾಸಭಾ ದಲ್ಲಿ ಆಯೋಜಿಸಿದ್ದು , ಅಸ್ಟರಲ್ಲಿ ಸಾಕಷ್ಟು ಆಗಿಹೋಗಿದ್ದಿರುತ್ತವೆ. ಮುಂದಿನ ತಿಂಗಳು ಪತ್ರಿಕೆಯಲ್ಲಿ ಹೀಗೆ ಮಾಡಿದ್ವಿ ಎಂದು ವರದಿ ಓದುವದೇ ಉಳಿದಿರುವದು.

havyakamahasabha .com ಗೆ ಹೋಗಿ ನೋಡಿದರೆ news and events ನಲ್ಲಿ ಕೇವಲ archives ಮಾತ್ರ ಕಾಣಬರುತ್ತದೆ.

ಪ್ರತಿ ತಿಂಗಳು ವ್ಯವಸ್ತೆ ಮಾಡಿದ ಕಾರ್ಯಕ್ರಮಗಳನ್ನು ಪೂರ್ವಭಾವಿಯಾಗಿ ಈ news and events ನಲ್ಲಿ ಹಿಂದಿನ ತಿಂಗಳು ಬರೆದರೆ , ಆಸಕ್ತರು ಕಾರ್ಯಕ್ರಮಕ್ಕೆ ಬಿಡುವು ಮಾಡಿಕೊಂಡು ಬರಬಹುದಲ್ಲವೇ?
ಇನ್ನು ಒಂದು ಹೆಜ್ಜೆ ಮುಂದೆ ಹೋಗಿ , ಸದಸ್ಯರ email ( ಉಳ್ಳವರದ್ದು ) ಸಂಗ್ರಹಿಸಿ single click ನಿಂದ ಎಲ್ಲರಿಗೂ ಮಾಹಿತಿ ನೀಡಬಹುದಲ್ಲವೇ ?

ಬದಲಾವಣೆ ಬೇಕೇ ? ಹಾಗಿದ್ದರೆ ಈ post ಓದಿದವರು ನಿಮ್ಮ ಅಭಿಪ್ರಾಯ ಬರೆಯಿರಿ. ನಿಮ್ಮ ಅಭಿಪ್ರಾಯಗಳನ್ನು copy , paste ಮಾಡಿ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷರಿಗೆ ಕಳಿಸಲಾಗುವದು.

ಬದಲಾವಣೆಯ ಪ್ರವರ್ತಕರಾಗಿ. ಹಸಿವೆಯಿದ್ದರೆ ಆಹಾರ ಹುಡುಕುವಂತೆ , ಕಾರ್ಯೋನ್ಮುಖರಾಗಿ.

ಹರಿಹರ ಭಟ್, ಬೆಂಗಳೂರು.
October 29 , 2012.

October 31 , 2012.

ನೋಡಿ ನಮ್ಮ ಶ್ರೀ ಅಖಿಲ ಹವ್ಯಕ ಮಹಾಸಭೆಯ ಸದಸ್ಯರ ಸಂಖ್ಯೆ ಈಗ ಹತ್ತ ಹತ್ತರ ಹದಿನಾರು ಸಾವಿರ ಆಗ್ತಾ ಇದ್ದು. ಸಂತೋಷದ ವಿಷಯ . ಈ ಸಂಸ್ಥೆಯ ಆಡಳಿತಾನೂಕೂಲಕ್ಕಾಗಿ ಒಂದು ಆಡಳಿತ ಮಂಡಳಿ ಇದ್ದು. ನಿಮಗೆಲ್ಲ ತಿಳಿದಿರುವ ವಿಚಾರ. ಈ ಆಡಳಿತ ಮಂಡಳಿಗೆ ಆಯ್ಕೆಯಾದ ಸದಸ್ಯರ ಅವಧಿ ನಾಲ್ಕು ವರ್ಷಗಳು. ಪ್ರತಿ ಎರಡು ವರ್ಷಕ್ಕೆ ಅರ್ಧದಸ್ಟು ಸದಸ್ಯರು ನಿವ್ರತ್ತರಾಗಿ , ಆ ಸ್ಥಾನಗಳಿಗೆ ಚುನಾವಣಾ ಅಥವಾ ಸರ್ವ ಸಂಮತಿಯಿಂದ ಆಯ್ಕೆ ನಡೆಯಬೇಕು. ಇದು ನಿಯಮ.

