Thursday, April 18, 2013

Karnataka Elections to the next Assembly


The process of Karnataka Elections to the next Assembly is on. The politicians who are interested to get elected again have filed their nominations. The assets and liabilities of these politicians are in public domain now.



It is surprising to note that whenever these politicians are in power they could amass more wealth. And that concludes surprisingly that they could get time to run their profession more vigorously and could multiple their income and assets, in spite of giving adequate time to solve the problems of society ! Where as whenever they are out of power and get obviously more time to run their profession, the proportionate rise in their income and assets could not be sustained !




At the outset we all know how the politicians in general behave in society and what type of life they lead whenever they come to power. As there is enough evidence, that is in public domain, to prove that it is beyond the human labor and effort to amass such a disproportionate income and wealth during such period of power along with engaging themselves in political activities through out day and night, it is high time for a legal luminary to file a PUBLIC INTEREST LITIGATION in the court of law against the political class in general with a prayer to order an SIT investigation about the source and means of income and wealth of these politicians.



What do you say ?



Harihar Bhat, Bangalore.
April 18, 2013.

Saturday, April 13, 2013

ಜನಾಂಗಕ್ಕೆ ಕಳಂಕಪ್ರಾಯ ಇಂದಿನ ಬ್ರಾಹ್ಮಣ ಮುಖಂಡರುಗಳು


ಬ್ರಾಹ್ಮಣರು ಎಂಬ ಜನಾಂಗಕ್ಕೆ ಕಳಂಕಪ್ರಾಯವಾಗಿ   ಇಂದಿನ ಬ್ರಾಹ್ಮಣ ಮುಖಂಡರುಗಳು ವರ್ತಿಸುತ್ತಿದ್ದಾರೆ.



ಬ್ರಾಹ್ಮಣರು ಎಂಬ ಜನಾಂಗದ ಮುಖಂಡರುಗಳು ಎಂದು ಯಾರ್ಯಾರು ಸಮಾಜದಲ್ಲಿ ಗುರುತಿಸಿಕೊಂಡಿದ್ದಾರೋ, ನಾವು ಯಾರ್ಯಾರನ್ನು ಬ್ರಾಹ್ಮಣ ವಂಶದಲ್ಲಿ ಜನಿಸಿ ಬ್ರಾಹ್ಮಣರ ನೇತಾರರು ಎಂದು ಗುರುತಿಸಿದ್ದೇವೆಯೋ ಅವರ ವೈಯಕ್ತಿಕ ಜೀವನದಲ್ಲಿ  ಇತ್ತೀಚಿನ ಹತ್ತರಿಂದ ಹದಿನೈದು ವರ್ಷಗಳಲ್ಲಿ ಆದ  ಆರ್ಥಿಕ ಪ್ರಗತಿಯನ್ನು  ಅಭ್ಯಸಿಸಿ. ಜೊತೆಗೆ ತಮ್ಮ ಸುತ್ತಮುತ್ತಲಿನ ಬ್ರಾಹ್ಮಣರಿಗೆ ಏನು ಅನುಕೂಲ ಮಾಡಿದ್ದಾರೆ ಎಂದು ಅವಲೋಕಿಸಿ. ಬ್ರಾಹ್ಮಣ ನೇತಾರರು ಆಡುವ ಮಾತಿಗೂ , ಮಾಡುವ ಕೃತಿಗೂ ಇರುವ ಅಂತರ ಢಾಳಾಗಿ ಗೋಚರಿಸುತ್ತದೆ.  



