Tuesday, February 26, 2013

ಎಲ್ಲಿದೆ ಪಗಡೆ , ಕಿರಿಟಗಳ ಚಿತ್ತಾರಗಳು ?


ಈ ಚಿತ್ರ ನೋಡಿ.


http://epapervijayavani.in/Details.aspx?id=4188&boxid=33651421



ಯಕ್ಷಗಾನದ ಎರಡು ಕಣ್ಣುಗಳು - ತೆಂಕು, ಬಡಗು ಪ್ರಕಾರಗಳು. ಈ ಸಭೆಯ ಹಿನ್ನೆಲೆಯಲ್ಲಿ ಪ್ರಸ್ತುತ ಪಡಿಸಿರುವ ವರ್ಣಿಕೆ ಈ ಎರಡು ಪ್ರಕಾರಗಳನ್ನು ಪ್ರತಿನಿಧಿಸುತ್ತಿದೆಯೇ?



ಎಲ್ಲಿದೆ   ಪಗಡೆ , ಕಿರಿಟಗಳ ಚಿತ್ತಾರಗಳು ?



ಕಲೆಯ ವ್ಯಕ್ತನೆಗಳಲ್ಲೂ ರಾಜಕೀಯವೇ? ಇಲ್ಲೂ ಸ್ವಹಿತ ಪ್ರಭಾವಳಿಯೇ ? ಮನುಷ್ಯ ಇಂದು ಈ ಮಟ್ಟಕ್ಕೆ ಇಳಿದಿದ್ದಾನೆಯೆ ? ಅದರಲ್ಲೂ ಗಂಡುಮೆಟ್ಟಿನ ಕಲೆ ಎಂದೆಲ್ಲ ಕೊಂಡಾಡುವ ಕಲಾಭಿಮಾನಿಗಳಲ್ಲಿ ಅಭಿಮಾನವೆಂಬುದು ಬತ್ತಿ ಹೋಗಿದೆಯೇ ?



ಅಧ್ಯಕ್ಷ   ಎಂ.ಎಲ್.ಸಾಮಗ ರಂತವರಿಗೆ ಈ ವಿಚಾರಗಳು ಹೊಳೆಯುವದಿಲ್ಲವೇ?  ಇಲ್ಲ ದೊಡ್ಡ ಖುರ್ಚಿ ಏರಿದಂತೆಲ್ಲ ಸಣ್ಣತನಗಳು ಕಾಡಿ ಕಾಡಿ ಜೊತೆ ಬಿಡದೆ ಈ ರೀತಿ ಭೇಧ ಭಾವ ತೋರುವದೇ? ಸಭೆ ಸಮಾರಂಭಗಳಲ್ಲಿ ಭಾಷಣಗಳಲ್ಲಷ್ಟೇ ಎಲ್ಲರೂ ಒಂದಾಗಿ, ಯಕ್ಷಗಾನ ಕಲೆ ಉಳಿಸಿ , ಬೆಳೆಸಿ ಎಂದು ಭಾವಾವೇಶದ ಭಾಷಣ   ಮಾಡಿ , ಕೆಲಸಗಳಲ್ಲಿ ಸಣ್ಣತನ ತೋರುವದೇ ಇಂದಿನ ಮುಂದಾಳುಗಳ ಜಾಯಮಾನವಾಗಿದೆಯೇ?



ಇದು ಕೇವಲ ಚಿತ್ರವೊಂದನ್ನು ನೋಡಿ ಬಂದ ಭಾವನೆಗಳ ವ್ಯಕ್ತನೆ. ಇನ್ನು ನಿನ್ನೆಯ ಸಭೆಗೆ ಹೋಗಿದ್ದರೆ ಎಂತೆಂತಹ ವಿಪರ್ಯಾಸಗಳು ಗಮನಕ್ಕೆ ಬರುತ್ತಿದ್ದವೋ ?



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
www.hariharbhat.blogspot.com
February 27, 2013.


Saturday, February 23, 2013

ಇದೇನು ಪ್ರಗತಿಯೋ ? ಇದೇನು ಲೈಫೋ ?


ಇದೇನು ಪ್ರಗತಿಯೋ ? ಇದೇನು ಲೈಫೋ ?
------------------------------------------------


ಕೆಂಗೇರಿ ಉಪಗನಗರ  ವಾರ್ಡ್ ನಂಬರ್ ೧೫೯.    ದಿನಪತ್ರಿಕೆಯೊಂದು    ಕಾರ್ಪೊರೇಟರ್ ಅಂಜನಪ್ಪನವರ ಸಹಕಾರದೊಂದಿಗೆ ಜನತಾ ದರ್ಶನ ಕಾರ್ಯಕ್ರಮ ನಡೆಸಿತು. ಬಹಳ ಉತ್ಸಾಹದಿಂದ ಸ್ಪಂದಿಸಿದ ನಾಗರಿಕರು ಸಮಸ್ಯೆಯ ಮೂಟೆಗಳನ್ನೇ  ಬಿಚ್ಚಿ ಇಟ್ಟರು.  ವಿಶ್ವಾಸಗಳ ಮಹಾಪೂರವೇ ಹರಿದುಬಂತು.



ಮುಂದೇನಾಯಿತು ?  ಪತ್ರಿಕೆಯಲ್ಲಿ ಬರುತ್ತಿರುವ ಪರಿಹಾರಗಳು ಖಾರಾ ಮಂಡಕ್ಕಿಯ ಮೇಲೆ ರುಚಿಗಾಗಿ ಸಿಂಪಡಿಸುವ ಲಿಂಬು ಹುಳಿಯಂತಿದೆ.



ನೋಡಿ ಪ್ರತಿ ದಿನ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳು.



 ಕತ್ತಲಾದ ಮೇಲೆ ಯಾವ ರಸ್ತೆಯಲ್ಲಿ ನಡೆದಾಡಿದರೂ ಅನುಭವಕ್ಕೆ ಬರುವ ಸಾಮಾನ್ಯ ಸಂಗತಿಗಳು, ಪ್ರತಿ ರಸ್ತೆಯಲ್ಲಿರುವ ಬೀದಿ ದೀಪಗಳಲ್ಲಿ ಸರಾಸರಿ ಹತ್ತರಲ್ಲಿ ನಾಲ್ಕರಿಂದ ಐದು ಮಾತ್ರ ಬೆಳಗುತ್ತಿರುವವು, ಅವೂ ಸರಿಯಾದ ಮೇಲ್ವಿಚಾರಣೆ ಇಲ್ಲದೆ ಮಂಕು ಮಂಕಾಗಿ ಮಿನುಗುವವು. ಹಾಗಾಗಿ ಯಾವುದೇ ರಸ್ತೆಯಲ್ಲಿ ಕತ್ತಲಾದ ನಂತರ ಹೋದರೆ , ಮಬ್ಬು ಮಬ್ಬು ಬೆಳಕಿನಲ್ಲಿ ಓಡಾಡಬೇಕಾದುದು ಸರ್ವೇ ಸಾಮಾನ್ಯ.



ಅಲ್ಲಲ್ಲಿ ರಸ್ತೆಯ ಉಬ್ಬು ತಗ್ಗುಗಳಲ್ಲಿ   ನೀರು, ಕೊಳಚೆ  ನಿಂತಿರುವದು ಸಾಮಾನ್ಯ . ವಾಹನ ಸವಾರರು ಆ ನೀರು, ಕೊಳಚೆಯನ್ನು ತಪ್ಪಿಸಿ ಸಾಗಲು ಸರ್ಕಸ್ ಮಾಡುವರು, ಪಾದಾಚಾರಿ ರಸ್ತೆಗಳಿಲ್ಲದಿರುವದರಿಂದ    ಮತ್ತು  ಪಾದಾಚಾರಿ ರಸ್ತೆಗಳಿರುವಲ್ಲಿ  ಚಿಕ್ಕ ಪುಟ್ಟ ಅಂಗಡಿಕಾರರೇ ಆ ಪಾದಾಚಾರಿ ರಸ್ತೆಗಳನ್ನು ಅಲ್ಲಲ್ಲಿ ಆಕ್ರಮಿಸಿರುವದರಿಂದ ,  ಬೇರೆ ವಿಧಿಯಿಲ್ಲದೇ ರಸ್ತೆಯಲ್ಲೇ ಸಾಗುವ ಜನರು ದಿನಾಲು ಸಣ್ಣ ಪುಟ್ಟ   ಗಾಯಗಳಿಗೊಳಗಾಗುವರು ಮತ್ತು ಇದೇ ವ್ಯವಸ್ಥೆಗೆ ಹೊಂದಿ ಬದುಕುವದು ಅನಿವಾರ್ಯವಾದ್ದರಿಂದ ವಾಹನಕಾರನ್ನು   ಶಪಿಸುತ್ತ, ಅಂಗಡಿಯವರನ್ನು ಕೆಂಗಣ್ಣಿನಿಂದ ನೋಡುತ್ತ , ಅಲ್ಲಲ್ಲೇ ಆಚೆ ಈಚೆ ಹೊಂದಾಣಿಕೆ ಮಾಡಿಕೊಂಡು ಮುಂದೆ ಹೋಗುತ್ತಾರೆ. ಸ್ವಲ್ಪ ಕಂಠ ಬಲ, ತೋಳಿನ ಬಲವುಳ್ಳವರು ಚಿಕ್ಕ ಪುಟ್ಟ ಅವಗಢಗಳನ್ನೇ  ಬಂಡವಾಳ ಮಾಡಿಕೊಂಡು ಅಲ್ಪ ಸ್ವಲ್ಪ ದಿನದ ಖರ್ಚಿಗೆ ಕಾಸು ಮಾಡಿಕೊಳ್ಳುವರು.



ನಮ್ಮ ಜನ ಜೀವನ ಮತ್ತು ಆ ಜನ ಜೀವನದ ಪಾಲುದಾರರಾದ ನಮ್ಮೆಲ್ಲರ ವಿಡಂಬನಾತ್ಮಕ ವ್ಯವಸ್ಥೆ ಹೇಗಿದೆ ನೋಡಿ. ಪ್ರತಿಯೊಂದು ಸಮಸ್ಯೆಗಳಿಗೆ ಅಲ್ಲಲ್ಲೇ ಪರಿಹಾರ ಕಂಡುಕೊಳ್ಳಬಲ್ಲ ಸುಂದರ ವ್ಯವಸ್ಥೆ ನಮ್ಮ ಆಡಳಿತದಲ್ಲಿದೆ. ಆದರೆ ತಿಂಗಳು ಮುಗಿಯುವ ಕೊನೆಯ ದಿನದೊಳಗೆ ಸಂಬಳ ಪಾವತಿಸುವ
ವ್ಯವಸ್ಥೆಯನ್ನುಳಿದು  ಇನ್ನ್ಯಾವುದೂ  ತಮ್ಮ ದಿನ ನಿತ್ಯದ ಜವಾಬ್ದಾರಿಯಂತೆ ನಡೆಯುವದೇ ಇಲ್ಲ !!!  ಒಂದು ಬೀದಿ ದೀಪ ಕೆಟ್ಟರೆ ಅದನ್ನು ಕೂಡಲೆ ಸರಿಪಡಿಸುವ ವ್ಯವಸ್ಥೆ ಇದೆ. ಸರಿಪಡಿಸಲು ಬೇಕಾದ ಸಾಮಗ್ರಿಗಳನ್ನು ಶೇಖರಿಸಿಟ್ಟು ದಿನ ನಿತ್ಯ ಕತ್ತಲಾದೊಡನೆ ರಸ್ತೆಗಳಲ್ಲಿ ಪರೀಕ್ಷಿಸಿ , ಮರುದಿನ ಸರಿಪಡಿಸುವ ಕಾರ್ಯಕ್ಕಾಗಿ ಸೂಕ್ತ ಜನ ಸಂಪನ್ಮೂಲ, ಧನ ಸಂಪನ್ನ್ಮೂಲ , ವಾಹನ ವ್ಯವಸ್ಥೆ ಎಲ್ಲ ಇವೆ. ಇದಕ್ಕಾಗಿ ಇರುವ ಸಿಬ್ಬಂದಿಯನ್ನು ಹತೋಟಿಯಲ್ಲಿಟ್ಟು ಕೆಲಸ ಮಾಡಿಸಲು  ಅಧಿಕಾರಿ ವರ್ಗವಿದೆ. ಆದರೆ ಯಾಕೀ ದಿನ ನಿತ್ಯ ಯಾತನೆಯ ಅವ್ಯವಸ್ತೆ.............?



ರಸ್ತೆಯಲ್ಲಿ ಉಬ್ಬು ತಗ್ಗುಗಳಿರದಂತೆ ಯೋಜನೆ ಕಾಗದದಲ್ಲಿರುತ್ತದೆ. ರಸ್ತೆಯನ್ನು ನಿರ್ಮಿಸುವಾಗ ಯೋಚನೆ, ಯೋಜನೆ, ಅನುಮೋದನೆ, ಪರಿಶೀಲನೆ, ನಂತರ ಹಣ ಬಿಡುಗಡೆ ಎಂಬ ಸುಂದರ ವ್ಯವಸ್ಥೆ ನಮ್ಮಲ್ಲಿದೆ. ಅದೇ ರೀತಿ ಇವೆಲ್ಲವನ್ನೂ ಕಾರ್ಯಗತಗೊಳಿಸಲು ಪೂರ್ವಭಾವಿಯಾಗಿ ನಿರ್ಧರಿಸಿರುವ ನೌಕರರ, ಅಧಿಕಾರಿಗಳ ತಂಡವೇ ಇದೆ. ಇನ್ನು ಈ ಎಲ್ಲ ಮುನ್ನೆಚ್ಚರಿಕೆಗಳ ಹೊರತಾಗೀಯೂ , ತೊಂದರೆ ತೊಡಕುಗಳು ಬಂದರೆ ನಿವಾರಣಾ ವ್ಯವಸ್ಥೆಯಾಗಿ ಸೂಕ್ತ  ಧನ, ಜನ, ಅಧಿಕಾರಿ ಬಲವಿದೆ. ಕಾಲ ಕಾಲಕ್ಕೆ ಸಾಕಷ್ಟು ಯೋಜನೆಗಳು ಕಾಗದದಲ್ಲಿ ತಯಾರಾಗಿ, ಖರ್ಚು ವೆಚ್ಚಗಳೆಂದು ಆ ಹಣ ವಿನಿಯೋಗವೂ ಆಗಿರುತ್ತದೆ.  ಆದರೆ ನಮ್ಮ ರಸ್ತೆಗಳು ಮಾತ್ರ ಉಬ್ಬು ತಗ್ಗುಗಳಿಂದ  ಕೂಡಿ, ಕೊಚ್ಚೆ ಕೊಸರುಗಳಿಗೆ ತಾಣವಾಗಿ ಮೆರೆಯುತ್ತಿದ್ದು ಪ್ರತಿ ದಿನ ಜನ ಸಾಮಾನ್ಯನಿಗೆ ತೊಂದರೆ ನೀಡುತ್ತಿರುತ್ತವೆ. ವ್ಯವಸ್ಥೆ  ಇಷ್ಟೊಂದು  ಓಕೆ ಇರುವಾಗೆ ಈ ದಿನ ನಿತ್ಯದ ಅವ್ಯವಸ್ಥೆ ಯಾಕೇ .....................?



ಇಂದು ಪ್ರತಿ ಸಮಸ್ಯೆಗೂ ನ್ಯಾಯಾಲಯಗಳ ಬಾಗಿಲು ತಟ್ಟಿ ಪರಿಹಾರಕ್ಕೆ ಪ್ರಯತ್ನಿಸುವದು ಸಾಮಾನ್ಯವಾಗುತ್ತ ಸಾಗಿದೆ. ನ್ಯಾಯಾಲಯದಲ್ಲಿ ಯಾವುದೇ ಸಮಸ್ಯೆ  ಒಯ್ದರೆ ಅದಕ್ಕೆ ಸೂಕ್ತ ತೀರ್ಪು ಬರಲು ಕನಿಷ್ಟ ಮೂರರಿಂದ  ನಾಲ್ಕು, ಸರ್ವೇಸಾಮಾನ್ಯವಾಗಿ ಎಂಟರಿಂದ ಹತ್ತು ವರುಶಗಳಾಗುತ್ತವೆ. ರಸ್ತೆಯಲ್ಲಿ ನಾಯಿ ಬಿದ್ದು ನಾರುತ್ತಿದೆ , ಆಡಳಿತದಿಂದ ಸಮಸ್ಯೆ ಪರಿಹಾರವಾಗಲಿಲ್ಲ ಎಂದು ನ್ಯಾಯಾಲಯಕ್ಕೆ ಹೋದರೆ , ಬಿದ್ದ ನಾಯಿ ಕೊಳೆತು , ವಾಸನೆ ಆರಿಹೋದ ಮೇಲೆ ವಿಚಾರಣೆಗೆ ಬಂದಾಗ ಸಾಕ್ಷಿಯಿಲ್ಲದೆ , ಪರಿಹಾರ ಕಾಣದಾಗುತ್ತದೆ. ಇದೊಂದು ಉದಾಹರಣೆ ಮಾತ್ರ. ಈ ರೀತಿಯ ನಮ್ಮ ಅಡಳಿತ ವ್ಯವಸ್ಥೆ ಗಬ್ಬೆದ್ದು , ಆ ಗಬ್ಬೆದ್ದ ಆಡಳಿತ ವ್ಯವಸ್ಥೆಯ ದುರ್ನಾತವನ್ನು ಸಹಿಸಿ ಬಾಳುವ ಅಸಹಾಯಕ ಸಾಮಾನ್ಯ ಪ್ರಜೆ  " ದಿನ ನಿತ್ಯ ಸಾಯುವವನಿಗೆ ಅಳುವವರಾರು ?" ಎಂಬಂತೆ ವ್ಯವಸ್ಥೆಯೊಂದಿದೆ ಎಂಬುದನ್ನೇ ಮರೆತು, ಅಲ್ಲಿ ಇಲ್ಲಿ ಸುಲಭವಾಗಿ ಸಿಗುವ ಅಧಿಕಾರಿ ವರ್ಗದ ಯಾವನಿಗೋ ಇಲ್ಲ ಮಧ್ಯವರ್ತಿಗೋ ಕೈ ಬಿಸಿಮಾಡಿ ತನ್ನ ಕೆಲಸ ಸಾಧಿಸಿಕೊಳ್ಳುತ್ತಾನೆ.



ಬಹಳ ಸುಂದರವಾಗಿ ರಚಿಸಿರುವ ಆಡಳಿತ ವ್ಯವಸ್ತೆಯನ್ನು ಹದಗೆಡಿಸಿ ತಮ್ಮ ಅಧಿಕಾರ ಸ್ಥಾಪಿಸಿ   ಸಂಪೂರ್ಣ ಹದ ಗೆಟ್ಟ ವ್ಯವಸ್ಥೆಯನ್ನು ತಮ್ಮ ಹದ್ದು ಬಸ್ತಿನಲ್ಲಿಟ್ಟು  ಮೆರೆಯುತ್ತಿರುವ ಅಧಿಕಾರಿ ವರ್ಗ (ಎಲ್ಲರೂ ಅಲ್ಲ ಎಂಬುದನ್ನು ನೆನಪಿಡಿ ), ಬ್ರಷ್ಟಾಚಾರದ ಕೂಪದಲ್ಲಿ ತೇಲುತ್ತಿರುವ ಜನ ಪ್ರತಿನಿಧಿಗಳು (ಎಲ್ಲರೂ ಅಲ್ಲ ಎಂಬುದು ಗಮನಿಸಬೇಕಾದುದು )  ಇವರಿಗೆಲ್ಲ ಮಾನವೀಯ ಯೋಚನೆಗಳನ್ನು ಬಿತ್ತಲು ನಾವೆಲ್ಲಾ ನಂಬಿ ಬಂದಿರುವ ವಿವಿಧ ಧರ್ಮ, ಜಾತಿ, ಮತಗಳ ದೇವರುಗಳು ಅಸಮರ್ಥರೇ  ..........?



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
www.hariharbhat.blogspot.ಕಂ
February 24, 2013.

Friday, February 22, 2013

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ


ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ
--------------------------------------------------


ನಮ್ಮ ಸಂವಿಧಾನದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಎಂಬ ಮೂರು ವಿಭಾಗಗಳಿವೆ. ಈ ಮೂರು ಅಂಗಗಳು ಪರಸ್ಪರ ಸಹಕಾರದಿಂದ ಆದರೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಪ್ರಜೆಗಳ ಹಿತಾಸಕ್ತಿ ಕಾಯಬೇಕು ಎಂಬುದು ಸಂವಿಧಾನ  ಕರ್ತ್ರರ  ಸದಭಿಲಾಷೆಯಾಗಿತ್ತು. ಆದರೆ ಇಂದೇನಾಗಿದೆ?



ಕಾರ್ಯಾಂಗದ ಮೇಲೆ ಶಾಸಕಾಂಗ ಸಂಪೂರ್ಣ  ಹಿಡಿತ ಸಾಧಿಸಿ ತನ್ನ ಕಪಿ ಮುಷ್ಟಿಯಿಂದ ಹೊರಬರದಂತೆ ಮನಸ್ಸಿಗೆ ತೋಚಿದ ಶಾಸನಗಳನ್ನು ಮಾಡುತ್ತಿದೆ. ಆ ಕಾರಣದಿಂದಲೇ ಇಂದು ನ್ಯಾಯಾಂಗವನ್ನು ಕೆಲಸಗಳ ಹೊರೆ ಕಾಡುತ್ತಿದೆ. ತನ್ನ ದಿನ ನಿತ್ಯದ ಕಾರ್ಯಗಳನ್ನು ಪೂರೈಸಿ , ನ್ಯಾಯನಿರ್ವಹಣೆಯನ್ನು ನ್ಯಾಯೋಚಿತವಾಗಿ ಮಾಡಲಾರದ ಸ್ಥಿತಿಗೆ ಶಾಸಕಾಂಗ ನ್ಯಾಯಾಂಗವನ್ನು ದೂಡಿ ನಿಲ್ಲಿಸಿದೆ. ಈ ಎಲ್ಲ ತೊಂದರೆಗಳನ್ನು ಮೆಟ್ಟಿ ನಿಂತು ಶಾಸಕಾಂಗವನ್ನು ಸರಿ ದಾರಿಗೆ ತರುವಂತಹ ನ್ಯಾಯೋಚಿತ ನಿರ್ಣಯಗಳತ್ತ ಕೆಲಸ ಮಾಡೋಣವೆಂದರೆ  , ಕೆಲಸಕ್ಕೆ ತಕ್ಕ , ಅವಶ್ಯಕ ಮ್ಯಾನ್-ಪವರ್(manpower) ಒದಗಿಸದೆ ನ್ಯಾಯಾಂಗವನ್ನು ತನ್ನ ತೀಟೆಗಳಿಗೆ ಒಳಪಡಿಸಲು ಶಾಸಕಾಂಗ ಹೆಣಗುತ್ತಿದೆ. ಈ ಸಂದರ್ಭದಲ್ಲಿ  ಈ ಕೆಳಗಿನ ಯೋಚನೆ.



