Monday, December 31, 2012

About Newspaper Editors.

ಮಾನ್ಯರೇ,

ಜಗತ್ತಿನ ಎಲ್ಲ ಆಗು ಹೋಗುಗಳನ್ನು ಜನತೆಗೆ ತಿಳಿಸ ಬಯಸುವ ಜನ ತಾವು. ಯಾವುದೇ ಪೂರ್ವಾಗ್ರಹವಿಲ್ಲದೆ ಘಟನೆಗಳನ್ನು, ಘಟನೆಯ ವಿಶ್ಲೇಷಣೆಗಳನ್ನು ಸಾರ್ವಜನಿಕರಿಗೆ ತಿಳಿಸಬೇಕಾದುದು ತಮ್ಮೆಲ್ಲರ  ಕರ್ತವ್ಯದ ಒಂದು ಅಂಶ.  ತಮ್ಮ ಹಿರಿಯ ಸಹೋದ್ಯೋಗಿಗಳನ್ನು , ಕಾರ್ಯ ಕ್ಷೇತ್ರ ಬಳಗದ ಹಿರಿಯರನ್ನು ಗುರುತಿಸಿ, ಅವರನ್ನು ಸ೦ಮಾನಿಸಿದಾಗ   ಅವರ ಹೆಸರುಗಳನ್ನೂ ಪ್ರಕಟಿಸದಷ್ಟು  ಸಣ್ಣತನ ಪತ್ರಿಕೋದ್ಯಮವನ್ನು ಆವರಿಸಿದೆಯೇ ಎಂಬ ಸಂಶಯ , ಇಂದಿನ ( ಡಿಸೆಂಬರ್ ೩೧, ೨೦೧೨ )ಪತ್ರಿಕೆಗಳ ವರದಿ  -  ಮುಖ್ಯಮಂತ್ರಿಗಳಿಂದ  ಪತ್ರಿಕಾರಂಗದ ಹಿರಿಯರ ಸ೦ಮಾನ ,  ಓದಿದಾಗ ಅನಿಸಿತು.

ವೈಯಕ್ತಿಕ ಜೀವನದಲ್ಲಿ ದಾಯಾದಿ ಕಲಹ ಸುಧಾರಿಸಲಸಾಧ್ಯವಾದರೂ, ಎಲ್ಲ
ಸುಶಿಕ್ಷಿತರಿ೦ದೊಡಗೂಡಿರುವ  ಪತ್ರಿಕಾ ರಂಗದಲ್ಲಿ  ದಾಯಾದಿ ಕಲಹ  ಅಪೆeಕ್ಷಣೀಯವೂ  ಅಲ್ಲ, ಸಮರ್ಥನೀಯವೂ   ಅಲ್ಲ .  ಅಲ್ಲದೆ  ಹಿರಿಯ  , ಅನುಭವಿಕ  ಪತ್ರಕರ್ತರ  ಸ೦ಮಾನ ಕಾರ್ಯಕ್ರಮಗಳ ವರದಿಯಲ್ಲಿ ಅವರ ಹೆಸರು, ಚಿತ್ರ ಹಾಕುವದರಿಂದ ಅವರು ಕೆಲಸ ಮಾಡುವ ಪತ್ರಿಕೆಗಾಗಲೀ, ವೈಯಕ್ತಿಕವಾಗಿ ಅವರಿಗಾಗಲೀ ಹೆಚ್ಚಿನ ಪ್ರಚಾರದ ಅನುಕೂಲತೆಯೊದಗಿಬರುವ  ಹಂತವನ್ನು ಆಗಲೇ ಆ ಮಹನೀಯರುಗಳು ದಾಟಿರುತ್ತಾರೆ. ಸಮಾಜದ ಆದರಣೀಯ ಸ್ಥಾನದಲ್ಲಿರುವ ಪತ್ರಕರ್ತರೆಲ್ಲರೂ ಈ ದಿಶೆಯಲ್ಲಿ ಯೋಚಿಸುವಿರಾಗಿ ಆಶಾಭಾವನೆ ಹೊಂದಿದ್ದೇನೆ.

ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
ಡಿಸೆಂಬರ್ ೩೧,೨೦೧೨.


ಗೆ,
ಎಲ್ಲ ಗೌರವಾನ್ವಿತ ಪತ್ರಕರ್ತರಿಗೆ.

ದಯಮಾಡಿ ಎಲ್ಲ ಪತ್ರಕರ್ತರ ಗಮನಕ್ಕೆ ತನ್ನಿ.

Saturday, December 29, 2012

ವಿಶ್ವೇಶ್ವರ ಭಟ್  ರಿಗೊಂದು ಪತ್ರ ಬರೆದಿದ್ದೇನೆ. ನಿಮ್ಮೊಡನೆ ಅದನ್ನು ಹಂಚಿಕೊಂಡಿದ್ದೇನೆ.

                                               ***************


 "  ತಪ್ಪಾಯ್ತು ತಿದ್ಕೋತೀವಿ  "  ಕೊನೆಯಿಲ್ಲದ ( perpetual ) ಅಂಕಣಾನಾ ??????


ಪಕ್ಕದ ಮನೆಯಲ್ಲಿ ಗಂಡ ಹೆ೦ಡತಿ ಜಗಳ ಮಾಡಿ ಕೊಳ್ಳುತ್ತಿದ್ದಾರೆ ಎಂದಾದರೆ ಅದನ್ನು ನೋಡಿ ಮಜಾ ತೆಗೆದುಕೊಳ್ಳುವ ಜನಗಳಿಗೆ ತಮ್ಮ ಮನೆಯ ಮಗ ಸೊಸೆ ಏರು ದ್ವನಿಯಲ್ಲಿ ಮಾತನಾಡಿದಾಗ   ಕರುಳು ಚುರ್ ಎಂದು ಸಮಾಧಾನ ಹೇಳಲು ಮುಂದಾಗುತ್ತಾರೆ. ಎಲ್ಲಿ ಭಾವನಾತ್ಮಕ ಸ೦ಬ೦ಧ   ಇರುತ್ತದೆಯೋ ಅಲ್ಲಿ ಕೂಡಲೇ ಪ್ರತಿಕ್ರಿಯಿಸುವದು ಮಾನವ ಸಹಜ ಸ್ವಭಾವ. ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುವ ಜನ ನಾಲ್ಕಾರು ಸಲ ಮುಖ ನೋಡಿದೊಡನೆ , ಮುಂದೆ ಶುಭಾಷಯ ವಿನಿಮಯ ಮಾಡಿಕೊಳ್ಳುವದು ಮನುಷ್ಯನ    ಸಹಜ ಸ್ವಭಾವ. ಈ ರೀತಿಯ ಸಹಜ ಮನುಷ್ಯ ಸಂಬಂಧಗಳು , ಒಂದು ಪತ್ರಿಕೆಯನ್ನೂ, ಲೇಖಕರ ಹಲವಾರು ಲೇಖನಗಳನ್ನೂ , ಸಾಹಿತಿಗಳ ಪುಸ್ತಕಗಳನ್ನೂ ಓದಿದಾಗ, ಹಲವಾರು ವರ್ಷಗಳ ಕಾಲ ಓದಿದಾಗ ಒಂದು ಅವಿನಾಭಾವ ಸ೦ಬ೦ಧ   ಏರ್ಪಡುತ್ತದೆ. ಸಂಪಾದಕರು ಬದಲಾದರೂ , ಲೇಖಕರು , ಸಾಹಿತಿಗಳು ತಮ್ಮ ಇಹ ಜೀವನ ಮುಗಿಸಿದರೂ ಈ ಸ೦ಬ೦ಧ   ಮುಗಿಯುವದಿಲ್ಲ. ಬಹುಷಃ ಇ೦ತಹ ಸ೦ಬ೦ಧಗಳನ್ನೇ ಕರುಳ ಸ೦ಬ೦ಧ   ಎಂದು ಜೀವನಾನುಭವಿಗಳು  ವಿಶ್ಲೇಷಿಸಿದ್ದಾರೆ .


ಈ ರೀತಿ ವಿಚಾರಧಾರೆಗಳೇಕೆ ಇ೦ದು ಮನಸ್ಸಿನಲ್ಲಿ ಸ್ಪುರಿಸುತ್ತಿವೆ ಎ೦ದು  ವಿಮರ್ಶಿಸಿದಾಗ  ಈ ತಾದಾತ್ಮ್ಯ ಸ೦ಬ೦ಧದ   ಹೊಳವು  ಹರಿಯಿತು. ನಮ್ಮ ವಿಶ್ವೇಶ್ವರ ಭಟ್ ರು ಆರಂಭಿಸಿದ ಅ೦ಕಣ "ತಪ್ಪಾಯ್ತು   ತಿದ್ಕೊeತೀವಿ"  ಓದಿ  ಓದಿ , ಇ೦ದು ಏನೆನಿಸುತ್ತಿದೆ ಎ೦ದರೆ ನಮ್ಮ ಅಭಿಮಾನದ ಪತ್ರಿಕೆಗಳಲ್ಲಿ ಅಕ್ಷರ ಜೋಡಣೆಯ ತಪ್ಪುಗಳು ,  ನಿವಾರಿಸಲು ಸಾಧ್ಯವಿಲ್ಲದ ಸಮಸ್ಯೆಯೇ ? ವಿಷಯ  ನೀರೂಪಣೆಗಳಲ್ಲಿ ಮೇಲ್ನೋಟಕ್ಕೇ ಕಂಡು ಬರುವ ವ್ಯಾಕರಣ ದೋಷಗಳು ತಿದ್ದಲಾಗದ೦ತಹ ಸಮಸ್ಯೆಯೇ ? ಪ್ರಥಮ ಹ೦ತದಲ್ಲಿಯೆe ( at the outset )  ತೋಚಿದ್ದು ಸರಿ ಎಂದು ಒಪ್ಪಿ ಕರಡು ತಿದ್ದುಪಡಿ ಪೂರೈಸುವ ಉಪಸಂಪಾದಕರುಗಳು   ಪುನರ್ಯೋಚನೆ ಮಾಡಿ , ಪತ್ರಿಕೆ ಹಿಡಿದೊಡನೆ ಧುತ್ತೆಂದು ಎರಗುವ ಅತಿಸಾಮಾನ್ಯ ತಪ್ಪುಗಳು ನಿವಾರಿಸಲಾಗದ೦ತಹ ಸಮಸ್ಯೆಗಳೇ ?    ಎ೦ಬ ಇತ್ಯಾದಿ ವಿಚಾರಗಳು ಮನ ಕಲುಕುತ್ತವೆ.


ಒಗ್ಗಟ್ಟೇ ಬಲ ಎ೦ಬ ಉಕ್ತಿಯು ಇ೦ದು ಎಲ್ಲೆಡೆ ಪ್ರಯೋಗಗೊಂಡು  ವಿಪರೀತಗಳಿಗೆಡೆಮಾಡಿರುವಾಗ   ಈ ರೀತಿ ತಪ್ಪುಗಳಾಗದಂತೆ ಸ೦ಬ೦ಧಿಸಿದ   ವ್ಯಕ್ತಿಗಳನ್ನು ವಿಚಾರಿಸಿಕೊಳ್ಳಲು ಸ೦ಪಾದಕರು ,
ಆಡಳಿತ ಮ೦ಡಳಿ ಅಸಹಾಯಕರಾಗಿರುತ್ತಾರೆ ಎನ್ನುವದು ವಾಸ್ತವಿಕ ಸತ್ಯವಾದರೂ , ಕಾರ್ಯಕ್ಷಮತೆಯನ್ನು   ಹೆಚ್ಚಿಸುವತ್ತ  ಕೈಗೊಳ್ಳಬಹುದಾದ  ಹಲವಾರು  ಉಪಾಯಗಳಿವೆ , ಪರಿಹಾರಗಳಿವೆ ಎಂಬುದನ್ನು ಅರಿಯದವರಾಗಿರುವದಿಲ್ಲ ಈ ಸ೦ಪಾದಕರು ಮತ್ತು ಆಡಳಿತ
ಮ೦ಡಳಿ. ಇ೦ತಿಪ್ಪಾಗ ಬದಲಾವಣೆಗೆ ಅವಶ್ಯವಿರುವ ಕಾಲ ( breathing time ) ಮುಗಿದಿದ್ದರೂ , ತಪ್ಪುಗಳಾಗದಂತೆ ಮತ್ತು ಘಟಿಸಿದ ತಪ್ಪುಗಳು ಪುನರಾವರ್ತನೆಯಾಗದಂತೆ ಕೈಗೊಳ್ಳಬೇಕಾದ ಕ್ರಮಗಳು ಕೈಗೊಂಡಂತೆ ಮೇಲ್ನೋಟಕ್ಕ೦ತೂ ಕಾಣಿಸುತ್ತಿಲ್ಲ ಅನ್ನುವದು ನಿರ್ವಿವಾದ.


ವ್ಯಕ್ತಿತ್ವದ ಪರಿಪೂರ್ಣತೆಯತ್ತ   ಪಕ್ವವಾಗಿರುವ  ವಿ.ಭಟ್ ರು  ನನ್ನ ಈ ಅಕ್ಷರ ವ್ಯಕ್ತನೆಗಳನ್ನು ಓದಿ , ನನ್ನನ್ನು  ಬ್ಲಾಕ್  ಲಿಸ್ಟ್ ( black list )ಗೆ ಸೇರಿಸ್ಲಿಕ್ಕಿಲ್ಲವೆಂಬ ವಿಶ್ವಾಸದಿಂದ ಬರೆಯುತ್ತಿದ್ದೇನೆ.


ಹಿಮಾಲಯವನ್ನೇರುತ್ತೇನೆ ಎಂಬವರಿಂದ ಹಿಮಾಲಯದ ತುದಿ ತಲುಪುವದನ್ನು ನಿರಿeಕ್ಷಿಸುತ್ತಾರೆ ವಿನಃ  ಕಾಂಚನಗಂಗಾ ತುದಿಯಲ್ಲಿದ್ದೇನೆ ಎಂದರೆ ಅಭಿಮಾನಿಗಳು ಸಂತಸಪಡುವದಿಲ್ಲ  . ಅಲ್ಲದೆ ಹಿಮಾಲಯವನ್ನೇರುವ ಸಾಧ್ಯತೆಯಿರುವವರು ಹಿಮಾಲಯದ ತುದಿ ತಲುಪದಿದ್ದರೆ ಅನುಭಾವಿಕರಿಗೆ ನಿರಾಸೆ ಸಹಜವಾಗುವದು ಹಾಗು ಸ೦ಬ೦ಧಿಸಿದವರು ಅದನ್ನು ಅರಿಯದಿದ್ದರೆ ಅಭಿಮಾನಿಗಳು ನಿರಾಸೆಗೊಳ್ಳುತ್ತಾರೆ.  ನಮ್ಮ ವಿ.ಭಟ್ ರು, ಯಾವುದೇ ರೀತಿಯ ಅನೈಸರ್ಗಿಕ ಸ೦ಕಷ್ಟಗಳು ಜೀವನದಲ್ಲಿ ಎದುರಾದರೂ ಅವೆಲ್ಲವುಗಳನ್ನು ಸೂಕ್ತವಾಗಿ ಹಿಂದಿಕ್ಕಿ ಯಶಸ್ಸನ್ನು ಕಾಣಬಲ್ಲವರು ಎಂಬುದಾಗಿ ಪತ್ರಿಕೆಯೊಂದರ  ಸಂಪಾದಕತ್ವ ದಿಂದ  ಹೊರಬಂದು , ಇನ್ನೊಂದು ಸಂಪಾದಕ ಖುರ್ಚಿಯಲ್ಲಿ ಕೂತ ಮಧ್ಯದ ಅವಧಿಯಲ್ಲೇ ನಿರೂಪಿಸಿದ್ದಾರೆ.   ವ್ಯಕ್ತಿತ್ವವನ್ನೊಮ್ಮೆ  ರೂಡ್ಹಿಸಿಕೊಂಡರೆ  , ಆವ್ಹಾನಿಹಿಸಿಕೊಂಡರೆ ಆ ವ್ಯಕ್ತಿಯನ್ನು ಅನುಸರಿಸುವವರು   , ವ್ಯಕ್ತಿಯ ಅಭಿಮಾನಿಗಳು  , ವ್ಯಕ್ತಿಯು ಜೀವಿಸುವ ಸಮಾಜ ಅವರಿಂದ ನೀರಿಕ್ಷೆಗಳನ್ನಿಟ್ಟುಕೊಳ್ಳುವದು ಸಹಜ ತಾನೇ ?  ನ್ಯಾಯ ತಾನೇ ?  ಅಂತೆಯೇ ಪತ್ರಿಕೆಯ ತಪ್ಪುಗಳ ಮನನ , ಪುನರ್ಮನನಗಳಿಗೆ  ಸಾಕಷ್ಟು ಸಮಯ ಸಂದಿದೆ. ತಪ್ಪುಗಳು ಆಗದಂತೆ, ಕನಿಷ್ಠ  ಪುನರಾವರ್ತನೆಯಾಗದ೦ತಾದರೂ  ದ್ಹ್ರಡ  ಸಂಕಲ್ಪದೊಂದಿಗೆ ಕಾರ್ಯಪ್ರವ್ರತ್ತರಾಗಲು ಇದು ಸೂಕ್ತ ಕಾಲ ಎಂದೆನಿಸುತ್ತಿದೆ. 

ಹರಿಹರ ಭಟ್, ಬೆಂಗಳೂರು
ಶಿಕ್ಷಕ , ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.

                                           *************

ಮಿತ್ರರೇ ,

ನಿಮ್ಮ ಮಾತುಗಳಿಗೆ ಕಾಯ್ದಿದ್ದೇನೆ.
December 30 , 2012. 

Friday, December 28, 2012



ಅತ್ಯಾಚಾರ ಯಾಕಿಂದು ಹೆಚ್ಚು ?