"ಸತ್ಯಂ ಬ್ರೂಯಾತ್ , ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಂ " ಎಂಬುದನ್ನು ತಿರುಚಿ "ಸತ್ಯಂ ನ ಬ್ರೂಯಾತ್ , ಅಪ್ರಿಯಂ ನ ಬ್ರೂಯಾತ್ , ಬ್ರೂಯಾತ್ ಅಸತ್ಯ ಪ್ರಿಯಂ " ಎಂದು ಜೀವನದಲ್ಲಿ ಯಶಸ್ಸನ್ನು ಪಡೆಯಲು ಅನುಕೂಲ ಸಿದ್ಧಾಂತವನ್ನು ಅಪ್ಪಿಕೊಂಡಿದ್ದಾರೆ. ಅರ್ಥವನ್ನೇ  ಅರಿಯದೆ, ಅರ್ಥವನ್ನರಿತವರು ತಥ್ಯದ ಗೋಜಲಿಗೆ ಹೋಗದೇ , ಕಂಠಪಾಠ   ಮಾಡಿದ ಮಂತ್ರಗಳನ್ನೇ ಉಸುರುತ್ತ ಜೀವನಾವಶ್ಯಕಗಳನ್ನು ಪೂರೈಸಲು ಹೆಣಗುವ ಒಂದು ವರ್ಗವಾದರೆ, ಬ್ರಾಹ್ಮಣ ಸಮಾಜಕ್ಕೆ ತಾನೇ ಅಧಿಕಾರಯುತ ನೇತಾರ ಎನ್ನುತ್ತಾ, ದ್ವಿಮುಖ ದ್ವಂದ್ವ  ಜೀವನ ನಡೆಸುತ್ತಾ ಅರ್ಥಿಕ ಬಲಾಡ್ಯಕ್ಕಾಗಿ ಹೋರಾಡುವ ಇನ್ನೊಂದು ವರ್ಗ. ಈ ವರ್ಗಗಳ ಮಧ್ಯೆ ವೇದ , ವೇದಾಂಗಗಳ ಸಮರ್ಥ ಉತ್ತರಾಧಿಕಾರಿ ನಾವೇ ಎಂದು ಪರಸ್ಪರ ಕಾಲೆಳೆಯುವ , ಸರ್ವ ಸಂಗ ಪರಿತ್ಯಾಗಿ ಎಂಬ ಘೋಷಣೆಯನ್ನು ಆಗಾಗ ನೆನಪಿಸುತ್ತಾ , ಎಲ್ಲ ಶಿಷ್ಯರಿಗಾಗಿ  , ಎಲ್ಲ  ಸಾತ್ವಿಕ ಸಮಾಜಕ್ಕಾಗಿ ಎಂದು ಬಾಹ್ಯ ಪ್ರಪಂಚಕ್ಕೆ ತೋರ್ಪಡಿಸುತ್ತ .........ಅರ್ಥಿಕ ಬಲ, ಸಾಮಾಜಿಕ ಮುಂದಾಳುಗಳ ಮೇಲೆ ಹತೋಟಿ , ಸಾಮಾನ್ಯ ಮನುಷ್ಯನ ಮನಸ್ಸಿನ ಮೇಲೆ ದಿಗ್ಭಂದನೆ  ಸಾಧಿಸುತ್ತ ತನ್ನನು ತಾನೇ ಪ್ರತಿಷ್ಠಾಪಿಸುತ್ತ  ಸಾಗಿರುವ ಕೇಸರಿ ವರ್ಗ , ಇವುಗಳ ಮಧ್ಯೆ ಸಾಮಾನ್ಯ ಬ್ರಾಹ್ಮಣನೊಬ್ಬ ಸಿಲುಕಿ ತನ್ನ ದೈನಂದಿನ ಅವಶ್ಯಕತೆಗಳನ್ನು   ಪೂರೈಸಲಾಗದೆ , ವಿಷಮಯ ಚಕಿತನಾಗಿ, ಅಸಹಾಯಕನಾಗಿ ದಿನ ದೂಡುತ್ತಿದ್ದಾನೆ.