ಈಗೇನಾಗುತ್ತಿದೆ ನೋಡೋಣ. ಮಹಾಸಭೆಯ ವಾರ್ಷಿಕಾಧಿವೇಶನ ನಡೆದಾಗ ಅರವತ್ತರಿಂದ ತೊಮಭತ್ತು , ಹೆಚ್ಚೆಂದರೆ ಒಂದು ನೂರಾ ಇಪ್ಪತ್ತು ಸದಸ್ಯರು ಹಾಜರಾಗಿ , ಈ ಪ್ರತಿನಿಧಿಗಳ ಆಯ್ಕೆ ನಡೆಯುತ್ತದೆ. ಅಂದರೆ ಹದಿನೈದರಿಂದ ಹದಿನಾರು ಸಾವಿರ ಜನರ ಪ್ರತಿನಿಧಿಗಳನ್ನು ಅರವತ್ತು ಎಂಭತ್ತು ಜನ ಆರಿಸುತ್ತಾರೆ. ಇನ್ನೂ ಗುಟ್ಟಿನ ವಿಷಯವೆಂದರೆ ಕೇವಲ ಎಂಟೋ ಹತ್ತೋ ಜನರು ಆಯ್ಕೆಯನ್ನು ನಿರ್ಧರಿಸುತ್ತಾರೆ. ಆಸಕ್ತಿಯುಳ್ಳವರು ಹತ್ತು ವರುಷಗಳ ವಾರ್ಷಿಕಾಧಿವೇಶನದ ವರದಿ ಪಡೆದು ಪರೀಕ್ಷಿಸಬಹುದು.

ಇದು ಸಮಂಜಸವೇ ? ಹಾಗಿದ್ದರೆ ಏನು ಮಾಡಬೇಕು ? ನಮ್ಮ ಹವ್ಯಕರು ಬೆಂಗಳೂರಿನಲ್ಲಿ ಅಲ್ಲದೆ ವಿವಿಧ ಪ್ರದೇಶಗಳಲ್ಲಿ ಹಂಚಿ ಹೋಗಿದ್ದಾರೆ. ಎಲ್ಲ ಕಡೆ ವಾಸಿಸುವ ಸದಸ್ಯರಿಗೂ ಸಮಾನವಾದ ಅವಕಾಶಗಳಿರಬೇಕು. ಪ್ರಜಾಪ್ರಭುತ್ವ ರೀತಿ , ಆಯ್ಕೆಯಾಗಬೇಕು. ಎರಡು ವರ್ಷಗಳಿಗೊಮ್ಮೆ ಬರುವ ಈ ಆ
ಯ್ಕೆಗೆ , postal ballot ಅಂದರೆ ಸದಸ್ಯರು ಯಾರು ಸಭೆಗೆ ಬರಲಾಗುವದಿಲ್ಲವೋ ಅವರು ಮನೆಯಿಂದಲೇ ತಮ್ಮ ನಿರ್ಧಾರವನ್ನು ballot paper ಮುಖಾಂತರ ತಿಳಿಸುವ ಅವಕಾಶವನ್ನು ಒದಗಿಸಬೇಕು. ಇದಕ್ಕೆ ಬೇಕಾಗುವ ಹಣಕಾಸು ಖರ್ಚು ಎಸ್ಟಾದರೂ ಸಮಾಜದ ಸಾರ್ವಜನಿಕ ಸಂಸ್ಥೆಗೆ ಇದು ಅತಿ ಅವಶ್ಯಕ. ಅಲ್ಲದೆ ಒಂದು ವರ್ಷ ವ್ಯಾವಹಾರಿಕ ಖರ್ಚು ( administration expenses ) ಎಂದು 32 . 58 ಲಕ್ಷ ( Rs. 32,58,135 /= please refer page 16 of Havyak masa patrike of september,2012 Receipts and Payments account ) ಇರುವ ಸಾರ್ವಜನಿಕ ಸಂಸ್ತೆಗೆ , ಸರ್ವ ಸದಸ್ಯರ ಪ್ರತಿನಿಧಿತ್ವ ಇರಲು ಈ ರೀತಿಯ ಆಯ್ಕೆ ಸಮಂಜಸವಲ್ಲವೇ ? ಅತಿ ಅವಶ್ಯಕವಲ್ಲವೇ ?