ಶಾಸಕಾಂಗವು ತನ್ನ ಸ್ವಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವ ಯಾವುದೇ ಕಾನೂನುಗಳನ್ನು ಮಾಡಬಾರದು, ಆ ರೀತಿಯ ಕಾನೂನುಗಳನ್ನು ಮಾಡಲೇಬೇಕಾದ ಸಮಯ/ ಸಂದರ್ಭದಲ್ಲಿ , ಸೂಕ್ತವಾಗಿ ನ್ಯಾಯಾಂಗದ ವಿವೆಚನೆಗೊಳಪಟ್ಟು , ನ್ಯಾಯಾಂಗ ಒಪ್ಪಿದಲ್ಲಿ , ಶಾಸಕಾಂಗದ ಸ್ವಹಿತಾಸಕ್ತಿ ಕಾಯ್ದುಕೊಳ್ಳುವಂತಹ ಕಾನೂನುಗಳು ಜಾರಿಯಲ್ಲಿ ಬರಲಿ , ಸಂವಿಧಾನಕ್ಕೆ ಸೂಕ್ತ ತಿದ್ದುಪಡಿ ಬರಲಿ ಎಂದು ಎಲ್ಲ ಸಾರ್ವಜನಿಕರು ಆಗ್ರಹಿಸಬೇಕಾದ ಸಮಯ ಬಂದೊದಗಿದೆ ಎನಿಸುತ್ತಿದೆ. ಈ ವರದಿ ಓದಿ ನಿಮ್ಮ ಅಭಿಪ್ರಾಯ ಬರೆಯಿರಿ, ಎಂಬ ಕೋರಿಕೆ:

http://www.vijaykarnatakaepaper.com/Details.aspx?id=3819&boxid=12515187



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ , ವಿಮರ್ಶಕ, ಫೇಸ್ ಬುಕ್ ಬರಹಗಾರ.
www.hariharbhat.blogspot.com
February 23, 2013.

Sunday, February 17, 2013

" ಅಪ್ಪ ಅಂದ್ರೆ ಆಕಾಶ " , ಮಣಿಕಾಂತ್


ನಿಮ್ಮೊಡನೆ   ಒಂದು ವಿಚಾರ ಹಂಚಿಕೊಳ್ಳುತ್ತೇನೆ.


ಇಂದಿನ ಸಾಮಾಜಿಕ ವ್ಯವಸ್ಥೆಯ ಅವಿಭಾಜ್ಯ ಅಂಗಗಳಾದ ಪತ್ರಿಕೆಗಳು, ದೃಶ್ಯ  ಮಾಧ್ಯಮಗಳು ಕಾರ್ಯಕ್ರಮ  ಸಂಘಟಕರಿಗೆ  ಸಾಕಷ್ಟು ಪ್ರಚಾರ ಕೊಟ್ಟು ಪ್ರೋತ್ಸಾಹಿಸುವದಾದರೂ , ಪ್ರೇಕ್ಷಕರಿಗೆ , ಮಾಧ್ಯಮಗಳ ಅಭಿಮಾನಿಗಳಿಗೆ ಸೂಕ್ತ ನ್ಯಾಯವನ್ನೊದಗಿಸುತ್ತಿಲ್ಲಾ ಎಂಬುದು ನಿರ್ವಿವಾದ ಸಂಗತಿ.



ಹುಬ್ಬೇರಿಸಿದಿರಾ? ನನ್ನ ಅನುಭವಗಳನ್ನು ಕೇಳಿ ಧೀರ್ಘವಾಗಿ ಯೋಚಿಸಿ. ನನ್ನ ವೈಯಕ್ತಿಕ ಲಾಭ - ನಷ್ಟದ ವಿಚಾರ ಇಲ್ಲಿಲ್ಲ. ಸರ್ವೇ ಸಾಮಾನ್ಯ ಸಾಮಾಜಿಕ ಜೀವಿಯೊಬ್ಬ ಒಳ್ಳೆಯ ಕಾರ್ಯಕ್ರಮವೊಂದನ್ನು ತಪ್ಪಿಸಿಕೊಂಡರೆ ಅಥವಾ ಪೇಪರ್ ಗಳಲ್ಲಿ ಬರುತ್ತದಲ್ಲಾ, ಟಿ.ವಿ ಯಲ್ಲಿ ನೋಡುತ್ತೇವಲ್ಲಾ ಎಂದು ಕಾರ್ಯಕ್ರಮಕ್ಕೆ ಹೋಗುವದನ್ನು ಉಪೇಕ್ಷಿಸಿದರೆ ಯಾವ ರೀತಿ ತಮಗೆ ತಾವೇ ಹಾನಿಯನ್ನುಂಟುಮಾಡಿಕೊಳ್ಳುತ್ತಾರೆ   ಎಂಬುದನ್ನು ಎರಡು ಅನುಭವಗಳಿಂದ ಹೇಳಲಿಚ್ಚಿಸುತ್ತೇನೆ.



ನಿಮಗೆಲ್ಲ ಗೊತ್ತಿರುವ , ಓದಿ ತಿಳಿದಿರುವ  " ಅಪ್ಪ ಅಂದ್ರೆ ಆಕಾಶ " , ಮಣಿಕಾಂತ್ ರವರ ಪುಸ್ತಕ ಬಿಡುಗಡೆ ಸಮಾರಂಭ , ರವೀಂದ್ರ ಕಲಾಕ್ಷೇತ್ರದಲ್ಲಿ   ಕಾರ್ಯಕ್ರಮ.  ಎಚ್  .ಎಸ್.ವೆಂಕಟೇಶ ಮೂರ್ತಿ , ಸಿನೇಮಾ  ನಟಿ ಭಾವನಾ, ಕನ್ನಡ ಪ್ರಭ ಹಾಗೂ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹಾಗೂ ಸಿನೇಮಾ ನಿರ್ದೇಶಕ ಗುರು ಪ್ರಸಾದ ಸಾಂಗತ್ಯದಲ್ಲಿ.



ಕನ್ನಡ ಪ್ರಭ ಪತ್ರಿಕೆ ( 18.02.2013 ) ರ ಪುಟ 3 ರಲ್ಲಿ ಬಂದ ವರದಿ ನೀವೆಲ್ಲ ಓದಿರುತ್ತೀರಿ. ಓದಿಲ್ಲದಿದ್ದವರೊಮ್ಮೆ ಓದಿ ಈ ನನ್ನ ಮಾತುಗಳನ್ನು ಕೇಳಿಸಿಕೊಂಡರೆ ನಾನು ತೇಲಿ ಬಿಡುತ್ತಿರುವ ವಿಚಾರ ಹೆಚ್ಚು ಸ್ಪಷ್ಟವಾದೀತು. ವಿಶ್ವೇಶ್ವರ ಭಟ್ಟರು ಚತುರ ಮುಂದಾಳತ್ವ   ಗುಣಗಳುಳ್ಳವರೆಂಬಲ್ಲಿ ಎರಡು ಮಾತಿಲ್ಲ. ಹಾಗೆಯೇ ಮೇಧಾವಿ ಮತ್ತು ಉತ್ತಮವಾಗಿ ವಿಷಯ ಪ್ರಸ್ತುತ ಪಡಿಸುವ ಮಾತುಗಾರರು. ಅವರ ಬರಹಗಳನ್ನೋದಿ ಬಹಳ ಅಭಿಮಾನಿಗಳಿದ್ದಾರೆಂಬುದೂ  ಅಷ್ಟೇ ಸತ್ಯ. ಆದರೆ ನಿನ್ನೆಯ ಅದ್ಭುತ ಕಾರ್ಯಕ್ರಮ , ಅದ್ಭುತ ಮಾತುಗಳನ್ನಾಡಿದ ವಾಗ್ಮಿಗಳ ಆಶಯ , ರಂಜನೀಯವಾಗಿ ಅಷ್ಟೇ ಗಂಭೀರವಾಗಿ ಗಂಭೀರ ವಿಷಯಗಳನ್ನು ಹೊರಹಾಕಿದ ಮಾತುಗಳು ಇವೆಲ್ಲವುಗಳಿಗೆ ಪ್ರತ್ಯಕ್ಷ ಸಾಕ್ಷಿಯಾದವನಿಗೆ ಕಾರ್ಯಕ್ರಮದ ವರದಿ ನಿಸ್ತೇಜವಾದ ಅನುಭವ ನೀಡುವದೆಂಬುದೂ ಅಷ್ಟೇ ಸತ್ಯ. ಹತ್ತರ ಜೊತೆ ಹನ್ನೊಂದು ಎಂಬಂತೆ ಪ್ರಕಟವಾದ ಈ ವರದಿ , ಕಾರ್ಯಕ್ರಮಕ್ಕೆ ಬರದೆ, ಮನೆಯಲ್ಲೇ ಉಳಿದು ಕಾರ್ಯಕ್ರಮ ಹೇಗಾಯಿತೆಂಬ ಕುತೂಹಲವುಳಿಸಿಕೊಂಡ   ಸಾಹಿತ್ಯಾಭಿಮಾನಿಗಳಿಗೆ ನ್ಯಾಯ ಒದಗಿಸಿಲ್ಲ ಈ ವರದಿ ಎಂದು ಧೃಡವಾಗಿ ಹೇಳಬಹುದು.   ಹೇಗೆ  ಎಂದಿರಾ ? ಓದಿ ಕೆಳಗಿನ ನನ್ನ ವರದಿ.



ಬೆಳಿಗ್ಗೆ ೧೦.೩೦ ಕ್ಕೆ ನಿಗದಿಯಾದ ಕಾರ್ಯಕ್ರಮ ಹನ್ನೊಂದಕ್ಕೆ ಉಪಾಸನಾ ಮೋಹನ್ ತಂಡದ ಸುಗಮ ಸಂಗೀತದೊಂದಿಗೆ ಆರಂಭವಾಯಿತು. ಉಪಾಸನಾ ಮೋಹನ್, ಯಶವಂತ್ ಹಳೆಬಂಡಿ, ನಾಗಚಂದ್ರಿಕಾ ಭಟ್, ಕುಮಾರಿ.ವರ್ಷಾ ಸುರೇಶ  ಗಾಯನ ಸವಿ ಉಣಬಡಿಸಿದರು. ಹನ್ನೊಂದಕ್ಕೆ ಅಥಿತಿಗಳನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು. ನಡೆಯಲೇಬೇಕಾದ ದೀಪ ಬೆಳಗುವಿಕೆ, ಹೊದಿಕೆ ಬಿಚ್ಚಿ ಪುಸ್ತಕ ತೋರಿದ ಅತಿಥಿಗಳು, ಛಾಯಾಗ್ರಾಹಕರು , ಮೊಬೈಲ್ ಮಾದಕರು ಇವರೆಲ್ಲರ ಕಾಟ ತಪ್ಪಿ ಬಹಳ ಸಮಯದಿಂದ ಕಾದು ಕುಳಿತಿದ್ದ ಪ್ರೇಕ್ಷಕರಿಗೆ  ಅಥಿತಿಗಳ ಮಾತು ಆರಂಭ.  ತನ್ಮಧ್ಯೆ   ಭಾವ ಜೀವಿಗಳೆಲ್ಲರ ಭಾವ ಸ್ಪುರಿಸಿದ ಲಕ್ಷೋಪ ಲಕ್ಷ ಜನರಿಗಿಂತ ಭಿನ್ನವಾದ ಚಟುವಟಿಕೆಗಳನ್ನು ಎಲೆ ಮರೆಯ ಕಾಯಿಗಳಂತೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜವೂ ಹೆಮ್ಮೆಪಡುವ ಕಾರ್ಯವೆಸಗಿದ ಜನಸಾಮಾನ್ಯರಂತಿದ್ದೂ, ಜನಸಾಮಾನ್ಯರೆಲ್ಲ ಮಾಡಲಾಗದ ಕಾರ್ಯಗಳನ್ನು ಮಾಡಿದ , ತನ್ಮೂಲಕ ಮಣಿಕಾಂತ್ರವರ ಶ್ರಮದಿಂದ ಜಗತ್ತಿಗೆಲ್ಲ ಪ್ರಕಾಶಿಸಿದ ಸರಳ ಜೀವಿಗಳಿಗೆ ಸನ್ಮಾನ ಆಪ್ತವಾಗಿ  , ಆತ್ಮೀಯವಾಗಿ ನೆರವೇರಿಸಲಾಯಿತು.



ಭಾವನಾ ಎಲ್ಲ ಸಿನೇಮಾ ನಟಿಯರಿಗಿಂತ ಭಿನ್ನವಾಗಿ ಸರಳ ಸುಂದರವಾಗಿ ಸೀರೆಯುಟ್ಟು , ಮುಖದಲ್ಲಿ ಮುಗ್ಧತೆ ಹೊಂದಿ , ಸಿನೇನಾ ನಟಿಯರ ಆಸ್ತಿಯಾದ  ತೀಕ್ಷ್ನ ಚುಂಬಕ ನಗುವನ್ನು ಬೆಲ್ಲ ತುಪ್ಪದ ಕಾಂಬಿನೇಶನ್ ನಂತೆ ಸುರಿಸುತ್ತ , " ಒಂಟಿತನ ಓಡಿಸಲು ಅಪ್ಪ ಅಂದರೆ ಆಕಾಶ ದಂತಹ ಪುಸ್ತಕಗಳಲ್ಲಿರುವ ಕಥೆಗಳು ಆಸರೆಯಾಗುತ್ತವೆ " ಎಂದರು.  ಎಚ್.ಎಸ್.ವಿ ಯವರು " ಇಂದು ಪತ್ರಿಕೆಗಳನ್ನು ಬೆಳಿಗ್ಗೆ ಓದಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ   ಕೊಳಕು ರಾಜಕಾರಣಿಗಳ ಹಳಸಲು ಮುಖವನ್ನು ಕುರಿತು ಹೆಚ್ಚು ಹೆಚ್ಚು ಬರೆಯುವ ಪತ್ರಿಕೆಗಳು ಒಳ್ಳೊಳ್ಳೆ  ಸಮಾಜಮುಖಿಯಾದ ಸುದ್ದಿಗಳನ್ನು ತುಣುಕು ಸುದ್ದಿಗಳಾಗಿ ಪ್ರಕಟಿಸುವದು ವಿಷಾದನೀಯ ಮತ್ತು ಖಂಡನಾರ್ಹ " ಎಂದರು. unsung  heros ನ sing  ಮಾಡೋ ಮಣಿಕಾಂತ್,  ಎಂದು ಮಣಿಕಾಂತ್ ಗೆ ಚಪ್ಪಾಳೆ ಮೂಲಕ ಜನರೆಲ್ಲಾ ಅಭಿನಂದಿಸುವಂತೆ ಮಾಡಿದರು.  ಎಚ್ . ಎಸ್. ವಿ ಯವರು ತಮ್ಮ ಭಾಷಣಗಳಲ್ಲೆಲ್ಲ ಅಡಿಗರಿಂದಾರಂಭಿಸಿ   ಅಡಿಗರಲ್ಲೆ  ಉದಾಹರಣೆಗಳನ್ನು ಎತ್ತಿಕೊಳ್ಳುತ್ತಾರೆ , ಇದರಿಂದ ಬ್ರಾಹ್ಮಣರ ಪಕ್ಷಪಾತಿ ಎಂಬ ಆರೋಪಗಳು ನಿರಾಧಾರವೆಂಬುವಂತಿಲ್ಲವಾದರೂ,  ಎಚ್ .ಎಸ್. ವಿ ಯವರ ಭಾಷಣ ಕೇಳುವದೇ   ಒಂದು ಸುಸಂಸ್ಕೃತ ಮೋಜು.  ಇಂದೂ ಸಹ ಮಣಿಕಾಂತ್ ಮಾಡಿದ ಒಳ್ಳೆಯ ಕಾರ್ಯ , ಎಲೆ ಮರೆಯ ಕಾಯಿಗಳನ್ನು ಸಮಾಜಕ್ಕೆ ಪರಿಚಯಿಸಿ ಸನ್ಮಾನಿಸುವ ಯೋಜನೆಯನ್ನು ಬಹು ಸರಳವಾದ ಮಾತುಗಳಲ್ಲಿ , ಕೇಳುಗನು   ಅತಿ ಪ್ರಭಾವಿತನಾಗುವಂತೆ ಅಕ್ಷರ ವ್ಯಾಖ್ಯಾನ ಮಾಡಿದರು.  ಎಚ್ .ಎಸ್.ವಿ ಯವರ ಸರಳ ನಗು, ಸರಳ ಜೀವನ, ಸರಳ ಮಾತುಗಳು ಬಹುಕಾಲ ನೆನಪಿನಲ್ಲಿರುವಂತೆ ಮಾಡುತ್ತವೆ. ಇನ್ನೊಮ್ಮೆ ಅವಕಾಶ ತಪ್ಪಿಸಿಕೊಳ್ಳದಿರಿ  .



ಈ ಗುರುಪ್ರಸಾದ್ ನಿರ್ದೇಶಿಸಿದ ಸಿನೆಮಾಗಳನ್ನು ನೋಡಿ ಆನಂದಗೊಂಡಿದ್ದೆ.  ಇಂದು ಈ ಗುರುವಿನ ಮಾತುಗಳ ಮೋಡಿ ಅನುಭವಿಸಿ , ಯಶಸ್ವಿ  ನಿರ್ದೇಶಕರೆಂದೊಡನೆ  ಕಾರ್ನಾಡ್, ಕಾರಂತ್  ರನ್ನು ಚಿತ್ರಿಸಿಕೊಳ್ಳುವ ನನಗೆ , ನಿರ್ದೇಶಕನೊಬ್ಬ ಹೀಗೂ ಇರಬಹುದೇ ಎಂಬ ಆಶ್ಚರ್ಯದ ಬಲೆಯಿಂದ ಈಚೆ ಬರಲಾಗಲಿಲ್ಲ. ಉತ್ಪ್ರೇಕ್ಷೆಯೇನಿಲ್ಲ , ಈ ಮನುಷ್ಯ ಹೊರಹಾಕುವ ಪ್ರತಿ ವಾಕ್ಯಗಳಿಗೂ ಕೇಳುಗ ಮನ ಬಿಚ್ಚಿ ನಗುತ್ತಾನೆ, ಕೈ ಬಿಚ್ಚಿ ಚಪ್ಪಾಳೆ ತಟ್ಟುತ್ತಾನೆ. ನನಗೆ ಈ ಗುರುಪ್ರಸಾದ ಯಾವ ರೀತಿ ಸೂಜಿಗಲ್ಲಿನಂತೆ ಆಕರ್ಶಿಸಿದರೆಂದರೆ ನಾನು ಒಂದು ಶಬ್ದವನ್ನೂ ಟಿಪ್ಪಣಿ ಮಾಡಿಕೊಳ್ಳಲಾಗಲಿಲ್ಲ. ಕಣ್ಣುಗಳನ್ನು ಹೊರಳಿಸಿದರೆ ಎಲ್ಲಿ ಗುರುವಿನ ಮುಖಭಾವ , ಮಾತಿನ ಸಂಚಲನೆ, ಮೋಡಿಯಿಂದ ವಂಚಿತನಾಗಿಬಿಡುವೆನೇ ಎಂಭ ಭಯದಿಂದ ಏನೂ ಟಿಪ್ಪಣಿ ಮಾಡದೆ ಕುಳಿತಿದ್ದುದು ನನಗೇ ಸದೇಖಾಶ್ಚರ್ಯ.  ಈ ಗುರುವಿನ ಮಾತುಗಳನ್ನು ಕೇಳದೆ ನೀವು ಏನೇನು ಮಿಸ್ ಮಾಡಿಕೊಂಡಿರಿ ಎಂದು ಹೇಳಲಿಕ್ಕೆ ಸಾಧ್ಯವಿಲ್ಲ, ಅನುಭವಿಸಿಯೇ ಅರಿಯಬೇಕು.  ಇನ್ನೊಮ್ಮೆ ಮಿಸ್ ಮಾಡಿಕೊಳ್ಳಬೇಡಿ.



ನಮ್ಮ ವಿಶ್ವೇಶ್ವರ ಭಟ್ಟರ ಮಾತುಗಳನ್ನು ಮೊದಲು ಕೇಳಿದ್ದರಿಂದಲೂ , ಇನ್ನೊಂದೆಡೆ ಕೆಲಸವಿದ್ದುದರಿಂದಲೂ ಕಾರ್ಯಕ್ರಮದ ಇವಿಷ್ಟು ಭಾಗಗಳನ್ನು ಆಸ್ವಾದಿಸಿ ಹೊರಬಂದೆನು.



ಇನ್ನು ನಾನು ಈ ಲೇಖದ ಆರಂಭದಲ್ಲಿ ಹೇಳಿದ ಇನ್ನೊಂದು ಅನುಭವದ ಉದಾಹರಣೆ. ವಿಜಯವಾಣಿ ಪತ್ರಿಕೆಯವರು ಕೆಂಗೇರಿ ಉಪನಗರದಲ್ಲಿ ಸ್ಥಳೀಯ ಕಾರ್ಪೊರೇಟರ್ ಸಹಕಾರದಲ್ಲಿ ಜನರ ಸಮಸ್ಯೆಗಳನ್ನರಿಯಲು ಜನಸ್ಪಂದನ ಕಾರ್ಯಕ್ರಮವನ್ನೇರ್ಪಡಿಸಿದ್ದರು. ನಾನೂ ಭಾಗಿಯಾಗಿದ್ದೆ. ಮರುದಿನದ ಪತ್ರಿಕೆಯನ್ನು ಓದಿದರೆ , ಬಿಟ್ಟು ಹೋಗಿದೆ, ವರದಿಯಾಗಿಲ್ಲ ಎಂಬಂತಹ ಒಂದಂಶವೂ ಗೋಚರಿಸಲಿಲ್ಲ, ಪತ್ರಿಕೆಯನ್ನು ಪ್ರಭಾವಿಯಾಗಿ ಜನತೆಯತ್ತ ಕೊಂಡೊಯ್ಯಲು  ಈ ಕಾರ್ಯಕ್ರಮವನ್ನು ಹೇಗೆಲ್ಲಾ ಬಳಸಿಕೊಳ್ಳಬಹುದೋ ಅದನ್ನೆಲ್ಲ ಅಚ್ಚುಕಟ್ಟಾಗಿ ಮಾಡಿದ್ದಾರೆ.  ಅಂದರೆ ಪತ್ರಿಕಾ ಬಳಗ ಮನಸ್ಸು ಮಾಡಿದರೆ ಕಾರ್ಯಕ್ರಮವೊಂದರ ಫಲವನ್ನು ಆಕಾಶಕ್ಕೂ ಏರಿಸಬಹುದು ಇಲ್ಲ ಪಾತಾಳಕ್ಕೂ ಬೀಳಿಸಬಹುದು ಎಂಬುದಕ್ಕೆ ನಿದರ್ಶನ ಎಂದುಕೊಂಡೆ.



ಈ ಎಲ್ಲಾ ಅಕ್ಷರಗಳ ಸಂಯೋಜನೆಯಿಂದ ನಾನು ಹೇಳುವದೇನೆಂದರೆ   ನೀವೆಲ್ಲ ಹೆಚ್ಚು ಹೆಚ್ಚು   ಕಾರ್ಯಕ್ರಮಗಳಲ್ಲಿ ಪ್ರತ್ಯಕ್ಷವಾಗಿ ಹಾಜರಿರಬೇಕು, ಪರೋಕ್ಷವಾಗಿ ಮಾಧ್ಯಮಗಳ ಮೂಲಕ ಪಡೆಯುವದು   , ನಿಮ್ಮ   ಹಾಜರಾತಿಯಿಂದ ಪಡೆಯುವ ಸ್ಪಂದನೆ, ಮನೋಲ್ಲಾಸಗಳಿಗೆ  , ಜ್ಞಾನ ವರ್ಧನೆಗಳಿಗೆ ಎಂದೂ substitute ಆಗಲಾರದು.



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
www.hariharbhat.blogspot.com
February 18, 2013.

" ಹೆಣ್ಮಕ್ಕ್ಳೇ,,,,,,,,, ಸ್ಟ್ರೊಂಗು ಗುರೂ .............."


ಹೌದಪ್ಪಾ   ಹೌದು  ಯಾರು  ಏನೇ  ಹೇಳ್ಲಿ  " ಹೆಣ್ಮಕ್ಕ್ಳೇ,,,,,,,,, ಸ್ಟ್ರೊಂಗು ಗುರೂ .............."