ಬಯಕೆ ( ಕಾಮ ) ಪ್ರಕೃತಿಯಲ್ಲಿ ಸಹಜ ಕ್ರಿಯೆ ಎಂಬುದನ್ನು ಒಪ್ಪಿಕೊಳ್ಳಬೇಕು . ಬಯಕೆ ಎಂದರೇನು ? ತನ್ನಲ್ಲಿಲ್ಲದ್ದನ್ನು ಪಡೆಯುವ ಇಚ್ಛೆಯೇ ಬಯಕೆ.   ಗಂಡಿನ ದೇಹದಲ್ಲಿದ್ದದ್ದು   ಪಡೆಯುವ ಬಯಕೆ ಹೆಣ್ಣಿಗೆ, ಹೆಣ್ಣಿನ ದೇಹದಲ್ಲಿದ್ದದ್ದು  ಪಡೆಯುವ ಬಯಕೆ ಗಂಡಿಗೆ ಸಹಜವಾದುದು. ಅದೇ ಕಾಮ. ಈ ಕಾಮ ಯಾವ ಪರಿ ಹುದುಗಿರುವದೆಂದರೆ ಅನುಭವಸ್ಥ ವಿದ್ವಾ೦ಸರು ಅನುಮಾನಕ್ಕೆಡೆಯಿಲ್ಲದಂತೆ , "ಕಾಮಾತುರಾಣಾ0  ನ ಭಯಂ ನ ಲಜ್ಜಾ ........ "  ಎಂದಿದ್ದಾರೆ.  ಇಂತಿರುವ ಸ್ಥಿತಿಯಲ್ಲಿ  ಹಾಗಾದರೆ ಯೋಚನಾಶಕ್ತಿಯುಳ್ಳ ಮಾನವನು ಅಮಾನುಷವಾಗಿ ಮೃಗೀಯ ರೀತಿಯಲ್ಲಿ , ತನ್ನ ಕಾಮ ತ್ರಷೆ ತೀರಿಸಿಕೊಳ್ಳಲು ಆಕ್ರಮಣಕಾರಿಯಾಗಬೇಕೆ ?  ಹಿಂದೆ ರಾಜ ಮಹಾರಾಜರು ತಮ್ಮ ಪೌರುಷ ಶಕ್ತಿಯನ್ನುಪಯೋಗಿಸಿ , ನಿರುಪದ್ರವಿ,   ಅಮಾಯಕ ಹೆಣ್ಣನ್ನು ಭೋಗಿಸಿದಂತೆ , ಇಂದಿನ ಪ್ರಜಾಪ್ರಭುತ್ವದಲ್ಲೂ  ಅಧಿಕಾರದಲ್ಲಿರುವವರು, ಅವರ ಚೇಲಾಗಳು ರಾಜ ಮಹಾರಾಜರ ಮನ ಸ್ಥಿತಿಗಳಂತೆ ವರ್ತಿಸಲು ಅವಕಾಶವೀಯಬೇಕೆ ? ಖಂಡಿತ   ಇಲ್ಲ. ಖಂಡಿತ ಇಲ್ಲ ಎಂದು ಸುಮ್ಮನೆ ಕುಳಿತರೆ ಬದಲಾವಣೆ ತನ್ನಿ೦ದ ತಾನೇ ಬರುವದೇ ?  ಸಾಧ್ಯವಿಲ್ಲ.  ಅಂದರೆ ಪರಿಹಾರವೇನು ?

ವ್ಯಕ್ತಿಯಿಂದ ಸಮಾಜ. ವ್ಯಕ್ತಿಯ ಮಾನವೀಯ ನಡೆ, ನುಡಿ, ಗುಣ ಗಳಲ್ಲಿ ಇತ್ಯಾತ್ಮಕ ಬದಲಾವಣೆಗಳು ಬಂದರೆ ಎಲ್ಲ ಸಮಸ್ಯೆಗಳಿಗೂ ಸುಲಭ ಪರಿಹಾರ ಸಾಧ್ಯ. ಹಾಗೆಂದು ಹೀಗೇ ಇರಬೇಕು ಎಂಬ ಚೌಕಟ್ಟಿನೊಳಗಿನ ವಿಚಾರ ( box  thought ) ಕೇಳಲು ಚೆನ್ನಾಗಿ ಇರುವದೇ ವಿನಃ ಅನುಸರಿಸಲಲ್ಲ .  ಆದರೆ ಈ ಬಾಕ್ಸ್ ಥಾಟ್ಸ್ ಗಳನ್ನೂ ಹೆಚ್ಚು ಹೆಚ್ಚು ಅನುಸರಿಸಿದಸ್ಟೂ   ಸ್ವಾಸ್ಥ್ಯ ಸಮಾಜಕ್ಕೆ ದಾರಿ ಎಂಬುದು ನಿರ್ವಿವಾದ ವಿಚಾರ.

" ಮನೆಯೇ ಮೊದಲ ಪಾಠಶಾಲೆ , ಜನನಿ ತಾನೇ ಮೊದಲ ಗುರುವು ...... " ಎಂದು ನಾವೆಲ್ಲಾ ಓದಿದ್ದೇವೆ, ಕೇಳಿದ್ದೇವೆ, ತಿಳಿದೂ ತಿಳಿದಿದ್ದೇವೆ. ಆ ಜನನಿ ಸಮಯವನ್ನು ಮೀಸಲಿಡಿಸಿ ತನ್ನ ಮಕ್ಕಳನ್ನು ಅನಿಷ್ಟ   ಪರಂಪರೆಗಳಿಂದ ರಕ್ಷಿಸಬೇಕಾದ ಸಮಯ ಬಂದೊದಗಿದೆ. ತಾಯಿ ಚಿಕ್ಕವಳಿದ್ದಾಗ ಆಧುನಿಕತೆಯ ಗಾಳಿಗೆ ಸೋ೦ಕಲಾಗದೇ  , ಕೈಗೂಡದ ಬಯಕೆಯೇ ಇಂದು ಬಹು ತಾಯಂದಿರನ್ನು " ತಮ್ಮ ಮಗಳಾದರೂ ಹಾಗಿರಲಿ " ಎಂದು ಚಿಕ್ಕ ಮಗುವು ಆರಂಭದಿಂದಲೇ ತುಂಡುಡುಗೆಯತ್ತ  ಆಕರ್ಶಿತವಾಗುವದನ್ನು ತಡೆಯಲು ಪ್ರಯತ್ನಿಸುವದಿಲ್ಲ. ಇನ್ನೆಷ್ಟೋ   ಸನಾತನ ಪ್ರಜ್ಞೆಯ ಕೌಟುಂಬಿಕ ಹಿನ್ನೆಲೆಯಿಂದ ಬಂದ ತಾಯಂದಿರು ಮಠಕ್ಕೆ , ಮಂದಿರಕ್ಕೆ ಹೋಗಲು ತುಂಬು ತೋಳಿನ ರವಿಕೆ , ಮಾರ್ಕೆಟ್ಟಿಗೆ, ಸಿನೆಮಾ ಥಿಯೇಟರ್ ಗೆ ಹೋಗಲು ಕಿರು ದಾರದ , ದೇಹ ಸಿರಿಯನ್ನು ಅಖಂಡವಾಗಿ ತೋರ್ಪಡಿಸುವ , ಮೈ ಮಾಟಕ್ಕೊಪ್ಪುವ ರಂಗು ರಂಗಾದ ಕಿರು ಗಾತ್ರದ ಬಟ್ಟೆ , ಎಂಬ ಜಾಣ ನಡೆಯವರಾಗಿದ್ದಾರೆ.  " ಬೇಕಾದ ಡ್ರೆಸ್ ಹಾಕಿಕೊಳ್ಳುವದು ನನ್ನ ಆಯ್ಕೆ, ನನ್ನ ಡ್ರೆಸ್ ಆಯ್ಕೆಯ ಹಕ್ಕನ್ನು ನಿನಗ್ಯಾರು ಕೊಟ್ಟವರು ಗಂಡೇ ? " ಎಂದು ಎದೆಯುಬ್ಬಿಸಿ ತಿರುಗ ಹೊರಟರೆ , ಪ್ರತಿಯಾಗಿ " ನನಗೇಕೆ ಡ್ರೆಸ್ಸು, ಬೇಕಿಲ್ಲ ಡ್ರೆಸ್ಸು " ಎಂದು ಗಂಡು ಸೆಟೆಸಿ ನಡೆದರೆ , ಸಮಾಜದ ನಾಳೆಗಳು ಏನಾದಾವು ? ಎಂದೂ ಯೋಚಿಸಬೇಕಲ್ಲವೇ ?

ಇಂತಿರುವಾಗ ಹೆಣ್ಣಿಗಷ್ಟೇ   ಜವಾಬ್ದಾರಿಯೇ , ಗಂಡಿಗಿಲ್ಲವೇ ಈ ಜವಾಬ್ದಾರಿಗಳು ? ಎಂಬ ಸಹಜ ಪ್ರಶ್ನೆಯನ್ನು   ವಿಶ್ಲೇಷಿಸಬೇಕಾಗುತ್ತದೆ.  ಗಂಡಿಗೆ ಜವಾಬ್ದಾರಿ ಹೆಣ್ಣಿಗಿಂತ ಜಾಸ್ತಿ ಇದೆ , ಇರಬೇಕು . ಆದರೆ ಪ್ರಕೃತಿಯಲ್ಲಿ ಸಹಜವಾಗಿ ಹೆಣ್ಣಿಗೆ ನಾಚಿಕೆ ಜಾಸ್ತಿ. ಗಂಡು ಸುಲಭವಾಗಿ ನಾಚಿಕೆ ಬಿಡಬಲ್ಲ ಪ್ರಾಣಿ.ಹೆಣ್ಣು ಹಾಗಲ್ಲ. ಸುಲಭವಾಗಿ ನಾಚಿಕೆ ಬಿಡದಂತಹ ನೈಸರ್ಗಿಕ ದೇಣಿಗೆ ಅವಳಿಗಿದೆ.ಆದರೆ ಹೆಣ್ಣು ನಾಚಿಕೆ ಬಿಟ್ಟರೆ ಏನಾದೀತು ಎನ್ನಲು ನಮ್ಮ ಇಂದಿನ ಸಿನೆಮಾಗಳ ನೃತ್ಯ, ಉಡುಗೆ - ತೊಡುಗೆಗಳೇ ಸಾಕ್ಷಿ . ಹಿಂದೆಲ್ಲ ನಾವು ಪಾಶ್ಚಿಮಾತ್ಯರನ್ನು ಉದಾಹರಿಸಿ ನಾಚಿಕೆ ಬಿಟ್ಟವರು ಎನ್ನುವ ಉಧ್ಗಾರಗಳನ್ನೂ  ಮೀರಿ ಇಂದಿನ ಸಿನೆಮಾ ಜಗತ್ತು ಬೆಳೆದಿದೆ. ಆದರೂ ಇಂದಿನ ತಾಯಂದಿರ ಪ್ರಭಲವಾದ ಆಸೆ ತನ್ನ ಮಗಳು ಸಿನೆಮಾ ತಾರೆಯಾಗಲಿ ಎಂಬುದಾಗಿದೆ.

ಯೋಚಿಸಿ .  ಇಂದಿನ ಈ ಎಲ್ಲಾ ವಿಷಮ ಜೀವನ ಬೆಳವಣಿಗೆಗೆ  ಕಾರಣೀಕರ್ತರು  ಸಮಾಜದ ಎಲ್ಲಾ ಸ್ತ್ರೀ - ಪುರುಷರಲ್ಲ.  ಒಟ್ಟಾರೆ ಈ ರೀತಿ ವಿಷಮ  ಮನೋಧರ್ಮದವರು ಹೆಚ್ಚೆಂದರೆ ಶೇಕಡಾ ಹದಿನೈದು ಈಪ್ಪತ್ತು ಇರಬಹುದು ಎಂಬ ಆಶಯ.  ಹೀಗಿರುವಾಗ ನಾವು ದೇಶದ ಎಲ್ಲೆಡೆ ಅತಿ ಭೀಕರ , ಭಯಾನಕ ಅತ್ಯಾಚಾರ ಪ್ರಕರಣಗಳನ್ನು  ಕಾಣುತ್ತಿದ್ದೇವೆ. ಇನ್ನು ಭವಿಷ್ಯದಲ್ಲಿ ನಿಧಾನವಾಗಿ ಈ ವಿಷಮ ಮನೋಭಾವದವರೇ ಹೆಚ್ಚಾದಾಗ ಸಮಾಜದ ಪರಿಸ್ಥಿತಿ ಏನಾದೀತು ?  ಉಡುಗೆ  ತೊಡುಗೆಗಳೇ   ಇಲ್ಲದೆ ಶತ ಶತ ಮಾನಗಳು ಸಾಮಾಜಿಕ ನಿರ್ಭಂಧಗಳಿಂದ ಅತ್ಯಾಚಾರಗಳಿಲ್ಲದೆ ಬದುಕಿದ ಮಾನವ ಇತಿಹಾಸವನ್ನು ನಾವು ಓದುತ್ತೇವೆ ಅಲ್ಲದೆ ಇಂದಿನ ದಿನಗಳಲ್ಲೂ ಪ್ರಪಂಚದ ಕೆಲವಡೆ ಇಂದಿನ ನವ ಜೀವನದ ಸೊಂeಕಿಲ್ಲದೆ ಬದುಕುವ ಉದಾಹರಣೆಗಳನ್ನು ಕಾಣುತ್ತೇವೆ. ಹಾಗಿರುವಾಗ ನವೀನ ರೀತಿಯ ಅಭಿವೃದ್ಧಿಯ ಆವಿಷ್ಕಾರಗಳೇ ಇಂದಿನ ಮಾನವನಿಗೆ ಶಾಪವಾಗಿ ಪರಿವರ್ತಿತವಾಗುತ್ತಿದೆಯೇ ?

ಏನಂತೀರಿ ? ಪ್ರತಿಕ್ರಿಯಿಸಿ.


ಹರಿಹರ ಭಟ್, ಬೆಂಗಳೂರು 
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ .
December 28 , 2012. 

Tuesday, December 25, 2012


                            ಸ೦ಮ್ಮಾನ ಕಾರ್ಯಕ್ರಮ  ಡಿಸೆಂಬರ್ ೨೫ , ೨೦೧೨ .


"ನಮಗೆ ಈ ಗುರುಗಳ ಸ೦ಬ೦ಧ ಒದಗಿ ಬ೦ದಿದ್ದು ನಮ್ಮ ಸುಕೃತ   ಫಲ. ನಮಗೆ ಸ೦ಮಾನವಲ್ಲ , ಇದು ಗುರು ಆಶೀರ್ವಾದ , ಪ್ರೇರಣೆಯಾಗಿದೆ , ಸೇವೆ ಮಾಡಿದ್ದೇವೆ , ಮಾಡುತ್ತಿದ್ದೇವೆ ಅಂತೆಯೇ ನಮ್ಮ ಸೇವೆ ಮುಂದುವರಿಯುತ್ತಿರುತ್ತದೆ."  ಈ ರೀತಿ ವಿನೀತ ಭಾವದಿಂದ ,  ಭಾವನಾತ್ಮಕವಾಗಿ ನುಡಿದವರು
2011 -12  ರಲ್ಲಿ  1 ,454  ಕೋಟಿ ರೂಪಾಯಿ ವ್ಯವಹಾರ ಮಾಡಿದ, ಸರಕಾರಕ್ಕೆ ಸೂಕ್ತ ಟ್ಯಾಕ್ಸ್ ಗಳನ್ನೆಲ್ಲ ನೀಡಿದ ನ೦ತರ  259  ಕೋಟಿ ರೂಪಾಯಿ ಒಂದು ವರ್ಷದಲ್ಲಿ ಲಾಭ ಗಳಿಸಿದ , 31  ಮಾರ್ಚ್ 2012  ರ೦ದು ಮೂಲ ಬಂಡವಾಳ ಮಾರುಕಟ್ಟೆ ದರದಲ್ಲಿ  6 ,100  ಕೋಟಿ ಗೆeರಿಸಿದ ಇಮಾಮಿ ಲಿಮಿಟೆಡ್ ಕಂಪನಿಯ ರಾಧೆಶ್ಯಾಮ್ ಅಗರ್ವಾಲ್ ಮತ್ತು ರಾಧೆಶ್ಯಾಮ್ ಗೋಯೆಂಕಾ.  ಈ ಮಹನೀಯರ ಕುರಿತು ಎರಡು ಮಾತು.

ರಾಧೆಶ್ಯಾಮ್ ಅಗರ್ವಾಲ್ ಇಮಾಮಿ ಕಂಪನಿಯ ಛೇರ್ಮನ್ ಮತ್ತು ರಾಧೆಶ್ಯಾಮ್ ಗೋಯೆಂಕಾ ಇದೇ ಕಂಪನಿಯ ಡೈರೆಕ್ಟರ್ . ಇಮಾಮಿ ಕಂಪನಿಯನ್ನು ಹುಟ್ಟು ಹಾಕಿದ ಈ ಪ್ರಮುಖರು ಇಂದು ದೇಶದಲ್ಲಿ ಹೆಸರುವಾಸಿ ಕರೋಡ್ಪತಿಗಳಾಗಿದ್ದಾರೆ. ದೇಶದಲ್ಲಿ ಕರೋಡ್ಪತಿಗಳು ತುಂಬಾ ಜನ ಇದ್ದಾರೆ. ಈ ಕರೋಡ್ಪತಿಗಳ   ವಿಶೇಷವೆಂದರೆ ಇವರು ಆಧ್ಯಾತ್ಮಿಕ ಉನ್ನತಿ ಹೊಂದಿದ್ದಾರೆ. ಶ್ರೀ ಕೃಷ್ಣ  ಗೋವರ್ಧನ ಗಿರಿಯನ್ನೆತ್ತಿದ ಎಂದು ನಾವು , ನೀವೆಲ್ಲ ಹೇಳಿದರೆ ಈ ಭಾವನಾ ಜೀವಿ ಕರೋಡಪತಿಗಳು ಆ ಗೋವರ್ಧನ ಗಿರಿಯ ಕಣ ಕಣ ಗಳನ್ನೂ ಶ್ರೀ ಕೃಷ್ಣ ನನ್ನೇ ಕಾಣುತ್ತಾರೆ , ಅಷ್ಟೇ ಅಲ್ಲದೆ ತಮ್ಮ ನುಡಿ ಆಲಿಸುವವರನ್ನು ಅದೇ ಪ್ರಪ೦ಚಕ್ಕೆ   ಒಯ್ಯುತ್ತಾರೆ.  ಭಾರತೀಯ ಕಂಪನಿ ಕಾನೂನಿನಲ್ಲಿ ವಾರ್ಷಿಕ ಶೇಕಡಾ ಲಾಭದ ಎರಡು ಅ೦ಶವನ್ನು ದಾನ ಧರ್ಮಗಳಿಗೆ ನೀಡುವಂತಹ ಅವಕಾಶವಿದೆ, ಈ ಅವಕಾಶವನ್ನು ಸದುಪಯೋಗಪಡಿಸಿ , ರಾಮಚಂದ್ರಾಪುರದ ಗುರುಗಳಂತಹ ಸತ್ಕಾರ್ಯದಲ್ಲಿ ತೊಡಗಿರುವವರ ಜೊತೆ ಕೈ ಜೋಡಿಸಲು ಅವಕಾಶ ಮಾಡುವಂತೆ ನಿಮ್ಮ ಪರಿಚಯದವರನ್ನು ಪ್ರಚೋದಿಸಿ ಎಂದು ಸಾರ್ವಜನಿಕ ಕರೆ ನೀಡುತ್ತಾರೆ.