ಹೀಗೆಲ್ಲ ಅನಿಸಿಕೆಗಳನ್ನು ಹಂಚಿಕೊಂಡರೆ, ಕೇವಲ ಶುಷ್ಕ  ಬರವಣಿಗೆಯಾದೀತು.  ಅತಿ ವರ್ತಮಾನದ ಬದಲಾವಣೆಗಳನ್ನೇ ಗಮನಿಸಿ. ಈಗ ವಿಧಾನ ಸಭಾ ಚುನಾವಣೆಯ ಕಾಲ. ಬ್ರಾಹ್ಮಣ ಅಬ್ಯರ್ಥಿಗಳನ್ನೊಮ್ಮೆ ಅಭ್ಯಸಿಸಿ. ಇಂದಿನ ಅವರ ಆರ್ಥಿಕ ಬಲಾಡ್ಯತೆಯನ್ನು ಗಮನಿಸಿ. ಅವರ ತಂದೆ ತಾಯಿಯರ ಕಾಲದ ಅವರ ಕುಟುಂಬದ ಆರ್ಥಿಕ ಸಾಮರ್ಥ್ಯವನ್ನೆಲ್ಲ ತುಲನಾತ್ಮಕವಾಗಿ ಪರಿಶೀಲಿಸಿ  . ಕೇವಲ ಹತ್ತು ಹದಿನೈದು ವರ್ಷಗಳಲ್ಲಿ ನೇತಾರರ ಜೀವನ, ಅರ್ಥಿಕ ಸಾಮರ್ಥ್ಯ ನಾಲ್ಕಾರು ಪಟ್ಟು ಹೆಚ್ಚಾಗಬಹುದಾದರೆ, ಸಾಮಾನ್ಯ ಬ್ರಾಹ್ಮಣನೊಬ್ಬ , ಸೂಕ್ತ ಶ್ರಮದ ಹೊರತಾಗಿಯೂ ಬದಲಾವಣೆಯನ್ನೇಕೆ ಕಂಡುಕೊಳ್ಳಲಾರ? ಯಾರು ನೇತಾರರ ಸುತ್ತ ಸುತ್ತುತ್ತಿರುತ್ತಾರೋ, ಹೊಗಳುಭಟರಾಗಿ ನೇತಾರರಿಗೆ ವಿನೀತರಾಗಿ ನೇತಾರರ ಅನೈತಿಕ ಚಟುವಟಿಕೆಗಳಲ್ಲಿ ಪಾಲುದಾರರಾಗಿ ಅಥವಾ ಸಹಕಾರಿಯಾಗಿ ಜೊತೆ ನೀಡುತ್ತಿರುತ್ತಾರೋ , ಅವರಷ್ಟೇ ಏಳಿಗೆ ಕಾಣುವದು ಸಮಾಜದಲ್ಲಿ ತೋರ್ಪಡುತ್ತಿದೆಯಲ್ಲವೇ?