ಏನಪ್ಪಾ ಇವ್ರಿಗೇನಾಯ್ತು ? ಅದ್ಕಂಡ್ರಾ ?  ನೀವು ಎಲ್ಲರು  ಇವತ್ತು ನನ್ನ ಜೊತೆ ಹವ್ಯಕ ಮಹಾಸಭೆಯಲ್ಲಿ ನಡೆದ ಯಕ್ಷಗಾನ ಮಾಗಧ ವಧೆ ನೋಡಿದ್ರೆ , ಹೇಳ್ತಾ ಇದ್ದುದು ಇದೇ .." ಹೆಣ್ಮಕ್ಕ್ಳೇ ...... ಸ್ಟ್ರೊಂಗು ಗುರೂ ........" ಜೊತೆಗೆ ಶೀಟಿ ಹಾಕಿ ಹೇಳ್ತಾ ಇದ್ರಿ , ಹೌದೌದು " ಹೆಣ್ಮಕ್ಕ್ಳೇ ಸ್ಟ್ರೊಂಗು ಗುರೂ ........... "


ಮಹಿಳೆಯರು, ಹುಡುಗಿಯರು ಸೇರಿ ದೊಡ್ಡ ದೊಡ್ಡ ಮೀಸೆ ಬರೆದು, ಕಿರೀಟ, ಪಗಡೆ ಕಟ್ಟಿ ಯಕ್ಷಗಾನ ಭಾಗವತರು ಹಾಡಿದ ಹಾಡುಗಳಿಗೆ ವಿವಿಧ ರೀತಿಯಲ್ಲಿ ಕುಣಿದು , ಮದ್ದಳೆ - ಚಂಡೆಗಳ ನಾದಕ್ಕೆ ಹೆಜ್ಜೆ ಹಾಕಿ, ಗೆಜ್ಜೆ ಗಿಜಿ ಗಿಜಿ ಮಾಡಿ , ಗಧೆ, ಬಿಲ್ಲು ಬಾಣಗಳನ್ನು ಹಿಡಿದು , ಮೆದು ದ್ವನಿಯನ್ನಡಗಿಸಿ ಗಡಸು ದ್ವನಿ ಬೇಕಾದಲ್ಲಿ ಗಡಸುತನ ಹೊರಡಿಸಿ , ಕಣ್ಣುಗಳನ್ನು ಹೊರಳಿಸಿ, ಅತ್ತಿತ್ತ ತಿರುಗಿಸಿ , ಹುಬ್ಬುಗಳಲ್ಲೆ ಹಬ್ಬಗಳನ್ನು ತೋರಿ, ಗಿರಿಗಿಟ್ಲೆ ಹೊಡೆದು, ಸಭಿಕರೆಲ್ಲಾ " ಹೆಣ್ಮಕ್ಕ್ಳೇ ಸ್ಟ್ರೊಂಗು ಗುರೂ ............" ಎನ್ನುತ್ತಾ ಮನೆ ಕಡೆ ನಡೆಯುವಾಗ , ಆ ಕೂಸು ಅಡ್ಡಿಲ್ಯೋ , ಇನ್ನೂ ಸ್ವಲ್ಪ ರೂಢಿ ಮಾಡ್ರೆ ಒಳ್ಳೆ ತಯಾರಾಗ್ತು ಎಂದು ನುಡಿಯುವ  ಮಾತುಗಳಿಗೆ ಅರ್ಥವಿತ್ತು.


ಇಷ್ಟು ಹೇಳಿ ಮುಗಿಸಿದರೆ , ಕೃಷ್ಣ ಪಾತ್ರಧಾರಿ ಶ್ರೀಮತಿ ಗೀತಾ ಹೆಗಡೆಯವರಿಗೆ ನ್ಯಾಯ ಒದಗಿಸಿದಂತಾಗುವದಿಲ್ಲ. ಯಕ್ಷಗಾನವನ್ನು ಅತಿ ಆಸಕ್ತಿಯಿಂದ ಬೆಳೆಸಿದರೆ ಒಬ್ಬ ಅತ್ಯುತ್ತಮ ಕಲಾವಿದೆಯಾಗಿ ಅತ್ತ್ಯುತ್ತಮ ಪುರುಷ ಕಲಾವಿದನ್ನು ಮೀರಿಸುವ ಹಂತ ತಲುಪಬಹುದಾದ ಎಲ್ಲ ಲಕ್ಷಣಗಳು ತೋರಿಬರುತ್ತಿವೆ.


ಇನ್ನು ಈ ದಿನಗಳಲ್ಲಿ ಯಕ್ಷಗಾನವನ್ನು ಅಭ್ಯಸಿಸುವ ಕಲಾವಿದರು ಹಿರಿಯ ಕಲಾವಿದರ ಡಿ.ವಿ.ಡಿ ಗಳನ್ನು ಅಧಾರವಾಗಿಟ್ಟುಕೊಳ್ಳುವದು   ಸಾಮಾನ್ಯ  ಎಂದುಕೊಂಡಿದ್ದೇನೆ.   ಪುರುಷ ಕಲಾವಿದರುಗಳು ಹೇಳುವ ದ್ವಂದ್ವಾರ್ಥದ ಮಾತುಗಳನ್ನು (ಅದೇ ಪಾತ್ರಗಳಾದರೂ) , ಸ್ತ್ರೀ ಕಲಾವಿದರು ಮಾತಿನ ಅರ್ಥಗಳನ್ನು ಅರಿಯದೆಯೋ  ಅಥವಾ ಅರೀತೂ ಆಡಿದರೆ ಪ್ರೇಕ್ಷಕರಿಗೆ ಮುಜುಗರವನ್ನುಂಟುಮಾಡುವದು ಸಹಜ. ಅದೇ ಮಾತುಗಳು ನಾಟಕದ ಸಂಭಾಷಣೆಯಂತೆ , ಕಂಟಪಾಠ ಮಾಡಿ ಒಪ್ಪಿಸುವಂತೆ ತೋರಿಬಂದರೆ ಸದಭಿರುಚಿಯ ಪ್ರೇಕ್ಷಕನಿಗಂತೂ   ಕಷ್ಟ.  ಹಿರಿಯ ಕಲಾವಿದರ ಮಾತುಗಳನ್ನು ಕಂಠಪಾಟ ಮಾಡುವಲ್ಲಿ ತೋರಿದ ಜಾಣ್ಮೆಯನ್ನು ಅಂಗಾಭಿನಯ , ಮುಖಭಾವಗಳಲ್ಲೂ ತೋರಲು ಯಶಸ್ವಿಯಾಗಿದ್ದರೆ ಪ್ರಸಂಗಕ್ಕೆ ಇನ್ನಷ್ಟು ಮೆರಗು ಬರುತ್ತಿತ್ತು.


ಅಭಿನಯದಲ್ಲಿ ತೋರಿದ ಧೈರ್ಯ, ಸ್ಥೈರ್ಯ ಅಂದರೆ confidence  on  the  stage ಎದ್ದು ಕಾಣುತ್ತಿತ್ತು. ಸ್ತ್ರೀ ಎಂಬ ಯಾವುದೇ ಅಳುಕಿಲ್ಲದೆ , ಪಾತ್ರದಲ್ಲಿ ತೊಡಗಿಸಿಕೊಂಡ ರೀತಿ ಮೆಚ್ಚುವಂತಿದೆ. team  work  spirit  ತುಂಬಾ ಚೆನ್ನಾಗಿದೆ.


ಭಾಗವತರು, ಚಂಡೆ, ಮದ್ದಲೆಯವರು ಕಲೆಯಲ್ಲಿ ನುರಿತವರಿದ್ದುದು ಯಕ್ಷಗಾನ ಪ್ರಸಂಗಕ್ಕೆ ಹೆಚ್ಚಿನ ಯಶಸ್ಸು ನೀಡುವಲ್ಲಿ ಸಹಕಾರಿಯಾಯಿತು.


ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
www.hariharbhat.blogspot.com
February 17 , 2013.

Saturday, February 16, 2013

ಹಣ ಮಾಡುವದರ ಜೊತೆ , ಸಮಾಜಮುಖಿಯಾಗುತ್ತಿರುವ ಪತ್ರಿಕಾ ಪ್ರಪಂಚ.


ಹಣ ಮಾಡುವದರ ಜೊತೆ , ಸಮಾಜಮುಖಿಯಾಗುತ್ತಿರುವ ಪತ್ರಿಕಾ ಪ್ರಪಂಚ.
============================================

 ವಿಜಯವಾಣಿ ಪತ್ರಿಕೆ ಹಾಗೂ ಸ್ಥಳೀಯ ಕಾರ್ಪೊರೇಟರ್  ರ.ಆಂಜನಪ್ಪ ಸೇರಿ ಸ್ಥಳೀಯ ಸಮಸ್ಯೆಗಳ ಕುರಿತು  ನಾಗರಿಕ ಅಹವಾಲುಗಳನ್ನು ಕೇಳುವ ಎರಡು   ತಾಸುಗಳ ಕಾರ್ಯಕ್ರಮ ಕೆಂಗೇರಿ ಉಪನಗರದ ಬ್ರಾಹ್ಮಣ ಸಭಾ ದಲ್ಲಿ ಏರ್ಪಡಿಸಿದ್ದರು.  ಕರ್ನಾಟಕ ಸರಕಾರದ  ಆರೇಳು ಡಿಪಾರ್ಟ್ಮೆಂಟ್ ಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಕುಳಿತು ನಾಗರಿಕರ ಸಮಸ್ಯೆಗಳನ್ನು ಬಿಂಬಿಸುವ ಮಾತುಗಳನ್ನು ಆಲಿಸಿದರು.



ವಿಜಯವಾಣಿ ಪತ್ರಿಕೆಯ ಸಂಪಾದಕ ತಿಮ್ಮಪ್ಪ ಭಟ್ ರವರು ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ವಿಜಯವಾಣಿ ಪತ್ರಿಕೆ , ಪತ್ರಿಕಾ ರಂಗದ ಚಟುವಟಿಕೆಗಳ ಜೊತೆ ಜೊತೆಗೆ ತನ್ನ ಪತ್ರಿಕಾ ಓದುಗರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಮಾಡುತ್ತಿದೆ. ಈ ಹಿಂದೆ ಅಕ್ಕಿ ಬೆಲೆ ಅತಿ ಏರಿಕೆ ಕಂಡಾಗ , ಬೆಂಗಳೂರು ಕಸದ ಕೊಂಪೆಯಾದಾಗ ಪತ್ರಿಕೆ ಪ್ರಮುಖವಾಗಿ ಸಮಸ್ಯೆಗಳ ಕುರಿತು ವರದಿ ಮಾಡಿ, ಸಮ್ಮಂದಿಸಿದ ಸರಕಾರೀ ಅಂಗಕ್ಕೆ  ಸಮಸ್ಯೆಗಳ ತೀವ್ರತೆಯ ಅರಿವುಂಟುಮಾಡಿದೆ . ಅದೇ ವಿಚಾರದ ಮುಂದುವರಿದ ಭಾಗವಾಗಿ ಬೆಂಗಳೂರಿನ ಎಲ್ಲಾ ವಿಭಾಗಗಳಲ್ಲಿ ನಾಗರಿಕ ಸಮಸ್ಯೆಯ ಕುರಿತು ಜನಸ್ಪಂದನ ಕಾರ್ಯಕ್ರಮಗಳನ್ನು ಏರ್ಪಡಿಸಿ, ಜನರ ಸಮಸ್ಯೆಗಳನ್ನು ಅರಿಯುವದರ ಜೊತೆಗೆ , ಸಮಸ್ಯೆಗಳ ಪರಿಹಾರಕ್ಕಾಗಿ ಮುಂದಿನ ದಿನಗಳಲಿ ಅಧಿಕಾರಿಗಳೊಂದಿಗೆ, ಸರಕಾರದೊಂದಿಗೆ follow -up action  plan   ರೂಪಿಸಿರುವದಾಗಿ ತಿಳಿಸಿದರು.




ನಾಗರಿಕರು ಒಬ್ಬೊಬ್ಬರಾಗಿ ದಿನನಿತ್ಯ ಸರಕಾರದ ವಿವಿಧ ಅಂಗಗಳಿಂದ ಅಂದರೆ  BBMP , BWSSB ,Police , revenue    ಮುಂತಾದ ವಿಭಾಗಗಳಿಂದ ಉಂಟಾಗುವ ಸಮಸ್ಯೆಗಳು , ಅಧಿಕಾರಿ - ನೌಕರ ವರ್ಗದ ಸಕಾರಾತ್ಮಕವಾಗಿ ಸ್ಪಂದಿಸದ ಧೋರಣೆಗಳು ಕುರಿತಾಗಿ ಎಳೆ ಎಳೆಯಾಗಿ ಬಿಡಿಸಿ ಮಾತನಾಡಿದರು. ಪಾದಚಾರಿಗಳ ಬಳಕೆಗೆ ಸಿಗದ  footpath  ಗಳು , ಟ್ರಾಫಿಕ್ ಸಿಗ್ನಲ್ ಗಳಲ್ಲಿ ಕಾಣದ ಪೋಲಿಸ್ ಪೇದೆಗಳು , ನಗೆ ಕೂಟದ ಸಮೀಪ ಬೇಕಾದ   ಶೌಚಾಲಯ, ಯಾವ ಮೇಲ್ವಿಚಾರಣೆಯಿಲ್ಲದ ಉದ್ಯಾನವನಗಳು, ಅರ್ಧಂಬರ್ಧ ಮುಗಿದು ಹಾಗೆಯೇ ನಿಂತು ಜನರಿಗೆ ತೊಂದರೆ ಕೊಡುತ್ತಿರುವ ಪಾಳುಬಿದ್ದಂತಿರುವ ಕಟ್ಟಡಗಳು, ಸ್ಥಳೀಯ ಜನಸಂಖ್ಯಾ ಬೆಳವಣಿಗೆಗಳಿಗೆ ಸ್ಪಂದಿಸದ BMTC, ಹೆಚ್ಚಿದ ಕಾರು ಸಂಖ್ಯೆಗನುಗುಣವಾಗಿ ಪಾರ್ಕಿಂಗ್ ಸ್ಥಳ ಲಭ್ಯವಿಲ್ಲದ ಕಾರಣ ರಸ್ತೆಯನ್ನೇ ಆಕ್ರಮಿಸಿರುವ ಮೋಟಾರ್ ಕಾರುಗಳು, ಶವ ಸಂಸ್ಕಾರಕ್ಕಾಗಿ ಲಭ್ಯಗೊಳ್ಳದ electric  crematorium , ಬೀದಿ ನಾಯಿಗಳ ಕಾಟ, ನಿಗದಿತ ಸ್ಥಳದಲ್ಲಿ ನಿಲ್ಲದ ಬಸ್ಸುಗಳು, ಕಸದ ಸಮಸ್ಯೆ, ಅಗಸರಿಗೆ ನೀರಿನ ಸಮಸ್ಯೆ, ಹದಿನೆಂಟರಿಂದ ಇಪ್ಪತ್ತೈದು  ವಯಸ್ಸಿನ ಹದಿಹರೆಯದ ಗಂಡು ಮಕ್ಕಳು ರಾತ್ರೆ ಹತ್ತರ ನಂತರ ಮಾಡುವ ಗಲಾಟೆಗಳಿಗೆ ಬ್ರೇಕ್ ಹಾಕಲು ಪೋಲಿಸ್ ವ್ಯವಸ್ಥೆ, ಸುಸಜ್ಜಿತವಾದ ವಾಚನಾಲಯ, ಕ್ರೀಡಾಂಗಣ , ತರಕಾರಿ ಮಾರುಕಟ್ಟೆ ,  ಅಧಾರ ಕಾರ್ಡ್ ವಿತರಣೆಗೆ ಸೂಕ್ತ ವ್ಯವಸ್ಥೆ, ಖಾಲಿ ಸೈಟ್ ಗಳಿಂದಾಗುವ ತೊಂದರೆಗಳು , ವೈಯಕ್ತಿಕವಾಗಿ ದ್ವೇಷ ಸಾಧಿಸಲು ರಾತ್ರೆ ಸಮಯ ಬಂದು ಮೀಟರ್ ಒಡೆದು ಹಾಕುವ ಮೀಟರ್ ರೀಡರ್ ತೊಂದರೆ , ಎರಡು   ಮೂರು ಜನ   ವಾಸಿಸುವ ಮನೆಗಳಿಗೆ ನೀಡಿದ ಹತ್ತು ಹದಿನೈದು ಸಾವಿರ ರೂಪಾಯಿಗಳ ನೀರಿನ ಬಿಲ್ಲುಗಳು , ಸಮಸ್ಯೆ ಪರಿಹರಿಸದ BWSSB , ಸೊಳ್ಳೆ ಸಮಸ್ಯೆಗಳು, ಸ್ಲಂ ಸಮಸ್ಯೆಗಳನ್ನು ಯಾರೊಬ್ಬರು ಕೇಳುತ್ತಿಲ್ಲ, ಗಮನವೀಯುವದಿಲ್ಲ ಎಂಬ ಪುಕಾರು, ಕುಡಿಯುವ ನೀರನ್ನು ಬಿಲ್ಡಿಂಗ್ ಕಟ್ಟುವವರಿಗೆ ಕೊಟ್ಟು ದುಡ್ಡು ಮಾಡುತ್ತಿರುವ watermen  ಗಳು , ಬಿಲ್ ಕಟ್ಟಲು ಬೇಕಾದ ಹೆಚ್ಚಿನ ಸಂಖ್ಯೆಯ   ಏಟಿಎಂ ಗಳು, ಅಂಗನವಾಡಿ , ಅಂಬೇಡ್ಕರ್ ಭವನಗಳ ಹೆಚ್ಚಿನ ಅವಶ್ಯಕತೆ,  ಬೆಳಗಿನ ಜಾವ ವಾಕಿಂಗ್ ಮಾಡುವವರ ಚೈನ್ ಹರಿಯುವವರನ್ನು ಮಟ್ಟ ಹಾಕಲು ಬೇಕಾದ  ಪೋಲಿಸ್ ವ್ಯವಸ್ಥೆ, ಮಧ್ಯ ಮಾರಾಟ ಅಂಗಡಿಗಳು ಹೆಚ್ಚಿ ಆರಂಭವಾಗಿರುವ ಸಮಸ್ಯೆಗಳು, BBMP  ಯಲ್ಲಿ  ಹೆಚ್ಚಿರುವ ಮಧ್ಯವರ್ತಿಗಳ ಕಾಟ, ಸರಕಾರೇತರ ಜನಗಳು ಮನೆ ಮನೆಗೆ ಬಂದು ಸರಕಾರದ ಹೆಸರು ಹೇಳಿ ವಸೂಲಿ ಮಾಡುತ್ತಿರುವ ಅನ್ಯಾಯದ ಧಂದೆ, ನಾಲ್ಕು ಮನೆಗಳಿಗೆ ನೀರು ಬರುತ್ತಿದೆ, ಐದನೇ ಮನೆಗೆ ನೀರು ಬರುವದಿಲ್ಲ , ಯಾಕ್ರೀ ಎಂದು ಸಹಜವಾಗಿ, ಮುಗ್ಧವಾಗಿ ಕಾರ್ಪೊರೇಟರ್ ಎದುರು  ನಿಂತು ಅರ್ಭಟಿಸುವ ಧೀರ ಮಹಿಳೆಯರ ಸಮಸ್ಯೆಗಳು, ಪೋಲಾಗುತ್ತಿರುವ ನೀರನ್ನು ನಿಲ್ಲಿಸಿದರೆ ಸಮಸ್ಯೆ ಪರಿಹಾರವಾಗುವದು ಎಂಬ ಸಲಹೆ ನೀಡಿ  ಬೆನ್ನು ತಟ್ಟಿಸಿಕೊಳ್ಳಬಯಸುವ   ನಾಗರಿಕರು,  ಫುಟ್ path  ಗುಂಡಿ ಮುಚ್ಚಿಲ್ಲ ಯಾಕೆ ಎಂದು ಪ್ರಶ್ನಿಸುವ ನಾಗರಿಕರು,  BBMP ಡಾಕ್ಟರ್ ಹೆಗಡೆ ಎಂದೂ ಫೋನಿಗೆ ಸಿಗುವದಿಲ್ಲ ಎಂಬ ಸಮಸ್ಯೆ, ಶ್ರೇಯಾ ಆಸ್ಪತ್ರೆ ಎದುರಿಗೆ ಎರಡು ವರ್ಷಗಳಿಂದ ರಾಶಿ ರಾಶಿ ಬಿದ್ದಿರುವ ಮರಳು, ಮಣ್ಣು , ಆಸ್ಪತ್ರೆಯ ಚರಟ ಉಂಟು ಮಾಡುವ ಸಮಸ್ಯೆಗಳು , Bulk  Waste  Disposal  problems  ,  BBMP  rain  water  harvesting ಎಂದು ಚರಂಡಿಗಳಲ್ಲಿ ಹೊಂಡ ಹೊಡೆದು ನಿಷ್ಪ್ರಯೋಜಕವಾಗಿರುವ ಕಾರ್ಯಗಳು, ಕಾರ್ಪೊರೇಟರ್ ಜನ ಸಾಮಾನ್ಯರಿಗೆ ಸಿಗಲು ಒಂದು ಸಾರ್ವಜನಿಕ ಕಾರ್ಯಾಲಯ ಬೇಕು ಎಂಬ ಬೇಡಿಕೆ, ಸಾರ್ವಜನಿಕ ಕಾರ್ಯಕ್ರಮಗಳಾದ ಅಣ್ಣಮ್ಮ ದೇವಿ ಉತ್ಸವ ಮುಂತಾದವುಗಳಲ್ಲಿ ಪೋಲುಮಾಡುವ ಸಾರ್ವಜನಿಕ ವಿದ್ಯುತ್ ಹಾಗು ನೀರು, ಒಹ್... , ಒಹ್ .... ಒಂದೇ ......  ಎರಡೇ ............ ಸಮಸ್ಯೆಗಳ ಸಾಲು ಸಾಲು ತೆರೆದುಕೊಂಡಿತು.      



ಸಾಲು ಸಾಲು ಸಮಸ್ಯೆಗಳನ್ನು ಕೇಳಿಸಿಕೊಳ್ಳುತ್ತ ಮಧ್ಯೆ ಮಧ್ಯೆ ಉಪಸಂಪಾದಕ ಕೋಣೆಮನೆಯವರು ಇದು ನಿರಂತರ ಕಾರ್ಯಕ್ರಮ , ನಿಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯುವವರೆಗೂ ಬಿಡುವದಿಲ್ಲ ಎಂಬ ಆಶ್ವಾಸನೆ ನೀಡುತ್ತ, ಹೊಸ ಹೊಸ ಸಮಸ್ಯೆಗಳು ತೆರೆದುಕೊಂಡಾಗ ವಿಜಯವಾಣಿಯ newsblr@vijayavaani.in  ಗೆ ಪತ್ರ ಬರೆಯಿರಿ ಎಂದು ಜನಸಾಮಾನ್ಯರಲ್ಲಿ ಕನಸು ಬಿತ್ತಿದರು.




