ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ
--------------------------------------------------
ನಮ್ಮ ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಎಂಬ ಮೂರು ವಿಭಾಗಗಳಿವೆ. ಈ ಮೂರು ಅಂಗಗಳು ಪರಸ್ಪರ ಸಹಕಾರದಿಂದ ಆದರೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಪ್ರಜೆಗಳ ಹಿತಾಸಕ್ತಿ ಕಾಯಬೇಕು ಎಂಬುದು ಸಂವಿಧಾನ ಕರ್ತ್ರರ ಸದಭಿಲಾಷೆಯಾಗಿತ್ತು. ಆದರೆ ಇಂದೇನಾಗಿದೆ?
ಕಾರ್ಯಾಂಗದ ಮೇಲೆ ಶಾಸಕಾಂಗ ಸಂಪೂರ್ಣ ಹಿಡಿತ ಸಾಧಿಸಿ ತನ್ನ ಕಪಿ ಮುಷ್ಟಿಯಿಂದ ಹೊರಬರದಂತೆ ಮನಸ್ಸಿಗೆ ತೋಚಿದ ಶಾಸನಗಳನ್ನು ಮಾಡುತ್ತಿದೆ. ಆ ಕಾರಣದಿಂದಲೇ ಇಂದು ನ್ಯಾಯಾಂಗವನ್ನು ಕೆಲಸಗಳ ಹೊರೆ ಕಾಡುತ್ತಿದೆ. ತನ್ನ ದಿನ ನಿತ್ಯದ ಕಾರ್ಯಗಳನ್ನು ಪೂರೈಸಿ , ನ್ಯಾಯನಿರ್ವಹಣೆಯನ್ನು ನ್ಯಾಯೋಚಿತವಾಗಿ ಮಾಡಲಾರದ ಸ್ಥಿತಿಗೆ ಶಾಸಕಾಂಗ ನ್ಯಾಯಾಂಗವನ್ನು ದೂಡಿ ನಿಲ್ಲಿಸಿದೆ. ಈ ಎಲ್ಲ ತೊಂದರೆಗಳನ್ನು ಮೆಟ್ಟಿ ನಿಂತು ಶಾಸಕಾಂಗವನ್ನು ಸರಿ ದಾರಿಗೆ ತರುವಂತಹ ನ್ಯಾಯೋಚಿತ ನಿರ್ಣಯಗಳತ್ತ ಕೆಲಸ ಮಾಡೋಣವೆಂದರೆ , ಕೆಲಸಕ್ಕೆ ತಕ್ಕ , ಅವಶ್ಯಕ ಮ್ಯಾನ್-ಪವರ್(manpower) ಒದಗಿಸದೆ ನ್ಯಾಯಾಂಗವನ್ನು ತನ್ನ ತೀಟೆಗಳಿಗೆ ಒಳಪಡಿಸಲು ಶಾಸಕಾಂಗ ಹೆಣಗುತ್ತಿದೆ. ಈ ಸಂದರ್ಭದಲ್ಲಿ ಈ ಕೆಳಗಿನ ಯೋಚನೆ.
ಶಾಸಕಾಂಗವು ತನ್ನ ಸ್ವಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವ ಯಾವುದೇ ಕಾನೂನುಗಳನ್ನು ಮಾಡಬಾರದು, ಆ ರೀತಿಯ ಕಾನೂನುಗಳನ್ನು ಮಾಡಲೇಬೇಕಾದ ಸಮಯ/ ಸಂದರ್ಭದಲ್ಲಿ , ಸೂಕ್ತವಾಗಿ ನ್ಯಾಯಾಂಗದ ವಿವೆಚನೆಗೊಳಪಟ್ಟು , ನ್ಯಾಯಾಂಗ ಒಪ್ಪಿದಲ್ಲಿ , ಶಾಸಕಾಂಗದ ಸ್ವಹಿತಾಸಕ್ತಿ ಕಾಯ್ದುಕೊಳ್ಳುವಂತಹ ಕಾನೂನುಗಳು ಜಾರಿಯಲ್ಲಿ ಬರಲಿ , ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ಬರಲಿ ಎಂದು ಎಲ್ಲ ಸಾರ್ವಜನಿಕರು ಆಗ್ರಹಿಸಬೇಕಾದ ಸಮಯ ಬಂದೊದಗಿದೆ ಎನಿಸುತ್ತಿದೆ. ಈ ವರದಿ ಓದಿ ನಿಮ್ಮ ಅಭಿಪ್ರಾಯ ಬರೆಯಿರಿ, ಎಂಬ ಕೋರಿಕೆ:
http://www.vijaykarnatakaepaper.com/Details.aspx?id=3819&boxid=12515187
ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ , ವಿಮರ್ಶಕ, ಫೇಸ್ ಬುಕ್ ಬರಹಗಾರ.
www.hariharbhat.blogspot.com
February 23, 2013.
No comments:
Post a Comment