ವಾಸ್ತವಿಕತೆ ಎಂದರೆ ಹದಿನೈದರಿಂದ ಈಪ್ಪತ್ತು ಅಬ್ಬಬ್ಬ ಎಂದರೆ ಮೂವತ್ತು ಸದಸ್ಯರು ಈಗ ಹದಿನೈದರಿಂದ ಇಪ್ಪತ್ತು ವರ್ಷಗಳಲ್ಲಿ ಕಾರ್ಯ ಕೈಗೊಂಡು ತಮ್ಮಿಂದಾದ ಇಷ್ಟ ಪ್ರಯತ್ನಗಳಿಂದ ಸಂಸ್ತೆಗೆ ಸೇವೆ ಸಲ್ಲಿಸುತ್ತಿದ್ದಾರೆ. ಸಹಜವಾಗಿ ಮತ್ತು ನೈಸರ್ಗಿಕವಾಗಿ ಅಲ್ಲೊಂದು ಸ್ವಹಿತ ಒಡ ಮೂಡಿರುತ್ತದೆ. ಮನುಷ್ಯ ಗುಣ ಸಹಜವಾಗಿ ಆ ಸ್ವಹಿತ ರಕ್ಷಣೆಯತ್ತ ಗಮನವಿರುತ್ತದೆ. ಹಾಗಾಗಿ ಹೊಸ ಸದಸ್ಯರಿಗೆ , ಯುವ ಸದಸ್ಯರಿಗೆ ಅವಕಾಶಗಳು ಅಲಬ್ಯವಾಗಿರುತ್ತವೆ. ಹಳೆಯ ವಿಚಾರಗಳಿಂದ ಹೊರಬರಲಾರದವರ ನೆರಳಿನಲ್ಲೇ, ಅವಕಾಶಕ್ಕಾಗಿ ಸ್ತುತಿಯಿಂದ ಸೇವಿಸುವವರಿಗಸ್ಟೇ ಅಲ್ಲಲ್ಲಿ ಅವಕಾಶ ಒದಗಿ ಬರುತ್ತದೆ. ಹೊಸ ವಿಚಾರಗಳು ಇಂದಿನ ದಿನಗಳಿಗೆ ಪ್ರಸ್ತುತ ವಾದದ್ದು ಯುವಕರಿಂದ ಅಥವಾ ಯುವ ವಿಚಾರಗಳಿಂದ ಬಂದ ಸಲಹೆಗಳಿಗೆ ಅರ್ಧದಲ್ಲೇ ಮೋಕ್ಷ ಪ್ರಾಪ್ತಿ.

ನನ್ನ ಅನುಭವದಂತೆ ನಮ್ಮ ಸಮಾಜದಲ್ಲಿ ಸಾವಿರಾರು ವಕೀಲರು , advocates , chartered accountants, industrialists, engineers, doctors, landlords, farmers etc ಇದ್ದ . millionaires ( ದಶ ಲಕ್ಶಾಧೀಶ್ವರರು ) ಸಾಮಾನ್ಯ ಎಲ್ಲೆಡೆ ಇದ್ದ. Billionaires ( 100 ಕೋಟಿ ರುಪಾಯಿಯ ಅಧೀಶ್ವರರು ) ಇದ್ದೇ ಇದ್ದ. ಸಂಶಯ ಬೇಡ. ಈ ರೀತಿಯ ಘನ ಹಿನ್ನೆಲೆಯುಳ್ಳ ಸಮಾಜಕ್ಕೆ ಸಮಂಜಸ ಪ್ರಾತಿನಿದ್ಯವುಳ್ಳ, ಪ್ರಜಾಪ್ರಭುತ್ವ ರೀತಿ ಆಯ್ಕೆಗೊಳ್ಳುವ ವ್ಯವಸ್ತೆ ಬೇಡವೇ ? ಇದು ಇಂದಿನ ಅವಶ್ಯಕತೆ ಯಲ್ಲವೇ ?