 ಎಲ್ಲ ಸಮಸ್ಯೆಗಳನ್ನು ಕೇಳಿಸಿಕೊಂಡ ಸ್ಥಳೀಯ ಕಾರ್ಪೊರೇಟರ್ ಆಂಜನಪ್ಪ ರವರು, ನಾನು ಶಕ್ತಿ ಮೀರಿ ಕೆಲಸ ಮಾಡುತ್ತಿದ್ದೇನೆ, ಸರಕಾರೀ ಅಧಿಕಾರಿಗಳಿಂದ ನಿರೀಕ್ಷಿತ ಸಹಕಾರ ಸಿಗುತ್ತಿಲ್ಲ, BBMP ಮೀಟಿಂಗ್ ಗಳಲ್ಲಿ ತೆಗೆದುಕೊಂಡ ನಿರ್ಣಯಗಳು ಜಾರಿಗೆ ಬರುತ್ತಿಲ್ಲ, ಆದರೂ  ಇವೆಲ್ಲ ಪರಿಸ್ಥಿತಿಗಳ ಮಧ್ಯೆಯೂ ಕ್ರೀಡಾಂಗಣ ಉಳಿಸಿಕೊಂಡು ಅಭಿವ್ರದ್ಧಿ ಮಾಡುತ್ತಿದ್ದೇವೆ, ಹೊಸಕೆರೆ ಹಳ್ಳಿ ಕೆರೆಯ ಸ್ವಚ್ಚತೆ ಕಾರ್ಯ ನಡೆಯುತ್ತಿದೆ , ತಮ್ಮೆಲ್ಲರ ಸಹಕಾರ ಬೇಕು ಎಂದು ಮಾತು ಮುಗಿಸಿದರು.




ಸಂಪಾದಕ ತಿಮ್ಮಪ್ಪ ಭಟ್ ರವರು ಪುನಃ ಮಾತನಾಡಿ , ನಾವೀಗ ಬದಲಾವಣೆಯ ಪರ್ವ ಕಾಲದಲ್ಲಿದ್ದೇವೆ, ನಾಗರಿಕ ಸಮಾಜವಾಗಿ ಬದುಕಲು ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲೇಬೇಕು, ಈಗ ಈ ಸಮಸ್ಯೆಗಳನ್ನು ಪರಿಹರಿಸಿದರೆ ಮುಂದಿನ ಜನಾಂಗ ಸುವ್ಯವಸ್ಥಿತವಾಗಿ ಬದುಕಲು ಅನುವು ಮಾಡಿಕೊಟ್ಟಂತಾಗುತ್ತದೆ.  ಆ ದಿಶೆಯಲ್ಲಿ ಪತ್ರಿಕೋದ್ಯಮ, ವರದಿಗಳನ್ನು ಮಾಡುವ ಚಟುವಟಿಕೆಯೊಂದಿಗೆ , ಆಚೆ ತನ್ನನ್ನು ತೆರೆದುಕೊಂಡು ಅಭಿವ್ರದ್ಧಿಯ ಹರಿಕಾರನಾಗುವ ದಿಶೆಯಲ್ಲಿ ನಾವು ಈ ಕಾರ್ಯಕ್ರಮ ಹಮ್ಮಿಕೊಳ್ಳುತ್ತಲಿದ್ದೇವೆ.  ತಾವೆಲ್ಲಾ ಸ್ಪಂದಿಸಿ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತನ್ನಿ, ನಾವು ಪರಿಹಾರ ಕಂಡುಕೊಳ್ಳಲು ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದು ತದನಂತರ ಏನಾಯಿತೆಂದು ವಿಚಾರಿಸುತ್ತಾ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದೇ ತೀರುತ್ತೇವೆ ಎಂಬ ವಿಶ್ವಾಸವನ್ನಿತ್ತರು.




ಹರಿಹರ ಭಟ್, ಬೆಂಗಳೂರು,
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
www.hariharbhat .blogspot.com
February 16, 2013.

Friday, February 15, 2013

ರಮಾನಂದ ಐನಕೈಯವರು


ರಮಾನಂದ ಐನಕೈಯವರು ಹೇಳುವ ನಾನು, ನಾವು ಕಾನ್ಸೆಪ್ಟ್ ಈ ದೇಶವನ್ನು ಬೇರೆ ದೇಶಗಳಿಂದ ವಿಭಿನ್ನವಾಗಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ. ವಿಷಾದನೀಯ ಸಂಗತಿಯೆಂದರೆ ನಮ್ಮ ಪೂರ್ವಜರು ಸಾಧಿಸಿದ್ದಷ್ಟನ್ನೇ   ಆಧಾರವಾಗಿಸಿ ಈ ಎರಡು ಶತಮಾನಗಳಲ್ಲಿ ಡಾಲರ್ಸ್ ಕಾಲೋನಿ ಯಲ್ಲಿ  ಮಠ ಕಟ್ಟುವ ಮಂದಿ, ಡಾಲರ್ಸ್ ಕಾಲೋನಿ ಯಲ್ಲಿ ಸೈಟ್ ಗಿಟ್ಟಿಸುವ ಸಾಹಿತಿಗಳು ಹೆಚ್ಚಿನವರಾಗಿದ್ದಾರೆ. ಡಾಲರ್ಸ್ ಜೋಬಿನಲ್ಲಿಟ್ಟಿದ್ದಾರೆ ಎಂದರೆ ಕರೆದು ಸನ್ಮಾನಿಸುವ , ಆಶೀರ್ವದಿಸುವ ಮತ್ತು ಆ ಡಾಲರ್ಸ್ ಪತಿಗಳ ಇಶಾರೆಗೆ ನರ್ತಿಸುವ ಸ್ವಾಮಿeಜಿಗಳ ದಂಡೇ ಈ ಎರಡು ಶತಮಾನಗಳಲ್ಲಿ ಹುಟ್ಟಿಕೊಂಡಿದ್ದಾರೆ. ಹಾಗಾದರೆ ಸನಾತನ ಧರ್ಮದಲ್ಲಿ ಹೇಳಿದಂತಹ ಅಧ್ಯಾತ್ಮವನ್ನು ಅನೂಚಾನಾಗಿ ಅನುಸರಿಸುವವರು ಇಲ್ಲವೇ ಎಂದರೆ ಇದ್ದಾರೆ ಎಂಬ ಉತ್ತರವಿದೆ. ಅವರೆಲ್ಲ ತಮ್ಮ ತಮ್ಮ ಆಧ್ಯಾತ್ಮಿಕ ಸಾಧನೆಗಳಿಗಾಗಿ ದೂರದ , ಜನಸಂಪರ್ಕವಿಲ್ಲದ ಗುಡ್ಡ ಗಾಡುಗಳಲ್ಲಿ ಕಂದ ಮೂಲಾಹಾರಗಳನ್ನು ಸೇವಿಸುತ್ತ ಸಾಧನೆಗೈಯುತ್ತಿದ್ದಾರೆ. ಈ ಹೇಳಿಕೆಯ ಸತ್ಯಾಸತ್ಯತೆಯನ್ನರಿಯಲು ಒಮ್ಮೆ ಹನ್ನೆರಡು ವಷಗಳಿಗೊಮ್ಮೆ ನಡೆಯುವ ಕುಂಭ ಮೇಳದತ್ತ ನೋಟ ಹರಿಸಬೇಕು. ಅಲ್ಲಿ ಈ ದೇಶದ ಸನಾತನೀಯ ಸಂಪತ್ತಾದ ಆಧ್ಯಾತ್ಮಿಕ ಪ್ರಗತಿಯನ್ನು ಕಾಣಬಹುದು.  ಮತ್ತೆ ಅಲ್ಲಿಯೂ ಟೊಯೋಟಾ, ಫೋರ್ಸ್ ಒನ್, ವೊಲ್ಕ್ಸ್ ವ್ಯಾಗನ್ ಐಶಾರಾಮೀ ವಾಹನಗಳಲ್ಲಿ ಸುತ್ತಾಡುವ ಸ್ವಾಮೀಜಿಗಳ ಬಗೆಗೆ ನಾನು ಹೇಳಿದ್ದಲ್ಲ.




ಇನ್ನು ಐನಕೈಯವರು ಪ್ರಸ್ತಾಪಿಸುವ ವಿಷಯದಲ್ಲಿ ಬಹಳ ಅಂಶಗಳನ್ನು ಹೇಳಿಲ್ಲ. ಸುಮಾರು ಒಂದು, ಒಂದೂವರೆ ಸಾವಿರ ವರ್ಷಗಳ ಜಾಗತಿಕ ಇತಿಹಾಸ, ಜನಸಂಖ್ಯಾ ಅಂಕಿ ಅಂಶಗಳನ್ನು ಅವಲೋಕಿಸಿದರೆ, ಯಾವತ್ತೂ ಯುರೇಸಿಯಾ ( ಏಷ್ಯಾ ಅಂಡ್ ಯುರೋಪ್ ಖಂಡಗಳು ಸೇರಿ ಯುರೇಸಿಯಾ ಎನ್ನುತ್ತಾರೆ.  ) ಜನಸಂಖ್ಯೆ ಜಾಗತಿಕ ಜನಸಂಕ್ಯೆಯ ಬಹುಪಾಲು ಒಳಗೊಂಡಿದೆ. ಜನಸಂಖ್ಯೆ ಜಾಸ್ತಿಯಿರುವ ಪ್ರದೇಶಗಳಲ್ಲಿ ಒಬ್ಬ ದುಡಿದರೆ ಹಲವಾರು ಮನೆ ಮಂದಿ ಆ ದುಡಿತದ ಆದಾಯವನ್ನವಲಂಬಿಸಿ ಬದುಕುತ್ತಾರೆ. ಅದೇ ಜನಸಂಕ್ಯೆ ಕಡಿಮೆ ಇರುವ ಪ್ರದೇಶದಲ್ಲಿ ಪ್ರತಿಯೊಬ್ಬರೂ ದುಡಿಯುವ ಅವಕಾಶಗಳು ಜಾಸ್ತಿ ಇರುತ್ತವೆ ಮತ್ತು  ಜೀವನ ಪರಿಸ್ತಿತಿಗಳು ಪ್ರತಿಯೊಬ್ಬರನ್ನು ದುಡಿಯಲು ಹಚ್ಚುತ್ತವೆ. ಜಾಗತಿಕ ಭೌಗೋಲಿಕ ಸ್ತಿತಿ ಗತಿಗಳನ್ನು ಅವಲೋಕಿಸಿದರೆ , ಪಾಶ್ಚಿಮಾತ್ಯ ಪ್ರದೇಶಗಳಲ್ಲಿ ಆಗಾಗ ಬಂದೊದಗುವ ಪ್ರಕ್ರತಿ ವಿಕೋಪಗಳನ್ನು ಗಮನಿಸಿದಾಗ , ಪುನಶ್ಚೇತನ ಕಾರ್ಯಗಳಿಗೆ ಬಹು ಶ್ರಮ ಮತ್ತು ಧನ, ಸಂಪತ್ತು ಆಗಾಗ ವಿನಿಯೋಗವಾಗುವದರಿಂದ ಧನ ಗಳಿಕೆಗೆ ಹೆಚ್ಚಿನ ಒತ್ತು  ಕೊಡುವ ಅವಶ್ಯಕತೆಯೂ ಆ ಪ್ರದೇಶಗಳಲ್ಲಿರುತ್ತವೆ. ಈ ಎಲ್ಲ ಅಂಶಗಳೂ ದಿನ ನಿತ್ಯದ ಜೀವನ ಪದ್ಧತಿಯ ಮೇಲೆ ಪ್ರಭಾವ ಬೀರುತ್ತವೆ ಹಾಗು ಜೀವನ  ಪದ್ಧತಿಯನ್ನು ರೂಪಿಸುತ್ತವೆ.




ಇನ್ನೊಂದು ಅಂಶ ಆಲಸ್ಯದ ಬಗ್ಗೆ. ಭೂ ಮಧ್ಯ ರೇಖೆಯ ಸುತ್ತ ಮುತ್ತ ವಾಸಿಸುವ ಜನಾಂಗದ ಜನರು ಸೂರ್ಯ ಕಿರಣಗಳನ್ನು ನೇರವಾಗಿ ಪಡೆಯುವದರಿಂದ ಅಲ್ಲಿಯ ಜನರ ಚರ್ಮ ಸದಾ ಕಪ್ಪು ಬಣ್ಣದಿಂದಿರುತ್ತದೆ. ಆದರೆ ಆ ಜನರು ಸದಾ ಚುರುಕಾಗಿ , ಹೆಚ್ಚಿನ ದೈಹಿಕ ಶಕ್ತಿಯನ್ನು ಹೊಂದಿ , ಹೆಚ್ಚಿನ ಆಯಸ್ಸನ್ನು ಪಡೆದು ಬದುಕುತ್ತಾರೆ.  ಅದೇ ಭೂಮಧ್ಯ ರೇಖೆಯಿಂದ  ದೂರವಿರುವ, ದಟ್ಟ ಅರಣ್ಯ ಪ್ರದೇಶದಲ್ಲಿ ಬದುಕುವ ಜನರು ಆಲಸ್ಯದಿಂದೊಡಗೂಡಿ , ರೋಗ ರುಜನಿಗಳಿಗೊಳಗಾಗಿ ಸರ್ವೇ ಸಾಮಾನ್ಯವಾಗಿ ಕಡಿಮೆ ಅಯುರ್ದಾಯ ಹೊಂದಿದವರಾಗಿರುತ್ತಾರೆ. ಯಾವುದೇ ಪೂರ್ವಾಗ್ರಹವಿಲ್ಲದೆ, ಕೇವಲ ಅಭ್ಯಾಸದ ದೃಷ್ಟಿಯಿಂದ ಯೋಚಿಸುವದಾದರೆ ಸರಳ ಉದಾಹರಣೆಯಾಗಿ ನಮ್ಮ ಕರಾವಳಿ ಪ್ರದೇಶ ಮತ್ತು ಮಲೆನಾಡು ಪ್ರದೇಶವನ್ನು ಹೆಸರಿಸಬಹುದು.




ಸಾಕು, ಸಾಕು, ವಿಮರ್ಶೆಯೇ ಲೇಖನಕ್ಕಿಂತ  ಉದ್ದವಾಗಬಾರದು.  ಲೇಖನ ಓದಲು ಈ ಲಿಂಕ್ ಬಳಸಿ:
http://epapervijayavani.in/Details.aspx?id=3924&boxid=3145437



ಹಾಗೆ ರಮಾನಂದ ಐನಕೈರವರು ನನಗೆ ವೈಯಕ್ತಿಕವಾಗಿ ಪರಿಚಯವಿಲ್ಲ. ನಿಮ್ಮಲ್ಯಾರಿಗಾದರೂ ಪರಿಚಯವಿದ್ದರೆ ಈ ವಿಮರ್ಶಾತ್ಮಕ ಮಾತುಗಳನ್ನು ಅವರ ಗಮನಕ್ಕೆ ತನ್ನಿ.




ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
www.hariharbhat.blogspot.com
February 16 , 2013.

ಅಗ್ನಿ ಶ್ರೀಧರ್ ರವರ " ಅಫ್ಜಲ್ ಗುರು : ದೇಶ ರಕ್ಷಕರ ಕುತಂತ್ರ


ಪ್ರತಿಯೊಂದು ವಿಷಯದಲ್ಲೂ ನಾವು ನಮ್ಮದೇ ಆದ ಅಭಿಪ್ರಾಯ ರೂಢಿಸಿಕೊಳ್ಳಬೇಕು . ನಮ್ಮ ಅಭಿಪ್ರಾಯಗಳಿಗೆ ಸರಿಹೊಂದದ ಅಥವಾ ಬೇರೆ ರೀತಿಯ ಅಭಿಪ್ರಾಯಗಳು ಬಂದಾಗ ತುಲನಾತ್ಮಕವಾಗಿ ಅಭಿಪ್ರಾಯಗಳನ್ನು ಅಭ್ಯಸಿಸುವ ಮನೋಭಾವ ಹೊಂದಿರಬೇಕು . ಆದಾಗ ಮಾತ್ರ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅನುಕೂಲ. ನಾವು ಅಭ್ಯಾಸಿ ಮನೋಭಾನೆಯನ್ನು ರೂಢಿಸಿಕೊಳ್ಳದಿದ್ದರೆ , ಕಾಲ ಕ್ರಮೇಣ ಮೂಲಭೂತವಾದಿಗಳಾಗಿ ನಮಗರಿವಿಲ್ಲದೆ ಪರಿವರ್ತಿತವಾಗುತ್ತೇವೆ . ಜೊತೆಗೆ ನಿಂತ ನೀರಾದ ನಮ್ಮ ಮನಸ್ಸು, ಬುದ್ಧಿ ಯೋಚನಾಶಕ್ತಿಯನ್ನೇ  ಕಳೆದುಕೊಂಡು ಮೊಂಡುವಾದಿಗಳಾಗುತ್ತೇವೆ.

 

ನಾನೊಂದು ಲೇಖನವನ್ನು ಹೆಸರಿಸುತ್ತೇನೆ. ನೀವು ಆ ಲೇಖನದ ಪಾತ್ರಗಳ ಹೆಸರುಗಳನ್ನು ಅ ,ಬ, ಕ, ಡ .... ( A, B, C, D ............... ) ಎಂದು ಬದಲಾಯಿಸಿ ಯಾವುದೇ ಪೂರ್ವಾನುಗ್ರಹಗಳಿಲ್ಲದೆ ಓದಿ. ಚರ್ಚಿಸಿರುವ ವಿಷಯ, ಚರ್ಚೆಯ ವಿಧಾನ ನಿಮಗೆ ತುಂಬಾ ಹಿಡಿಸೀತು ಎಂಬ ಅಭಿಪ್ರಾಯ ಎನಗೆ.  ನಾನು ಎಲ್ಲಾ ರೀತಿಯ ವಿಷಯಗಳ , ಎಲ್ಲಾ ಮನೋಭಾವದ ಲೇಖಕರ ಲೇಖನಗಳನ್ನು ಪೂರ್ವಾಗ್ರಹವಿಲ್ಲದೇ ಓದುತ್ತೇನೆ. ನನ್ನದೇ ಆದ ಸ್ವಂತ ಅಭಿಪ್ರಾಯವನ್ನು  ಮೂಡಿಸಿಕೊಳ್ಳುತ್ತೇನೆ.



ಇಂದಿನ ಕನ್ನಡ ಪ್ರಭ ದಿನ ಪತ್ರಿಕೆಯ ಪುಟ 9  ರಲ್ಲಿರುವ  ಅಗ್ನಿ ಶ್ರೀಧರ್ ರವರ " ಅಫ್ಜಲ್  ಗುರು : ದೇಶ ರಕ್ಷಕರ ಕುತಂತ್ರ " ಓದಿದಾಗ , ನಿಮಗೂ ಓದುವಂತೆ ಕೇಳಿಕೊಳ್ಳಬೇಕೆನಿಸಿ ಬರೆದಿದ್ದೇನೆ.



ಇಲ್ಲಿ ಲೇಖನದಲ್ಲಿರುವ ಅಭಿಪ್ರಾಯ ನಾನು ಅನುಮೋದಿಸುತ್ತಿದ್ದೇನೆ ಅಥವಾ ಅನುಮೋದಿಸುತ್ತಿಲ್ಲ ಎಂದುಕೊಳ್ಳಬೇಕಿಲ್ಲ.  

Thursday, February 14, 2013

ಮಂತ್ರಿಯೊಬ್ಬ ಸದಾ ಸೂಳೆಯರ ಸಹವಾಸದಲ್ಲಿರುತ್ತಿದ್ದ.


ಈವತ್ತು ಒಂದು ದಿನಪತ್ರಿಕೆಯಲ್ಲಿ ಒಂದು ಒಳ್ಳೆಯ ಲೇಖನ ಓದಿದೆ. ಸರಕಾರದ ಹಗರಣಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಚಿತ್ರಣ.  ಬಹಳ  ಅಭಿಮಾನದಿಂದ ಲೇಖಕನಿಗೆ  ಒಮ್ಮೆ ಅಭಿನಂದಿಸೋಣ ಎಂದು ಒಂದುವರೆ ಪುಟದ ಪತ್ರ ಬರೆದೆ.



ಯಾಕೋ ಮನಸ್ಸು ಖಿನ್ನವಾಯಿತು . ಕಳೆದ ವಾರ, ಪತ್ರಿಕೆಗಳಲ್ಲಿ ಹಣ ನೀಡಿ ಅಥವಾ ಇನ್ನ್ಯಾವದೋ ಮುಲಾಜಿಗೆ ಒಳಗಾಗುವಂತೆ ಮಾಡಿ ಪತ್ರಿಕೆಯವರನ್ನು ಖರೀದಿಸುತ್ತಾರೆ , ಅದೇ ಪ್ರಕಾರ ಇಂದಿನ ದಿನಗಳಲ್ಲಿ ಆ ಪ್ರಭಾವಗಳಿಗೆ ಒಳಗಾಗಿ ತಮ್ಮನ್ನು ತಾವೇ ಮಾರಿಕೊಳ್ಳುವ ಪತ್ರಿಕಾ ಮಂದಿ ಜಾಸ್ತಿಯಾಗುತ್ತಿದ್ದಾರೆ , ಎಂಬ ವರದಿಯು ನೆನಪಾಯಿತು.



ಸಮಾಜ ಏನು , ಎತ್ತ ಎಂಬುದನ್ನು ಯೋಚಿಸಿದರೆ ಗಾಬರಿಯಾಗುತ್ತದೆ.  ಯೋಚನೆಯೇ ಮಾಡದೆ ಗಾಳಿ ಬಂದತ್ತ ತೂರಿಕೊಳ್ಳುವ ಮಂದಿಯನ್ನು ನೋಡಿ ಮೈ ಉರಿದುಕೊಳ್ಳುತ್ತದೆ .  ಯಾವುದೋ ಒಂದು ಕಥೆ ನೆನಪಾಗುತ್ತಿದೆ: ಪ್ರಭಾವಿ ಮಂತ್ರಿಯೊಬ್ಬ ಸದಾ ಸೂಳೆಯರ ಸಹವಾಸದಲ್ಲಿರುತ್ತಿದ್ದ. ಇದರಿಂದ ಅವನ ರಾಜ್ಯದಲ್ಲಿ ಸೂಳೆಗಾರಿಕೆ ಅವ್ಯಾಹತವಾಗಿ ನಡೆದುಬಂದಿತ್ತು. ಒಂದು ದಿನ ಆ ಮಂತ್ರಿ ತನ್ನ ಗೌಪ್ಯ ಅರಮನೆಯಲ್ಲಿ ಹೆಣ್ಣೊಂದನ್ನು ಸೇರಬೇಕೆಂದು ಹೋದಾಗ , ಹಸೆಯಲ್ಲಿ ಅವನಿಗಾಗಿ ಕಾಯುತ್ತಿದ್ದ ಹೆಣ್ಣು ಆ ಮಂತ್ರಿಯ ಮಗಳಾಗಿದ್ದಳು !!!