ಈಚೆ ಆರೆಂಟು ವರ್ಷಗಳ ಹಿಂದೆ ತಾವೆಲ್ಲ ತು೦ಬ ಕಷ್ಟದ  ದಿನಗಳಲ್ಲಿದ್ದಾಗ , ಈ ಗುರುಗಳ ಸಂಪರ್ಕದಲ್ಲಿ ಬಂದೆವು. ಗುರು ಕರುಣೆಯಿಂದ ಕಷ್ಟ ಗಳೆಲ್ಲ ಪರಿಹಾರವಾಗಿ ವೃದ್ಧಿಯ    ಈ ದಿನಗಳನ್ನು ಕಾಣುತ್ತಿದ್ದೇವೆ. ನಮ್ಮ ಸೇವೆ ಸದಾ ಈ ಗುರುಗಳಿಗೆ ಮೀಸಲಿದೆ. ಗುರುಗಳೊಡನೆ ವಿನೋದವಾಗಿ ಮಾತನಾಡುವ ಸಮ್ಮ೦ದವನ್ನು ನಾವು ಹೊಂದಿದ್ದೇವೆ ಜೊತೆ ಜೊತೆಗೆ  ಅದೇ ರೀತಿಯ ಗುರು - ಶಿಷ್ಯ ಆಧ್ಯಾತ್ಮಿಕ ನಂಟು ನಮ್ಮಲ್ಲಿದೆ , ಇದು ನಮ್ಮ ಭಾಗ್ಯ ಎಂದು ಯಾವುದೇ ಹಮ್ಮು - ಬಿಮ್ಮು ಗಳಿಲ್ಲದೆ ಸರಳವಾಗಿ , ಸಹಜವಾಗಿ,  ಕಣ್ಣಾಲಿಗಳನ್ನುತುಂಬಿಕೊಂಡು  ನುಡಿ ನಮನಗಳನ್ನು ಸಲ್ಲಿಸಿದ ಈ ಸಂದರ್ಭಕ್ಕೆ ಸಾಕ್ಷಿಯಾದವರು  ತುಮಕೂರ್ ಯೂನಿವರ್ಸಿಟಿ ವೈಸ್ ಚಾನ್ಸಲರ್  ಡಾ.ಎಸ್.ಸಿ .ಶರ್ಮಾ ಮತ್ತು ಕರ್ನಾಟಕ ಸಂಸ್ಕೃತ ಯೂನಿವರ್ಸಿಟಿ ವೈಸ್ ಚಾನ್ಸಲರ್ ಶ್ರೀ ಮಲ್ಲೇಪುರಂ ವೆಂಕಟೇಶ್.

ದಿನಾ೦ಕ 25.12.2012 ರಂದು ಈ ಕಾರ್ಯಕ್ರಮ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ   , ಶ್ರೀ ಗುರುಗಳ ಆಶಿeರ್ವಚನದೊಂದಿಗೆ ಸಂಪನ್ನಗೊಂಡಿತು.


ಹರಿಹರ ಭಟ್, ಬೆಂಗಳೂರು.
ಶಿಕ್ಷಕ , ಚಿಂತಕ , ವಿಮರ್ಶಕ, ಫೇಸ್ ಬುಕ್ ಬರಹಗಾರ.
December 26 , 2012.

Wednesday, December 19, 2012

ಹೆಣ್ಣಿನ ಮೇಲೆ ಕ್ರೌರ್ಯ - ಮಿಡಿದ ಕಂಬನಿ


                                              ಹೆಣ್ಣಿನ ಮೇಲೆ ಕ್ರೌರ್ಯ -  ಮಿಡಿದ ಕಂಬನಿ




photo , courtesy: Internet



ವ್ಯಕ್ತಿಯಿಂದ ಸಮಾಜ. ಯಾವ ಸಮಾಜದಲ್ಲಿ ಶುದ್ಧ ಚಾರಿತ್ಯದ ವ್ಯಕ್ತಿಗಳಿರುತ್ತಾರೋ ಅಂತಹ ಸಮಾಜದಲ್ಲಿ ಅತಿಯಾದ ಆಚಾರ ಅಂದರೆ ಅತ್ಯಾಚಾರಗಳಿಗೆ ಆಸ್ಪದವೇ ಇರುವದಿಲ್ಲ. ಇಂದಿನ ಭಾಷೆ ಯಲ್ಲಿ ಹೇಳುವದಾದರೆ  ಪೋಲಿಸ್ ಟ್ಹಾಣೆಗಳ   ಅವಶ್ಯಕತೆಯೇ ಇರುವದಿಲ್ಲ.  ವ್ಯಕ್ತಿಯಿಂದ ಸಮಾಜ ಅಂದರೆ ಆ ರೀತಿ ಸುಖಮಯವಾದ ಸಮಾಜ ಒಮ್ಮೆಲೇ ನಿರ್ಮಿತಿಗೊಳ್ಳುವದಿಲ್ಲ  . ವ್ಯಕ್ತಿ , ಸಮಾಜ ಎಂಬ ಈ ಪದ ಪುಂಜದ ಮಧ್ಯೆ ಕುಟುಂಬ ಎಂಬುದೊಂದಿದೆ. ಯಾವುದೇ ಕುಟುಂಬದಲ್ಲಿ ಕೆಟ್ಟ ವ್ಯಕ್ತಿಯೇ ಇಲ್ಲದಿದ್ದರೆ ಸಮಾಜದಲ್ಲಿ ಕೆಟ್ಟ ವ್ಯಕ್ತಿಗಳೇ ಇರುವದಿಲ್ಲ. ಕೆಟ್ಟ ವ್ಯಕ್ತಿಯೇ ಇಲ್ಲದಿರುವಲ್ಲಿ ಕೆಟ್ಟ ಕುಟುಂಬ, ಕೆಟ್ಟ ಸಮಾಜದ ಪ್ರಶ್ನೆಯೇ ಉದ್ಭವಿಸುವದಿಲ್ಲ.  ಇನ್ನು ಸರಳವಾಗಿ ಹೇಳುವದಾದರೆ ಸಿಂಗಪುರ್ ನಂತಹ ಶಹರದಲ್ಲಿ ಹೋಗಿ , " ವಾಟ್ ಇಸ್ ಲಿಟರಿಂಗ್ " ಎಂದರೆ  "ಸೀ ದಿ ಡಿಕ್ಷನರಿ " ಎಂದಾರು , ಅದೇ ಬೆಂಗಳೂರಿನಲ್ಲಾದರೆ    "  ಲಿಟರಿಂಗ್  ಇಸ್ ಲೈಫ್ "  ಎಂದಾರು.



ಶಿಷ್ಣಗಳನ್ನು , ಸ್ತನಗಳನ್ನು, ಪ್ರಸ್ಟಗಳನ್ನೂ   ತಮ್ಮ ವಿಕ್ರತ ಮನೋ ಕಾಮನೆಗಳನ್ನು ತೀರಿಸುವ ಮಾಧ್ಯಮವಾಗಿ ಬಳಸಿಕೊಳ್ಳುವ ಹಾಗು ಆ ರೀತಿಯ ಚಟುವಟಿಕೆಗಳತ್ತ ಆಕರ್ಶಿತವಾಗುವಂತೆ ಪ್ರಚೋದಿಸುವ ,  ನವ ಜನಾಂಗದ ಮುಚ್ಚುಮರೆಯಿಲ್ಲದ ಕ್ರಿಯೆಗಳನ್ನು ಕಂಡೂ ಕಾಣದಂತೆ ಬದುಕುವ ಗೌರವಯುಕ್ತ ಸ್ತಾನಗಳಲ್ಲಿ ವಿಜ್ರಮ್ಭಿಸಿರುವ  ವಯೋಭೆeದವಿಲ್ಲದ ,ಜ್ನಾನ , ಸುಜ್ಞಾನ , ವಿದ್ವಾಂಸ , ದೈವಿe  ಸಂಭೂತ   , ವಿದ್ವತ್ ಪರಂಪರೆಯ ಅಪ್ರತ್ಯಕ್ಷ ಕೊಡುಗೆಯೇ ಇಂದಿನ ದಿನಗಳಲ್ಲಿ ಓಡುವ ವಾಹನಗಳಲ್ಲಿ, ಜನ ನಿಬಿಡ  ರಸ್ತೆಗಳಲ್ಲಿ, ಸಮಾಜದ ಅರ್ಥಿಕ ಬಲಶಾಲಿ  ಸುಂದರ - ಸುಂದರಿಯರಲ್ಲಿ ಮೋಜು ಮಸ್ತಿ ಹೆಸರಿನಲ್ಲಿ ನಡೆಯುವ ಅನಾಚಾರಗಳಿಗೆ ಹೆಚ್ಚಿನ ಕೊಡುಗೆಯೆಂದರೆ ಅತಿಶಯೋಕ್ತಿಯಲ್ಲ.




ಒಮ್ಮೆ ಯೋಚಿಸಿ. ನಮ್ಮ ಕರ್ನಾಟಕವನ್ನೇ ತೆಗೆದುಕೊಳ್ಳಿ. ಆರು ಕೋಟಿ ಕನ್ನಡಿಗರೆಲ್ಲ ಸಬ್ಯ, ಸಹನಶೀಲ, ಸದಾಚಾರದ ವ್ಯಕ್ತಿಗಳಾದರೆ ಸುಖಿ ಸಮಾಜದ ಕಲ್ಪನೆ ಒಮ್ಮೆಲೇ ಸಾಕಾರಗೊಳ್ಳುವದು ತಾನೇ ? ಎಲ್ಲ ಸ್ತ್ರೀ ಪುರುಷರು ಪರಸ್ಪರ ಸೋದರ - ಸೋದರೀ ಭಾವದಿಂದ ನೋಡುವಂತಾದರೆ , ಸ್ತ್ರೀ ಶೋಷಣೆಯ ರಾಕ್ಷಸೀ   ಕ್ರತ್ಯವಾದ  ದೈಹಿಕ ಅತ್ಯಾಚಾರಕ್ಕೆಲ್ಲಿ  ಆಸ್ಪದ ?  ಎಲ್ಲ ಸ್ತ್ರೀ - ಪುರುಷರಲ್ಲಿ ಏಕೋ ಭಾವದಿಂದ ಪರಸೊತ್ತು ಅಪಹರಣದ ವಾಂಚೆಯೇ ಬರದಿದ್ದರೆ  ಅನಾಚಾರಕ್ಕೆಲ್ಲಿ   ಸ್ತಳವಿದೆ ?




ಯಾಕೆ ನಮ್ಮ ಸಮಾಜ ಹೀಗಿದೆ ? ಯಾಕೆ ನಮ್ಮ ಜನ ಹೀಗಿದ್ದಾರೆ ? ಯಾಕೆ ನಾವು ಹೀಗಿದ್ದೇವೆ  ? ಕೇವಲ ಮುರೂ ನೂರು ವರುಷಗಳ ಹಿಂದೆ ಅಂದರೆ ಬ್ರಿಟಿಷರು ನಮ್ಮ ನೆಲವನ್ನು ಹೊಕ್ಕು ಲೂಟಿ  ಮಾಡುವ ಮೊದಲಿದ್ದ ವೈಭವದ ಹಿಂದೂ, ಮುಘಲ್ , ಫ್ರೆಂಚ್, ಪೊರ್ತುಗಿಸ್ ಸಮಾಜದಲ್ಲಿದ್ದ ಆಡಳಿತ ವ್ಯವಸ್ತೆ ಶಿಥಿಲಗೊಂಡು   ಇಂದಿನ   ಹೀನ ಸ್ತಿತಿ   ತಲುಪಲು ಏನು ಕಾರಣ ?  ಜಗತ್ತಿಗೆ ಶಾಂತಿ ಮಂತ್ರ ನೀಡಿದ ಈ ನಾಡಿನಲ್ಲೇಕೆ ಮನುಷ್ಯ ಮೃಗೀಯ ಕಾಮನೆಗೊಳಗಾಗಿ ಮನುಷ್ಯ ಸಂಭಂದಗಳನ್ನೇ ಮರೆತು , ತನ್ನ ರಕ್ತ ಸಂಭಂದಿಗಳನ್ನೇ, ತನ್ನ ಒಡ ನಾಡಿಗಳನ್ನೇ , ತನ್ನ ಸಹ ಜೀವಿಗಳನ್ನೇ ಕಾಮುಕತೆಯಿಂದ ನೋಡುವ ಚಪಲತೆ, ಆಕ್ರಮಣ ಶೀಲತ್ವ, ಹಿಂಸಾ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾನೆ, ಯಾವುದೇ ಭಯ , ಭಾಧೆಗಳಿಲ್ಲದೆ  ಅಭಯಂಕರನಾಗಿ  ಯಮ ಕಿಂಕರನಾಗಿ ಬದಲಾವಣೆ ಹೊಂದುತ್ತಿದ್ದಾನೆ?



photo , courtesy: Internet





ನಮ್ಮ ಇಂದಿನ ಸಾರ್ವಜನಿಕ ಜೀವನವನ್ನೊಮ್ಮೆ ಅವಲೋಕಿಸಿದರೆ , ಸಾರ್ವಜನಿಕವಾಗಿ ಮಹತ್ವದ ಸ್ತಾನಗಳೆಂದು ಈ ಸಮಾಜ ಯಾವ ಯಾವ ಅಧಿಕಾರದ ಹುದ್ದೆಗಳನ್ನು ಪರಿಗಣಿಸಿದೆಯೋ , ಆ ಸ್ತಾನಗಳನ್ನೆಲ್ಲಾ ವಿಕ್ಷಿಪ್ತ ಮನೋಭಾವದ ಜನರು ಆಕ್ರಮಿಸಿದ್ದಾರೆ ಅಥವಾ ಅಂತಹ ಸ್ತಾನಗಳಲ್ಲಿರುವವರು ಅಸಹಾಯಕರಾಗಿ , ವಿವೇಚನಾ ರಹಿತರಾಗಿ ವಿಕ್ಷಿಪ್ತ ಮನೋಭಾವನೆಯ ಜನಗಳಿಗೆ , ಸ್ವಾರ್ಥ ಲೋಲುಪತೆಯಿಂದ ಸಹಕರಿಸುತ್ತಿದ್ದಾರೆ.  ಈ ವಾಕ್ಯದ ಜೊತೆ ಎಲ್ಲರೂ ಅಲ್ಲ ಎಂದು ಪದ ಪುಂಜ ಸೇರಿಸಲು ನಾಚಿಕೆ ಪಡುವಂತ ಪರಿಸ್ತಿತಿ ಇದೆ.  ಸಮಾಜದಲ್ಲಿ ಸಾಂಸ್ಕ್ರತಿಕ ಹೆಗ್ಗುರುತುಗಳಾದ ಸಂಘ ಸಂಸ್ತೆಗಳಲ್ಲಿ ಮುಖಂಡತ್ವ ವಹಿಸುವವರ ವೈಯಕ್ತಿಕ   ಜೀವನದ ಆಚಾರ ವಿಚಾರಗಳಿಗೂ , ಅವರ ಕಾರ್ಯ ವಿಧಾನಗಳಿಗೂ ಅಜಗಜಾಂತರ ವ್ಯತ್ಯಾಸ ಇಂದಿನದಾಗಿದೆ. ಒಂದು ಉದಾಹರಣೆಯಾಗಿ ಯೋಚಿಸುವದಾದರೆ , ರಸ್ತೆಯಲ್ಲಿ ನಿಂತು ಸಿಗಾರ್ ಸೇದಿ  ಹೊಗೆ  ಉಗುಳುವ, ಸ್ತ್ರಿಲೋಲುಪನಾಗಿರುವ , ಮದಿರಾ ಸೇವನೆಯಲ್ಲಿ ಮುಳುಗೇಳುವ , ಕಲೆಯ ಗಂಧ ಗಾಳಿಯೇ ಇಲ್ಲದಿರುವ ವ್ಯಕ್ತಿಯೊಬ್ಬ ನಾಲ್ಕಾರು ಪೇಂಟಿಂಗ್ ಗಳನ್ನು ಚಿತ್ರಿಸಿ , ತನ್ನ ಆಶ್ರಯದಾತ ( godfather) ನ   ಕ್ರಪೆಯಿಂದ ಜಗದಲ್ಲೆಲ್ಲ ತನ್ನ   ಈ ಪೇಂಟಿಂಗ್  ಪ್ರದರ್ಶಿಸಿ , ಹಿಂದೂ ಸಂಸ್ಕೃತಿಯನ್ನು ಪ್ರತಿನಿಧಿಸುವ ಶ್ರೇಷ್ಟ ಜಗದ್ವಿಕ್ಯಾತ ಸಂಸ್ತೆಯೊಂದರ ಅಧಿಪತಿಯಾಗಿ ಪ್ರತಿಸ್ತಾಪನೆಯಾದಾಗ, ಸಮಾಜದ ಶ್ರೇಷ್ಟರೆಲ್ಲ   ಉಘೆ ಉಘೆ ಎಂದು ತಲೆಬಾಗಿ " ಕುರಿಗಳು ಸಾರ್ ಕುರಿಗಳು  " ಎಂಬ ಜನಾನುರಾಗಿ ಹಾಡನ್ನು ನೆನಪಿಸುವಂತಹ ಸ್ತಿತಿಗೆ ಇಂದು ಈ ಸಮಾಜ ತಲುಪಿದೆ ಎಂದಾದರೆ ಇವಕ್ಕೆಲ್ಲ ಕಾರಣೀಕರ್ತರಾರು   ಎಂದು  ಧೀರ್ಘವಾಗಿ ಯೋಚಿಸುವ ಹಂತ ಇದಾಗಿದೆ.