ಬದಲಾವಣೆ ಜಗದ ನಿಯಮ. ಬದಲಾವಣೆ ಬರಲೇ ಬೇಕು. ಎಲ್ಲರೂ ಸೇರಿ ಕೈ ಜೋಡಿಸಿದಾಗ ಒಳ್ಳೆಯ ಬದಲಾವಣೆಗಳು ಬರುತ್ತವೆ. ಇದೂ ಜಗದ ನಿಯಮವೇ .

ಹಾಗಿದ್ದರೆ ಈಗ ನೀವೇನು ಮಾಡಬೇಕು ? ಇಲ್ಲಿ ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ವಿವರವಾಗಿ ಬರೆಯಿರಿ. ನಿಮ್ಮೆಲ್ಲ ಅಭಿಪ್ರಾಯಗಳನ್ನು ಶ್ರೀ ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷರಿಗೆ ತಲುಪಿಸುವ ವ್ಯವಸ್ತೆ ಇದೆ.

ಹರಿಹರ ಭಟ್, ಬೆಂಗಳೂರು.
October 31 , 2012.

23.11.2012

ಈಗ ಮೂವತ್ತು ನಲವತ್ತು ವರ್ಷಗಳ ಹಿಂದೆ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಮಿತ್ರರಿಗೆಲ್ಲ ಒಂದು ಸುಖಕರ ಅನುಭವವಿತ್ತು. ವರ್ಷದಲ್ಲಿ ಆಗಾಗ ದೇವಸ್ತಾನದಲ್ಲಿ ದೇವಕಾರ್ಯ , ಕಾರ್ತಿಕ , ವನಭೋಜನ , ರಾತ್ರೆ ಉತ್ಸವ, ಭಜನಾ ಸಪ್ತಾಹ (ಯಾಮಾಸ್ಟಕ ) ಮುಂತಾದ ಕಾರ್ಯಕ್ರಮಗಳು ನಡೆಯುತ್ತಿದ್ದವು. ಒಂದು ಸಮಾಜದವರು ತಳಿರು ತೋರಣ ಹಾಕಿದರೆ, ಇನ್ನೊಂದು ಸಮಾಜದವರು ವಾದ್ಯ (ವಾಲಗ ) ನುಡಿಸುತ್ತಿದ್ದರು, ಡೋಲು ಬಾರಿಸುತ್ತಿದ್ದರು. ಭ್ರಾಹ್ಮಣ ಧೀರರೆಲ್ಲ ಕೊಪ್ಪರಿಗೆಯಲ್ಲಿ ಅನ್ನ, ಹುಳಿ, ಪಲ್ಯ, ಕೋಸಂಬರಿ ಮಾಡಿದರೆ ಪುರೋಹಿತರು, ದ್ವಿಜರೆಲ್ಲ ಸ್ವರಬದ್ಧವಾಗಿ ದೇವರ ಮಂತ್ರೋಚ್ಚಾರಣೆ ಮಾಡುತ್ತಿದ್ದರು. ದೇವರಿಗೆ ಭವ್ಯವಾದ ಅಲಂಕಾರದೊಂದಿಗೆ , ಭುವಿಯೇ ಸ್ತಬ್ದವಾಗುವಂತಹ ಹತ್ತಾರು ಆರತಿಗಳು ಅರ್ಧ ಗಂಟೆಯಿಂದ ಮುಕ್ಕಾಲು ಗಂಟೆಯ ವರೆಗೂ ಬೆಳಗುತ್ತಿದ್ದವು. ದೇವರಿಗೆ ಅಸ್ಟಾವಧಾನ ಸೇವೆ ( ಎಂಟು ವಿಧಗಳಲ್ಲಿ ವೇದ ಮಂತ್ರ, ಸಂಗೀತ, ತಾಳ, ಡೋಲು, ನಗಾರಿ , ಬಾನ್ಸುರಿ ಇತ್ಯಾದಿ ) ನಡೆಯುತ್ತಿತ್ತು.

ಈಗ್ಯಾಕೆ ಈ ನೆನಪುಗಳು ಅಂದಿರಾ ?