ಬೆಂಗಳೂರಿನ ರಸ್ತೆಯ ಚರಂಡಿಗಳಲ್ಲಿ ಮಳೆಕೊಯ್ಲು ಎಂಬ ಯೋಜನೆಯಲ್ಲಿ ಹತ್ತು ಮಾರುಗಳಿಗೊಂದು ಹೊಂಡ ಹೊಡೆದು , ಜೆಲ್ಲಿ ಕಲ್ಲಿಗಳನ್ನು ತುಂಬಿದ್ದರು. ಆ ಮೇಲೆ ಜೋರಾಗಿ ಮಳೆ ಬಂದಾಗ ಮಣ್ಣು ಕೊಚ್ಚಿ ಬಂದು ಮೊದಲಿನಂತಾಗಿ  ನೀರು ಇಂಗುವದು ನಿಂತು ಹೋಗಿದೆ. ಅಲ್ಲಿಗೆ ಯಾವುದು ಏನಾಯ್ತು ಎಂದು ಯೋಚಿಸುವ ಪರಿಪಾಠವೇ ಇಲ್ಲದ ಯೋಜನೆಯೊಂದು ಮುಗಿದುಹೋಯಿತು. ಈ ಯೋಜನೆಯಂತೆ ಕೆಲಸ ನಡೆಯುತ್ತಿದ್ದಾಗ ನಾನು ಒಬ್ಬ ಗುತ್ತಿಗೆದಾರನನ್ನು ಮಾತನಾಡಿಸಿದೆ. ಒಂದು ಹೊಂಡದ ಕೆಲಸಕ್ಕೆ ನಾಲಕ್ಕುವರೆ ಸಾವಿರ ರೂಪಾಯಿ ಬಿಲ್ಲು ಮಾಡುತ್ತಾರೆ ಎಂದನು. ಎರಡು ಕೂಲಿ, ಒಂದು ದಿನದ ಕೆಲಸ, ಮುಕ್ಕಾಲು ಫುಟ್ ಅಗಲ, ಎರಡು ಫುಟ್ ಉದ್ದ ಮೂರು ಫುಟ್ ಆಳವಿರುವ ಹೊಂಡ ಈ ಕೆಲಸಕ್ಕೆ ನಾವು , ನೀವು ನೀಡಬಹುದಾದ ಹಣ ಒಂದು ಸಾವಿರ ರೂಪಾಯಿ ಅಂದಾಜು. ಸರಕಾರೀ ಸಂಸ್ಥೆಯ ಲೆಕ್ಕದಲ್ಲಿ ನಾಲಕ್ಕು ವರೆ ಸಾವಿರ ರೂಪಾಯಿಗಳು !!!!!  ಉಳಿದ ಹಣ ಎಲ್ಲಿ ಹೋಗುತ್ತದೆ ಎಂದು ಆ ಗುತ್ತಿಗೆದಾರನನ್ನು ಕೇಳಿದೆ , ಏನ್ ಸರ್, ತಮಾಷೆ , ಮಾಡ್ತೀರಾ, ನಿಮಗೆಲ್ಲ ಗೊತ್ತಿದೆ ಎಂದು ನಗುತ್ತಾನವನು.  



ಯೋಚನೆಯೇ ಮಾಡದೆ ಬದುಕುವ ಜನರನ್ನು ನೋಡಿ ಒಮ್ಮೊಮ್ಮೆ ಅಸೂಹೆಯಾಗುತ್ತದೆ. ಬಂದದ್ದು ಬಂದಂತೆ ಎಂದು ಬದುಕುವ ಆ ರೀತಿ ಜನರು ಸುಖವಾಗಿದ್ದಾರೆ, ಸುಖವಾಗಿರುತ್ತಾರೆ ಎನಿಸುತ್ತದೆಯೇ?
ಇದೇ ರೀತಿ ಬೆಳವಣಿಗೆಗಳು ಸಾಗಿದಾಗ ಬರುವ ನಾಳೆಗಳಲ್ಲಿ ಬದುಕುವ ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ನೆಮ್ಮದಿಯಿಂದ ಬದುಕಬಹುದೇ?



ಮೇಲೆ ಹೇಳಿದ ಲೇಖಕನಿಗೆ ಬರೆದ ಅಭಿನಂದನಾ ಪತ್ರವನ್ನು ಕಳಿಸಲು ಮನಸ್ಸಾಗದೆ ಡಿಲೀಟ್( delete  ) ಮಾಡಿದೆ.




ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
www.hariharbhat.blogspot.com
February 15, 2013.


Wednesday, February 13, 2013

ಮತ ಚಲಾಯಿಸಲು ಒಂದು ಪ್ರಮಾಣದ ಶೈಕ್ಷಣಿಕ ಅರ್ಹತೆ


ನಮ್ಮ ವ್ಯವಸ್ಥೆಯಲ್ಲಿ ಎಡಗೈ ಹೆಬ್ಬೆಟ್ಟಿನ ಗುರುತಿನವರಿಂದ ಹಿಡಿದು ಅತಿ ಹೆಚ್ಚಿನ ಶಿಕ್ಷಣ ಪಡೆದವರೂ ಪ್ರಜಾ ಪ್ರತಿನಿಧಿಗಳಾಗುತ್ತಾರೆ. ಅಂದರೆ ಎಂ.ಎಲ್.ಎ / ಎಂ.ಪಿ /ಮಂತ್ರಿ ಗಳು. ಯಾವುದಾದರೂ ಅನಪೇಕ್ಷಣೀಯ   ಘಟನೆಗಳು ನಡೆದಾಗ ವಿಶ್ರಾಂತ ( ರಿಟೈರ್ಡ್ ) ನ್ಯಾಯಾಧೀಶರ ಆಯೋಗವನ್ನು ರಚಿಸಿ ವರದಿ ಕೇಳುತ್ತಾರೆ. ಆ ನ್ಯಾಯಾಧೀಶರು ಇಪ್ಪತ್ತರಿಂದ ಇಪ್ಪತ್ತೈದು ವರ್ಷಗಳ ಕಾಲ ಶಿಕ್ಷಣ ಪಡೆದು, ತದನಂತರ ಇಪ್ಪತ್ತೈದು ಮೂವತ್ತು ವರ್ಷಗಳ ಕಾಲ ನ್ಯಾಯ ನಿರ್ವಹಣೆಯ ಕೆಲಸಗಳನ್ನು ಪೂರೈಸಿ ವಿಶ್ರಾಂತರಾಗಿರುತ್ತಾರೆ. ಈ ರೀತಿ ಅನುಭವ, ಶೈಕ್ಷಣಿಕ ಸಂಪನ್ನತೆ ಇರುವ ನ್ಯಾಯಾಧೀಶರು ನೀಡಿದ ವರದಿಯನ್ನು ಸ್ವೀಕರಿಸಬೇಕೆ , ಬೇಡವೇ , ಸ್ವೀಕರಿಸುವದಾದರೆ  ಸಂಪೂರ್ಣವಾಗಿ ಸ್ವೀಕರಿಸಬೇಕೆ , ಇಲ್ಲವಾದರೆ   ಯಾವ  ಯಾವ ಅಂಶಗಳನ್ನು ಸ್ವೀಕರಿಸಬೇಕು , ಅಥವಾ ಸಂಪೂರ್ಣ ವರದಿಯನ್ನೇ ಸ್ವೀಕರಿಸದಿರಬೇಕೇ ಎಂಬ ನಿರ್ಣಯವನ್ನು   ಕೈಗೊಳ್ಳುವವರು ಈ ಎಡಗೈ ಹೆಬ್ಬೆಟ್ಟಿನ ಮಂದಿ ಅಥವಾ ಎಡಗೈ ಹೆಬ್ಬೆಟ್ಟಿನ ಮಂದಿ ಕೈಗೊಳ್ಳುವಂತಹ ನಿರ್ಣಯ ಕೈಗೊಳ್ಳುವ ಜಾಯಮಾನದವರು. ಅಂದರೆ ಮಂತ್ರಿ ಮಹಾಶಯರು. ಈ ಮಂತ್ರಿ ಮಹಾಶಯರಿಗೆ ಸಲಹೆಗಳನ್ನು ಕೊಡುವ ಅಧಿಕಾರಿ ವಲಯದಲ್ಲಿರುವವರೇ ನಿರ್ಣಯ ತೆಗೆದುಕೊಳ್ಳುವವರು.


ಈ ರೀತಿ ವ್ಯವಸ್ಥೆ ಇರುವ  ಸಮಾಜದಲ್ಲಿ ಯಾವ ರೀತಿಯ ಸಹಜ ನ್ಯಾಯ ( natural  justice  ) ಪಡೆಯುವದು ಸಾಧ್ಯ. ಹೀಗಿರುವಾಗ ಮತ ಚಲಾಯಿಸಲು ಒಂದು ಪ್ರಮಾಣದ ಶೈಕ್ಷಣಿಕ ಅರ್ಹತೆ  ನಿಗದಿಪಡಿಸುವ ಅವಶ್ಯಕತೆ ಇದೆಯಲ್ಲವೇ?  ಮಂತ್ರಿಗಳಾಗಲು , ಮಂತ್ರಿಗಳಾಗಿ ತಮ್ಮ ಕೆಲಸ ನಿರ್ವಹಿಸುವಾಗ ತಮಗೆ ಅಧಿಕಾರಿ ವರ್ಗ ನೀಡಿದ ಸಲಹೆಗಳನ್ನು ಅರ್ಥೈಸಿ , ಯೋಗ್ಯ ನಿರ್ಣಯ ಕೈಕೊಳ್ಳುವ ಸಾಮರ್ಥ್ಯ ಪಡೆಯಲು ಶಿಕ್ಷಣ ಮೂಲಭೂತವಾಗಿ ಬೇಕಲ್ಲವೇ? ಇಂದು ಸ್ವಾತಂತ್ರೋತ್ತರ ಕಾಲದಲ್ಲಿ ಸಮಾಜದ ಎಲ್ಲ ಜನಾಂಗಗಳು ಹೆಚ್ಚಿನ ಶಿಕ್ಷಣ ಪಡೆದ ಯುವ ಜನಾಂಗವನ್ನು ಹೊಂದಿರುವ ವರ್ತಮಾನದಲ್ಲಿ ಸೂಕ್ತ ಬದಲಾವಣೆಗಳಿಗೆ ಯೋಚಿಸುವದೊಳ್ಳೆಯದಲ್ಲವೆ  ?


ಏನಂತೀರಿ ?



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
www .hariharbhat .blogspot .com
 

ಕುಲಪತಿ ನೇಮಕಕ್ಕೆ ರೂ. ಆರು ಕೋಟಿ !!!!!!!!!!!!!!!!!!!!


ಕುಲಪತಿ ನೇಮಕಕ್ಕೆ  ರೂ. ಆರು   ಕೋಟಿ !!!!!!!!!!!!!!!!!!!!

ವಿಧಾನ ಪರಿಷತ್ ಸದಸ್ಯ ಪಿ.ವಿ ಕೃಷ್ಣ ಭಟ್ ರವರು ಸದನದಲ್ಲಿ ಈ ಹೇಳಿಕೆ ನೀಡಿದ್ದಾರೆ. ' ಇತ್ತೀಚೆಗೆ ರಾಜ್ಯದ ಪ್ರತಿಷ್ಟಿತ ವಿವಿ ಗೆ  ಕುಲಪತಿ ನೇಮಕ ನಡೆಯಿತು. ಈ ಸಂದರ್ಭದಲ್ಲಿ ಒಬ್ಬ ಮಹಿಳೆ ಹೆಸರು ಅಂತಿಮ ಪಟ್ಟಿಗೆ ಆಯ್ಕೆಯಾಗಿತ್ತು. ಆಕೆ ನನ್ನ ಬಳಿ ಬಂದು ಹೀಗೆ ಅಲವತ್ತು ಕೊಂಡರು, ನೇಮಕಕ್ಕೆ ರೂಪಾಯಿ ಆರು ಕೋಟಿ ಕೇಳುತ್ತಿದ್ದಾರೆ. ನಾನೇನು ಮಾಡಲಿ ?'  ಆದರೆ ನನ್ನ ಬಳಿ ಉತ್ತರವಿರಲಿಲ್ಲ. ಕೊನೆಗೆ ಆಕೆಯ ನೇಮಕವಾಗಲಿಲ್ಲ. ಹಾಗಿದ್ದರೆ ನೇಮಕಕ್ಕೆ ಇನ್ನೂ ದೊಡ್ಡ ಡೀಲ್ ನಡೆಯಿತೆ ? ಕುಲಪತಿ ಹುದ್ದೆಗಳು ಹೀಗೆ ಬಿಕರಿಯಾದರೆ ಹೇಗೆ? ಎಂದು ಕಟುವಾಗಿ ಸರಕಾರವನ್ನು ಪ್ರಶ್ನಿಸಿದ್ದಾರೆ. ಈ ಮೂಲಕ ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಕ್ಕೆ ವ್ಯವಹಾರ ನಡೆಯುತ್ತಿದೆ  ಎನ್ನುವದನ್ನು ವಿಧಾನ ಪರಿಷತ್ತಿನಲ್ಲಿಯೇ  ಬಹಿರಂಗಪಡಿಸಿದಂತಾಗಿದೆ .

ಕನ್ನಡ ಪ್ರಭ ಇಂದಿನ ಪತ್ರಿಕೆ ಯಲ್ಲಿ ಪ್ರಕಟವಾಗಿದೆ.

ನಾವು ಯಾವ ರೀತಿಯ ಪ್ರಜಾಪ್ರಭುತ್ವ ಆಡಳಿತದಲ್ಲಿದ್ದೇವೆ?

ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
www.hariharbhat.blogspot.com
February 14, 2013.

Tuesday, February 12, 2013

Shri C.T.Ravi


ಕನ್ನಡ ಪ್ರಭ ಪುಟ 7  , February 13, 2013  ಓದಿ.  ಮಂತ್ರಿ ಸಿ.ಟಿ.ರವಿ ಹೇಳಿಕೆ.  " ಖಾಸಗಿ ವಿಶ್ವವಿದ್ಯಾಲಯಗಳ ವಿರೋಧ ಸಲ್ಲ "


ದುಡ್ಡಿದ್ದವರು ಅಪಾರ್ಟ್ ಮೆಂಟ್ ಕಟ್ಟುತ್ತಾ ರಿಯಲ್ ಎಸ್ಟೇಟ್ ಮಾಡುವ ಬದಲು ಶಿಕ್ಷಣ ಸಂಸ್ತೆಗಳನ್ನು ಕಟ್ಟಲಿ, ಸರಕಾರಕ್ಕೆ ಶೇಕಡಾ ನಲವತ್ತು ಸೀಟ್ ಗಳು ದೊರೆಯುತ್ತವೆ. ಜನಸಾಮಾನ್ಯರಿಗೆ ಅನುಕೂಲವಾಗುತ್ತವೆ.


ಸ್ವಾಮೀ ಯಾವ ಜನಸಾಮಾನ್ಯರಿಗೆ ಅನುಕೂಲವಾಗುತ್ತವೆ? ಯಾರು ಸಿರಿವಂತ ಮಧ್ಯಮ ವರ್ಗದವರಿದ್ದಾರೋ ಅವರಿಗಷ್ಟೇ ನಿಮ್ಮ ನಿರ್ಣಯಗಳು ಅನುಕೂಲವಾಗುತ್ತವೆ. ಹತ್ತು ವರ್ಷದ ಹಿಂದೆ ಹದಿನಾರು ಸಾವಿರ ರೂಪಾಯಿಗಳಿದ್ದ ಇಂಜಿನಿಯರಿಂಗ್ ಮೆರಿಟ್ ಸೀಟ್ ಸ್ಟೂಡೆಂಟ್ ಫೀಸ್ ಈಗ ಅರವತ್ತು ಸಾವಿರ ಆಗಿದೆ. ಮೆರಿಟ್ ಗವರ್ನಮೆಂಟ್ ಸೀಟ್ ಗಳು ಯಾರೂ ತೆಗೆದುಕೊಳ್ಳದೆ ಹಾಗೇ ಬಿದ್ದಿರುತ್ತವೆ. ಐವತ್ತು  ರೂಪಾಯಿ ಇದ್ದ ದಿನ ಗೂಲಿ   ಒಂದು ನೂರಾ ಇಪ್ಪತೈದು ಆಗಿದೆ ಆದರೆ ಹನ್ನೆರಡು ರೂಪಾಯಿ ಇದ್ದ ಅಕ್ಕಿ ದರ ಐವತ್ತು ರೂಪಾಯಿ ಆಗಿದೆ. ಇವುಗಳ ಜೊತೆ ನಿಮ್ಮ ಎಂ.ಎಲ್.ಎ , ಎಂ.ಪಿ ಗಳ ಗೌರವ ಧನ, ದಿನ ಭತ್ಯೆ, ಪೆಟ್ರೋಲ್ ಖರ್ಚು, ಆಚೆ ಈಚೆ ಸಹಾಯಕರ ಸಂಬಳ, ನಿಮ್ಮ ಪಿಂಚಣಿ ಮೊತ್ತ ಇವುಗಳನ್ನೊಮ್ಮೆ ಹೋಲಿಸಿ ನೋಡಿ !!!  ನಿಮಗೆಲ್ಲ ಎಲ್ಲಿ ಟೈಮ್ ಇದೆ , ಹೇಳಿ. ಇಂದಿನ ಸ್ತಿತಿ ಗತಿ, ಬದಲಾವಣೆಗಳನ್ನು ನೋಡಿದರೆ ನಿಮಗೆಲ್ಲ ಯೋಚನೆಗೆ ಟೈಮ್ ಸಿಗುವ ಕಾಲ ಬಂದಿದೆ, ಸಮೀಪದಲ್ಲೇ ವಿಶ್ರಾಂತಿ ದೊರೆಯಲಿದೆ ಎನಿಸುತ್ತಿದೆ.


ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.

Hugging.


ಕಾಲ ಕಾಲಕ್ಕೆ ಜೀವನದ ಎಲ್ಲ ವಿಭಾಗಗಳಲ್ಲೂ ಬದಲಾವಣೆಗಳು ಬರುತ್ತಾ ಹೋಗುತ್ತವೆ. ಬದಲಾವಣೆಗಳು ಯಾರನ್ನೂ ಕೇಳಿ ಬರುವದಿಲ್ಲ ಅಥವಾ ಯಾರಾದರೂ ತಮ್ಮನ್ನು ಅವ್ಹಾನಿಸಲಿ ಎಂದು ಕಾಯ್ದು ಕೂತಿರುವದಿಲ್ಲ.



ನಾವು ಚಿಕ್ಕವರಿದ್ದಾಗ ಅಂದರೆ  ಸುಮಾರು ನಲವತ್ತೈದರಿಂದ ಐವತ್ತು ವರ್ಷಗಳ ಹಿಂದೆ ಮನೆಗೆ ಹಿರಿಯರು ಬಂದಾಗ ಗೃಹಿಣಿ ನೀರು ಬಿಂದಿಗೆಯೊಂದನ್ನು ತಂದಿಟ್ಟು ನಮಸ್ಕರಿಸಿ ಹೋಗುತ್ತಿದ್ದಳು. ಮನೆಯಲ್ಲಿರುವ ವಯಸ್ಸಿನಲ್ಲಿ ಚಿಕ್ಕವರೆಲ್ಲಾ ಅತಿಥಿಗಳಿಗೆ / ಅಭ್ಯಾಗತರಿಗೆ ಕಾಲು ಮುಟ್ಟಿ ನಮಸ್ಕರಿಸಿ, ಉಪನಯನ ಆಗಿರುವ ಮಕ್ಕಳು ಗೋತ್ರ ಪ್ರವರ ಹೇಳಿ ನಮಸ್ಕರಿಸುತ್ತಿದ್ದರು. ಕುಲ ಪುರೋಹಿತರು, ಶ್ರೇಷ್ಟ ಸಾಧನೆಯಿಂದ  ಸಮಾಜದಲ್ಲಿ ಗುರುತಿಸಲ್ಪಟ್ಟಿರುವ ಬ್ರಾಹ್ಮಣರು ಬಂದರೆ ಮನೆಯಲ್ಲಿರುವ ಎಲ್ಲ ಗಂಡಸರೂ ಕಾಲು ಮುಟ್ಟಿ ಗೋತ್ರ ಪ್ರವರ ಹೇಳಿ ನಮಸ್ಕರಿಸುತ್ತಿದ್ದರು. ಹೆಂಗಸರು ಮಂಡಿಯೂರಿ ನಮಸ್ಕರಿಸುತ್ತಿದ್ದರು. ಸಿರ್ಸಿ, ಯಲ್ಲಾಪುರ ಭಾಗದ ಹಳ್ಳಿಗಳಲ್ಲಿ ಈ ಪದ್ದತಿಯ ಜೊತೆಗೆ ಆತ್ಮೀಯವಾಗಿ , ಮನೆಯ ಪ್ರತಿ ಸದಸ್ಯನೂ "ಈಗ ಬಂದ್ರಾ ?" ಎಂದು ಅತಿಥಿ / ಅಭ್ಯಾಗತರನ್ನು " ಮಾತನಾಡಸ್ದೆ " ಎಂದು ಹೇಳಿ ತಮ್ಮ ತಮ್ಮ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದರು .



ಕ್ರಮೇಣ ಈ ಪದ್ಧತಿ ಮರೆಯಾಗುತ್ತ , ಆತ್ಮೀಯವಾಗಿ   ಮುಗುಳ್ನಗುವ ಪದ್ಧತಿ ಅಲ್ಲಲ್ಲಿ ಆರಂಭವಾಗಿ , ಎಲ್ಲೆಡೆ ವ್ಯಾಪಿಸಿತು. ಇನ್ನು ಕ್ರಮೇಣ  ಹಸ್ತ ಲಾಘವ , hand  shake  ಆರಂಭವಾಗಿ ಎಲ್ಲೆಡೆ ಕಂಡು ಬರುತ್ತಿದೆ.



ಈಗ ಅಂದರೆ ಈಗಿನ ಸಮಾಜದಲ್ಲಿ ಕಂಡುಬರುವ ಬೆಳವಣಿಗೆಯೆಂದರೆ   hugging , ಆತ್ಮೀಯವಾಗಿ ಅಪ್ಪುಗೆ   ಕೊಡುವದು. ಯುವ ಜನಾಂಗ ಎಲ್ಲೆಂದರಲ್ಲಿ ಮೈ ಚಳಿ ಬಿಟ್ಟು ಒಬರನ್ನೊಬ್ಬರು ಮುಂಗೈನ್ನು ಹಿಡಿದು ಅಥವಾ ಭುಜಗಳನ್ನು ಹಿಡಿದು ಹೃದಯದ   ಮೇಲ್ಭಾಗದಲ್ಲಿ ತಬ್ಬಿಕೊಳ್ಳುವದು.  ನಗರವಾಸಿ ಯುವಕ ಯುವತಿಯರಲ್ಲಿ ಇದು ಸರ್ವೇ ಸಾಮಾನ್ಯವಾಗುತ್ತ ಸಾಗಿದೆ. ಎಲ್ಲೋ ನಾಲ್ಕಾರು ದಿನಗಳ ಪರಿಚಯದ ಅಥವಾ ನಾಲ್ಕಾರು ತಿಂಗಳುಗಳ ಪರಿಚಯದ ಯುವಕ ಯುವತಿಯರಲ್ಲಿ ಸಹಾ ಈ ಬೆಳವಣಿಗೆಗಳು ಕಂಡುಬರುತ್ತಿವೆ. ಇಲ್ಲಿ ಯುವಕ , ಯುವತಿಯರೆಂಬ ಭೇದವಿಲ್ಲ. ಯುವಕನೊಬ್ಬ ಯುವತಿಯೊಡನೆ, ಯುವತಿಯೊಬ್ಬ ಯುವಕನೊಡನೆ, ಯುವಕ ಯುವಕನೊಡನೆ, ಯುವತಿ ಯುವತಿಯೊಡನೆ hugging  ನಲ್ಲಿ ತೊಡಗಿರುವದು ಕಂಡುಬರುತ್ತದೆ. ಬಹು ವಿಧದ ಆಚಾರ ವಿಚಾರವುಳ್ಳ ಜನರು ಬೆರೆಯುವ ಸಾರ್ವಜನಿಕ ಸ್ಥಳಗಳಲ್ಲಿ ಈ ಬೆಳವಣಿಗೆ ಸಾರ್ವತ್ರಿಕವಾಗಿ ಕಂಡು ಬರದಿದ್ದರೂ, ಯುವ ಜನಾಂಗವೇ ಹೆಚ್ಚಾಗಿ ಕಂಡುಬರುವ ಕಾಲೇಜು ಕ್ಯಾಂಪಸ್ ಗಳು , ಬಹು ಆಕರ್ಷಣೀಯ ಮಾಲ್ ಗಳು , ಅಧುನಿಕ   ಸಿನೆಮಾ ಥಿಯೇಟರ್  ಕಡೆಗಳಲ್ಲಿ ಜಾಸ್ತಿ ಕಂಡುಬರುತ್ತಿವೆ.