photo , courtesy: Internet




ನೆನಪಿಸಿಕೊಳ್ಳಿ . ಜೀವನ ನಿರ್ವಹಣೆಗೆ ಅವಶ್ಯಕತೆ   ಎಂದು ಕೆಲಸವನ್ನರಸಿ ದಿನಾಲು ಇಪ್ಪತ್ತೈದು ಮೂವತ್ತು ಕಿಲೋಮೀಟರು ಸಾಗುತ್ತ ತನ್ನ ಅವಲಂಬಿತರಿಗೊಂದು ನೆಮ್ಮದಿಯ ಜೀವನ ನೀಡಬಯಸುವ ಹೆಣ್ಣು ಮಗಳೊಂದು , ದಿನ ನಿತ್ಯ ತಾನು ನೋಡುವ, ತನಗೆ , ತನ್ನ ಕೆಲಸಕ್ಕೆ ಸಹಕಾರಿಯಾಗುಳ್ಳ ವಾಹನ ಚಾಲಕನಿಂದಲೇ ಅತ್ಯಾಚಾರಕ್ಕೆ ಒಳಗಾಗಿದ್ದ ಘಟನೆಯನ್ನು ಸಮಾಜ ಹದಿನೈದು ಇಪತ್ತು   ದಿವಸಗಳಲ್ಲೇ ಮರೆತುಬಿಡುತ್ತದೆ. ನ್ಯಾಯ ವ್ಯವಸ್ತೆಯ೦ತೂ ,  ನ್ಯಾಯಾನ್ಯಾಯ ವಿಮರ್ಶೆಯುನ್ನು ಹಲವಾರು ವರ್ಷಗಳ ಕಾಲ ಎಳೆದು ಎಳೆದು , ಯಾವುದೋ ಅಧಿಕಾರಿ ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ , ಹೆಣ್ಣು ಮಗಳಿಗಾದ ಅನ್ಯಾಯಕ್ಕೊಂದು ಶಮನ ನಿeಡುವಂಥ, ಸಮಾಜಘಾತುಕರಿಗೊಂದು ಪಾಠ ಪ್ರದರ್ಶಿಸುವಂತಹ  ಅವಕಾಶದಿಂದಲೇ ವಂಚಿತವಾಗುತ್ತದೆ. ಇಂತಾದರೆ ನಾವು ಎಂತಹ ಹೀನಾಯ ಸ್ತಿತಿ ತಲುಪಿರುವ ಸಮಾಜದಲ್ಲಿಂದು ಜೀವಿಸುತ್ತಿದ್ದೇವೆ ಎಂದು ಚಿಂತನೆ ಮಾಡಬೇಕಾಗಿದೆ.



ಈ ಎಲ್ಲ ಅಮಾನವೀಯ ಸ್ತಿತಿ ತಲುಪಿಹ ಸಮಾಜದ ಧನಾತ್ಮಕ ಬದಲಾವಣೆಗೆ ದಾರಿಯಿಲ್ಲವೇ ? ದಾರಿಯಿದೆ. ತಾಯಂದಿರು ಮನಸ್ಸು ಮಾಡಬೇಕು. ಸಮಸ್ಯೆಯ ಆಳ , ಹರಿವುಗಳ ಅರಿವು ಮಾಡಿಕೊಳ್ಳಬೇಕು. ಪರಿಹಾರ ತಮ್ಮಲ್ಲಿದೆ ಎಂಬ ಖಚಿತ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಮಕ್ಕಳು   ದ್ರಢ , ಧನಾತ್ಮಕ, ಸಹನೆಯ ವ್ಯಕ್ತಿತ್ವ ವಾಗಿ ರೂಪುಗೊಳ್ಳಲು   ತಾಯಿ ತನ್ನನ್ನು ಅಣಿಗೊಳ್ಳಿ ಸಬೇಕು  .  ಹದಗೆಟ್ಟ ಸಮಾಜದಲ್ಲಿ ತನ್ನ ಮಗುವಿನ ಜೀವನ ಶೊeಚನೀಯವಾಗಬಾರದೆ೦ಬ  ಆಸೆಯನ್ನು  ತನ್ನ ಮನ ತುಂಬಿಕೊಳ್ಳಬೇಕು ಆ ಮಹಾ ತಾಯಂದಿರು. ಬಾಲ್ಯದಲ್ಲೇ ಮಗುವಿನ ಮನಸ್ಸನ್ನು ಹದಗೊಳಿಸಬೇಕು. ಬಾಲ್ಯದಲ್ಲಿ ಮಗುವಿನ ಮನಸ್ಸನ್ನು ತೀಡಿ ತಿದ್ದುವದು ಸುಲಭ . ಒಮ್ಮೆ  ಹದ ಗೊಂಡ ಮನಸ್ಸು ಎಂದೂ ಬುದ್ಧಿಯ ಮೇಲೆ ಸವಾರಿ ಮಾಡಲಾಗದು ಎಂಬ ಸತ್ಯವನ್ನು ತಾಯಂದಿರು ಅರಿಯಬೇಕು ಮತ್ತು ತಮ್ಮ ತ್ಯಾಗ, ಶ್ರಮದಿಂದ ರೂಪುಗೊಳ್ಳುವ ತಮ್ಮ ಮಕ್ಕಳ ಭವಿಷ್ಯವನ್ನು ನೋಡಿ ಆನಂದತುಲಿತರಾಗುವ ಭಾಗ್ಯವಂತರಾಗಲು ಪಣತೊಡಬೇಕು.



ಇಂದಿನ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ , ವಯಸ್ಸಿಗೆ ಬಂದವರೆಲ್ಲ ಮತ ಹಾಕಿ ಪ್ರತಿನಿಧಿಯನ್ನಾರಿಸುವ ರೂಡ್ಹಿಯಲ್ಲಿ  , ಅಷಿಕ್ಷಿತರೆe ಹೆಚ್ಚಿರುವಾಗ ಹಾಗೂ ಇಂದಿನ ಶಿಕ್ಷಣ ಕೇವಲ ಉದ್ಯೋಗಕ್ಕೊಂದೆ ದಾರಿಯಾಗಿ, ಜೀವನ ಮೌಲ್ಯಗಳು ಇಲ್ಲದಾಗುತ್ತಿರುವ ಕಾಲದಲ್ಲಿ ಮತದಾರರಿಂದೇನು ಬದಲಾವಣೆ ನಿರೀಕ್ಷಿಸುವಂತಿಲ್ಲ. ಇನ್ನು ಹೆಚ್ಚಾಗಿ ರಾಜಕೀಯ ನೇತಾರರು ಮತ ಖರೀದಿಗೆ ಹೊಸ ಹೊಸ ವಿಧಾನಗಳನ್ನು ಅನುಸರಿಸುತ್ತಿರುವದರಿಂದ , ಮತದಾರರಿಂದ ಚುನಾಯಿಸಲ್ಪಡುವ ಈ ನೇತಾರರಿ೦ದಲೂ ಯಾವುದೇ ತೆರನಾದ ಸಾಮಾಜಿಕ ಮೌಲ್ಯ ನಿರೀಕ್ಷಿಸುವಂತಿಲ್ಲ.ಇಂತಿಪ್ಪ ಪರಿಸ್ತಿತಿಯಲ್ಲಿ ಪ್ರತಿ ಕುಟುಂಬದಲ್ಲಿರುವ ಮಾತೆಯರೇ ಇಂದಿನ, ನಾಳಿನ ಮತ್ತು ಎಂದೆಂದಿನ ಆಶಾಕಿರಣವಾಗಿ ಗೋಚರಿಸುತ್ತಾರೆ.  



ದೆಹಲಿಯ ರಸ್ತೆಯಲ್ಲಿ ಓಡುವ ವಾಹನವೊಂದರಲ್ಲಿ ಪುಂಡರ ಕಾಮ ತ್ರಷೆಗೊಳಗಾದ ಹೆಣ್ಣು ಮಗಳೊಬ್ಬಳು ಆಸ್ಪತ್ರೆಯಲ್ಲಿ ಜೀವನ ಮರಣ ಹೋರಾಟದಲ್ಲಿರುವ ಸುದ್ದಿಯ ತುಣುಕೊಂದನ್ನು ಓದಿದಾಗ ಮನಮಿಡಿದು ಈ ಪದ ಗುಚ್ಚಗಳು ಹೊರಬಂದಿವೆ. ಈ ರೀತಿ ಘಟನೆಗಳು ಮರುಕಳಿಸದಿರಲಿ ಎಂದು ಆಶಿಸಿ ದೈವದ ಮೊರೆ   ಹೋಗುವದನ್ನು ಉಳಿದು ಇನ್ನ್ಯಾವುದೇ ಪರಿಹಾರವಿಲ್ಲದ ಶೋಚನೀಯ ಸ್ತಿತಿ ಇಂದಿನದಾಗಿದೆ. ಮ್ರದು  ಮನಸ್ಸಿನವರಿಗನ್ತೂ  ಕಂಬನಿ ಮಿಡಿಯುವದೊಂದೇ ತೋಚುವ ದಾರಿ . ಆ ಹೆಣ್ಮಗಳ ಆರೋಗ್ಯ ಸುಧಾರಿಸಲೆಂದು ಕಂಬನಿ ಸುರಿಸಿ ಪ್ರಾರ್ಥಿಸಿಬಿಡಿ.



ಹರಿಹರ ಭಟ್, ಬೆಂಗಳೂರು.
ಶಿಕ್ಷಕ , ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
hariharbhat@gmail.com
December 20 , 2012.

Photograph of the writer.




Sunday, December 16, 2012

About Modi , Anantkumar.


ಓದಿ ,  ನಿಮ್ಮ ಪ್ರತಿಕ್ರಿಯೆ ನೀಡಿ:

______________________________________________________________


ಮೋದಿ ವರದಿ ಓದುತ್ತಿದ್ದೇನೆ. ಒಂದು ವಿಚಾರ . ಮೋದಿ ಯಾವುದೇ ವೋಟ್ ಬ್ಯಾಂಕ್ ಸಮುದಾಯಕ್ಕೆ ಸೇರಿದವರಲ್ಲ. ಆದರೂ ಗೆಲ್ಲುವ ಕುದುರೆಯಾಗಿದ್ದಾರೆ. ಕೇವಲ ಅಧಿಕಾರವೊಂದೆ ಅವರನ್ನು ಈ ಹಂತಕ್ಕೆ   ತಂದು ನಿಲ್ಲಿಸಿದೆ ಅನ್ನುವಂತಿಲ್ಲ. ಸಿಕ್ಕ ಅವಕಾಶಗಳನ್ನು ಬಳಸಿ ಎಲ್ಲೆಡೆ ವಿಜಯಿಯಾಗುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಆಗಲೇ ಅಮೆರಿಕಾದಿಂದ ವಾಪಸ್ಸಾದ ಉದ್ಯಮಿಯೊಬ್ಬರನ್ನು , ಭಾವಿ ಮುಖ್ಯಮಂತ್ರಿಯನ್ನಾಗಿಸಿ   , ಪ್ರಧಾನಮಂತ್ರಿ ಗದ್ದುಗೆಯತ್ತ ನೋಟವಿಟ್ಟಿದ್ದಾರೆ.


ಸಹಜವಾಗಿ ನಾವು ಕರ್ನಾಟಕದವರು ಈ ರೀತಿ ಚಟುವಟಿಕೆಗಳನ್ನು ಬೆಂಗಳೂರಿನ ಅನಂತಕುಮಾರರವರಿಂದ ನಿರೀಕ್ಷಿಸುತ್ತೇವೆ. ಮುಂದಾಳತ್ವದ ಗುಣಗಳಿಗೆ ಕೊರತೆಯಿಲ್ಲದ ಅನಂತಕುಮಾರರವರಲ್ಲಿ ಬೇಕಾದಷ್ಟು , ಸಾಕಾಗುವಸ್ಟು ಧನಲಕ್ಷ್ಮಿ ಸೇರಿದ್ದಾಳೆ.  ವಿಷಾದದ ವಿಷಯ , ಚುನಾವಣಾ ಸಮಯದಲ್ಲಿ ಕ್ಷೇತ್ರದಲ್ಲಿ ಗೆಲ್ಲಲು ಸಾಕಷ್ಟು ತಿಣುಕಾಡಬೇಕಾಯಿತು ನಮ್ಮ ಅನಂತಕುಮಾರರು.


ಮೋದಿಯಂತೆ ನಮ್ಮ ಅನಂತಕುಮಾರರವರು ವೋಟ್ ಬ್ಯಾಂಕ್ ಅಲ್ಲದ / ಆಗದ ಸಮುದಾಯಕ್ಕೆ ಸೇರಿದವರು. ಆದರೆ ಮೋದಿಯಂತೆ ಮೈ ಚಳಿ ಬಿಟ್ಟು ರಾಜಕೀಯ ಮಾಡುತ್ತಿಲ್ಲವೇ ಅನಿಸುತ್ತದೆ. ಒಂದು ರೀತಿ ಅಕ್ಕ ಬರಬೇಕು , ಅಕ್ಕಿ ಖರ್ಚಾಗಬಾರದು ಎಂಬಂತಹ ಮನಸ್ತಿತಿ ಹೊಂದಿದ್ದಾರೆಯೇ ಅನ್ನಿಸುವದಿಲ್ಲವೇ ?  


ಈಗ ಇರುವದು ಸುಸಮಯ. ಆಚೆ ಕೆ.ಜೆ.ಪಿ ಎಂದು ಒಂದು ವಿಘ್ನ  ಪರಿಹಾರವಾಗಿದೆ.  ಈಗ ಮಾಡು ಇಲ್ಲ ಓಡು ಎನ್ನುವಂತೆ ಅನಂತಕುಮಾರ ಕಾರ್ಯಪ್ರವತ್ತವಾಗಬೇಕಾಗಿದೆ. ಒಬ್ಬ ಸಜ್ಜನ ರಾಜಕೀಯ ಮುಖಂಡನ ಕೈಯಲ್ಲಿ ಅಧಿಕಾರ ಸಿಕ್ಕರೆ ಜನಸಾಮಾನ್ಯನಿಗೆ ಒಳಿತಾಗುವಂತಹ   ಹತ್ತಾರು ಕಾರ್ಯಕ್ರಮಗಳಾದಾವು , ಕಸದಂತಹ ಚಿಲ್ಲರೆ ಸಮಸ್ಯೆಗಳು ಬೆಟ್ಟದಂತಾಗದೆ , ಹತ್ತಾರು ವರ್ಷಗಳಲ್ಲೂ ನೆನಪಿನಲ್ಲುಳಿಯುವಂತಹ ಆಡಳಿತ ಕೊಟ್ಟಾರು ಎಂಬ ಚಿಕ್ಕದೊಂದು ಆಸೆ.


ಹರಿಹರ ಭಟ್ , ಬೆಂಗಳೂರು.
ಶಿಕ್ಷಕ , ಚಿಂತಕ , ವಿಮರ್ಶಕ , ಫೇಸ್ ಬುಕ್ ಬರಹಗಾರ.
ಡಿಸೆಂಬರ್ ೧೭ , ೨೦೧೨.

Prakash Hegde , Kalasi , Sagar.


ಹಳ್ಳಿಯಲ್ಲಿ ಹುಟ್ಟಿ ಬೆಳೆದು , ಉದ್ಯೋಗ ಅರಸಿ ಬೆಂಗಳೂರು ಸೇರುವದು ಸಾಮಾನ್ಯ. ಆದರೆ ಬೆಂಗಳೂರು ಸೇರಿ ಉದ್ಯೋಗ ಮಾಡುತ್ತಾ ತಮ್ಮ ನೆಲೆಯ ಸನಾತನ ಸಂಸ್ಕೃತಿಯ ಗುಣ ಲಕ್ಷಣಗಳನ್ನು ಉಳಿಸಿ ಬೆಳೆಸಿಕೊಳ್ಳುತ್ತಾ ಜೀವನದಲ್ಲಿ ಮುಂದೆ ಸಾಗುವದು ಎಲ್ಲರಿಗೂ ಸಿದ್ಧಿಸುವದಿಲ್ಲ. ಆ ರೀತಿ ಸಿದ್ಧಿ ಪಡೆದ ಇಂದಿನ ನವ ಜನಾಂಗದ ಪ್ರಮುಖರಲ್ಲೊಬ್ಬರು   ನಮ್ಮ ನಿಮ್ಮೆಲ್ಲರ ಮಧ್ಯೆ ಇದ್ದಾರೆ. ಅವರೇ ಸಾದಾ ಸೀದಾ ನಮ್ಮ ನಿಮ್ಮೆಲ್ಲರ ಜೊತೆ ಸ್ನೇಹ ಪ್ರೀತಿಯಿಂದ ಓಡಾಡುತ್ತಿರುವ ಪ್ರಕಾಶ್ ಹೆಗಡೆ ಕಲಸಿ ಇವರು.