ನನ್ನ ಮಿತ್ರ , ಸ್ನೇಹ ಜೀವಿ ಶ್ರೀ ಜಿ ಜಿ ಹೆಗಡೆ ಯವರು, ನಿನ್ನೆ ಮಲ್ಲೇಶ್ವರದ ಹವ್ಯಕ ಸಿದ್ದಿವಿನಾಯಕ ದೇವಸ್ಥಾನದಲ್ಲಿ ನಡೆದ ಕಾರ್ತೀಕ ದೀಪೋತ್ಸವಕ್ಕೆ ನನ್ನನ್ನು ಆಮಂತ್ರಿಸಿದ್ದರು. ಅಲ್ಲಿ ಹೋದಾಗ ರುದ್ರ ಪಠಣ ನಡೆಯುತ್ತಿತ್ತು. ಒಮ್ಮೆಲೇ ಹಳ್ಳಿ ಜೀವನದ ನೆನಪು ಚಿಗುರಿತು.
ಎಲ್ಲರನ್ನೂ ಒಮ್ಮೆ ಗಮನಿಸಿದರೆ , ಹಗಲಲ್ಲಿ ಪ್ಯಾಂಟ್ ಶರ್ಟ್ ಧರಿಸಿ , ಇಂದಿನ ನಗರ ಜೀವನದಲ್ಲಿ ಏನೇನೋ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ಹವ್ಯಕ ಭಂದುಗಳು ಶಲ್ಯ, ಪಂಚೆ ಧರಿಸಿ ಸ್ವರ ಬದ್ಧವಾಗಿ ಗೋಕರ್ಣ ಭಟ್ಟರಂತೆ ರುದ್ರ ಪಠಣ ಸ್ವರ ಯುಕ್ತವಾಗಿ ಪಟಿಸುತ್ತಿದ್ದರು .

ಶ್ರೀ ಶ್ರೀ ಮಹಾಗಣಪತಿ ಎದುರು ಸಾಲು ಸಾಲಾಗಿ ಅಚ್ಚುಕಟ್ಟಾಗಿ ಜೋಡಿಸಿದ್ದ , ಜ್ಯೋತಿಗಾಗಿ ಕಾಯುತ್ತಿದ್ದ ಎಣ್ಣೆ ತುಂಬಿದ ಹಣತೆಗಳು ಸಂಚಾಲಕರ ಶ್ರಮವನ್ನು ಹೊಗಳುವಂತಿತ್ತು. ಅರ್ಚಕರು ಪೂಜಾ ಕಾರ್ಯ ಆರಂಭಿಸಿದೊಡನೆ ಎಲ್ಲರು ಭಕ್ತಿ ಭಾವದಿಂದ ಪೂಜಾ ಕೈಂಕರ್ಯದಲ್ಲಿ ತೊಡಗಿಕೊಂಡರು. ಎಲ್ಲ ಹಣತೆಗಳಿಗು ಜ್ಯೋತಿಯಿಂದ ಜೀವ ಬಂತು. ಎಲ್ಲೆಡೆ ಪ್ರಕಾಶ ಪ್ರತಿಫಲಿಸತೊಡಗಿತು .

ಮಹಾಮಂಗಳಾರತಿ , ಅಸ್ಟಾವಧಾನ ಸೇವೆ ಅಚ್ಚ್ಚುಕಟ್ಟಾಗಿ ಸಾಗಿತು. ಎಲ್ಲವನ್ನು ಏಕಚಿತ್ತದಿಂದ ವೀಕ್ಷಿಸುತ್ತಿದ್ದ ನನ್ನ ಗಮನ , ಹಿರಿಯ ಮಹನೀಯರು ಸಿರಿ ಕಂಠದಿಂದ , ಲಯಯುಕ್ತವಾಗಿ ಹಾಡಿದ ಭಜನೆಯತ್ತ ಕೆಂದ್ರೀಕ್ರತಗೊಂಡಿತು. ನಾವೆಲ್ಲಾ ಚಿಕ್ಕವರಿದ್ದಾಗ " ವಂದಿಪೆ ನಿನಗೆ ಗಣನಾಥ , ಮೊದಲ ವಂದಿಪೆ ನಿನಗೆ ಗಣನಾಥ " ಎಂದು ಭಜಿಸುತ್ತಿದ್ದೆವು. ಇಂದು ಹಿರಿಯ ಜೀವ " ವಂದಿಪೆ ನಿಮಗೆ ಗಣನಾಥ , ಮೊದಲ ವಂದಿಪೆ ನಿಮಗೆ ಗಣನಾಥ " ಎಂದು ಅಸ್ಟಾವಧಾನ ಸೇವೆಯಲ್ಲಿ ಭಜಿಸಿದಾಗ , ದೇವರ ಜೊತೆ ತಾದಾತ್ಮ್ಯ ಹೊಂದಿ "ನಿನಗೆ" ಎಂಬುದು , ಈಗಿನ ಸಮಾಜಗಳ ಅರಿವು "ದೇವರಿಗೆ ಏಕವಚನವೇ " ಎಂಬುದನ್ನು ಪುಸ್ಟಿeಕರಿಸಿ , " ನಿಮಗೆ " ಎಂದು ಬದಲಾವಣೆಗೊಳಗಾಗಿದ್ದು ಯೋಚನೆಗಿಟ್ಟಿಕೊಂಡಿತು.