ಅಂತೆಯೇ ನಿನ್ನೆಯ ವಿಪ್ರ ಹಿತರಕ್ಷಣಾ ವೇದಿಕೆಯಿಂದ  ಎಲ್ಲರಿಂದ ಪರಮಪೂಜ್ಯರೆನಿಸಿಕೊಂಡ ಪೇಜಾವರ ಶ್ರೀಗಳು ನೀಡಿದ ಕರೆಯನ್ನೊಮ್ಮೆ ಅವಲೋಕಿಸಿ. " ಬ್ರಾಹ್ಮಣರ ಒಗ್ಗಟ್ಟಿನಿಂದ ಹಿಂದೂ ಸಮಾಜಕ್ಕೆ ಒಳಿತು " . ಈ ಒಗ್ಗಟ್ಟಿನಿಂದ ಏನು ಅನುಕೂಲವಾದೀತು ಎಂದು ಯೋಚಿಸುವ ಮುನ್ನ, ಹಿಂದೇನಾಗಿದೆ ಎಂದು ವಿಮರ್ಶಿಸುವದೊಳ್ಳೆಯದಲ್ಲವೇ?  ಶ್ರೀ ಗಳು ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಸನ್ಯಾಸ ಸ್ವೀಕಾರ ಮಾಡಿದವರು . ಸನ್ಯಾಸಿ ಜೀವನದ ಅವಧಿಯಲ್ಲಿ ಸಮಾಜಮುಖಿಯಾಗಿ ಬಹಳ ಚಿಂತನೆ ನಡೆಸಿದವರು. " ಹಿಂದೂ ಎಂದೂ ಒಂದು" ಎಂಬಂತಹ ಘೋಷಣೆಗಳಿಗೆ ಜೀವದಾನ ನೀಡಿದವರು. ದ್ವೈತಿಯಾಗಿ ಮಾದ್ವ ಬ್ರಾಹ್ಮಣ ಸಮಾಜಕ್ಕೆ ದಿಗ್ದರ್ಶಿಯಾಗಿರುವವರು. ಈ ಧೀರ್ಘ ಅವಧಿಯಲ್ಲಿ ಅವರೇ ಮುನ್ನಡೆಸುತ್ತಿರುವ ಬ್ರಾಹ್ಮಣ ಸಮಾಜದ ಅಂಗವಾಗಿರುವ ಮಾಧ್ವರಲ್ಲಿ ಬಡತನ ನಿರ್ಮೂಲನೆಮಾಡಲಾಗಲಿಲ್ಲ. ಶ್ರೀಗಳ ಸುತ್ತ ಸುತ್ತುವ ಸಿರಿವಂತ ಮಾದ್ವರಷ್ಟೇ ಶ್ರೀಗಳ ಕೃಪಾಕಟಾಕ್ಷ   ಪಡೆಯುತ್ತಿದ್ದಾರೆ. ಈ ರೀತಿ ವ್ಯಕ್ತನೆ ಸುಮ್ಮನೆ ಬರುತ್ತಿಲ್ಲ. ಮನೆಯ ಅಡುಗೆ ಕೆಲಸ ಮಾಡಿ ಜೀವನ ನೂಕುವ ಮಾದ್ವ ಮಹಿಳೆಯರು, ತೋಟದ ಮನೆಗಳಲ್ಲಿ ಕೂಲಿಗಳಾಗಿ ದುಡಿಯುತ್ತಿರುವ ಮಾದ್ವ ಪುರುಷರು , ಹೊಟೇಲು, ಖಾರಖಾನೆಗಳಲ್ಲಿ ದುಡಿದು ಜೀವನದ ಅವಶ್ಯಕತೆಗಳನ್ನೆ ಕಾಣಲಾಗದೆ ಪರಿತಪಿಸುತ್ತಿರುವ ಮಾದ್ವರು,   ಆರ್ಥಿಕವಾಗಿ  - ಸಾಂಸ್ಕೃತಿಕವಾಗಿ ಅತೀ ಹಿಂದುಳಿದ ಮಕ್ಕಳು ಓದುವ ಶಾಲೆಗಳಲ್ಲಿ  ಮುದ್ರಾಧಾರಿಯಾಗಿ  ಎಲ್ಲರ ಮಧ್ಯೆ ಕಂಗೊಳಿಸುತ್ತ, ಇತರರಿಂದ  ಅವಹೇಳನಕ್ಕೊಳಗಾಗಿ ಓದುತ್ತಿರುವ ಮಾಧ್ವ   ಮಕ್ಕಳು .............. ಇವರುಗಳಿಗೆಲ್ಲ   ಶ್ರೀ ಶ್ರೀ ಗಳು ಮನಸ್ಸು ಮಾಡಿದ್ದರೆ ಯಾವುದೋ ಕಾಲದಲ್ಲೇ ಒಂದು ವ್ಯವಸ್ತಿತ, ಕನಿಷ್ಟ ಅವಶ್ಯತೆಗಳನ್ನು ಪೂರೈಸುವ ಜೀವನವನ್ನು ದಯಪಾಲಿಸಬಹುದಿತ್ತು. ಆದರೆ ಆಗಿಲ್ಲ, ಆಗುತ್ತಿಲ್ಲ, ಅಗುವದೂ ಇಲ್ಲ . ಯಾಕಾಗಿ ?...... ಎಂದರೆ ಆ ಜಗನ್ನಿಯಾಮಕ, ಪರಮಾತ್ಮ, ಸಕಲ ಚರಾಚರಗಳಿಗಿಂತ ಭಿನ್ನವಾಗಿ ವರ್ತಿಸುವವ  (ವರ್ತಿಸುವ ಅಂದುಕೊಂಡಿದ್ದೇವೆ, ಹೌದೋ ಅಲ್ಲವೋ ಗೊತ್ತಿಲ್ಲ, ನಂಬಿದ್ದೇವೆ, ಇನ್ನೊಂದು ಸಾಧ್ಯವಾಗುವವರೇ ಈ ನಂಬಿಗೆಗೆ ಸ್ಥಾನ ) ನೀಡಿದ ಜಗವೆಂಬ ಈ ಕೊಡುಗೆಗೆ ಮಧ್ಯವರ್ತಿಗಳಾಗಿ ಈ ರೀತಿಯ ಬ್ರಾಹ್ಮಣರು ಮೆರೆಯುತ್ತಿರುವದರಿಂದ , ಗಳಿಸಿದ ಸ್ಥಾನಗಳನ್ನು ಸುಲಭವಾಗಿ ಬಿಡಲೊಲ್ಲದೆ, ರಾಜಕಾರಣಿಯ ಮನೋಧರ್ಮವನ್ನು ಅವ್ಹಾನಿಸಿಕೊಂಡು , ಸುತ್ತ ಮುತ್ತಲಿನ ಭೋ ಪರಾಕುಗಳ ಮಾಧುರ್ಯದಲ್ಲಿ ಮಿಂದೆeಳುತ್ತ, ಸುಖ ಲೋಲುಪತೆಯಲ್ಲಿ ಕಾಲ ಕಳೆದುಹೋಗುವಾಗ , ಬ್ರಾಹ್ಮಣ್ಯದ ವಾರಸುದಾರನಾದ ಬಡ - ಬ್ರಾಹ್ಮಣನ ಅವಶ್ಯಕತೆಗಳಿಗೆ ಸ್ಪಂದಿಸುವ ಗರ್ಜಾದರೂ ( ಅವಶ್ಯಕತೆ ) ಹೇಗೆ ಬಂದೀತು, ಅಲ್ಲವೇ?