ಪ್ರಕಾಶ್ ಬಟ್ಟೆ ತೊಟ್ಟು , ತಿಲಕ ಇಟ್ಟು ಸುಮ್ಮನೆ ಮೆರೆದಾಡುವ ವ್ಯಕ್ತಿಯಲ್ಲ, ತಂದೆ ತಾಯಿಯರಿಂದ ಬಳುವಳಿಯಾಗಿ ಬಂದ ಸನಾತನ ಸಂಸ್ಕೃತಿಯ ಗುಣ ಲಕ್ಷಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬೆಂಗಳೂರಿಗೆ ಬಂದವರು , ಸಮಾನ ಮನಸ್ಕ ಮಿತ್ರರಿನ್ದೊಡಗೂಡಿ ಕಳೆದ ಇಪ್ಪತ್ತೆರಡು ವರ್ಷಗಳಿಂದ , ಮಲ್ಲೇಶ್ವರದ ಸಿದ್ಧಿವಿನಾಯಕನ ಸೇವೆಯಾಗಿ ಕಾರ್ತೀಕ ಮಾಸದಲ್ಲಿ ಕಾರ್ತಿಕ ದೀಪೋತ್ಸವ ನಡೆಸುತ್ತ ಬಂದಿದ್ದಾರೆ. ಇಷ್ಟೇ ಅಲ್ಲ ಆ ದಿನ ತಮ್ಮ ಭಂದು ಮಿತ್ರರನ್ನೆಲ್ಲ ಆಮಂತ್ರಿಸಿ , ಪ್ರಸಾದ ವಿತರಣೆಯೊಂದಿಗೆ ಸಿಹಿ ಹಂಚುತ್ತಾ ಬಂದಿದ್ದಾರೆ. ಪ್ರಕಾಶ್ ಗಳಿಸಿದ ಜನ ಪ್ರೀತಿಯನ್ನರಿಯಲು ಆ ದಿನ ಸೇರುವ ನಾಲ್ಕು ನೂರರಿನ್ದ ಐದು ನೂರು ಜನರೇ ಸಾಕ್ಷಿ.  

ಪ್ರಕಾಶ್ ರವರ  ಪತ್ನಿ  ಕಸದಿಂದ ರಸ ತೆಗೆಯುವ ಕಲಾವಿದೆ . ಎತ್ತಿ ಬಿಸಾಕುವ ತರಕಾರಿ ತ್ಯಾಜ್ಯಗಳು , ಗಾಳಿಯಲ್ಲಿ ತೂರಿಹೊeಗುವ ಒಣ ಎಲೆಗಳು , ಹರಿದ ಅಂಗಿಯ ಗುಂಡಿಗಳು ಇತ್ಯಾದಿ.... ನಾವು ನೀವೆಲ್ಲ ಅನುಪಯೋಗಿ ಎಂದು ಭಾವಿಸುವ ವಸ್ತುಗಳನ್ನುಪಯೋಗಿಸಿ , ಮನಕ್ಕೆ ಮುದ ನೀಡುವ ರಂಗೋಲಿಗಳನ್ನು ಚಿತ್ತಾರವನ್ನಾಗಿಸುತ್ತಾರೆ .   ನಗು ಮುಖದ ಈ ಮಹಿಳೆ ತನ್ನ ಕಲಾಕೃತಿಗಳನ್ನು ವೀಕ್ಷಿಸಿದವರ ಮುಖದಲ್ಲಿ ಸಂತಸವನ್ನು ಸಂಮೊeಹಗೊಳಿ ಸುತ್ತಾರೆ.

ಈ ದಂಪತಿಗೆ   ಧನ್ಯತೆ  ನೀಡುವ ಮಗನೊಬ್ಬನಿದ್ದಾನೆ.  ಭರತನಾಟ್ಯ ಪ್ರವೀಣ , ಐಡಿಯಾ ಮೊಬೈಲ್ ಕಂಪನಿಯ  ರಾಜ್ಯ ಮಟ್ಟದ ಸ್ಪರ್ಧೆಯ ವಿಜಯಿ, ಹತ್ತನೇ ತರಗತಿಯ ಫಲಿತಾಂಶದಲ್ಲಿ ಶೇಕಡಾ ತೊಂಭತ್ತಾರು ಅಂಕ ಗಳಿಸಿ , ಮೂಡುಬಿದರೆಯ   ಆಳವಾಸ್ ನಲ್ಲಿ ಓದುತ್ತಿರುವ ಈತನ ಹೆಸರು  ಪ್ರಭವ . ಈ ಪ್ರಭವನನ್ನು ಪ್ರಕಾಶಿಸಿದ ಪ್ರಕಾಶ್ ದಂಪತಿ ಒಬ್ಬಳು ಚೈತ್ರಾಗೆ ಅವಕಾಶ ನೀಡಲಿಲ್ಲ ಎನ್ನುವದೇ ಸೋಜಿಗ !

ಈ ದಂಪತಿಯ  ಸ್ನೇಹಪೂರ್ವಕ ಮಾತುಗಳನ್ನಾಲಿಸಲು ಕರೆಮಾಡಬಹುದಾದ ಸಂಪರ್ಕ ಇಲ್ಲಿದೆ:
  Prakash Hegde , kalasi , Sagar  ( resident of Bangalore)
Kamadhenu Associates - 9886555162 - 7353218366 - 080 23326321 -
Tax Consultants and Auditors - Insurance Advisors - LIC and Star Health


written By :  ಹರಿಹರ ಭಟ್ , ಬೆಂಗಳೂರು
                      ಡಿಸೆಂಬರ್ ೧೭ , ೨೦೧೨.

Wednesday, December 12, 2012


ಇಂದಿನ ( ೧೩.೧೨.೨೦೧೨ ) ಕನ್ನಡ ಪ್ರಭ ಪತ್ರಿಕೆಯ ಒಂಭತ್ತನೇ ಪುಟದಲ್ಲಿ ನನ್ನದೊಂದು ಲೇಖನ ಬಂದಿದೆ.ದಯಮಾಡಿ ಓದಿ .
ನಾನು ಜೋಡಿಸಿದ ಅಕ್ಷರಗಳನ್ನು ಪುರಸ್ಕರಿಸಿದ ವಿ. ಭಟ್ ರಿಗೂ , ಕನ್ನಡ ಪ್ರಭ ಬಳಗದ ಎಲ್ಲ ಮಿತ್ರರಿಗೂ ನನ್ನ ಸಂತೋಷವನ್ನು ವ್ಯಕ್ತಪಡಿಸುತ್ತೇನೆ .
ಲಿಂಕ್:    http://www.kannadaprabha.com/pdf/epaper.asp?pdfdate=12/13/2012

ಹರಿಹರ ಭಟ್ , ಬೆಂಗಳೂರು.

Monday, December 10, 2012

ಶತಾವಧಾನಿ Dr. Ganesh ಏಕೆ ನಮಗೆ ಅಸ್ಟು ಆಪ್ತವಾಗುತ್ತಾರೆ ?


ಶತಾವಧಾನಿ Dr. Ganesh ಏಕೆ  ನಮಗೆ  ಅಸ್ಟು ಆಪ್ತವಾಗುತ್ತಾರೆ  ?  ಅವರ  ಅವಧಾನಗಳಿಗೇಕೆ  ಅಸ್ಟೊಂದು  ಸಂಖ್ಯೆಯಲ್ಲಿ   ಪ್ರೇಕ್ಷಕರು  ಸೇರುತ್ತಾರೆ  ? ಕಂಡು  ಕೇಳರಿಯದ , ಸತತ  ಮೂರೂ  ದಿನಗಳಲ್ಲಿ  ಅವ್ಯಾಹತವಾಗಿ  ಇಪ್ಪತ್ತು  ಘಂಟೆಗಳ  ಕಾಲ  ನಡೆದ  ಶತಾವಧಾನಕ್ಕೆeಕೆ  ದಿನದಿಂದ  ದಿನಕ್ಕೆ  ಆಗಮಿಸುವವರ  ಸಂಖ್ಯೆ  ಜಾಸ್ತಿಯಾಗಿತ್ತು  ? ಪ್ರೆಕ್ಷಕರೆeಕೆ ಆ ಪರಿ ಚಪ್ಪಾಳೆ ತಟ್ಟಿ , ತಟ್ಟಿ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದರು ?  ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಎಲ್ಲರು ಎದ್ದು ನಿಂತು ( standing ovation ) ಏಕೆ ಗೌರವ ಸೂಚಿಸುತ್ತಿದ್ದರು ? ಈ ಎಲ್ಲ ವಿಚಾರವಾಗಿ ಘಂಬಿeರವಾಗಿ ಚಿಂತಿಸುವ ಅವಶ್ಯಕತೆ ಇದೆ.


ಗಣೇಶ್ ರವರು ಬಹು ಭಾಷಾ ಪಂಡಿತರು. ನಿರರ್ಗಳವಾಗಿ ಇಂಗ್ಲಿಶ್ , ಸಂಸ್ಕ್ರತ , ಕನ್ನಡ , ತೆಲಗು , ತಮಿಳು , ಉರ್ದು ಭಾಷೆಗಳಲ್ಲಿ ಮಾತನಾಡಬಲ್ಲರು. ಸಲಿಲತವಾಗಿ ಓದಿ ಈ ಭಾಷೆಗಳಲ್ಲಿರುವ ತತ್ವ , ಸತ್ವಗಳನ್ನು ಅರಗಿಸಕೊಳ್ಳಬಲ್ಲವರು. ಹಿಂದೂ , ಕ್ರಿಸ್ತ , ಮುಸಲ್ಮಾನ ಧರ್ಮ ಗ್ರಂಥಗಳಲ್ಲಿ ಅಡಕವಾಗಿರುವ ಸತ್ಯಗಳನ್ನೆಲ್ಲ ಮಥಿಸಿ , ಶ್ರೇಷ್ಟ ಜ್ಞಾನವನ್ನು ತಮ್ಮದಾಗಿಸಿಕೊಂಡವರು. ವಿಚಾರದಂತೆ ಆಚಾರವುಳ್ಳವರು.  ಆಚಾರದಿಂದಲೂ  , ವಿಚಾರದಿಂದಲೂ  ಈ ಭುವಿಯ ಸಕಲರನ್ನು ಏಕೋ ಭಾವದಿಂದ ಕಾಣುವವರು. ವಿಚಾರದಿಂದಲೂ , ಆಚಾರದಿಂದಲೂ ದೈವ ಮೆಚ್ಚುವ ಬ್ರಹ್ಮಚಾರೀ ಜೀವನ ಸಾಗಿಸುತ್ತಿರುವವರೆಂದು  ಅವರ ನಡೆ , ನುಡಿ , ಮುಖ ಕಮಲದಲ್ಲಿ ಮಿನುಗುವ ಕಾಂತಿ ಸ್ಪಸ್ಟಪಡಿಸುತ್ತದೆ  .


ಹಾಗಾದರೆ , ಗಣೇಶರವರಂತಹ ಮೇಧಾವಿ , ಚುರುಕುತನದ ವ್ಯಕ್ತಿಗಳು ಅಲ್ಲಲ್ಲಿ ನಮ್ಮ ಕಣ್ಣಿಗೆ ಕಾಣ ಸಿಗುತ್ತಾರೆ . ಆದರೆ ಜನರೇಕೆ ಆ ಮಹಾನೀಯರುಗಳನ್ನು ಮನ್ಹಪುರ್ವಕವಾಗಿ ಒಪ್ಪಿಕೊಳ್ಳುವದಿಲ್ಲ, ಆರಾಧಿಸಬೇಕಾದಂತಹ ವಿದ್ಯಾಸಂಪನ್ನರಾದರೂ ಜನರೇಕೆ ಬಹುಸಂಕ್ಯೆಯಲ್ಲಿ ಆ ರೀತಿಯ ಮಹನೀಯರುಗಳನ್ನು ಒಪ್ಪಿಕೊಳ್ಳುವದಿಲ್ಲ ?ಆರಾಧಿಸುವದಿಲ್ಲ ? ಏಕೆ ?  ಯೋಚಿಸಬೇಕಾದ ವಿಷಯ.


ನಿಗರ್ವಿಯಾದ ಗಣೇಶರವರು ಎಲ್ಲಿಯೂ ಒಮ್ಮೆಯೂ ಇದು ಮಡಿ ಇದು ಮೈಲಿಗೆ , ಸ್ವೀಕಾರಾರ್ಹವಲ್ಲ ಎಂಬ ಭಾವನೆಯನ್ನೇ ವ್ಯಕ್ತಪಡಿಸುವದಿಲ್ಲ. " ಏನೋ ಶಿಷ್ಯಾ , ಸೊಂಟದ ವಿಷ್ಯಾ" ಎಂಬ ಚಿತ್ರಗೀತೆಯ ಪ್ರಸ್ತಾಪಿಸುತ್ತ  , ಪಂಡಿತರಿಗೂ ಇನ್ನೂ ಪೂರ್ಣಪ್ರಮಾಣದಲ್ಲಿ ನಿಲುಕಿರದ ವೇದ , ವೇದಾಂತ , ಉಪನಿಷತ್ , ಭಗವದ್ಗೀತೆ ಗಳತ್ತ ಜನರನ್ನು ಕೊಂಡೊಯ್ಯುತ್ತಾರೆ.  ಎಂ . ಜಿ . ರೋಡ , ಬ್ರಿಗೆಡ್ ರೋಡ ಸುದ್ದಿ ಹೇಳುತ್ತಾ ಪ್ರೇಕ್ಷಕರ ಆಸಕ್ತಿ ಕೆರಳಿಸಿ , ವೈದಿಕ ಕಾಲಕ್ಕೆ ಹಾಗೂ  ಸಂಸ್ಕ್ರತ ವಾನ್ಗ್ಮಯತೆ , ಹಳಗನ್ನಡದ ಛಂದಸ್ಸು , ಅಲಂಕಾರ ಗಳತ್ತ ಪ್ರೇಕ್ಷಕ ವ್ರನ್ದವನ್ನು ಕರೆದೊಯ್ಯುತ್ತಾರೆ. ಪ್ರಚ್ಚಕರು , ಇಂದಿನ ದಿನಗಳ ಯುವ ಜನಾಂಗ , ಯೌವನ ದಾಟಿಯೂ ಯೋನಿ ಸುಖದ ಸಖ್ಯದಿಂದ ಹೊರಬರಲಾರದವರ ಆಸಕ್ತಿ ಕೆರಳಿಸುವಂತಹ -

  " ಕೈಯೋಳ್ ಪಿಡಿದು ಸ್ತನಗಳೆರಡರ , ಕಚ್ಚಿದನು ಸೊಂಟಕ್ಕೆ ತಾನಾಗ "

 ಎಂಬಂತಹ ಸಮಸ್ಯಾ ಪೂರ್ತಿ ಪ್ರಶ್ನೆಯನ್ನು ಶಾಂತ ಭಾವದಿಂದ ಈ ಬ್ರಹ್ಮಚಾರಿ ಸ್ವೀಕರಿಸಿ , ಸಮಸ್ಯಾ ಪರಿಹಾರ ನೀಡುವಾಗ ವಿದ್ವನ್ನಮಣಿಗಳೆಲ್ಲಾ  ತಲೆದೂಗಿ, ಕಿವಿಗಡಚಿಕ್ಕುವಂತೆ ಚಪ್ಪಾಳೆ ತಟ್ಟುವ ಪರಿಯನ್ನು ನೋಡಿಯೇ ಆನಂದಿಸಬೇಕು. ಈ ರೀತಿ ಪ್ರಚ್ಚಕರ ( ಪ್ರಶ್ನೆ ಕೇಳುವವರು ) ಪ್ರಶ್ನೆಗಳು ಮನದಾಲ್ಹಾಹಕೆ ದಾರಿಯಾದರೆ , ಅವಧಾನಿಗಳ ಪದ್ಯ ರಚನೆಗಳು ಬೌದ್ಹಿಕ ಕಸರತ್ತಿಗೆ ಸಾಕ್ಷಿಯಾಗುತ್ತಿದ್ದವು. ಈಗಿನ ದಿನನಿತ್ಯದ ಜೀವನ ಸಮಸ್ಯೆಗಳಲ್ಲೊಂದಾದ , ತಂಬಾಕು ಚಟದ ಅವತಾರವನ್ನು ತೋರ್ಪಡಿಸುವಂತೆ ಪ್ರಚ್ಚಕರೋರ್ವರು -
 ತಂಬಾಕು ಅಗಿದು ಅಗಿದು ಚಟ ಬಿಡಲಾರದವನೊಬ್ಬ, ಪ್ರಯತ್ನಪೂರ್ವಕವಾಗಿ ಚಟ ಬಿಡತೊಡಗಿದರೆ ಸಾಮಾನ್ಯವಾಗಿ ಬರುವ ತಲೆಸುತ್ತುವಿಕೆಯ ಕುರಿತು ಒಂದು ಆಶುಕವಿತೆಯನ್ನು ರಚಿಸುವಂತೆ ಅವಧಾನಿಗಳನ್ನು ಕೇಳಿದಾಗ ,

" ಚತುರ್ಮುಖ ಬ್ರಹ್ಮ್ಹದೇವನ ಸತಿಯರು ಅಸುಹೆಯಿಂದ ಬೀಡಿ , ಸಿಗರೇಟು , ಗುಟ್ಕಾ , ತಂಬಾಕನ್ನು ನಾಲ್ಕು ಬಾಯೋಳಗಿಟ್ಟು , ಬ್ರಹ್ಮದೇವನಿಗೆ ತಲೆಸುತ್ತುಬಂದು , ಆ ಸಮಯದಲ್ಲಿ ನಮ್ಮ ನಿಮ್ಮೆಲ್ಲರ ಹಣೆ ಬರಹ ಬರೆದ ಬ್ರಹ್ಮ ದೇವನಿಂದಾಗಿ ನಾವೆಲ್ಲಾ ಇಂದು , ಹಣೆ ಬರಹ ಸರಿಯಿಲ್ಲ ಎಂದು ಒದ್ದಾಡುತ್ತಿದ್ದೇವೆ "
ಎಂಬುದಾಗಿ ಜಗತ್ತಿನ ಎಲ್ಲ ಹಾಸ್ಯ ಕವಿಗಳನ್ನೂ ಮೀರಿಸುವ ರೀತಿಯಲ್ಲಿ ಆಶುಕವಿತೆ ರಚಿಸಿದರು.