ಈತ್ತೀಚೆ ನಾನೊಮ್ಮೆ ನನ್ನ ಪರಿಚಯದವರೊಬ್ಬರ ಮನೆಗೆ  ಹೋಗಿ ವಾಪಸ್ಸು ಬರುವಾಗ  ಪ್ರಿ. ಕೆ .ಜಿ ಯಲ್ಲಿ ಓದುತ್ತಿರುವ ಮಗು ಅಂದರೆ ಮೂರು ವರ್ಷದ  ಮಗುವಿನ ತಾಯಿ , ಅಂಕಲ್ ಹೋಗುತ್ತಿದ್ದಾರೆ ನೋಡು, hugg  him , ಎಂದೊಡನೆ ಆ ಮುದ್ದಾದ ಮಗು ಬಂದು , ನನ್ನನ್ನು ಆತ್ಮೀಯವಾಗಿ ಅಪ್ಪಿಕೊಂಡು , bye ....... ಎಂದು ಓಡಿಹೋಯಿತು. ಇದು ಈ ಕಾಲದ ಅತಿ ಆಧುನಿಕ ಬೆಳವಣಿಗೆ.



ಹಳ್ಳಿಗಳಲ್ಲಿ ಪ್ರಚಲಿತವಿರುವ ಗಾದೆ ಒಂದಿದೆ.  ನಿಂತು ಉಚ್ಚೆ ಹೊಯ್ಯುವ ಗುರುವಿಗೆ , ಓಡುತ್ತಾ ಉಚ್ಚೆ ಹೊಯ್ಯುವ ಶಿಷ್ಯ.  ಹಾಗೆ ಇನ್ನೊಂದು ಮಾತಿದೆ,  ಕಾಲಾಯ ತಸ್ಮೈ ನಮಃ .



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
February 12, 2013.

Monday, February 11, 2013

VISA

ಇಂದು ( February 11 , 2013 ) ನನ್ನ ಹಿತೈಶಿಯೊಬ್ಬರು ಆಸ್ಟ್ರೇಲಿಯಾ ಹೋಗುವ ಕಾರ್ಯಕ್ರಮ . ಆಗಲೇ ವಿಮಾನ ಟಿಕೆಟ್ ಆಗಿತ್ತು. ಪಾಸ್ಪೋರ್ಟ್ , ವೀಸಾ ಅರ್ಜಿ ಗುಜರಾಯಿಸಿ   ಪಾಸ್ಪೋರ್ಟ್ ಬಂದಿತ್ತು. ವೀಸಾ ಏಳು ದಿವಸಗಳಲ್ಲಿ ಬರುತ್ತದೆಂದು ಆಫೀಸಿನಲ್ಲಿ ಹೇಳಿದ್ದರಿಂದ ಏರ್ ಟಿಕೆಟ್ ಬುಕ್ ಮಾಡಿದ್ದರು. ಅದೇ ಪ್ರಕಾರ ಅವರ ಪಾಸ್ಪೋರ್ಟ್, ವೀಸಾ  ಬಂದಿತ್ತು. ಅವರ ಪತ್ನಿಯ ಪಾಸ್ಪೋರ್ಟ್ ಬಂದಿತ್ತು , ವೀಸಾ ಬಂದಿರಲಿಲ್ಲ. ಆಸ್ಟ್ರೇಲಿಯಾ ದಲ್ಲಿರುವ ಅವರ ಮಗ ಹಾಗೂ ಇಲ್ಲಿರುವ ಅವರ ಇನ್ನೊಂದು ಮಗ ಸಾಕಷ್ಟು  ಆಫೀಸಿನಲ್ಲಿ ಹೋಗಿ ವಿಚಾರಣೆಗಳನ್ನು ಮಾಡಿದ್ದರು. ವೀಸಾ ಬರಲಿಲ್ಲ. ನಿನ್ನೆ ರಾತ್ರಿ ನನ್ನನ್ನು ನೋಡಲು ಬಂದರು. ವಿಷಯವೆಲ್ಲ ತಿಳಿಸಿದರು.  ಏನಪ್ಪಾ ನಾಳೆ ಪ್ರಯಾಣ , ವೀಸಾ ಇನ್ನೂ ಕೈಯಲ್ಲಿಲ್ಲ. ಏನೂ ತೋಚದೆ , "ನಾಳೆ ನಾನು ಆಫೀಸ್ ಗೆ ಬರುತ್ತೇನೆ "ಎಂಬ ವಿಶ್ವಾಸದೊಂದಿಗೆ ಕಳುಹಿಕೊಟ್ಟೆ.



ಇಂದು ಆ ಆಫೀಸಿಗೆ ಅವರ ಜೊತೆ ಹೋದೆ. ಮತ್ತದೇ ಭರವಸೆ. ಅರ್ಜಿ ಕೊಡಿ. ಮೂರ್ನಾಲ್ಕು ದಿನಗಳಲ್ಲಿ ಬರುತ್ತದೆ. ನನಗೆ ಆಶ್ಚರ್ಯ ! ಇಂದು ಪ್ರಯಾಣ , ವೀಸಾ ನಾಲ್ಕು ದಿವಸಗಳ ನಂತರ.  ಯಡವಟ್ಟಾಗಿದೆ. communication  gap , ಇವರು ಹೇಳುವಲ್ಲಿ ಸೋತಿದ್ದಾರೆ   ಅಥವಾ ಅವರು ಅರಿಯುವಲ್ಲಿ ಸೋತಿದ್ದಾರೆ. ತುಂಬಾ ಮೆದು ದ್ವನಿಯಲ್ಲಿ ಆ ಆಫೀಸರ್ ಗೆ ಹೇಳಿದೆ. ದಯಮಾಡಿ ಎರಡು   ನಿಮಿಷ ನಾನು ಹೇಳುವದನ್ನು ಕೇಳಿ, ಇಂದು ರಾತ್ರೆ ಪ್ರಯಾಣ , ವೀಸಾ ಇಂದೇ ಬೇಕು. ಅವರಿಗೆ ಆಶ್ಚರ್ಯ !  ಇಂದು ಪ್ರಯಾಣ ! ಹೇಗೆ !?! . "past  is  past , this  is  the  present  situation , you  can  do  something , please  do  that  something "  ಎಂದು ವಿನೀತನಾಗಿ ಹೇಳಿದೆ. "another  three  to  four  hours , you  would  get "  ಎಂದರು. " sir  , your office closes at 4 p.m , we would be here till that time  you say - please go out or else till we  get the VISA "  ಮುಗುಳ್ನಕ್ಕರು ಆ ಆಫೀಸರ್. " We have made follow up , you may get any time, if you do not get with in three hours please come back"  ಎಂದರು . ಒಹ್ ಕೆಲಸವಾದಂತೆ ಎಂದು ಆಚೆ ಬಂದೆವು. ತಿಂಡಿ ತಿಂದು internet cafe ಗೆ ಹೋಗಿ ಮೇಲ್ ಚೆಕ್ ಮಾಡುತ್ತಾ ಕುಳಿತೆವು. ಮೂರು ತಾಸು ಕಳೆದು ಹೋಯಿತು. ವೀಸಾ ಮೇಲ್ ಬಂದಿಲ್ಲ  . ಮತ್ತೆ ವಾಪಸ್ ಹೊರಟೆವು ಆಫೀಸರ್ ಭೇಟಿಗೆ. " sir , please  sit  down  "  ಕುಳಿತೆವು, ಅರ್ಧ ಘಂಟೆ ಕಳೆಯಿತು. ಇನ್ನೇನಪಾ ಎಂಬ   ಯೋಚನೆ. ಮೆಲ್ಲಗೆ, " sir, should I request your chief of this office, if required I am ready to talk to him" ಹೇಳಿದೆ . ಒಂದು ನಿಮಿಷ  ಎಂದು ಎದ್ದೋದ  ಆಫೀಸರ್  ಅವನ ಸಂಪೂರ್ಣ ಆಫೀಸ್ ನ ಚೀಫ್ ಬಾಸ್ ನನ್ನು  ನನ್ನೆಡೆ ಕರೆದು ತಂದಿದ್ದ. ನನಗೇ ಆಶ್ಚರ್ಯ !



ಮೆತ್ತನೆ ದ್ವ್ಹನಿಯಲ್ಲಿ ಉಸುರಿದೆ, " Sir, I am aware that you are the only person who could establish an one to one contact with Australian Embassy and you are aware of the seriousness of the matter ,as today is the travel day.  We are confident that you can do something in the matter.  And you have to do, this is my humble request ".   ನನ್ನ ಮಾತಿಗೆ ಬೆಣ್ಣೆಯಂತೆ ಕರಗಿ ಹೋದ ಚೀಫ್ , ಮುಗುಳ್ನಗುತ್ತಾ  ,   " you would get it, it is under active process, check your mail after half an hour " ಎನ್ನುತ್ತಾ ಒಳಗೆ ಹೊರಟು ಹೋದ. ನಾವು ಆಚೆ ಬಂದು ಇಂಟರ್ನೆಟ್ ಕೆಫೆಯಲ್ಲಿ ಚೆಕ್ ಮಾಡಿದಾಗ ಮೇಲ್ ಬಂದಿತ್ತು. ಅಷ್ಟರಲ್ಲಿ  ಆಸ್ಟ್ರೇಲಿಯಾ ದಿಂದ ಅವರ ಮಗನ ಫೋನ್ ಸಹ ಬಂತು. ಪ್ರಿಂಟ್ ಔಟ್ ತೆಗೆದುಕೊಂಡು ತಿರುಗಿ ಆ ಆಫೀಸರ್ ಕಡೆ ಹೋಗಿ ಒಂದು ಬಿಗ್ ಥ್ಯಾಂಕ್ಸ್ ನೀಡಿ ಬಂದೆವು.  ತಪ್ಪು ತಿಳಿಯಬೇಡಿ , ನಾವೆಲ್ಲೂ  bribe  ಮಾಡಿಲ್ಲ.  It is purely the result of sweet and humble words.

ಈಗ ಅವರು ಗಂಡ , ಹೆಂಡತಿ , ಮಗ ,ಸೊಸೆ, ಮೊಮ್ಮಗನೊಂದಿಗೆ  ವಿಮಾನ ಪ್ರಯಾಣಕ್ಕಾಗಿ ಏರ್ ಪೋರ್ಟ್ ಚೆಕ್ ಇನ್ ಕಡೆ ಸಾಗಿದ್ದಾರೆ.

ನಾನು ಸಂತಸದಿಂದ ಬೀಗುತ್ತಿದ್ದೇನೆ.

ಹರಿಹರ ಭಟ್, ಬೆಂಗಳೂರು.

Saturday, February 9, 2013

Kannada , Kannada ????????????


ನೋಡಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಕನ್ನಡದ ಕಹಳೆ ಎಲ್ಲೆಡೆ ಮೊಳಗುತ್ತಿದೆ. ವೀರಾವೇಶದಿಂದ ಭಾಷಣ ನಡೆಯುತ್ತಿದೆ. ಕನ್ನಡ ಉಳಿಸಿ, ಬೆಳೆಸಿ ಕರೆ ನೀಡುತ್ತಿದ್ದಾರೆ. ಈ ರೀತಿಯ ವೀರಾವೇಶ ಕೇವಲ ಸಾಹಿತ್ಯಸಮ್ಮೇಳನಗಳಿಗೆ , ನವೆಂಬರ್ ತಿಂಗಳಿನ ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಮೀಸಲಾಗುತ್ತಿದೆ.



ಹಾಗಾದರೆ ಕನ್ನಡಿಗರಿಗೆ ತಮ್ಮ ಮಾತ್ರಭಾಷೆಯ ಅಭಿಮಾನವಿಲ್ಲವೇ? ಖಂಡಿತ ಅಭಿಮಾನ ಇದೆ. ಅದನ್ನು ಉಳಿಸಿಕೊಂಡೂ ಇದ್ದಾರೆ. ಉಳಿಸಿಕೊಳ್ಳುತ್ತಲೂ ಇದ್ದಾರೆ. ಹಾಗಿದ್ದರೆ ಕನ್ನಡಿಗರು ಅಭಿಮಾನಶೂನ್ಯರು, ಅಭಿಮಾನಶೂನ್ಯರಾಗುತ್ತಿದ್ದಾರೆ ಎಂಬ ಕೂಗುಗಳೇಕೆ    ?



ಲಾಗಾಯ್ತಿನಿಂದ ಕರ್ನಾಟಕದಲ್ಲಿ ಆಡಳಿತ ನಡೆಸುವವರು ದುಡಿಯಬಲ್ಲ ಕೈಗಳಿಗೆ ಉದ್ಯೋಗ ದೊರಕಿಸುವಲ್ಲಿ ಸೋತಿದ್ದಾರೆ. ನಮ್ಮ ಶಿಕ್ಷಣ ವ್ಯವಸ್ಥೆಯನ್ನು  ಕೇವಲ ಸರಕಾರೀ ನೌಕರಿ ಪಡೆಯಲು ಅವಶ್ಯವಾದ ಪ್ರಮಾಣಪತ್ರ (ಸರ್ಟಿಫಿಕೇಟ್) ಪಡೆಯಲು ಸಜ್ಜು ? ಗೊಳಿಸಿದ್ದಾರೆ. ನಮ್ಮ ಸಮಾಜದ ಮೂಲ ಕಸುಬುಗಳಿಗೆ  ( ಉದ್ಯೋಗಳಿಗೆ ) ಇರುವ ಗೌರವ ಕಡಿಮೆಯಾದಾಗ , ಆ ಗೌರವವನ್ನು ದೊರಕಿಸಿಕೊಡುವಲ್ಲಿ ಆಡಳಿತ ನಡೆಸಿದ, ನಡೆಸುತ್ತಿರುವ ಸರಕಾರಗಳು ಸೋತಿವೆ. ಈ ಎಲ್ಲಾ ಬದಲಾವಣೆಗಳಿಂದ ಸೋತ ಜನಸಾಮಾನ್ಯ ನಾಗರಿಕ ಜೀವನದಲ್ಲಿ ಬದುಕಲು ಸಹಜವಾಗಿ ಈ ರಾಜ್ಯಕ್ಕೆ ಬರುವ ಪರ ಭಾಷಿಕರ ಭಾಷೆಯನ್ನೇ ಅನುಸರಿಸಿ ಅವರಿಗೆ ಮನಸಂತೋಷವಾಗುವಂತೆ  ನಡೆದುಕೊಂಡು ತನ್ನ ಕೌಟುಂಬಿಕ ಜೀವನ ನಿರ್ವಹಣೆಗೆ ಬೇಕಾದ ದಾರಿ ಕಂಡುಕೊಂಡಿದ್ದಾನೆ. ಇದರರ್ಥ ಕನ್ನಡದ ಅಭಿಮಾನ ಕಳೆದುಕೊಂಡಿದ್ದಾನೆ ಎಂದಲ್ಲ. ಈ ಅನಪೇಕ್ಷಿತ ಬೆಳವಣಿಗೆಗಳಿಂದ ಪರಭಾಷೆಯ ಜನರು ಆಸರೆಗಾಗಿ ಹೆಚ್ಚು ಬೆಂಗಳೂರಿಗೆ ಬಂದಾಗ  ಸ್ಥಳೀಯರು ಹೆಚ್ಚು ಉದ್ಯೋಗವಕಾಶಗಳನ್ನು ಪಡೆದು ಆರ್ಥಿಕ ಬಲದಿಂದ ನೆಮ್ಮದಿ ಪಡೆದಿದ್ದಾರೆ.  ಹಾಗಾಗಿ ಕ್ರಮೇಣ ಬೆಂಗಳೂರಿನಲ್ಲಿ ಕನ್ನಡಿಗರ ಸಂಖ್ಯೆ ಕಡಿಮೆಯಾಗುತ್ತ ಸಾಗಿದೆ. ಕನ್ನಡ ಮಾತನಾಡುವವರ ಕಲರವ ಕಡಿಮೆಯಾಗಿ ಇತರ  ಭಾಷೆಗಳೇ   ಕೇಳಿಬರುತ್ತಿರುವದರಿಂದ , ಅಳಿದುಳಿದ ಕನ್ನಡಿಗರಲ್ಲ್ಲಿ , ರಸ್ತೆ ಬೀದಿಗಳಲ್ಲಿ ಕಾಲ ಕಳೆದು ರಾತ್ರೆ ಮನೆ ಸೇರುವ  ಮೂಲ ಕನ್ನಡಿಗರು ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿರುವದನ್ನು ಮನಗಂಡು , ಅಲ್ಲಲ್ಲಿ ಸಂಘಟನೆಗಳನ್ನು ಮಾಡಿ ರಾಜಕಾರಣಿಗಳ ಸಹಕಾರದಿಂದ ಸರಕಾರದ ಕಾಸು ಪಡೆದು , ಹೊಡಿ ಬಡಿ, ತಾ ಮಚ್ಚು , ಏನ್ಲಾ , ಎಂತ್ಲಾ ಎಂಬ ಕನ್ನಡದಲ್ಲಿ ಆರ್ಭಟಿಸುತ್ತ ಸಾಗಿದ್ದರಿಂದ , ಇಂದು ಕನ್ನಡ ಎಂದರೆ ರಸ್ತೆಯಲ್ಲಿ ಗುಂಪು ಗುಂಪಾಗಿ ಸಾಗಿ ಅರ್ಭಟೀಸುವ ಕನ್ನಡಿಗರ ಕನ್ನಡ ಆಗಿದೆ. ಸಂಪನ್ನವಾದ ಸುಮಧುರ , ಜೀವನ ಪಾಠ ಗಳ ಸೌಂದರ್ಯವನ್ನೊಳಗೊಂಡ   ಕನ್ನಡ ಅಡಿಗೆಮನೆ ಸೇರಿ ಕೇವಲ ಸಾಹಿತ್ಯ ಸಮ್ಮೇಳನಗಳಿಗೆ , ಹಿಂದಿನ ತಲೆಗಳಿಗೆ ( ಇಂದು ಐವತ್ತು ಅರವತ್ತು ದಾಟಿದವರು ) ಸೀಮಿತವಾಗಿ ಉಳಿದಿದೆ.



ಇನ್ನು ಇಂದಿನ ನಮ್ಮ ಸರಕಾರೀ ಮತ್ತು ಅರೆ ಸರಕಾರೀ ಶಾಲೆಗಳನ್ನು ನೋಡಿ . ತುಂಬಾ ಶಾಲೆಗಳಲ್ಲಿ ಇಂಗ್ಲೀಶ್ ಮಾಧ್ಯಮ ಎಂದು ಬೋರ್ಡ ಹಾಕಿರುತ್ತಾರೆ. ಒಳಗೆ ಕಲಿಸುವದು ಕನ್ನಡ ಮಾಧ್ಯಮದಲ್ಲಿ , ಆಗಾಗ ಪುಸ್ತಕಗಳಿಂದ ಇಂಗ್ಲೀಶ್ನಲ್ಲಿರುವದನ್ನು   ತಪ್ಪು ತಪ್ಪಾಗಿ ಮಕ್ಕಳಿಗೆ ಓದಿ ಹೇಳಿ ಕಾಟಾಚಾರಕ್ಕೆ ಇಂಗ್ಲೀಶ್ ಮಾಧ್ಯಮದಂತೆ ತೋರ್ಪಡಿಸುತ್ತಾರೆ. ಇದೇನು ವಿಶೇಷ ತಿಳುವಳಿಕೆಯಿಂದ ಬರಬೇಕಾಗಿಲ್ಲ, ಸ್ಥಳೀಯರನ್ನು ಮಾತನಾಡಿಸಿದರೆ ಯಾವ ಯಾವ ಶಾಲೆಯಲ್ಲಿ ಕಲಿಕೆ ಹೇಗಿದೆ ಎನ್ನುವದು ಎಲ್ಲರಿಗೂ ಗೊತ್ತಾಗುವ ವಿಷಯ. ಈ ನಾಲ್ಕೈದು ದಶಕಗಳಲ್ಲಿ ನಾವು ನಮ್ಮವರು, ನನ್ನ   ಜಾತಿ, ನಮ್ಮ ದೇವರು, ನಮ್ಮ ಮಠ ಎಂಬ ಸಂಕುಚಿತ ಭಾವನೆಗಳು  ಹೆಚ್ಚು ಹೆಚ್ಚು ಜಾಗ್ರತವಾಗಿರುವದರಿಂದ ಹಾಗೂ ರಾಜಕೀಯ ಪ್ರಭಾವಗಳಿಂದ ಶಿಕ್ಷಕರು ತಮಗೆ ಅನುಕೂಲವೆನಿಸುವ ತಮ್ಮ ಸಂಖ್ಯೆಯೇ  ಜಾಸ್ತಿ ಇರುವ ಶಾಲೆಗಳಿಗೆ ವರ್ಗಾವಣೆಬಯಸಿ ಹೋಗುವದರಿಂದ ಸಮಾಜದಲ್ಲಿ ಆರ್ಥಿಕವಾಗಿ, ಸಾಂಸ್ಕೃತಿಕವಾಗಿ ಅತಿ ಹಿಂದುಳಿದ ಶಾಲೆಗಳಿಗೆ ಸಿಗುವ ಶಿಕ್ಷಕರು ಯಾರಿಗೂ ಬೇಡವಾದವರಾಗಿದ್ದಾರೆ.  ಉತ್ತಮ ಇಂಗ್ಲೀಶ್ ಮಾಧ್ಯಮ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸುವ ಆರ್ಥಿಕ ಅನುಕೂಲತೆ ಇಲ್ಲದಿರುವ ಮತ್ತು ಉತ್ತಮ ಇಂಗ್ಲೀಶ್ ಶಾಲೆಗಳಿಗೆ ಪ್ರವೇಶ ಸಿಗದ ಮಕ್ಕಳಷ್ಟೇ ಸರಕಾರೀ, ಅರೆಸರಕಾರಿ ಶಾಲೆಗಳಿಗೆ ಸೇರುವವರಾಗಿದ್ದಾರೆ.  ಪರಿಣಾಮವಾಗಿ ತುಂಬಾ ಹಿಂದುಳಿದ ಮಕ್ಕಳು ಮತ್ತು ಆರ್ಥಿಕವಾಗಿ ಅಸಹಾಯಕವಾಗಿರುವವರ ಮಕ್ಕಳು ಮಾತ್ರ ಓದುವ ಪರಿಸರದಲ್ಲಿ ಮಾತ್ರ ಕನ್ನಡ.  ಈ ಎಲ್ಲಾ ಬೆಳವಣಿಗೆಗಳಿಂದ  ಹೊಡಿ ಬಡಿ, ಮಚ್ಚು ಲಾಂಗು, ಏನ್ಲಾ  ಯೆಲ್ಲಲಾ ಕನ್ನಡ ಉಳಿದು ಬೆಳೆದು, ರಸ್ತೆಗಳ ಸಂದು ಗೊಂದುಗಳಲ್ಲಿ, ದರ್ಶನಿ ಹೋಟೇಲುಗಳಲ್ಲಿ , ಗಬ್ಬು ನಾರುವ ಸಿನೇಮಾ ಥಿಯೇಟರುಗಳಲ್ಲಿ ಮಾತ್ರ ಕನ್ನಡ ಕೇಳಿಬರುತ್ತಿದೆ.