ಈ ಎಲ್ಲಾ ವಿಚಾರಗಳು ಯಾವುದೇ ಒಂದು ಜನಾಂಗ,  ಗುಂಪಿಗಷ್ಟೇ ಎನ್ನಬೇಕಾಗಿಲ್ಲ. ಇವು ಸಾರ್ವಕಾಲಿಕ , ಸಾರ್ವತಿಕ ವಿಚಾರಗಳು. ಬಹುತೇಕ ಜನರು ತನ್ನ ವೈಯಕ್ತಿಕ ಇಷ್ಟಾನಿಷ್ಟಗಳಿಗೆಲ್ಲಿ ತೊಂದರೆ ಬಂದೀತು   ಎಂದೋ , ಇನ್ನು ಕೆಲವರು ಒಮ್ಮೆ ಶರಣು ಎಂದರೆ ತಾನೇನು ಕಳೆದುಕೊಳ್ಳಲಿಕ್ಕಿದೆ.....?  ಎಂದೋ , ಉಳಿದವರು ಅಸಾಹಯಕರಾಗಿ ಜೀವನದ   ಜಂಜಾಟಗಳಿಂದ ಆಚೆ ಇಣುಕಲಾಗದೆಯೋ ಸುಮ್ಮನಾಗಿರುವರು.  ಸುಮ್ಮನಾಗದಿರುವವರನ್ನು   ಸುಮ್ಮನಾಗಿಸುವ ಶಕ್ತಿ , ಸಾಮರ್ಥ್ಯಗಳನ್ನು ಸಮಾಜದ ಇಂದಿನ ನೇತಾರರು ಆಗಲೇ ಗಳಿಸಿಕೊಂಡಿದ್ದಾರೆ.