ಯೋಚಿಸಿ . ಈ ರೀತಿ ಶತಾವಧಾನದ ಅವಧಾನಿಯಾಗುವುದು ಎಂದರೆ ಜಗತ್ತಿನ ಎಲ್ಲ ಬದಲಾವಣೆಗಳ ಅರಿವು ಇರಬೇಕು. ಕೇವಲ ವರ್ತಮಾನದ ಅರಿವಿದ್ದರೆ ಸಾಲದು ಭೂತಕಾಲ , ಭಾವಿಶತ್ಕಾಲಗಳ ಅರಿವು , ಆಳ ತಿಳಿದಿರಬೇಕು , ತಿಳಿದಿದ್ದರೆ ಸಾಲದು , ಕೇಳುವ ಪ್ರಚ್ಚಕರು , ಪ್ರಭುದ್ದ ಸಭಿಕರು ತಲೆದೂಗುವನ್ತಿರಬೆಕು   . ಆಸಕ್ತರ ಆಸಕ್ತಿ ಕುಂದದಂತೆ ಕಾರ್ಯಕ್ರಮ ಮುನ್ನಡೆಸುವ ಜವಾಬ್ದಾರಿಯೂ ಅವಧಾನಿಯದೆ ಆಗಿದೆ. ಒಂದೆರಡು ಘಂಟೆಗಳ ಕಾರ್ಯಕ್ರಮವಲ್ಲ. ಮೊದಲನೇ ದಿನ ಮೊದಲನೇ ಸುತ್ತಿನಲ್ಲಿ ಹೇಳಿದ್ದು , ಕೇಳಿದ್ದು ನೆನಪಿನಲ್ಲಿಟ್ಟು , ಮುಂದಿನ ಹಂತದಲ್ಲಿ ಮುಂದಿನ ಸಾಲನ್ನು ಹೇಳಬೇಕು. ಸಭಿಕರು ಮರೆತರೆ ನಡೆದೀತು ! ಯಾಕೆಂದರೆ ಹಿಂದೆ ಹೇಳಿದ್ದನ್ನು ನೆನಪಿಸಿ ಮುಂದೆ ಸಾಗುವದೂ ಅವಧಾನಿಯದೆe ಕೆಲಸ. ಶತಾವಧಾನದಲ್ಲಿ ನೂರು ಜನ ಪ್ರಚ್ಚಕರು ಕೇಳುವ ಸಮಸ್ಯೆ , ಪ್ರಶ್ನೆಗಳನ್ನು ನೆನಪಿನಲ್ಲಿಟ್ಟು , ಸಮಾಧಾನಕರವಾಗಿ ವ್ಯಾಕರಣ ಶಾಸ್ತ್ರಕ್ಕೆಲ್ಲೂ ಕುಂದು ಬರದಂತೆ , ಅವಧಾನಿ ಮುನ್ನಡೆಯಬೇಕು. ಅವಧಾನಿಯು ಈ ಎಲ್ಲ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ , ತನ್ನ ವಿದ್ವತ್ತನ್ನೇ ಪಣಕ್ಕಿಟ್ಟು ಯೋಚಿಸುವಾಗ , ಅವಧಾನಿಯ ಸ್ಮರಣ ಶಕ್ತಿ ಕುಂದಿಸಲು , ಅವಧಾನಿಯ ದಾರಿ ತಪ್ಪಿಸಲು , ಅವಧಾನಿ ಕೊeಪಗೊಳ್ಳಲು , ಕೋಪದ ತಾಪದಲ್ಲಿ ಸಿಲುಕಿ ವಿಲ ವಿಲ ಒದ್ದಾಡುವಂತೆ , ಇಲ್ಲ ಸಭೆ ಬಿಟ್ಟು ಓಡೋಡುವಂತೆ ಮಾಡಲು , ಅವಧಾನಿಯ ಎಲ್ಲ ಸಮಸ್ಯೆಗಳಿಗೆ ಕಳಸ ಪ್ರಾಯದಂತಹ ಸಮಸ್ಯೆ ಸ್ರಸ್ಟಿಸಲು , "ಅಪ್ರಸ್ತುತ ಪ್ರಸಂಗಿ "ಎಂಬ ನಾಮಧೇಯ ಹೊತ್ತ ಬಲಿತ ಮೆದುಳೊ0ದು ಕಾಯುತ್ತಿರುತ್ತದೆ , ಕಾಡುತ್ತಿರುತ್ತದೆ.


ಈ ಶತಾವಧಾನದಲ್ಲಿ   ಪ್ರಚ್ಚಕರು  ಸಮಸ್ಯಾಪೂರಣ , ದತ್ತಪದೀ , ಆಶುಕವಿತ್ವ , ಕಾವ್ಯವಾಚನ , ಸಂಖ್ಯಾಬಂಧ , ಚಿತ್ರ ಕವಿತೆ , ಅಪ್ರಸ್ತುತ ಪ್ರಸಂಗ  ವಿಭಾಗಗಳಲ್ಲಿದ್ದರು. ನಾಲ್ಕು ಪಾದಗಳಲ್ಲಿರುವ ಪದ್ಯದ ಒಂದು ಪಾದವನ್ನು ಸಮಸ್ಯೆಯಾಗಿ ಕೊಟ್ಟಾಗ ಅದು ಅಶ್ಲೀಲವಾಗಿಯೋ , ನಿರರ್ಥಕವಾಗಿಯೋ , ಅಸಂಭಾವ್ಯವಾಗಿಯೋ ಅನಿಸೀತು ಆದರೆ ಅವಧಾನಿಗಳು ಆ ಪಾದಕ್ಕೆ ಇನ್ನೂ ಮೂರು ಪಾದಗಳನ್ನು ರಚಿಸಿ ಓದಿದಾಗ ಅದು ಅರ್ಥಪೂರ್ಣ  ವಾಗಿರುತ್ತದೆ . ಈ ಪಾದಗಳ ಜೋಡಣೆಯಲ್ಲಿ ಗಣ ಛಂದಸ್ಸು ಸರಿಯಾಗಿ ವ್ಯಾಕರಣ ರೀತ್ಯಾ ಯಾವುದೇ ಅಸಂಬದ್ದತೆ ಇರುವಂತಿಲ್ಲ  . ಉದಾಹರಣೆಯಾಗಿ ಹೇಳುವದಾದರೆ ಪ್ರಚ್ಚಕರು
 "ಕುಚಮಂ ಕಚ್ಚುತಲಿರ್ಪ ಯತಿಯಂ ಕಂಡೆ " ಎಂದರೆ ಅವಧಾನಿಗಳು
" ಅಚಲ ಮನಸ್ಕಂ ನಿಸ್ಟಾ , ಖಚಿತಾತ್ಮಂ ತಾನೆನಲ್ಕೆ ನಿರ್ಜನವನದೊಳ್ /
 ರುಚಿರರಸಾರ್ದ್ರಸುಪಕ್ವ ಲಿ -
 ಕುಚಮಂ ಕಚ್ಚುತಲಿರ್ಪ ಯತಿಯಂ ಕಂಡೆ "
 ಎಂದು ತಮ್ಮ ಜ್ಞಾನಭಂಡಾರವನ್ನು ಅಗೆದಗೆದು ಪ್ರೇಕ್ಷಕರಿಗೆ ರಂಜನೆ ನೀಡುತ್ತಾರೆ, ಜ್ನಾನದಾಹಿಗಳಿಗೆ ಜ್ನಾನನೀಡುತ್ತಾರೆ , ಜ್ಞಾನದ ದುರಹಂಕಾರಿಗಳನ್ನು ನಿಶಸ್ತ್ರಗೊಳಿಸುತ್ತಾರೆ. ( ಲಿಕುಚ ಎಂದರೆ ಹೆಬ್ಬಲಸಿನ ಮರ )

ಇನ್ನೊಂದು ಸಮಸ್ಯಾ ಪುರಾಣ ಓದಿ. ಐಫೆಲ್ನಿರ್ಮಿತಿ  , ತಾಜ್ಮಹಲ್ , ಕುತುಬ್ಮಿನಾರ್ ಬೆಂಗಳುರೊಳ್  ಗಡಾ  ಎಂಬ ಸಮಸ್ಯೆಗೆ ಹಿಂದೆ ಇನ್ನೊಂದು ಅವಧಾನದಲ್ಲಿ ಗಣೇಶ್ರವರು ನೀಡಿದ ಸಮಸ್ಯಾ ಪರಿಹಾರ :
 ಸಾಫಲ್ಯಂ ಗಡ ಕಣ್ಗಳಿರ್ಪುದಕೆನಲ್ ಕ್ರಿಸ್ಮಸ್ ಮಹಾಪರ್ವಕೆಂ -
 ದಾ ಫಾಲಾಕ್ಷ ಜಟಾ  ಕಿರೀಟ ಶಶಿಸಂಕಾಶಂ  ಸುಧಾಸಾಂದ್ರ ಶೋ- /
 ಭಾಷಾಣಿ ಪ್ಲುತಮಲ್ತೆ  ನೀಲಗಿರಿಯಾ ಖಾದ್ಯಂಗಳಾ  ಕಾರದಿಂ -
ಧೈಫೆಲ್ನಿರ್ಮಿತಿ , ತಾಜಮಹಲ್ , ಕುತುಬುಮೀನಾರ್ ಬೆಂಗಳುರೊಳ್ ಗಡಾ  //

ಅಂದರೆ ಕ್ರಿಸ್ಮಸ್ ವೇಳೆಯಲ್ಲಿ ಬಹುಜನರು ವಿeಕ್ಷಿಸುವ ನಿಲ್ಗಿರಿಸ್ ಕಂಪನಿಯವರ ಕೇಕ್ ಪ್ರದರ್ಶನ ಕುರಿತು ಈ ಸಮಸ್ಯಾ ಪೂರ್ತಿ ಪದ್ಯ ರಚನೆ.  ಇದೆe  ರೀತಿ  ಈ ಶತಾವಧಾನ ದಲ್ಲೂ

೧)  "ತೊಡೆ ನಡುವಿಹ ಬೀಜ ಕೊಡಹಿ ಬಾಯ್ಗಿಡೆ ಚೆನ್ನಂ "  
೨) "ಕುಡಿತ ಮಿರದ ಬಾಳು ಸೊಗವೇ "
೩) "ಭುಮಿಜೆಗಾರಾಮನೆ ಪತಿನಾಲ್ಕನೆಯಾತಂ "
೪) " ರತಿಕೆeಳಿಯೋಳು ಮೈಮರೆತು ಮನೆಯವರು ಧನ್ಯರಾದರ್ "
೫) "ಖಗವಲ್ಲದಹುದೆ ಸ್ತನಿಕುಲಂ ನರಂ ನಗೆಗೆeಡಿಗಲ್ಲದೇಂ ಜಗಕೀಮಹಾದ್ಭುತಂ "
ಮುಂತಾದ ಸಮಸ್ಯಾಪೂರ್ತಿ ಮಾಡಿ , ಗಣೇಶ್ ಅವಧಾನಿಗಳು ತಮ್ಮ ಜ್ಞಾನ ಶ್ರೆeಸ್ಟತೆ ಮೆರೆದರು.      

ಇನ್ನು ದತ್ತಪದಿ . ಪ್ರಚ್ಚಕನು ಒಂದು ನಿರ್ಧಿಸ್ಟ ವಸ್ತುವನ್ನು ಮತ್ತು ಅದರ ಭಾವವನ್ನು ನೀಡಿ ನಾಲ್ಕೂ ಪಾದಗಳಲ್ಲಿ ನಿರ್ಧರಿಸಿದ ಒಂದೊಂದು ಶಬ್ದಗಳು ಬರುವಂತೆ , ಸುತ್ತಿಗೊಂದು ಪಾದದಂತೆ ಕವನ ರಚಿಸಬೇಕು. ಪ್ರಚ್ಚಕನು ಯಾವುದೇ ಭಾಷೆಯ ಯಾವುದೇ ಶಬ್ದಗಳನ್ನು , ಯಾವುದೇ ಶೀಲ - ಅಶ್ಲೀಲ , ಸಮಂಜಸ - ಅಸಮಂಜಸ , ಪರಿವರ್ತಿತ - ಪುನರಾವರ್ತಿತ ಮುಂತಾದ ಯಾವುದೇ ಕಟ್ಟು ಪಾಡುಗಳಿಲ್ಲದೆ ಕೇಳಬಹುದು. ನೋಡಿ ಒಮ್ಮೆ ಕೇಳಿದ ದತ್ತಪದಿಯ ಮಜಾ :
ಸೈನ್ , ಕೊಸೈನ್ , ಟ್ಯಾನ್ , ಕಾಟ್ ಶಬ್ದಗಳನ್ನು ಬಳಸಿ ಕಂದ ಪದ್ಯದಲ್ಲಿ ಯುದ್ದದ ವರ್ಣನೆ :

ರಿಪುಸೈನ್ಯಂಗಳ್ ಕಲೆಯಲ್
ವಿಪುಲಂ ಮ್ರತಿ , ಆರ ದಾಹಕ್ಕೋ ಸೈನ್ಯಸಮಿ-/
ತ್ತಪನಂ ವೈಕಟ್ಯಾ0ತರ-
ಮುಪಮಿಸಲಿಲ್ಲಂ ಸೊಗಕ್ಕೆ ಶನಿಕಾಟಮಿದೆe //

ಗ್ರಹಿಸಿ , ಮೊದಲನೇ ಪಾದದಲ್ಲಿ ಸೈನ್ , ಎರಡನೇ ಪಾದದಲಿ ಕೊಸೈನ್ , ಮೂರನೆ ಪಾದದಲ್ಲಿ ಟ್ಯಾನ್ ಮತ್ತು ನಾಲ್ಕನೇ ಪಾದದಲ್ಲಿ ಕಾಟ್ ಶಬ್ದಗಳು ಬಂದಿವೆ.
ಇದೆ ರೀತಿ ಅವಧಾನಿಗಳು ಈ ಶತಾವಧಾನದಲ್ಲೂ ,
೧)   ರಾಗಿ , ಭತ್ತ , ಕಂಬು , ಹಾರಕ ಶಬ್ದಗಳನ್ನು ಬಳಸಿ ಕಿರಾತಾರ್ಜುನ ಪ್ರಸಂಗ
೨)   ಸ್ಟಾರ್ , ಪೆಗ್ , ಕಸಬ್ , ನಿತ್ಯಾನಂದ ಶಬ್ದಗಳನ್ನು ಬಳಸಿ ಸೊಬಗಿನ ಸೋನೆಯಲ್ಲಿ ಗಣೇಶ ದೇವರ ಪ್ರಾರ್ಥನೆ
೩)   ಹೈದರ್ , ಖಾದರ್ , ಕರೀಂ , ಮಹಮದ್  ಶಬ್ದಗಳನ್ನು ಬಳಸಿ ದೇವಿ ಸ್ತುತಿ
೪)   ವಾನ , ಅಮೇ , ಯಾಮೂರ್ ( ತುರ್ಕಿ ಭಾಷೆಯ ಶಬ್ದ ) , ರಿಯನ್ ( ಆಫ್ರಿಕಾ ಭಾಷೆಯ ಶಬ್ದ ) ಬಳಸಿ ಪದ್ಯ
೫ )  ಕಡು , ಬಡವ , ಪರಮ , ಸುಖಿ   ಶಬ್ದಗಳನ್ನು ಬಳಸಿ  ಕಂದ ಪದ್ಯ
೬)   ಸಾಗು , ಚಪಾತಿ , ಪೂರಿ , ರಸಂ ಶಬ್ದಗಳನ್ನು ಬಳಸಿ ಉತ್ಪಲ ಮಾಲಾ ವ್ರತ್ತದಲ್ಲಿ

ಹೀಗೆ ಸಾಗಿತು ದತ್ತಪದಿಯ ಚಮತ್ಕಾರ , ಶತಾವಧಾನಿಗಳ ನಾಲಿಗೆಯಲ್ಲಿ ಸರಸ್ವತಿಯ ಸುಲಲಿತ ನಾಟ್ಯ ಲೀಲೆ.

ಮುಂದೆ ಇನ್ನೊಂದು ಅಂದರೆ ಆಶುಕವಿತೆ ರಚನೆ. ಶಾರ್ದೂಲವಿಕ್ರೀಡಿತ , ಸೀಸಪದ್ಯ , ರತ್ಹೊeದ್ಧಥ , ಕಂದಪದ್ಯ , ಚಂಪಕಮಾಲಾ ವೃತ್ತ   ಗಳಲ್ಲಿ ಯಾವುದೊಂದನ್ನು ಪ್ರಚ್ಚಕ ಆಯ್ದು ಪದ್ಯಕ್ಕೊಂದು ವಿಷಯ ನೀಡುತ್ತಾನೆ . ಅವಧಾನಿ ಆವಿಶಯವನ್ನೋಳಗೋ0ಡು , ಆ ವೃತ್ತ ದಲ್ಲಿ ಕವಿತೆ ರಚಿಸಬೇಕು.  ಈ ಶತಾವಧಾನದಲ್ಲಿ " ಸೋರುತಿಹ ನಲ್ಲಿ ( ಕೊಳಾಯಿ ) ಗೆ ಬಟ್ಟೆ ಸುತ್ತಿದ ವಿಷಯ ಕುರಿತು ರಚಿಸಿದ ಕಂದ ಪದ್ಯ :

ಸೋರುವ ನಲ್ಲಿಗೆ ಬಟ್ಟೆಯ ಚೂರೆ
ಕಾರಿಪುದಂತೆ ಗಾಂಧಾರಿಯನ್ತೊಲ್
ನೂರು ಜನ ಮಕ್ಕಳಿರಲ್ , ತೋರದ ಕಂಗಳಿಗೆ
ಕಟ್ಟೆ ಬಟ್ಟೆಯ ನೋಡಲ್

ಕಾರ್ಪೋರೇಶನ್ ನವರು ಗಿಡ ನೆಟ್ಟು ಬೇಲಿ ಹಾಕಿ , ಯಾರದೋ ಹೆಸರು ಬರೆದು , ನೀರೆರೆಯದೆ ಆ ಗಿಡ  ಸೊರಗಿದೆ  ಕುರಿತು , ಕಂದ ಪದ್ಯ :

ಪೆಸರ್ವೆತ್ತೋಡ ನೀ ನೆಲದೊಳ್ ಸಸಿಗೆಲ್ಲಿಯ ಬಾಳ್ಪೆ
ಬಾಡಿ ಬಳಲುವದೆe ಫಲಂ
ಸುಸಿಲೆeನ್ ನುಡಿದೊಡೆ ಪಿರಿಯರ ಪೆಸರಂ
ರಸಮೊಸರಿ ಬಂದು ಸಂತೈಸುವದೆಮ್ ?