ಹಾಗೆಂದು ಜನಸಾಮಾನ್ಯ ಕನ್ನಡಿಗನಲ್ಲಿ ಕನ್ನಡಾಭಿಮಾನ ಕುಗ್ಗಿಲ್ಲ  , ತಗ್ಗಿಲ್ಲ.   ಸಾಹಿತ್ಯ ಸಮ್ಮೇಳನಗಳು , ಸಾಹಿತ್ಯ ಸಂತೆಗಳಲ್ಲಿ ಪುಸ್ತಕ ಮಾರಾಟದ ಭರಾಟೆಗಳು ,  ಕನ್ನಡ ಪುಸ್ತಕಗಳ ಮಾರಾಟದ ಆಧುನಿಕ ಶೈಲಿಯ ಮಳಿಗೆಗಳು  ಇವನ್ನೆಲ್ಲ ಕಂಡಾಗ ಅಭಿಮಾನ ಉಕ್ಕುತ್ತದೆ.  ಅಂತರ್ಜಾಲದ ಸಮೂಹ ಸಂವಹನ ಜಾಲಗಳನ್ನು ಕಂಡಾಗ , ಅವುಗಳಲ್ಲಿ ಕನ್ನಡದಲ್ಲಿ ಬರೆಯುವವರ ಶೈಕ್ಷಣಿಕ ಹಿನ್ನೆಲೆ, ದಿನ ನಿತ್ಯ ಅವರೆಲ್ಲ ಆದಾಯಕ್ಕಾಗಿ ತೊಡಗಿಕೊಂಡಿರುವ ಅಧುನಿಕ   ಉದ್ಯೋಗಗಳ ಹೊರತಾಗಿಯೂ ಕನ್ನಡದಲ್ಲಿ ಬರೆಯುವ ಅವರ ಭಾಷಾಭಿಮಾನ ಎಲ್ಲ ಕಂಡಾಗ ಕನ್ನಡದ ಕೊಲೆ ಸ್ವತಂತ್ರ ಭಾರತದಲ್ಲಿ ಆಡಳಿತ ನಡೆಸುವ ರಾಜಕಾರಣಿಗಳಿಂದ , ರಾಜಕೀಯ ಪಕ್ಷಗಳಿಂದ ಆಗಿದೆಯೇ ವಿನಃ ಜನಸಾಮಾನ್ಯ ಕನ್ನಡಿಗನಿಂದಾಗಲಿಲ್ಲ ಅಥವಾ ಜೀವನ ನಿರ್ವಹಣೆಗಾಗಿ ಆದಾಯ ಅರಸಿ ಬರುವ ಇತರ  ಭಾಷಿಕರಿಂದಾಗಲಿಲ್ಲ   ಎಂದು ಧೈರ್ಯವಾಗಿ ಹೇಳಬಹುದು.


ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ,
hariharbhat.blogspot.com
ಫೆಬ್ರವರಿ 10  , 2013 .

Friday, February 8, 2013

About Our Leaders

ಇಂದೊಂದು ಸುದ್ದಿ ನೋಡಿ. ಕರ್ನಾಟಕ ರಾಜ್ಯ ಸರಕಾರದ ಬಜೆಟ್ ಸುದ್ದಿ. ಅಖಿಲ ಭಾರತ ವೀರಶೈವ   ಮಹಾಸಭಾ ಮೈಸೂರು ನಗರದಲ್ಲಿ ಬಸವ ಭವನ ನಿರ್ಮಿಸಲು ರಾಜ್ಯ ಸರಕಾರ ಎರಡು ಕೋಟಿ ರೂಪಾಯಿಗಳನ್ನು ಒದಗಿಸುತ್ತಿದೆ.


ನಮ್ಮ ಹವ್ಯಕ  ಮಹಾಸಭಾ,ಬೆಂಗಳೂರನಲ್ಲಿ ನಿರ್ಮಿಸಲು ಯೋಜಿಸುತ್ತಿರುವ ಕಟ್ಟಡಕ್ಕೆ ಸರಕಾರದಿಂದ ನಿಧಿ ಪಡೆಯಲು ಹಾಲಿ ಆಡಳಿತ ಮಂಡಲಿ ಯಾವ ಪ್ರಯತ್ನಗಳನ್ನು ಮಾಡಿದೆ ? ನಮ್ಮವರೇ ಆದ ವಿಶ್ವೇಶ್ವರ ಹೆಗಡೆಯವರು ಮಂತ್ರಿ, ಅಲ್ಲದೆ  ಆಡಳಿತ ಪಕ್ಷದ ಪ್ರಭಾವಿ ಮುಖಂಡರು. ಯಾವುದೇ ದೀಪ ಬೆಳಗುವದಿದ್ದರೂ ನಮಗೆ ವಿಶ್ವೇಶ್ವರರು ಬೇಕು. ವಿಶ್ವೇಶ್ವರರಿಲ್ಲದೆ ಮುಂದೂಡಿದ, ಸುಮ್ಮನೆ ನಿಂತ ಕಾರ್ಯಕ್ರಮಗಳೆಷ್ಟೋ , ಅಷ್ಟು ಪ್ರಭಾವಶಾಲಿ ಮುಖಂಡರು.   ನಮ್ಮ ಸಮಾಜದ ಹುಲ್ಲು  ಕಡ್ಡಿ ಅಲುಗಲೂ  ಬೇಕಾದ ಹಲವು ಹತ್ತು ಕಮಿಟೀಗಳಲ್ಲಿ ವಿಶ್ವೇಶ್ವರರ ರಕ್ತ ಸಂಭಂಧಿಯೋ ಇಲ್ಲ ಭಕ್ತರೋ ಇದ್ದೇ ಇರುತ್ತಾರೆ. ಆ ಪ್ರಮಾಣದಲ್ಲಿ ನಮ್ಮ ಸಮಾಜವನ್ನು , ಸಮಾಜದ ಎರಡನೆ , ಮೂರನೆ ಸ್ಥರದ ನೇತಾರರನ್ನು ಆವರಿಸಿಬಿಟ್ಟಿದ್ದಾರೆ.  ಸರಕಾರೀ ನೌಕರರ ಪಡೆಯಲ್ಲಿ ಅಕ್ಷಯನಂತ ಅಭಿನವ ಕುಚೇಲರುಗಳ ದಂಡನ್ನೇ ಹಿಂದಿಟ್ಟುಕೊಂಡಿದ್ದಾರೆ . ಇಂತಿಪ್ಪ ನಮ್ಮ ವಿಶ್ವೇಶ್ವರ ಕಾಗೇರಿಯವರು ಮನಸ್ಸು ಮಾಡಿದರೆ ನಮ್ಮ ಸಮಾಜಕ್ಕೆ ಒಂದೇಕೆ ಹತ್ತಾರು ಕಡೆಗಳಲ್ಲಿ ಐದಾರು ಕೋಟಿಗಳ ಒಂದೇಕೆ ನಾಲ್ಕಾರು ಭವ್ಯ ಕಟ್ಟಡಗಳನ್ನು ತಾವೇ ಸ್ವತಹ ನಿರ್ಮಿಸಿ ಸಮಾಜದ ಶ್ರೇಯೋಭಿವ್ರದ್ಧಿ ತತ್ಕಾಲದಲ್ಲೇ ಕೈಗೊಳ್ಳಬಹುದಾದ ಧೀಮಂತ ವ್ಯಕ್ತಿತ್ವವುಳ್ಳವರನ್ನು ಹೊಂದಿದ ನಮ್ಮ ಈ ಸಮಾಜವೇಕೆ ಕಾರ್ಯಶೀಲವಾಗುವದಿಲ್ಲ?  ಇನ್ನು ತಮ್ಮ ಸಂಪರ್ಕ ಜಾಲದಿಂದ ಸಮಾಜಕ್ಕಾಗಿ ಒಮ್ಮೆ ಟವೆಲ್ ಹಾಸಿ ಪ್ರಯತ್ನಿಸಿದರೆ ನೂರಾರು ಕೋಟಿ ರೂಪಾಯಿಗಳು ಸಂಗ್ರಹವಾಗುವದರಲ್ಲಿ ಯಾವುದೇ ಸಂಶಯವಿಲ್ಲ ಎಂಬಂತಹ ರೋಚಕ ಬೆಳವಣಿಗೆ ಹೊಂದಿದ ವಿಶ್ವೇಶ್ವರರಿದ್ದೂ ನಮ್ಮ ಸಮಾಜ ಯಾಕೆ ಈ ಸ್ಥಿತಿಯಲ್ಲಿದೆ ?

ನಮ್ಮ ಸಮಾಜ ಈ ಸ್ಥಿತಿಯಲ್ಲಿದೆ ಎಂದರೇನರ್ಥ ?  ಎಲ್ಲಿದೆ ಕನಿಷ್ಟ   ಒಂದು ಸಾವಿರ   ವಟುಗಳು  ಸನಾತನ ರೀತಿಯಲ್ಲಿ ವಿದ್ಯಾಭಾಸ ಮಾಡುತ್ತಾ ಆಧುನಿಕ ಶಿಕ್ಷಣವನ್ನು ಪಡೆಯುವ ವ್ಯವಸ್ಥೆ ? ಎಲ್ಲಿದೆ ತಮ್ಮ   ಸನಾತನ ಪದ್ಧತಿಯ   ಜೀವನ ಸಾಗಿಸುತ್ತ , ಆಗಾಗ ಬರುವ   ತೊಂದರೆ ತೊಡಕುಗಳ ಕುರಿತ ಚಿಂತನೆ ನಡೆಸುತ್ತ   , ಅಭಿಮಾನ ಪೂರಕವಾಗಿ ತಮ್ಮ ಚಿಂತನೆಗಳನ್ನು ಹಂಚಿಕೊಳ್ಳುವ ವಾರ್ಷಿಕ ಒಂದೆರಡು ಸಮಾಜದ  ಸಮಾಗಮ ಕಾರ್ಯಕ್ರಮಗಳನ್ನು ನಡೆಸುವ ಸಾಮೂಹಿಕ ಕಾರ್ಯಗಳೆಲ್ಲಿದೆ? ಇಂದಿನ ಸಮಾಜ ಜೀವನದಲ್ಲಿ ಪ್ರಭಾವಿ ಜನರು ಎಂದು ಗುರುತಿಸಿಕೊಳ್ಳುವ  IAS  , IPS  , etc  ಉದ್ಯೋಗಗಳಿಗೆ ಸೇರಲು ನಮ್ಮ ತರುಣರನ್ನು ತಯ್ಯಾರಿಗೊಳಿಸುವ    ವ್ಯವಸ್ಥೆ ಎಲ್ಲಿದೆ?  ನಮ್ಮ ಸಮಾಜದ ಶೇಕಡಾ ಅರವತ್ತು ಕುಟುಂಬಗಳಾದರೂ  ಬಡತನ ರೇಖೆಗಿಂತ ಕೆಳಗಿನವರಿದ್ದಾರೆ, ಎಲ್ಲಿದೆ ಅವರನ್ನು ಆರ್ಥಿಕವಾಗಿ ಸಧೃಡಗೊಳಿಸುವ   ಕಾರ್ಯಕ್ರಮಗಳು ಅಥವಾ ಸರಕಾರದ ಆರ್ಥಿಕ ಕಾರ್ಯಕ್ರಮಗಳ ಪ್ರಯೋಜನ ಪಡೆಯಲು ಅವರಿಗೆ  ಮಾರ್ಗದರ್ಶಿ    ಜನಸಂಪನ್ಮೂಲದ ವ್ಯವಸ್ಥೆ ಎಲ್ಲಿದೆ  ?    ಸರ್ವೇಸಾಮಾನ್ಯವಾಗಿ ಎಲ್ಲ ರೈತರು ಸಾಲದ ಸುಳಿಯಲ್ಲಿ ಅರಿವಿದ್ದೋ ಅರಿವಿರದೆಯೋ ಮುಳುಗಿಹೋಗಿದ್ದಾರೆ.  ವಿವಿಧ ಹೆಸರಿನ ಸಾಲಗಳನ್ನು ವಿವಿಧ  ಸಂಸ್ಥೆಗಳಿಂದ ಪಡೆದು ,     ಹೆಚ್ಚಿನ ಹಣವನ್ನು ಅನುತ್ಪಾದಕ ರೀತಿಯಲ್ಲಿ ಖರ್ಚು ಮಾಡಿ ತಮ್ಮ ಆಸ್ತಿಗಳ ಮೇಲೆ    ಭೋಜಾ ಏರಿಸಿಕೊಂಡು  ಪ್ರತಿ ವರ್ಷ  ಆ ಸಾಲಗಳನ್ನು  ಅವಧಿ ವಾಡಾಯಿಸಿ  ಸಾಲ ಮನ್ನಾ ಆದೀತೆಂಬ   ಆಸೆಯಿಂದ ಕಣ್ಣು ಬಿಟ್ಟು  , ಮುಖಂಡರುಗಳ   ಮುಂದೆ ಬಾಯಿಮುಚ್ಚಿ ಬದುಕುತ್ತಿದ್ದಾರೆ.  ಯೋಚಿಸಿ, ಒಮ್ಮೆ ಈಗ ಅಥವಾ ಮುಂದೆ ನಾಲ್ಕಾರು ವರ್ಷಗಳಲ್ಲಿ ಸರಕಾರ ಆರ್ಥಿಕ ಮುಗ್ಗಟ್ಟಿನಿಂದ ಸಾಲ ಮನ್ನ ಅಸಾಧ್ಯವೆಂದು ಕೈಚೆಲ್ಲಿ ಸಾಲವಸುಲಾತಿಗೆ  ಮುಂದಾದರೆ  ಎಷ್ಟು ಹವ್ಯಕ ಬಡ  ಕುಟುಂಬಗಳ  ಯಜಮಾನರುಗಳು / ಕುಟುಂಬಗಳು  ಆತ್ಮಹತ್ಯೆಯ ಮಾರ್ಗವನ್ನು ಕಂಡಾವು? 

ನಮ್ಮ  ಸಮಾಜದ ಮುಂದಾಳುವೊಬ್ಬ ಇಷ್ಟು ಧೀರ್ಘ ಅವಧಿಗೆ ರಾಜಕೀಯ ಜೀವನದಲ್ಲಿ ಯಶಸ್ಸು ಪಡೆದಿದ್ದು ಅಭಿಮಾನದ ಸಂಗತಿ ಹೌದು. ಎರಡನೆ ಮಾತಿಲ್ಲ. ಅದೇ ಸಮಯದಲ್ಲಿ ತನ್ನ ಸಮಾಜಕ್ಕೆ ,  ತನ್ನ ಕ್ಷೇತ್ರದಲ್ಲಿ ತನ್ನ ಸಮಾಜದ ಸಹಜೀವಿಗಳಿಗೆ ನೇರವಾಗಿ ಪ್ರಯೋಜನವಾಗಬಲ್ಲ , ಅನುಕೂಲತೆಗಳು ಜನ ಸಾಮಾನ್ಯನಿಗೂ ತೋರುವ ರೀತಿಯಲ್ಲಿ ಏನೇನಾಗಿವೆ   ಎಂದು ಯೋಚಿಸಬೇಕಲ್ಲವೇ? ವಿಶ್ವೇಶ್ವರರು ಪ್ರಸ್ತುತ ಕಾಲದಲ್ಲಿ ಒಂದು ಉದಾಹರಣೆ.  ಇದೇ ರೀತಿ ನಮ್ಮ ಸಮಾಜದಲ್ಲಿ ಸಾಕಷ್ಟು ಧೀಮಂತ ನೇತಾರರು ಆಗಿಹೋಗಿದ್ದಾರೆ. ಅಧಿಕಾರದಲ್ಲಿಲ್ಲದಿದ್ದರೂ ಇದೇ ರೀತಿಯ ಸಾಕಷ್ಟು ನೇತಾರರು ನಮ್ಮ ಮಧ್ಯೆ ಇದ್ದಾರೆ. ನೇತಾರರೆಂದರೆ ಬರೇ ದೀಪ ಬೆಳಗುವದು , ಭಾಷಣ ಮಾಡುವದು ಮಾಡಿದರೆ ಮುಗಿದಿಲ್ಲವಲ್ಲವೇ? ಅವರ ನೇತ್ರತ್ವದಿಂದ ಸಮಾಜಕ್ಕೆ, ಸಮಾಜದ ಪ್ರತಿ ಸದಸ್ಯರಿಗೂ   ಒದಗಿ ಬಂದ ಪ್ರಯೋಜನದಿಂದ ಉಘೇಉಘೇ ಎನ್ನುವಂತಿರಬೇಕಲ್ಲವೇ?

ಹಾಲಿ ವರ್ತಮಾನ ಸಮಸ್ಯೆಗಳಲ್ಲಿ ಒಂದಾದ ಹಳ್ಳಿಯ ಹವ್ಯಕ ಗಂಡು ಮಕ್ಕಳಿಗೆ ಪ್ರಾಯ ನಲವತ್ತಾದರೂ ಮದುವೆಗೆ ಹೆಣ್ಣಿಲ್ಲ ಎಂಬುದಕ್ಕೆ ಪರಿಹಾರ ಎಂದು ನಮ್ಮ ನೇತಾರರು ನಮ್ಮೆಲ್ಲರ ಅಂದರೆ ಸಂಘಟನೆಗಳ ಖರ್ಚಿನಲ್ಲಿ ಕಾಶ್ಮೀರ ಸುತ್ತಾಡಿ ನಿರಾಶ್ರಿತ ಕಾಶ್ಮೀರೀ   ಪಂಡಿತರ ಕೂಸುಗಳನ್ನು ತಂದು ನಮ್ಮ ಯುವಕರ  ಜೀವನದಲ್ಲಿ ಕಾಶ್ಮೀರೀ ಸೇಬು   ತೋಟಗಳಂತೆ ಸೌಂದರ್ಯ ಕಾಣಿಸುತ್ತೇವೆ   ಎಂದು ಹೊರಟ ನೇತಾರರು ಏನು ಮಾಡಿದರು ಎಂಬುದು ಯಾರಿಗಾದರೂ ತಿಳಿಯಿತೆ  ? ಇವೆಲ್ಲ ನಮ್ಮ ನೇತಾರರ ಕಾರ್ಯ ವೈಖರಿಯನ್ನು ತೋರಿಸುತ್ತವೆ. ನಮ್ಮ ಹಿರಿಯರು ಹೇಳುತ್ತಾರಲ್ಲ - " ತಮಾ  ... ಅನ್ನ ಬೆಂತಾ... ನೋಡಲು ಒಂದು ಅಗುಳು ಅಕ್ಸಿ ನೋಡ್ರೆ ಸಾಕೋ........ "


ಏನಂತೀರಿ ?


ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.

hariharbhat.blogspot.com

February 09, 2013.

Tuesday, February 5, 2013

ಮಠ,ಮಸೀದಿ, ಚರ್ಚು ಗಳ ಪ್ರತಿನಿಧಿ ಸಭೆ

ನೀವೊಮ್ಮೆ ಈ ಲೇಖನ ಓದಿ. ಈ ಲೇಖನ ಓದಿ ನನಗನಿಸಿದ್ದು ಬರೆಯುತ್ತಿದ್ದೇನೆ.

ಪುಟ 8  ಕನ್ನಡ ಪ್ರಭ, ಫೆಬ್ರವರಿ 06  , 2013  " ನವ ಧಾರ್ಮಿಕ ನಾಯಕತ್ವಕ್ಕೆ ದಕ್ಕಲಿ ಪ್ರಜ್ಞಾವಂತರ ಬೆಂಬಲ " 
http://archives.kannadaprabha.com/pdf/epaper.asp?pdfdate=2/6/2013


ಈ  ದಶಕದಲ್ಲಿ ಹಿಂದೂ ಧರ್ಮದ ಎಲ್ಲ ಸ್ವಾಮೀಜಿಗಳಲ್ಲಿ ಸಮಾನ ಮನಸ್ಕ ಚರ್ಚೆಗಳು ನಡೆಯುವಂತೆ ತೋರುತ್ತಿವೆ. ಅದೇ ರೀತಿ ಸ್ವಾಮೀಜಿಗಳ ಬೆಂಬಲ ಪಡೆದು ಆಯ್ಕೆಯಾದ ಜನಪ್ರತಿನಿಧಿಗಳು ತಮ್ಮ ಸಮಾಜ ಸೇವೆಯ ಕಾರ್ಯ ಚಟುವಟಿಕೆಗಳಲ್ಲಿ ಸೋಲುತ್ತಿದ್ದಾರೆ ಮತ್ತು ವೈಯಕ್ತಿಕ ಲಾಭಗಳತ್ತ ಕೇಂದ್ರೀಕರಿಸಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಇಂದಿನ ದಿನಗಳಲ್ಲಿ ಪೀಠಾಧಿಪತಿಗಳಾಗುವವರು ಸಾಮಾನ್ಯವಾಗಿ ಆಧುನಿಕ ಶಿಕ್ಷಣದ ಜೊತೆಗೆ ಸನಾತನ ಧರ್ಮೀಯ ಶಿಕ್ಷಣದ ಜ್ಞಾನದಲ್ಲಿ ಪಳಗಿರುತ್ತಾರೆ.


ಹೀಗಿರುವಾಗ ಎಲ್ಲ ಮಠಗಳಲ್ಲಿ ಪೀಠಾಧಿಪತಿಗಳು ಪ್ರಸಕ್ತ ರಾಜಕೀಯ ವ್ಯವಸ್ಥೆಯ ಮುಂದಾಳತ್ವ ವಹಿಸಲು ಯೋಗ್ಯ ಆಧ್ಯಾತ್ಮ ಭಾವನೆಯುಳ್ಳ ಸನ್ಯಾಸಿಯೊಬ್ಬರ ನೇತ್ರತ್ವದಲ್ಲಿ ಪ್ರತಿ ಮಠವೂ ವಿಭಾಗವೊಂದನ್ನು ತೆರೆದು, ಚುನಾವಣೆಗಳಲ್ಲಿ ಸ್ಪರ್ಧಿಸಿ ರಾಜಕೀಯ ಶಕ್ತಿಯನ್ನು ನೇರವಾಗಿ ಪಡೆದು ಈ ದೇಶದ ಜನರ ಶ್ರೇಯೋಭಿವ್ರದ್ಧಿ ಕೈಗೊಳ್ಳಬಹುದಲ್ಲವೇ?  ಪ್ರಸಕ್ತ ಸನ್ನಿವೇಶದಲ್ಲಿ ಬಹುಧರ್ಮೀಯ, ಬಹು ಜಾತೀಯ ಜನಾಂಗದ ಜನರು ಈ ದೇಶದಲ್ಲಿ ವಾಸಿಸುತ್ತಿರುವದರಿಂದ , ಎಲ್ಲಾ ಧರ್ಮ, ಮತ, ಜಾತಿ ಗಳಲ್ಲಿರುವ ಆಧ್ಯಾತ್ಮಿಕ  ಗುರುಗಳನ್ನು, ಯಾವುದೇ ತೀವ್ರಗಾಮಿ , ಉಗ್ರಗಾಮಿ ವಿಚಾರ ರಹಿತವಾದ   ಮಠ,ಮಸೀದಿ, ಚರ್ಚು ಗಳ  ಪ್ರತಿನಿಧಿ ಸಭೆ ರಚಿಸಿ, ರಾಜಕೀಯ ಸಂಸ್ಥೆಗಳನ್ನು ಮುನ್ನಡೆಸಬಹುದಲ್ಲವೆ?


ಕೇವಲ ಆಧ್ಯಾತ್ಮಿಕ ಹಿನ್ನೆಲೆಯುಳ್ಳ, ಆಧ್ಯಾತ್ಮಿಕ ತತ್ವಗಳೀಗಷ್ಟೇ ಕಟ್ಟು ಬಿದ್ದಿರುವ ಹಿಂದೂ, ಮುಸ್ಲಿಂ ಕ್ರೈಸ್ತ ಇತ್ಯಾದಿ ಗುರುಗಳನ್ನು ಪಾರ್ಲಿಮೆಂಟ್ , ಅಸೆಂಬ್ಲಿಯ ಸದಸ್ಯರುಗಳನ್ನಾಗಿಸಿ ಆಡಳಿತ ನಡೆಸಿದರೆ , ಈ ದಿನಗಳಲ್ಲಿ ದೇಶ , ರಾಜ್ಯಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಮುಕ್ತಿ ಸಾಧ್ಯವೇ ಎಂದು ಪ್ರಯತ್ನಿಸಬಹುದಲ್ಲವೇ?