ಕೆಳಗಿನ ಕೊಂಡಿ (link ) ಓದಿ, ನಿಮ್ಮ ಅನಿಸಿಕೆ ಬರೆಯಿರಿ.
http://epapervijayavani.in/Details.aspx?id=5157&boxid=6217811



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಹವ್ಯಾಸಿ ಪತ್ರಕರ್ತ.
www.hariharbhat.blogspot.com
April 14 , 2013.

Wednesday, April 10, 2013


ನೀವು ದಿನಾಲು ನಾಲ್ಕಾರು ದಿನಪತ್ರಿಕೆಗಳನ್ನು ಓದುವವರಾಗಿದ್ದರೆ ಕೆಲವು ತಮಾಷೆಯ ಸಂಗತಿಗಳು ಗಮನಕ್ಕೆ ಬರುತ್ತವೆ. ಒಂದು ಪತ್ರಿಕೆಯಲ್ಲಿ ಬಂದ ಸುದ್ದಿ ಎರಡು  ಮೂರು ದಿನಗಳಲ್ಲಿ ಸ್ವಲ್ಪ ಆಚೀಚೆ ಮಸಾಲೆಗಳನ್ನು ಸೇರಿಸಿಕೊಂಡು ಅಂಕಣವಾಗಿ ಹೊರಹೊಮ್ಮುತ್ತದೆ. ಪತ್ರಿಕೆಯೊಂದರಲ್ಲಿ ಬಿಸಿಬಿಸಿಯಾಗಿ ಹೆಚ್ಚಿನ ಪ್ರಾಶಸ್ತ್ಯ ಪಡೆದ ಸುದ್ದಿ ಇನ್ನೊಂದು ಪತ್ರಿಕೆಯಲ್ಲಿ ಎಲ್ಲೋ ಮೂಲೆಯಲ್ಲಿ ಸ್ಥಳ ಪಡೆದಿರುತ್ತದೆ. ಪತ್ರಿಕೆಯ ರಾಜಕೀಯ ಚಿಂತನೆಗಳನ್ನು, ಒಲವುಗಳನ್ನು ಅವಲಂಬಿಸಿ ಕೆಲವು ಮುಂದಾಳುಗಳು ಪತ್ರಿಕೆಗಾಗಿಯೇ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆಯೇ ಎನಿಸುವಷ್ಟು ರೇಜಿಗೆ ಹುಟ್ಟಿಸುವಂತೆ ಪತ್ರಿಕೆ ಸುದ್ದಿ ಬಿಂಬಿಸುತ್ತದೆ.


ಇನ್ನು ಕೆಲವು ಪತ್ರಿಕೆಗಳಲ್ಲಿ ಲೇಖನಗಳೆಂಬುವವು ಹತ್ತು ಸಾಲುಗಳಿದ್ದು ಅದರ ಹತ್ತು ಪಟ್ಟು ಸ್ಥಳವನ್ನು ಚಿತ್ರಗಳೇ ತುಂಬಿರುತ್ತವೆ. ಆಗಾಗ ಅಂತರ್ಜಾಲವೇ , ಅಂತರ್ಜಾಲದ (internet) ಚಿತ್ರಗಳೇ ಪತ್ರಿಕೆಯ ತುಂಬೆಲ್ಲ ತುಂಬಿರುತ್ತವೆ.


ಇನ್ನೂ ಚೋದ್ಯದ ಸಂಗತಿಯೆಂದರೆ ಕೆಲವೊಮ್ಮೆ ಎರಡು , ಮೂರು ಪತ್ರಿಕೆಗಳಲ್ಲಿ ಒಂದೇ ಅಥವಾ ಸ್ವಲ್ಪ ವ್ಯತ್ಯಾಸದೊಂದಿಗೆ ಅದೇ ತಲೆಬರಹದ, ಅದೇ ಸುದ್ದಿ ವಿನ್ಯಾಸದ ಒಕ್ಕಣೆಗಳು ಕಂಡುಬರುತ್ತವೆ. ಎರಡು ಪತ್ರಿಕೆಗಳ ಆ ಸುದ್ದಿಗಳನ್ನು ಅಕ್ಕ ಪಕ್ಕದಲ್ಲಿಟ್ಟು ತುಲನಾತ್ಮಕವಾಗಿ ಓದಿದರೆ , ಒಬ್ಬರೇ ವರದಿಗಾರ   ಪಂಡಿತರು ದ್ವಿಪಾತ್ರ ಮಾಡಿದ್ದಾರೆಯೇ ಎಂಬ ಕುತೂಹಲ ಉಂಟಾಗುತ್ತದೆ.