ಅದೇ ರೀತಿ ಕಾವ್ಯವಾಚನ , ತಮ್ಮ ರಾಗ , ತಾಳ , ಲಯಗಳಿಂದ , ಶ್ರುತಿ , ಸ್ವರಬದ್ಧವಾಗಿ ಹಾಡುವ ಕವನ -ಕಾವ್ಯ. ದ್ವನಿ ಸ್ವಾರಸ್ಯದಿಂದೊಡಗೂಡಿದ ವ್ಯಾಸ , ವಾಲ್ಮೀಕಿ , ಕಾಳಿದಾಸ , ಭವಭೂತಿ , ಭಾರವಿ, ಬಾಣಾದಿಗಳೂ , ಪಂಪ , ರನ್ನ , ಹರಿಹರ , ನಾಗವರ್ಮ , ಕುಮಾರವ್ಯಾಸ, ರಾಘವಾಂಕ, ಲಕ್ಶ್ಮಿeಷ,  ಷಡಕ್ಷರಿ , ರುದ್ರ ಭಟ್ಟರು , ಡಿ.ವಿ.ಜಿ. , ಕುವೆಂಪು , ಗೋವಿಂದ ಪೈ , ಪು.ತಿ.ನ   ರವರ ಕವನಗಳನ್ನು ವಾಚಿಸುವರು. ಅವಧಾನಿಗಳು ಅದೇ ರಾಗ , ಶ್ರುತಿ , ತಾಳ , ಲಯಗಳಲ್ಲಿ ಕವಿಗಳ ಹೆಸರು ಹೇಳುತ್ತಾ , ಕವಿಯ  ಶ್ರೇಷ್ಟ ಗುಣಗಳನ್ನು ಪ್ರೇಕ್ಷಕರ ಗಮನಕ್ಕೆ ತರುತ್ತ ಆಶುಕವಿತೆ ರಚಿಸಿ ಹಾಡುವರು. ಈ ಶತಾವಧಾನ  ತುಮ್ಬುಗನ್ನಡದ  ಶತಾವಧಾನವಾದ್ದರಿಂದ  ಕನ್ನಡ ಕವಿ ಪುಂಗವರ ಶ್ರೇಷ್ಟ ಕವನಗಳನ್ನು , ಜನಪ್ರಿಯ ಗಮಕಿ ಕೆದಿಲಾಯರವರ ಸಿರಿ ಕಂಠ ದಲ್ಲಿ ಆಸ್ವಾದಿಸುವದು ಒಂದು ರೋಮಾಂಚಕ ಅನುಭವವಾಗಿತ್ತು. ಕೆದಿಲಾಯರ ಸಿರಿಕಂಟಕ್ಕೆ ಮುಕುಟಪ್ರಾಯವಾಗಿ ನಮ್ಮ  ಜನಾನುರಾಗಿ ಡಾ. ರಾ. ಗಣೇಶ್ ರವರ ಜ್ಞಾನ ಭಂಡಾರ  , ದ್ವನಿ ಮಾಧುರ್ಯ ಸವಿಯುವದೇ ಒಂದು ಭಾಗ್ಯ.

ಸಂಖ್ಯಾ   ಬಂಧ . ಇದು ಪದಬಂಧವಿದ್ದಂತೆ. ಆರಂಭದಲ್ಲಿ   ಪ್ರಚ್ಚಕರು ಅವಧಾನಿಗೆ ಒಂದು ಮೊತ್ತದ ಸಂಖ್ಯೆ ಹೇಳಿ , ಸಂಖ್ಯಾ ಬಂಧದ ಮನೆಗಳಲ್ಲಿ ತುಂಬಬೇಕಾದ ಸಂಖ್ಯೆಗಳನ್ನು , ಆಗಾಗ ಅವಧಾನದ ಮಧ್ಯೆ ಯಾವಾಗ ಬೇಕಾದರೂ  ಅವಧಾನಿಯನ್ನು ತಡೆದು ಕೇಳುತ್ತಾರೆ. ಅವಧಾನಿಯು ದೀರ್ಘ ಯೋಚನೆಯಲ್ಲಿದ್ದಾಗ, ಇನ್ನೊಬ್ಬ ಪ್ರಚ್ಚಕರ ಸಮಸ್ಯೆ ಬಿಡಿಸುತ್ತಿದ್ದಾಗ ಮುಂತಾದ ಸಮಯದಲ್ಲಿ ಅವಧಾನಿಯ ಯೋಚನಾಲಹರಿಯನ್ನು ವಿಘ್ನಗೊಳಿಸಲು ಮತ್ತು ಅವಧಾನಿಯ ನೆನಪಿನ ಶಕ್ತಿಯನ್ನು ಒರೆಗೆ ಹಚ್ಚಲು ಇರುವದೀ ಸಂಖ್ಯಾ ಬಂಧ.

ಪ್ರಚ್ಚಕನು ಅವಧಾನಿಗೆ ಚಿತ್ರವೊಂದನ್ನುವಿವರಿಸಿ , ಆ ಚಿತ್ರದ ಭಾವ , ವಿಷಯ ಸರಿಹೊಂದುವಂತೆ ಚಿತ್ರ -ಕವಿತೆ ರಚಿಸಲು ಕೋರುತ್ತಾನೆ .

ಇನ್ನು ಅಪ್ರಸ್ತುತ ಪ್ರಸಂಗಿ. ಜನರೆಲ್ಲಾ ಒಪ್ಪಿಕೊಂಡಿರುವದು ಅಧಿಕಪ್ರಸಂಗಿ ಎಂದು. ಈ ವ್ಯಕ್ತಿಯ ಕೆಲಸವೇ ಅವಧಾನಿಯ ದಾರಿತಪ್ಪಿಸುವದು. ಲೋಕಜ್ನಾನವೆಲ್ಲ ಇರುವವನಾದರೆ " ಅವಧಾನಿಗಳೇ ಇಂದು ನಿಮ್ಮ ಕೈಯಲ್ಲಿ ಬಾಟಲಿ ಹಿಡಿದಿದ್ದಿರಲ್ಲ "ಎಂದು ಕುಚೋದ್ಯದ ಪ್ರಸ್ನೆ ಕೇಳಿ ಅವಧಾನಿಗೆ ಕಸಿವಿಸಿ ಮಾಡಬಹುದು. ಅದೇ ರೀತಿ ಜಾಣ ಅವಧಾನಿ " ಎತ್ತಿಗೆ ಔಷಧ ತರಲು ಬಾಟಲಿ ಕೈಯಲ್ಲಿ ಹಿಡಿದಿದ್ದೆ " ಎಂದುತ್ತರ ನೀಡಬಹುದು. ತಿರುಗಿ ಅಪ್ರಸ್ತುತ ಪ್ರಸಂಗಿ " ಆದರೆ ಅವಧಾನಿಗಳೇ ತೂರಾಡುತ್ತಿದ್ದಿರಲ್ಲ " ಎಂದರೆ , ನೀವು  ತೂರಾಡುತ್ತಿದ್ದರಿಂದ , ಹಾಗೆ ಕಾಣಿಸಿತು , ಈಗ ನೋಡಿ ! ಎಂದು ಪ್ರೇಕ್ಷಕರನ್ನು ನಗೆಗಡಲಲ್ಲಿ ತೆeಲಿಸಬಹುದು. ಈ ಅಪ್ರಸ್ತುತ ಪ್ರಸಂಗಿ ಅವಧಾನಿಗಳೇ "ಕಾಮಕ್ಕೆ ಕೊನೆ ಎಂದು ? " ಎಂದು ಬ್ರಹ್ಮಚಾರಿ , ಅವಧಾನಿ ಗಣೇಶ್ ರವರನ್ನು ಕೇಳಿದಾಗ , " ಕಾಮಕ್ಕೆ ಫುಲ್ ಸ್ಟಾಪ್ ಇಲ್ಲ , ನೀವೇ ನೋಡಿ , ಇಂಗ್ಲಿಶ್ ನಲ್ಲಿ  i.e  ಬರೆಯುವಾಗ ಫುಲ್ ಸ್ಟಾಪ್ ಮೊದಲಿಗೆ ,ಆಮೇಲೆ ಕೊಮಾ ಎಂದು ನಗೆಗಡಲಲ್ಲಿ ತೇಲಿಸಿದರು. ಮುಂದುವರಿದು ಕಾಮವನ್ನು ಗೆಲ್ಲಲಾಗುವದಿಲ್ಲ , ಕಾಮಕ್ಕೆ ಸೋತು ಮಗ , ಮಗಳನ್ನು ಪಡೆದು , ಸಮಾಧಾನ ಕಂಡು ಸಮ್ರದ್ಧ ಜೀವನ ಸಾಗಿಸಬೇಕೆಂದು , ಈ ಬ್ರಹ್ಮಚಾರಿ ಸೋದಾಹರಣವಾಗಿ  ವಿವರಿಸಿದರು . ಎಲ್ಲರೂ ತಲೆ ದೂಗಿದರು , ತಲೆ ಬಾಗಿದರು ಈ ವ್ಯಾಖ್ಯಾನಕೆ .   ಅವಧಾನಿಗಳೇ ವಿವರಣೆ ಬೇಡ ಹೌದು , ಇಲ್ಲ ಒಂದೇ ಉತ್ತರ ಕೊಡಿ ಎಂದು " ನೀವು ಹೆಂಡ ಕುಡಿಯುವದು ಬಿಟ್ಟಿದ್ದೀರನ್ತಲ್ಲ ! ಎಂದು , ಅವಧಾನಿ ತೀವ್ರತರ ಯೋಚನೆಯಲ್ಲಿದ್ದಾಗ ಒಮ್ಮೆಲೇ ಪ್ರಶ್ನೆ ಎಸೆಯಬಹುದಾದ ಸೌಭಾಗ್ಯ ಈ ಅಪ್ರಸ್ತುತ ಪ್ರಸಂಗಿಯದು. ನಿಮಗೆeನೆನ್ನಿಸುವದು ? ಅವಕಾಶ ಒದಗಿದರೆ ಅವಧಾನಿಯಾಗಬಯಸುವಿರೋ ?  ಇಲ್ಲ ಅಪ್ರಸ್ತುತ ಪ್ರಸಂಗಿಯಾಗಬಯಸುವಿರೋ ?          

ಡಾ.ರಾ.ಗಣೇಶ್ ರವರು ಅವಧಾನದ ಕಾಲದಲ್ಲಿ ಸದಾಕಾಲ ನಮ್ಮಲ್ಲಿ ಮನನವಾಗುವಂತಹ ನುಡಿಮುತ್ತುಗಳನ್ನು ಸುರಿಸುತ್ತಾರೆ. ಅಮ್ರತತ್ವ    ಬರುವದು ಆತ್ಮ ತತ್ವದಿಂದ ಮಾತ್ರ. When we approach great people near and near , we realise they are also people !   ನನಗೆ ( ಗಣೇಶ್ ) ಒನ್ದುನೂರ ಐವತ್ತು ವರ್ಷಗಳ  ಜನರ ಸಂಪರ್ಕವಿದೆ ಏಕೆಂದರೆ ಚಿಕ್ಕಂದಿನಲ್ಲಿ ಎಂಭತ್ತು ಆಯಸ್ಸಿನ ಜನಗಳೊಡನೆ ಬೆರೆಯಲು ಆರಂಭಿಸಿ ಇಂದು ಇಪ್ಪತ್ತು ಇಪ್ಪತೈದು ಆಯಸ್ಸಿನ ಜನಗಳೊಡನೆ ಬೇರೆಯುತ್ತಿದ್ದೇನೆ.  ಕ್ಯಾಮೆರಾ ಹಿಡಿದು ಫೋಟೋಗ್ರಫಿ ಮಾಡುವದಿಲ್ಲ ಏಕೆಂದರೆ ಎಲ್ಲವನ್ನು ಮನಸ್ಸಿನ ಕ್ಯಾಮರಾದಲ್ಲೇ ಹಿಡಿದಿಡುವ ಬಯಕೆ. ಇಂಗ್ಲಿಷ್ , ಕನ್ನಡ , ತೆಲಗು , ತಮಿಳ್ , ಸಂಸ್ಕೃತ ಸಿನೆಮಾಗಳನ್ನು ನೋಡುತ್ತಾರೆ . ಪುಸ್ತಕಗಳನ್ನು ಓದುತ್ತಾರೆ.

ಪ್ರಚ್ಚಕರಲ್ಲೋಬ್ಬರಾದ ನಿಜಗುಣ ಸ್ವಾಮಿಗಳು ಗಣೇಶ್ರವರ ಕುರಿತು ಪದ್ಯವನ್ನೇ ಬರೆದಿದ್ದಾರೆ.  ವಿಶ್ವಕ್ಕೊಬ್ಬನೇ ಆರ್ . ಗಣೇಶ್ ಎಂದು ಸಾರ್ವತ್ರಿಕವಾಗಿ ಸಾರಿದ್ದಾರೆ.

ಶತಾವಧಾನದ   ಕೊನೆಯಲ್ಲಿ ಆತ್ಮೀಯವಾಗಿ ಡಾ. ಆರ್. ಗಣೇಶ್ ರವರನ್ನು ಸನ್ಮಾನಿಸಲಾಯಿತು. ಅಭಿಮಾನಿ ಸಭಿಕರೆಲ್ಲ ಎದ್ದು ನಿಂತು ಕರತಾಡನ ಮಾಡತೊಡಗಿದರು. ಎಷ್ಟು  ಸಮಯ ಸಂದರೂ ಕರತಾಡನ ನಿಲ್ಲಲೇ ಇಲ್ಲ. ಗಣೇಶ್ ರವರು ಸೂಚಿಸಿದರೂ ಕರತಾಡನ ನಿಲ್ಲಲಿಲ್ಲ . ಗಣೇಶ್ ರವರು ಎದ್ದು ಕೈ ಮುಗಿಯುತ್ತ  ತೆರೆಯ ಮರೆ ಸೇರಿದಾಗಲೇ ಧೀರ್ಘ ಕರತಾಡನ ನಿಂತಿದ್ದು.

ಈ ಎಲ್ಲಾ ಸಾಲುಗಳ ಜೊತೆ ಇನ್ನೊಂದು ಸಾಲು ಸೇರಿಸಿದರೆ ಹೆಚ್ಚಾಗಲಿಕ್ಕಿಲ್ಲ. ನಿನ್ನೆ ( ೦೯.೧೨.೨೦೧೨ ) ಪ್ರೊ. ನಾರಾಯಣಾಚಾರ್ಯರ ಅಭಿನಂದನಾ ಸಮಾರಂಭಕ್ಕೆ ಹೋಗಿದ್ದೆನು. ಗಣೆeಶ್ರವರಿಂದ  ಅಭಿನಂದನಾ ಮಾತುಗಳು ಎಂದೊಡನೆ ಕಿವಿಗಡಚಿಕ್ಕುವಂತೆ ಸಭಿಕರ ಕರತಾಡನ ಕೇಳಿ ಮೂಕ ವಿಸ್ಮಿತನಾದೆ.

( ದಿನಾಂಕ ೩೦.೧೧.೨೦೧೨,ಸಾಯಂಕಾಲ ೫ ರಿಂದ ೯ ;  ೦೧.೧೨.೨೦೧೨ ಬೆಳಿಗ್ಗೆ ೧೦ ರಿಂದ ೨ ಮತ್ತು ಸಾಯಂಕಾಲ ೪ ರಿಂದ ೮  ಹಾಗೂ  ೦೨.೧೨.೨೦೧೨ ಬೆಳಿಗ್ಗೆ ೧೦ ರಿಂದ ೨ ಮತ್ತು ಸಾಯಂಕಾಲ ೪ ರಿಂದ ೮. ೩೦  ರ ಅವಧಿಯಲ್ಲಿ ಅವ್ಯಾಹತವಾಗಿ nmkrv college , ಮಂಗಳ ಮಂಟಪ , ಜಯನಗರ ದಲ್ಲಿ ಎರಡನೇ ಶತಾವಧಾನ ಡಾ. ರಾ. . ಗಣೇಶ್ ರವರಿಂದ ನಡೆಯಿತು. ಇಪ್ಪತ್ತೊಂದು ವರ್ಷಗಳ ಹಿಂದೆ ಮೊದಲನೇ ಶತಾವಧಾನ ಭಾರತೀಯ ವಿದ್ಯಾಭವನದಲ್ಲಿ ಬೆಳಿಗ್ಗೆಯಿಂದ ರಾತ್ರಿ ಒಂದು ದಿವಸ ನಡೆದಿತ್ತು. )

ಹರಿಹರ ಭಟ್ , ಬೆಂಗಳೂರು.
ಶಿಕ್ಷಕ , ಚಿಂತಕ , ವಿಮರ್ಶಕ , ಫೇಸ್ ಬುಕ್ ಬರಹಗಾರ .
ಡಿಸೆಂಬರ್ ೧೦ , ೨೦೧೨.

         .................  English version of this posting would follow  ................