ಡಿಸೆಂಬರ್ ಹದಿನೆಂಟರ ವರೆಗೆ ಈ ಕಾರ್ತಿಕ ದೀಪೋತ್ಸವ ಸೇವೆ ಪ್ರತಿ ರಾತ್ರೆ ಏಳರಿಂದ ಮಲ್ಲೇಶ್ವರದ ಹವ್ಯಕ ಸಿದ್ದಿವಿನಾಯಕ ದೇವಸ್ತಾನದಲ್ಲಿ ವಿಜ್ರಂಬಣೆಯಿಂದ ಆಚರಿಸಲ್ಪಡುತ್ತದೆ. ಬೆಂಗಳೂರಿನಲ್ಲಿರುವ ಹವ್ಯಕರೆಲ್ಲರು ಎಷ್ಟು ಸಾಧ್ಯವೋ ಅಸ್ಟೂ ದಿನಗಳಲ್ಲಿ ಪಾಲ್ಗೊಳ್ಳಿ. ಬೆಂಗಳೂರಿನ ಆಚೆ ಎಲ್ಲೇ ಇರಲಿ, ಬೆಂಗಳೂರಿಗೆ ಬಂದರೆ ಮುದ್ದಾಂ ಒಮ್ಮೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ.

ಸದಾ ನಿಮ್ಮ ಪ್ರೋತ್ಸಾಹ , ಪ್ರತಿಕ್ರಿಯೆ ನನ್ನ ಬರವಣಿಗೆಗಳಿಗಿರಲಿ ಎಂದು ಆಶಿಸುತ್ತ,

ಹರಿಹರ ಭಟ್, ಬೆಂಗಳೂರು.
ನನ್ನ ಪೋಸ್ಟಿಂಗ್ ಕೆಳಗಿದೆ:






            

ಅಭಿಮಾನ ತುಂಬಿ , ಅಭಿಮಾನಿಯಾಗುವತ್ತ ಎಲ್ಲರ ಚಿತ್ತ

ಆಕರ್ಶಿಸಿ , ಸ್ಥಿರಗೊಳಿಸಿ ಚಿತ್ತಾಕರ್ಷಕವಾಗಿ ಮೆರೆಯುತಿರುವ


ಸರ್ವ ಸಂಗ ಪರಿತ್ಯಾಗಿ, ಸರ್ವ ಜನ ಭಾಜನ ಈ ವಿರಾಗಿ

ಗಿಡ್ಡ ಗೋವಿನ ತೆರದಿ ಕಿರುದಾದ ದೇಹದಿ , ಬುದ್ದಿಯ

ವಿರಾಟ ರೂಪವನಡಗಿಸಿಕೊಂಡಿಹ , ತ್ರಿಮೂರ್ತಿ ರೂಪ

ದತ್ತಾತ್ರೇಯ ಅವತಾರಿ , ಹರೇ ರಾಮ, ಹರೇ ರಾಮ ವಿಹಾರಿ

ಹರ ಹರ ಹರ ಶಂಭೋ ಮಹಾದೇವ ಹರಸೆಮ್ಮನು.

...... ಹರಿಹರ ಭಟ್, ಬೆಂಗಳೂರು.

ನವೆಂಬರ್  24 , 2012 .