ಹೀಗೆ ನಮ್ಮ ಪತ್ರಿಕಾವಲಯದ ನುರಿತ ಬಂಧುಗಳು ವೈಚಾರಿಕತೆಯ ಕೊರತೆಯಿಂದ ಬಳಲುತ್ತಿವೆಯೋ ಎಂಬ ಸಂಶಯ ಆಗಾಗ ಮೂಡುತ್ತದೆ. ಈ ದಶಮಾನದ ಈ ಬದಲಾವಣೆಗಳು ನಮ್ಮ ವೈಚಾರಿಕ ಸಾಂಸ್ಕೃತಿಕ ಮಿತ್ರರನ್ನು ಸಂಪೂರ್ಣವಾಗಿ ವಿಭಾಗಿಸಿ , ರಾಜಕೀಯ ಲಾಭಗಳತ್ತ ಕೊಂಡೊಯ್ಯುವ ಬದಲಾವಣೆಗಳಾಗುತ್ತಿವೆಯೋ ಎಂಬ ವಿಷಾದವೂ ಒಡಮೂಡುತ್ತಿದೆ.


ಇನ್ನು ವಾರಪತ್ರಿಕೆಗಳು, ಮಾಸಪತ್ರಿಕೆಗಳ ಬಗೆಗಂತೂ ಏನೂ ಹೇಳೋ ಹಾಗಿಲ್ಲ. ಎಲ್ಲಾ ಹಳಸಲು ಪದಾರ್ಥಗಳೇ ಬಹುತೇಕ ತುಂಬಿರುತ್ತವೆ. ಕೆಲವೆಡೆಯಂತೂ ದಿನ  ಪತ್ರಿಕೆಗಳ ಮುದ್ರಿತ ವಿಷಯಗಳನ್ನೆ ಯಥಾವತ್ತಾಗಿ ಎತ್ತಿಕೊಂಡಿರುತ್ತಾರೆ. ಅಲ್ಲಲ್ಲಿ ಬದಲಾವಣೆ ತೋರುವ ವ್ಯವಧಾನವೂ ಸಂಪಾದಕ ಮಹನೀಯರುಗಳಿಗೆ ಅವಶ್ಯವೆನಿಸುವದಿಲ್ಲ.


ಈ ರೀತಿ ಬಹುತೇಕ ದಿನ ಪತ್ರಿಕೆ, ಮಾಸಿಕಗಳಲ್ಲಿ ತೋರಿಬಂದರೂ, ಅಲ್ಲಲ್ಲಿ ಎಲ್ಲಾ ಭಾಷೆಗಳಲ್ಲೂ " ಕಹಿ ಚೂರ್ಣದ ಬಟ್ಟಲಲ್ಲಿ ಸಿಹಿ ಎಳ್ಳುಂಡೆ " ಎಂಬಂತೆ ಕೆಲವು ದಿನ ಪತ್ರಿಕೆಗಳೂ  , ಮಾಸ ಪತ್ರಿಕೆಗಳೂ    ರಾರಾಜಿಸುತ್ತಿವೆ ಎಂಬುದು ನಮ್ಮೆಲ್ಲರ ಭಾಗ್ಯ.