ಪ್ರಿಯ ಹರಿಹರಭಟ್ಟರೇ,
ತಮ್ಮ ಅಭಿಮಾನ-ವಿಶ್ವಾಸಗಳ ಮಹಾಪೂರದಲ್ಲಿ ನಾನು ಕೊಚ್ಚಿಹೋಗಿದ್ದೇನೆ. ದಯಮಾಡಿ ನನ್ನನ್ನು ಇಷ್ಟೊಂದು ಹೊಗಳಿಕೆಯ ಹೊನ್ನಶೂಲಕ್ಕೇರಿಸಬೇಡಿರಿ. ನಿಮ್ಮ ಮಾತುಗಳೆಷ್ಟಕ್ಕೋ ನಾನಿನ್ನೂ ಪಾತ್ರನಲ್ಲ.(ಉದಾ: ನನಗೆ ಉರ್ದೂಭಾಷೆಯು ಹಿಂದಿಯ ಜೊತೆ ಕಲೆತಿರುವ ಮಟ್ಟಿಗಲ್ಲದೆ ಮಿಗಿಲಾಗಿ ಮತ್ತೇನೂ ಬಾರದು,; ನಾನೇನೂ ದೊಡ್ಡ ಆಚಾರ-ಸಂಪ್ರದಾಯಗಳ ಆಗರವಲ್ಲ. ನನ್ನ ದೋಷ-ದೌರ್ಬಲ್ಯಗಳು ಹತ್ತಾರು. ನನ್ನಲ್ಲಿ ಯಾವ ದಿವ್ಯತೇಜಸ್ಸೂ ಇಲ್ಲ; ಐವತ್ತರ ಹರೆಯದ ಸಾಮಾನ್ಯದಕ್ಷಿಣಭಾರತೀಯನ ಮುಖವೆಷ್ಟು ಮಾತ್ರ ಬೆಳಗಬದುದೋ ಅಷ್ಟೇ ನನ್ನ ಕಾಂತಿ) ದಯಮಾಡಿ ಸಾಮಾನ್ಯನಾದ ನನ್ನನ್ನು ಹಾಗೆಯೇ ಕಾಣಿರಿ, ಇನ್ನುಳಿದವರಿಗೂ ಹಾಗೆಯೇ ಕಾಣಿಸುವಂತಿರಲಿ. ನನಗಿರುವ ಅಲ್ಪಸ್ವಲ್ಪ ಪ್ರತಿಭೆ-ವ್ಯಾಸಂಗಗಳನ್ನು ನಾನು ಯಾವ ಸೋಗಿನ ವಿನಯವೂ ಇಲ್ಲದೆ ಒಪ್ಪಿ ಹೇಳಿಕೊಳ್ಳಬಲ್ಲೆ. ಆದರೆ ದಯಮಾಡಿ ನನ್ನನ್ನು ನಾನಲ್ಲದ ಮತ್ತೊಬ್ಬ ಮಹನೀಯನನ್ನಾಗಿ ಚಿತ್ರಿಸಬೇಡಿರಿ.ನಾನು ನನ್ನ ಮಿತಿಗಳಲ್ಲಿ ಇರಲು ಅನುವು ಮಾಡಿಕೊಡಿರಿ:-). ಜೊತೆಗೆ ಪದ್ಯಪಾನದಲ್ಲಿ ಯಾವುದೇ ವ್ಯಕ್ತಿಪೂಜೆ ಬೇಡ.
  • ಗೌರವಾನ್ವಿತ ಶತಾವಧಾನಿ ರಾ. ಗಣೇಶ ರವರೆ ,
    ವಂದನೆಗಳು.
    ನನ್ನ ದೇಹಕ್ಕೆ ಐವತ್ತಾರು. ಐವತ್ತರ ದೇಹದಲ್ಲಿರುವ ಜ್ಞಾನ – ಸುಜ್ಞಾನವನ್ನು ಆರಾಧಿಸಿದ್ದೇನೆ. ಶ್ರೀರಾಮ , ಶ್ರೀಕೃಷ್ಣ , ಯೇಸು, ಪೈಗಂಬರ್ , ಜಿನ, ಬುದ್ಧ , ಮಹರ್ಷಿ ಅರವಿಂದ , ನಾರಾಯಣ ಗುರು ಯಾರೊಬ್ಬರೂ ಆರಾಧನೆಯನ್ನು ಅಪೇಕ್ಷಿಸಿಲ್ಲ. ಇಷ್ಟಪಟ್ಟವರ ಹಕ್ಕು ಆರಾಧಿಸುವದು. ನಿಮ್ಮಲ್ಲಿ ಕಂಡ ಆ ಸರಸ್ವತಿ ನೆಲೆ – ಸೆಲೆ , ಸೌಜನ್ಯ , ಸರಳತೆ , ಮುಗ್ದತೆ ಅರಿತು ಆರಾಧಿಸುತ್ತಿದ್ದೇನೆ , ನನ್ನ ಹಕ್ಕನ್ನು ಚಲಾಯಿಸುತ್ತಿದ್ದೇನೆ. ಎಲ್ಲರು ಮಾಡಿರುವದು ಇದೆe . ನಾನು ವ್ಯಕ್ತಪಡಿಸಿದ್ದೇನೆ ಅಸ್ಟೇ !
    ಪದ್ಯಪಾನ ಬಳಗದಲ್ಲಿರುವ ಎಲ್ಲರ ಬಗೆಗೆ ಅತೀವ ಅಭಿಮಾನವಿದೆ.
    ಹರಿಹರ ಭಟ್ , ಬೆಂಗಳೂರು.
    ಡಿಸೆಂಬರ್ ೧೨ , ೨೦೧೨.



Friday, December 7, 2012


ಇಂದಿನ ( ೦೮.೧೨.೨೦೧೨ ) ಕನ್ನಡ ಪ್ರಭ ದಿನಪತ್ರಿಕೆಯ ಪುಟ ಒಂಭತ್ತರ " ತಪ್ಪಾಯ್ತು , ತಿದ್ಕೊತಿeವಿ " ವಿಶ್ವೇಶ್ವರ ಭಟ್ ರ ಅಂಕಣ ಓದಿ.   " ಇಲ್ಲ" ಎನ್ನೋದನ್ನ ಎಷ್ಟು ಸುಂದರವಾಗಿ , ಹಿತವಾಗಿ ನುಡಿಯಬಹುದು ಎನ್ನುವದನ್ನು ನಿರೂಪಿಸಿದ್ದಾರೆ , ನಮ್ಮ ವಿ. ಭಟ್ ರು .

ನಾನು  ಬರೆದ ಈ - ಮೇಲ್ ಹೀಗಿತ್ತು :

ವಿ.ಭಟ್ ರಿಗೆ ವಂದನೆಗಳು .

ಸಾಮಾನ್ಯವಾಗಿ ಹೆಚ್ಚಿನ ಸಂವಾದ , ಪುಸ್ತಕ   ಅನಾವರಣ ಕಾರ್ಯಕ್ರಮಗಳು ವಿಜೃಂಭಣೆ ಯಿಂದ ಆಯೋಜಿಸಲ್ಪಡುತ್ತವೆ . ಅತಿಥಿಗಳು , ಕಾರ್ಯಕರ್ತರ ಹೊರತಾಗಿ , ಜನಗಳೇ ಇರದಿರುವ ಕಾರಕ್ರಮಗಳೇ ಜಾಸ್ತಿ. ಪತ್ರಿಕೆಗಳಲ್ಲಿ, ದ್ರಶ್ಯ  ಮಾಧ್ಯಮ ಗಳಲ್ಲಿ ಪುಸ್ತಕ ಅನಾವರಣ , ಸಂವಾದ ಅತಿಥಿಗಳ ಚಿತ್ರಗಳನ್ನು ಮಾತ್ರ ತೋರಿಸಿ, ಸೇರಿದ ಸಭಿಕರ ಸಂಕ್ಯೇಯನ್ನಾಗಲಿ , ಚಿತ್ರವನ್ನಾಗಲೀ ನಿಡುವದೆe ಇಲ್ಲ. ಇದು  ಸಾರ್ವಜನಿಕವಾಗಿ ಪತ್ರಿಕೆ ಓದುಗರಿಗೆ, ದ್ರಶ್ಯ ಮಾಧ್ಯಮ ವೀಕ್ಷಕರಿಗೆ ನೀಡುವ ಅಸಮಂಜಸ ಮಾಹಿತಿಯಲ್ಲವೇ ?  ಈ ರೀತಿ ತಪ್ಪು/ ಅಪರಿಪೂರ್ಣ  ಮಾಹಿತಿ / ಚಿತ್ರಣ ನೀಡುವದು ಸಾರಸ್ವತ ಲೋಕದ ಅಭಿಮಾನಿಗಳಿಗೆ ಗೊಂದಲವನ್ನುಂಟು ಮಾಡುವದಿಲ್ಲವೇ ? ನಾನು ಈ ವಿಚಿತ್ರ, ಅಸಮಂಜಸ ಪರಿಸ್ತಿತಿಗಳಿಗೆ ಹಲವು ಬಾರಿ ಸಾಕ್ಷಿಯಾಗಿದ್ದೇನೆ. ಪ್ರಸಿದ್ಧ ಕವಿ , ಕವಯಿತ್ರಿಯಯರು, ಲೇಖಕರು, ಸಾಹಿತಿಗಳು ಸಂವಾದದಲ್ಲಿ ಪಾಲ್ಗೊಳ್ಳುತ್ತಾರೆಂದು  ಕಾರ್ಯಕ್ರಮಕ್ಕೆ ಹೋದರೆ , ಸಂವಾದಗಳು ಕೇವಲ ಕೆಲವೇ ನಿಮಿಷಗಳಲ್ಲಿ ಮುಗಿದುಹೋಗುತ್ತವೆ. ಈ ರೀತಿಯ ಅನುಭವಗಳಿಂದ ಕಂಗೆಟ್ಟ ಶ್ರೀ ಸಾಮಾನ್ಯ ಪ್ರೇಕ್ಷಕ ನಿರುತ್ಸಾಹನಾಗಿರುವದರಿಂದಲೇ ಇಂದಿನ ಕಾರ್ಯಕ್ರಮಗಳಲ್ಲಿ ಸಂಘಟಕರು, ಫೋಟೋಗ್ರಾಫರ್ಸ್, ವಿಡಿಯೋಗ್ರಾಫರ್ಸ್, ಬೆರಳೆಣಿಕೆಯಷ್ಟು ಪ್ರೇಕ್ಷಕರು ಮಾತ್ರ ಕಾಣ ಬರುತ್ತಾರೆ.

ಇಂದಿನ ಪತ್ರಿಕೆಯಲ್ಲಿ ಸಂವಾದ ಕಾರ್ಯಕ್ರಮದ ವರದಿ ಓದಿದಾಗ ಈ ರೀತಿ ಅನಿಸಿಕೆಯುನ್ಟಾಯಿತು. ಇನ್ನು ಮುಂದೆ ವರದಿ ಪರಿಪೂರ್ಣ ಹಾಗು ವಾಸ್ತವಿಕತೆಯ ಪಕ್ಷಪಾತಿಯಾಗುವತ್ತ ತಾವು ಪ್ರಥಮ ಹೆಜ್ಜೆ ಯಿಡುವ ಸಾಮರ್ಥ್ಯವುಳ್ಳವರು ಎಂಬ ವಿಶ್ವಾಸದಿಂದ ಈ ಅಕ್ಷರಗಳನ್ನು ಜೋಡಿಸಿ ಇಟ್ಟಿದ್ದೇನೆ ಮತ್ತು ಪ್ರತೀಕ್ಷೆಯಲ್ಲಿದ್ದೇನೆ.

ಹರಿಹರ ಭಟ್, ಬೆಂಗಳೂರು.
ಶಿಕ್ಷಕ , ಚಿಂತಕ , ವಿಮರ್ಶಕ , ಫೇಸ್ ಬುಕ್ ಬರಹಗಾರ.

****************************

ವಿ . ಭಟ್ ರ ಲೇಖನ ವಿಷಯ ವಿಸ್ತರಿಸುತ್ತಾ , ಮುದ ನೀಡುತ್ತ , ಒದಿಸಿಕೊಂಡು ಹೋಗುತ್ತದೆ . ನಾನು ಅವರ ಪ್ರತಿಯೊಂದು ಲೇಖನವನ್ನು ಓದುವ ರೂಡಿ ಇಟ್ಟುಕೊಂಡಿದ್ದೇನೆ.

ಹರಿಹರ ಭಟ್ , ಬೆಂಗಳೂರು.

Link to Kannada Prabha page :    http://www.kannadaprabha.com/pdf/8122012/9.pdf

Thursday, December 6, 2012

Raamaashrama, taalamaddale

ನನ್ನ ಹ್ರದಯಕಮಲದಲ್ಲಿ ನೆಲೆಸಿರುವ ಆಂಜನೇಯ ಸೇವಾ ಸಂಪ್ರೀತ , ಸೀತಾ ಲಕ್ಷ್ಮಣ ರನ್ನುಒಳಗೊಂಡ ಶ್ರೀ ರಾಮಚಂದ್ರನ ದರ್ಶನ ಭಾಗ್ಯ ಅನಿರಿeಕ್ಷಿತವಾಗಿ ಬಾಹ್ಯ ರೂಪದಲ್ಲಿ ಒದಗಿ ಬಂತು. ನನಗೆ ಕನ್ಯಾ ದಾನ ಮಾಡಿದ ಅಂದರೆ ನನ್ನ ಮಾವ ಹೇಳುತ್ತಿದ್ದ ವಿಶ್ವಾಸದ ಮಾತೊಂದು " ವಿಶ್ವಾಸೋ  ಫಲದಾಯಕಹ " , ನೆನೆಪಿನ ಸ್ಮ್ರತಿಯಲ್ಲಿ ಹಾಯ್ದು ಹೋಯಿತು .
ಹೀಗಾಯ್ತು: ಫೇಸ್ ಬುಕ್ ನೋಡುತ್ತಾ ಕೂತಿದ್ದೆ. ಉತ್ಸಾಹಿ ಮಿತ್ರ ಶ್ರೀಕಾಂತ್ ( ಶ್ರೀಕಾಂತ ಹೆಗಡೆಯವರು ) ಬರೆದಿದ್ದ.      ಪ್ರಸಂಗ - ವಾಲಿಯ ಮೋಕ್ಷ
 ಕಾಲ : ಈ ದಿನ, 6.12.12, ಸಮಯ ಸಂಜೆ 6ರಿಂದ8
 ದೇಶ : ಶ್ರೀರಾಮಾಶ್ರಮ, ಗಿರಿನಗರ ಬೆಂಗಳೂರು.
 ಕಲಾವಿದರು - ಕೆರೆಮನೆ ಶಿವಾನಂದ ಹೆಗಡೆ, ಹಡಿನಬಾಳ ಶ್ರೀಪಾದ ಹೆಗಡೆ,
 ವಿದ್ವಾನ್ ಜಗದೀಶ ಶರ್ಮಾ, ಮೋಹನ ಭಾಸ್ಕರ ಹೆಗಡೆ ಮತ್ತು ಇತರರು.

ಸದಭಿರುಚಿಯ ಮನರಂಜನಾಸಕ್ತರಿಗೆ ಹಾರ್ದ ಸ್ವಾಗತ.
 ವಿ.ಸೂ. ಕಾರ್ತ್ತಿಕದೀಪೋತ್ಸವವೂ ಇದೆ.
ಒಹೋ ಹೋಗಲೇ ಬೇಕು. ಪರಿಚಯವಿರುವ ಮಿತ್ರರ ಮಾತಿನ ಮೋಡಿ , ಯಕ್ಷಗಾನ ರಾಗ ಭರಿತ , ರಸ ಮಿಲನದ ಪದ್ಯಗಳನ್ನು ಆಸ್ವಾದಿಸಲು ಬಂದೊದಗಿದ ಈ ಅವಕಾಶ , ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಸನ್ನಿಧಾನದಲ್ಲಿ . 
ಅಚ್ಚುಕಟ್ಟಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ , ತಮ್ಮ ವಾಕ್ ಪಟುತ್ವದಿಂದ ಪಾತ್ರಧಾರಿಗಳೆಲ್ಲ ಪಾತ್ರಗಳಿಗೆ  ಸೂಕ್ತವಾಗಿ ಜೀವ ತುಂಬಿದರು. ನನ್ನ ಪರಿಚಯದ ಮೋಹನ ಹೆಗಡೆಯವರು ಈ ಹದಿನೈದು ವರ್ಷಗಳಲ್ಲಿ ಸಾಧಿಸಿದ ವಿಷಯ ಸಂಗ್ರಹ , ಮಾತಿನ ಚಾತುರ್ಯ ಸಂತೋಷ ನೀಡಿತು. ವಿದ್ವಾನ್ ಜಗದೀಶ್ ಶರ್ಮಾರವರ ಮಾತುಗಾರಿಕೆ ಕೇಳುವ ಬಯಕೆ ಕೈಗೂಡಲಿಲ್ಲ. ಅವರು ಬಂದಿರಲಿಲ್ಲ.
ನಂತರ ಕಾರ್ತಿಕ ದೀಪೋತ್ಸವ , ಅಸ್ಟಾವಧಾನ ಸೇವೆಯೊಂದಿಗೆ ಎಲ್ಲರೂ ಧನ್ಯತೆ ಪಡೆದರು .
ಸನ್ಮಿತ್ರ ಜಿ ಜಿ ಹೆಗಡೆಯವರ ಸಾಂಗತ್ಯ ಹಿತ ನೀಡಿತು. ಮರಳಲ್ಲಿ ಬೆರಳಾಡಿಸಿ ಚಿತ್ತಾರಗಳನ್ನು ಬರೆದು ಮಂತ್ರ ಮುಗ್ಧರನ್ನಾಗಿಸುವ ರಾಘವೇಂದ್ರರ ಪರಿಚಯವಾಯಿತು. ನಮ್ಮ ಕರ್ಕಿ ಅಣ್ಣ ( R M ಭಟ್ , ಕಾಶಿ ) ನವರ ಪ್ರಿಯ ಮಾತುಗಳು ಮನಸ್ಸಿಗೆ ಮುದ ನೀಡಿದವು.  ಚುರುಕಾದ ನುಡಿಯ   K   P  ಯವರ ಮಾತುಗಳು ನೆನಪಿನಲ್ಲುಳಿದವು.     
ಕಾರ್ಯಕ್ರಮ ಸಂಘಟಕರು ಇಂದಿನ ಕಂಪ್ಯೂಟರ್ ವ್ಯವಸ್ತೆಯ ಅನುಕೂಲವಾದ , ಮೊಬೈಲ್ / ಇ - ಮೇಲ್ ಗಳ ಡಾಟಾ ಬೇಸ್ ತಯಾರಿಸಿ ಒಂದೇ ಕ್ಲಿಕ್ನಿಂದ ಸಾವಿರಾರು ಜನರಿಗೆ ಸಂದೇಶ ಕಳಿಸುವ ವ್ಯವಸ್ತೆ ಮಾಡಿದರೆ , ಇನ್ನೂ ಹೆಚ್ಚಿನ ಸ್ಪಂದನೆ ಸಹಜವಾಗಿ ನಿರೀಕ್ಷಿಸಬಹುದೆಂದು ಹಿರಿಯರೂ , ಮಿತ್ರರೂ ಆದ ಜಿ ಜಿ ಹೆಗಡೆಯವರಲ್ಲಿ ವಿವರಿಸಿದ್ದೇನೆ.
ಹರಿಹರ ಭಟ್, ಬೆಂಗಳೂರು.
ಡಿಸೆಂಬರ್ ೦೬ , ೨೦೧೨.