ಯುಗಾದಿ , ಬದಲಾವಣೆಯ ಸಂಭ್ರಮದ  ಕಾಲ. ಅಂತೆ ಎಲ್ಲರೂ ಎಲ್ಲೆಡೆ ಬದಲಾವಣೆ ಆಶಿಸುವ ಸಮಯ. ನಮ್ಮ ಮಿತ್ರರ ಮನದಲ್ಲೂ ಈ ರೀತಿ ಪರ್ವ ಕಾಲದಲ್ಲಿ ಧನಾತ್ಮಕ ಬದಲಾವಣೆಗಳು ಬರಲಿ ಎಂಬ   ಆಶಯದೊಂದಿಗೆ.


ಹರಿಹರ ಭಟ್, ಬೆಂಗಳೂರು,
ಶಿಕ್ಷಕ, ಚಿಂತಕ, ವಿಮರ್ಶಕ, ಹವ್ಯಾಸಿ ಪತ್ರಕರ್ತ.
www.hariharbhat.blogspot.com
April 11, 2013.

Friday, April 5, 2013

Dr . Ashwathnarayana, MLA, Malleshwara, Bangalore


Dr . Ashwathnarayana,  MLA, Malleshwara, Bangalore  ಒಳ್ಳೆಯ ಮನುಷ್ಯ. ಸಾರ್ವಜನಿಕ ಸೇವೆಗೆ ತುಡಿತವುಳ್ಳ ಮನುಷ್ಯ  .  ಅಂದರೆ ಉಳಿದವರೆಲ್ಲಾ ಪ್ರಯೋಜನವಿಲ್ಲ ಎಂದಲ್ಲ.


ನಾನು  ನನ್ನ ಕಿವಿಗಳಿಂದ ಕೇಳಿದ ಮಾತು,  ಬಡಜನರಿಗೆ   ವಿಧವಾ ವೇತನ, ರೇಶನ್ ಕಾರ್ಡ್ ... ಇತ್ಯಾದಿ ಅನುಕೂಲತೆಗಳಿಗೆ  ಇವರ ಕಾರ್ಯಾಲಯದಲ್ಲಿ ಯಾವುದೇ ಲಂಚ (bribe) ಕೇಳದೆ,  ಉಚಿತವಾಗಿ ನೀಡುವ ಸೇವೆ ಕುರಿತು ಧನ್ಯತೆಯ ಮಾತುಗಳು, ಈ ರೀತಿ ಬರೆಯಲು ನನ್ನನ್ನು ಪ್ರೋತ್ಸಾಹಿಸಿದವು.


ಈ ಪ್ರಜಾಪ್ರತಿನಿಧಿಯಿಂದ ಸಮಾಜಕ್ಕೆ ಸಾಕಷ್ಟು ಅನುಕೂಲಗಳಾಗಿವೆ. ಸಜಹವಾಗಿ ಬೆಳೆಯುವ ಪ್ರದೇಶಕ್ಕೆ ಇನ್ನೂ ಸಾಕಷ್ಟು ಕೆಲಸಗಳಾಗಬೇಕಾಗಿವೆ. ಆ ರೀತಿ ಆಗಬೇಕಾಗಿರುವ ಕೆಲಸಗಳನ್ನು ಮುಂದಿನ ಅವಧಿಯಲ್ಲಿ  ಮಾಡಬಲ್ಲ, ಮಾಡಿಸಬಲ್ಲ ಕ್ರಿಯಾಶೀಲ ವ್ಯಕ್ತಿ.   ಆದ್ದರಿಂದ   ಸಾರ್ವಜನಿಕ ಹಿತಾಸಕ್ತಿಗೆ ಈ ವ್ಯಕ್ತಿಯನ್ನು ಪುನರಾಯ್ಕೆ ಮಾಡಬೇಕಾಗಿದೆ.


ಹರಿಹರ ಭಟ್, ಬೆಂಗಳೂರು,
ಶಿಕ್ಷಕ, ಚಿಂತಕ, ವಿಮರ್ಶಕ,
freelance  journalist
www.hariharbhat.blogspot.com
Mob: 99450 04681
April 05 , 2013.