ಏನಂತೀರಿ? ಬರೆಯಿರಿ comments .  

ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
hariharbhat .blogspot .com

Sunday, February 3, 2013

ಹವ್ಯಕ ಹುಡುಗಿಯರು ಹೀಗಿರುತ್ತಾರೆ

ಈ ಹವ್ಯಕ ಹುಡುಗಿ ಇಪ್ಪತ್ತೈದು ವರ್ಷದ ಆಚೀಚೆಯವಳಿರಬಹುದು . ಈ ಹುಡುಗಿಯ ಜೊತೆ ನಾನು ನಡೆಸಿದ chat  ಓದಿ ನೋಡಿ.  ನನ್ನ ಅನಿಸಿಕೆ , ನೂರಕ್ಕೆ ತೊಂಭತ್ತೊಂಭತ್ತು ಶೇಕಡಾ  ಹವ್ಯಕ ಹುಡುಗಿಯರು ಹೀಗಿರುತ್ತಾರೆ  ವಿನಃ , ಸ್ಟೇಜ್ ಕಟ್ಟೆ ಹತ್ತಿ, ಹವ್ಯಕ ಹುಡುಗಿಯರು ಓಡಿಹೋಗುತ್ತಾರೆ, ಹವ್ಯಕ ಹುಡುಗಿಯರು ಜಾರುತ್ತಿದ್ದಾರೆ, ನಾವು ಮುಖಂಡರುಗಳು ಅದಕ್ಕೆ ಪರಿಹಾರ ನೀಡುತ್ತೇವೆ ಎಂದು ಬೊಗಳೆ ಬಿಡುತ್ತ , ಯಾರದೋ ದುಡ್ಡು ಯಲ್ಲಮನ ಜಾತ್ರೆ ಮಾಡುವ ಮುಖಂಡರುಗಳ ಮಾತಿನಂತಲ್ಲ. ಆ ರೀತಿ ಮುಖಂಡರುಗಳು ಕಂಡಾಗ, ಆ ರೀತಿ ಅವರ ಮಾತುಗಳನ್ನು ಕೇಳಿದಾಗ ಆ ಮುಖಂಡರುಗಳನ್ನು  ಖಂಡಿಸಿ, ಪ್ರಶ್ನಿಸಿ, ನಿಮ್ಮೂರಿಗೆ ಬಂದಾಗ ಓಡಿಸಿ, ಅದೊಂದೇ ದಾರಿ, ಈ ರೀತಿ ಮುಖಂಡರುಗಳಿಂದ ಸಮಾಜವನ್ನು ರಕ್ಷಿಸಿ, ಇಂದಿನ ಯುವಜನತೆಯನ್ನು ಶ್ರೇಯೋಭಿವೃದ್ಧಿಯತ್ತ ಕೊಂಡೊಯ್ಯಲು: 

**********************************

Namaskara

          ............... namaskara. hegiddiiri ?

nan ಚನಗಿದ್ದಿನಿ  ,   nivu hegiddira?

                   good, i am. what job in ITC ?

R&D

                   oh ! Wah ! entah R & D ?

ITC products n others mele Research n development wrk

                      recritment nalli influence idda ?

nange yavdu inflnce n refrnce illeee  ,sir

                     elli odiddu? enu odiddu?

nan BSc tanka ........ili amele MSc na .......... li

nivelli wrk madta idri..

                      good, matte recruitment hegaatu? en experience  recruitment  time alli ?

Noukri.com

naanu MBA teaching maadte, ICSE/CBSE sci, math teaching maadte,
maneyalle

estu round test and interview aagittu?

oh howdaa

call bandittu so late rply

nange 3 round Intrvw agittu

February 1

oh, i see

Today

namaskara arama

matte ............ arama, ivattu kelasa jora?

hmm

jorenille

mane kelsa aste

nimagella 5 days week?

han

mane elli, appa amma entha maadthya?

mane ..........

appa amma 2ru alle irta

illi PG ?

ille nanu matte nan anna seri 1 mane madka idyaa

oh, anna entha maadta?

avnu wrk madta

oh good

ellidri? blr lli

................. nagarli

ninne naataka nodidra?

ille

gotte ittillee

nataaka idanata ile andre bartidi

nam mane inda havyaka mahasabha hatragtu

namma samajada leadershippe hige, che, chennagittu nataka,

17.02.2013 sunday mayuri netratvadalli hengaleyara yaxagaana banni.

havyak membership illadidre member aagi, patrike battu, ella mahiti irtu

anna enta kelasa?

hmm addilleeee

thanks

nanna maataadsi, kudle membership maadste.

hmm addille

nxt wk urig hopa vichariddu

hogde idre barti

nan matonnd anna member idda

........... uru elli?

.............leya

...................i templ hatra

annana hesrenu alliroru?

................. Bhat

............. irta

oho, illi anna enta kelasa?

avn ond shop iddu

....................rli

DTP centr

...................li?

han

howdu

havyakaru ellaa kelsadallidda, organisation saldu

hmm

nija

en madadu

havyakaranna havyakare mund baral bidtville

adke hegagtiddu

ellaru 1de tara antalla kelvru

ningottiro ella kusgala, maanigala data collect maadi, ondu meeting madana, enaadru fruitful work maadana

hmm adille

adre nange blrli frnds ille

ella............lee idda

IAS, IIT ge bada makkala tayari maado prayatna maadaana, ondu mane baadige hidadu, hattu makkala bitre odkota, develop aagta

hmmm

howdu

olle salahe

baaki igina kaaladalli routine aagi hogtu, enandru fuitful kelasa madidre, ade munduvaridu ellorigu olledaagtu

adu nija

blr lli ollolle avakaasha iddu, guide madovu kammi, aduu.. support madovu
kammi
hmm

agikku

nange blr hosdu

entu gottille nangilli

haagidre, modalane paatha, yaarannu iti miti bittu nambolille

illi akkapaakkad maneyavu matadtvillee eno ontara vichitraa life blr du
nan sadarnak yarnu nambtnillee

huchchuchchaada night life ge baliyappalille.

PG li irad beda antane annan joteg bitida maneli

hmm

good decision

hmm nan appa yavde decision tagandru

saryage tagatta

good confidence on parents is first successful step in life

hmm nange ellarkinta imp parents avu changidre navu changirlakku

total family spirit, leads to fruitful end in life

hmmm

nan ega ist matadtiddi andre adke nan parents karana

U have good thoughts, .......... , keep it up, good wishes, come to function in
Mahasabha, we shall meet there, good wishes.

thank u

muddam barti manele idre

nange Havyaka mahasabhadmele tumba gourava iddu

i like havyaka community

havyakaru mund baravu

ella kade havyakaru famous agavu

havyakaree havyakaranna mund taravu

*****************

ನಿಮ್ಗೇನನ್ಸ್ತು?  ಬರೆಯಿರಿ.  ಕಾದಿರುವೆ.

ಹರಿಹರ ಭಟ್,
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
Feb  03  , 2013 .

ಹವಿಗನ್ನಡ ನಾಟಕ " ಆಸ್ತಿ ದಕ್ಕಿದ್ದು ಯಾರಿಗೆ ? "

 ಹವಿಗನ್ನಡ ನಾಟಕ " ಆಸ್ತಿ ದಕ್ಕಿದ್ದು ಯಾರಿಗೆ ? "


ಬೆಂಗಳೂರಿನ ಯಾವುದೇ ಮೂಲೆಯಲ್ಲಿದ್ದು ಹವ್ಯಕ ಮಹಾಸಭೆಯ ಸಭಾಭವನದಲ್ಲಿ ನಿನ್ನೆ ನಡೆದ ಹವಿಗನ್ನಡ ನಾಟಕಕ್ಕೆ ಬೈಂದ್ರಿಲ್ಲೆ ಎಂದರೆ ನೀವೇನೋ ಕಳ್ಕಂಡ್ರಿ ಎಂದೇ ಅರ್ಥ. ಹೇಗೆ ಎಂದರೆ ನೀವೇಷ್ಟೇ ನಿತ್ಯಜೀವನದಲ್ಲಿ ಮೇಲೇರಿರಿ -  ಇಲ್ಲೇ ಕೆಳಗಣ ಕಿಬ್ಳಿಲೇ ಇದ್ದಿರಿ, ತಾಯ್ನುಡಿ , ನಲ್ನುಡಿ, ಜೇನ್ ನುಡಿ , ಚೆನ್ನುಡಿ , ಅಂಬೆಗಾಲಿಕ್ಕಿ ನಾವ್ ಆಚೆ ತೂರಿದ್ದನ್ನ ನಾವೇ ಹೆಕ್ಕಿ ಕಣ್ಣರಳಿಸಿ ಹಲ್ಕಿರಿದಾಗ   ಥು .. ಥೂ .... ಏನ್ ಕರ್ಮಾನೋ, ಎಲ್ಲೋಗ್ ಸತ್ರೋ ...... ಎಲ್ಲಾ ಆನೇ ನೋಡ್ಕಳಾಕು , ಖರ್ಮ ಖರ್ಮ ....... ಎಂದ ಆಯಿಗೆ / ಅಬ್ಬೆಗೆ  , ಬೆಬ್ಬೆ ............. ದೆಬ್ಬೆ .......... ನಗು ನೀಡಿ , ಮೊದಲ ಅಕ್ಷರ ಆ ..... ಯೀ........ , ಅ ........ಬ್ಬೇ.............  ಎಂಬಲ್ಲಿಂದ ಆರಂಭವಾದ ನಮ್ಮ ನುಡಿ ಹವಿಗನ್ನಡದಲ್ಲಿ ನಾಟಕದ ಮಾತುಗಳು , ಹೋರಾಟ, ದುಃಖ , ಸಂತೋಷ , ಹಾಸ್ಯ ಎಲ್ಲವಕ್ಕೂ ಏನೋ ಹವಿಗನ್ನಡದ ಲೇಪನವಿದ್ದಂತೆ ಅನಿಸಿ , ಬಾಲ್ಯದಲ್ಲಿ ನೋಡಿದ, ನಾಟಕ ನೋಡುವ ರೂಢಿ ಇರುವವರಿಗೆ ಇತ್ತೀಚೆ ನೋಡಿದ ನಾಟಕಕ್ಕಿಂತ ಇನ್ನೇನೋ ವಿಭಿನ್ನ ರುಚಿ ನೀಡುವ ನಾಟಕ  ನೋಡುವ  ಅವಕಾಶದಿಂದ ವಂಚಿತರಾದಿರಿ.


ಗಾಳಿ ಸತ್ಯನಾರಾಯಣ ಭಟ್ರು , ಅದೇ ನಿಮ್ಮನೆ ಮಾಣಿ ಗಾಳಿ ಭಟ್ರು ಕವಳದ ಮೇಲೆ ಕವಳ ಜಗಿದು, ಪೇಪರ್ ಮೇಲೆ ಪೇಪರ್ ಹರ್ದ್ ಎಸ್ದು , ಮುಂದಿನ ಅಂಕ ಎಂಥ ಬರ್ಯೇಕು ಹೇಳಿ ತಲೆ ಓಡ್ದಿದ್ದಾಗ   ಸಿಟ್ಟ ಬಂದು ಪೆನ್ ಬಿಸಾಡಿ , ಪೆನ್ ತಪ್ಪಲೆ ತಡ ಮಾಡ್ದ ಮಗನ ಮೇಲೆ ಎಗರಾಡಿ, ಚಲೋ ಬರ್ದ್ನನೆ ಎಂದು ಶ್ರೀಮತಿಗೆ ಪುಸಲಾಯ್ಸಿ ರಾತ್ರಿ - ಹಗಲು ಎಲ್ಲಾ ಮನೆ ಒಳಗೆ ಹೆರ್ಗೆ , ಆಚೆ ಈಚೆ ಸುತ್ತಾಡಿ , ಹೊತ್ ಹೊತ್ಗೆ ಊಟ ಮಾಡ್ದೆ ಹೆಂಡ್ತಿನೂ ಕಾಯ್ಸಿ ಬರ್ದ ನಾಟಕ, ನೋಡೋ ಹಾಂಗಿತ್ತು ಎಂದರೆ ನಿಂಗೋಕೆಲ್ಲ ಹಾಗೆ ಅರ್ಥ ಅಪ್ಪುಲೇ ಸಾಧ್ಯ ಇಲ್ಲೇ.  ಸಣ್ಣಕ್ಕಿದ್ದಾಗ ನಾವು, ನೀವು ನೋಡ್ದ ಯಾವ್ ನಾಟಕದ ಕಂಪನಿ ನಾಟಕಕ್ಕೂ ಕಡಮೆ ಇಲ್ಲ್ಯೊ ಭಾವಾ .......  ಹೇಳಾಂಗಿತ್ತು    ಗಾಳಿ ಭಾವನ ನಾಟ್ಕ.



ಎಲ್ಲೋ ಸಿದ್ದಾಪುರದ ಬದಿ ತೋಟದ ಮನೆ ಬದಿ  ಹೆಗ್ಡೇರ್ರ   ಹಿಡ್ಕಬೈಂದ್ವಕು ಹೇಳಿ ಕಣ್ಣ  ಅಗ್ಲಾ ಮಾಡ್ಕಂಡ್   ನೋಡ್ದ್ರೆ.....  ನಮ್ಮ  ಕೆ. ಏಸ್. ಎಫ್. ಸಿ   ಜಿ ಜಿ ಹೆಗ್ಡೇರು . ಚಂದಕ್ಕೆ ಕಚ್ಚೆ ಪಂಚೆ ಹಾಕ್ಕಂಡು ಮುಖದಲ್ಲೆಲ್ಲಾ ಚಿಂತೆ ತುಮ್ಬ್ಕಂಡು ಪ್ರಾಯ್ದಕಾಲದಲ್ಲಿ ಘಟ್ಟದ ಮೇಲೋಗಿ ಕೊಟ್ಟ್ಕೊನೆ ಮಾಡಿ, ಅದಿದು ಚಾಕರಿ ಮಾಡಿ , ಇದ್ದ ಹತ್ತ ಗುಂಟೆ ತ್ವಾಟದಲ್ಲಿ ಜೀವನ ಮಾಡ್ಕೋತಾ , ಹೆರಿಹೆಂಡ್ತಿ ಸತ್ತೋದಾಗ ಕಿರಿ ಹೆಂಡ್ತಿ ಮಾಡ್ಕಂಡು ಹೇರಿ ಹೆಂಡ್ತಿ ಮಗನ್ನ ಚಲೋ ಓದ್ಸಿ ಮುಂಬೈನಲ್ಲಿ ಕೆಲಸ ಮಾಡ್ತಾ ಮನೆ ಕಡೆ ಬಾರದೆ ಇದ್ದ ಮಗನ ಚಿಂತೆ ತುಂಬ್ಕಂಡು ಇದ್ರೆ ,  ಮನೆಲಿದ್ದ ತಿಜೋರಿ ಮೇಲೆ ಕಣ್ಣಿಟ್ಟು  ಅಪ್ಪಂಗೆ   ಗೊತ್ತಾಗದ ರೀತಿಲಿ , ಗಂಡಂಗೆ ಗಮನಕ್ಕೆ ಬರದಿದ್ದ ತೆರದಲ್ಲಿ  ತಮ್ಮಷ್ಟಕ್ಕೆ   ತಾವೇ ದುಡ್ಡು, ಕಾಸು ಸೇರ್ಸೊ ಎರಡನೆ ಹೆಂಡ್ತಿ ಮಗ ಮತ್ತು ಈ ಎರಡನೆ ಹೆಂಡ್ತಿ ಜೊತೆ ಇಳಿ ವಯಸ್ಸಿನಲ್ಲಿ ಸಂಸಾರ ದೂಡುತ್ತಿರೋ ಗಣಪಯ್ಯ .  ನಮ್ಮ  ಜಿ .ಜಿ.ಹೆಗಡೇರು ಗಣಪಯ್ಯನ ಪಾತ್ರದಲ್ಲಿ  ದಿನ ನಿತ್ಯ ನಾಟಕದ ಪಾತ್ರಾ ಮಾಡೊ ಕಂಪನಿ ನಾಟಕದ ಪಾತ್ರಧಾರಿಗಳಿಗೆ ಸಡ್ಡು ಹೊಡ್ಯೋ ರೀತಿ ಡೈಲಾಗ್ ಡೆಲಿವರಿ , ಸಹವರ್ತಿ ಪಾತ್ರಧಾರಿಗಳಿಗೆ ಸಪ್ಪೋರ್ಟ್ ಮಾಡ್ತಿದ್ರು  .........     ಅಣ್ಣಯ್ಯಾ, ಮತ್ತೊಂದ್ ಚಾನ್ಸ್ ಸಿಕ್ಕದಾಗ ತಪ್ಪಸಕಳಡಿ ಮತ್ತೆ  ಹೂಂ.....ssssss .


ಎರಡನೆ ಹೆಂಡ್ತಿ ಹೆಳ್ದ್ನಲೆ ಅಕ್ಕ...., ಅದು ಮಾದ್ರಿ ಹೇಳಿ ಹೆಸ್ರಿಟ್ಕಂಜೆ.ಎ .....  ಮಾದ್ರಿ ಅಂದ್ರೆ ಮಾದ್ರಿ ಇದ್ದಾಗೆ ಇದ್ದಾಗೇ..........  ಇತ್ತು ನೋಡು ಮತ್ತೆ ............ ನಾಟ್ಕ ಮುಗ್ದಮೇಲೆ ಚಲೋ ಮಾಡಿದ್ಯೇ ತಂಗೀ ......  ನಿಂಗೆಲ್ಲಾತೇ ..... ಹೇಳಿ ಮಾತಾಡ್ಸೇಕು ಮಾಡ್ದೆ   ............  ನಂ ಬದಿ ಕೂತ ಮಾಣಿ ಹೇಳ್ದೋ ...  ಅದು ಹೆಂಗ್ಸಲ್ದೆ ಅಕ್ಕಾ .......... ಅಂವ ರಾಧಾಕೃಷ್ಣ ಬೆಳೆಯೂರು ಹೇಳಿ , ಯಕ್ಷಗಾನ ಕುಣಿತಿಲ್ಯನೇ ..... ಅವೇ ಕಂಡ್ಯ ........... ನಂಗಂತೂ ಅವ ಮಾಡಿದ್ದು ಬಾಳಾ ಇಷ್ಟಾಗೋತು ........... ಸಾಬಣ್ಣಣ್ಗೆ  ಫಲ ಗುತ್ತಿಗೆ ಕದ್ದ್ಮುಚ್ಚಿ ಕೊಟ್ಟಿದ್ದ ಹೆಳೋಕಾದ್ರೆ   ಚೆಂದಿ ಮುಖ ಮಾಡಿದ್ದೋ ನೋಡು .......



ಇನ್ನು ಪ್ರಶಾಂತ ಮೂರುರು ಹೇಳೊ ಮಾಣಿ ಜಾತ್ರೆ ಟೆಂಟ್ ಬಾಗಲಲ್ಲಿ ಟಿಕೆಟ್ ಕೊಡ್ತಿದ್ದದ್ದು, ಜಾತ್ರೆಯಲ್ಲಿ ಪಾತ್ರೆ ಅಂಗಡಿ , ಹೂವಿನ , ಪ್ಲಾಸ್ಟಿಕ್ ವ್ಯಾಪಾರಿಗೋ ಎಲ್ಲ ಚಲೋ ಚಲೋ ಅಭಿನಯ ಮಾಡಿದ್ದ. ನೀನಾಸಂನಲ್ಲಿ ಪಳಗಿದ ಮಾಧವ , ಕಿರಿಹೆಂಡತಿಯ ಮಗ ಶಂಕರನಾಗಿ , ಅತಿ ಸರಳವಾಗಿ ಯಾವುದೇ ಲೋಪಗಳು ಕಾಣಿಸದಂತೆ ಅಭಿನಯಿಸಿದ್ದು ಗಮನಸೆಳೆಯಿತು.  



ಈ ನಾಟಕದಲ್ಲಿ ಶಂಭಣ್ಣ ಪಾತ್ರ , ನಾಟಕದ ಖೂಳನಾಯಕನ ಪಾತ್ರ. ಅಂದರೆ ಶಕುನಿ ಇದ್ದಂತೆ. ಎರಡನೇ ಹೆಂಡತಿ ಮತ್ತು ಅವಳ ಮಗನಿಗೆ ದುರ್ಭೋಧೆ ಮಾಡಿ , ಆಸ್ತಿ - ತಿಜೋರಿ ಮೇಲೆ ಕಾಕ ದೃಷ್ಟಿ ಬೀಳುವಂತೆ  ಜಗಳ , ಭಿನ್ನಾಭಿಪ್ರಾಯ ಪ್ರಚೋದಿಸುವ ಈ ಪಾತ್ರ ಮಾಡಿದವರು ಸದಾನಂದ ಹೆಗಡೆ.  ವೇಷ ಭೂಷಣಗಳಲ್ಲಿ  ಮಾಸ್ಟರ್ ಹಿರಿಯಣ್ಣಯ್ಯ ನವರನ್ನು ಅನುಸರಿಸುವ ಪ್ರಯತ್ನ ಮಾಡಿದಂತೆ ಅನಿಸಿತು. ಈ ದಿಶೆಯಲ್ಲಿ  ಸಫಲತೆಯನ್ನು ಕಂಡ ಸದಾನಂದ ಹೆಗಡೆಯವರು , ಪಾತ್ರ ಪೋಷಣೆಯನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಭಾವಿಯಾದ  ಧ್ವನಿಯ  ಏರಿಳಿತಗಳಿಂದ , ಕೊಂಕು ದ್ವನಿ ವ್ಯಕ್ತಪಡಿಸಿ ,  ಸ್ವಲ್ಪ ಮಾತಿನ ಮಲ್ಲನಾಗಿ ಎಲ್ಲರ ಮನ ಗೆಲ್ಲಬಹುದಾದ ಅವಕಾಶಗಳನ್ನು ಮುಂದಿನ ದಿನಗಳಲ್ಲಿ ಬಳಸಿಕೊಳ್ಳಬಹುದು.




ಹಿರೇ ಹೆಂಡತಿ ಮಗ ಸುರೇಶನಾಗಿ ಅಭಿನಯಿಸಿದ ಪ್ರಕಾಶ್ ಕಲಸಿ ಡೈಲೊಗ  ದೆಲಿವೆರಿಯಲ್ಲಿ  ಮತ್ತು ಅಭಿನಯದಲ್ಲಿ ಇನ್ನೂ  ಪಳಗಬೇಕಾಗಿದೆ, ಪೂರ್ವ ತಾಲೀಮು ಸಾಕಷ್ಟು ಆದಂತಿಲ್ಲ.  ಮುಂಬೈ ನಿವಾಸಿ ಸುರೇಶನಾಗಿದ್ದರಿಂದ ಓವರಕೊeಟ್ , ಟೈ ಧರಿಸಬಹುದಿತ್ತು.   ಜಿ.ಜಿ. ಹೆಗಡೆಯವರ ಮುಖದ ವರ್ಣಿಕೆಯಲ್ಲಿ  ಇಳಿವಯಸ್ಸು ಸೂಕ್ತ ಬಣ್ಣಗಳಿಂದ ಇನ್ನೂ ಹೆಚ್ಚಿನ ಶೋಭೆ ತಂದಿದ್ದರೆ ಅವರ ಅಭಿನಯ ಇನ್ನೂ ಪ್ರೌಢವಾಗಿ ಹೊರಹೊಮ್ಮುತ್ತಿತ್ತು. ಒಂದೆರಡು ಸರ್ತಿ ಜಿ.ಜಿ. ಹಗಡೆಯವರು ಹವಿಗನ್ನಡದ ಬದಲು ಶುದ್ಧ ಕನ್ನಡ ಬಳಸಿದ್ದು ಆಕ್ಷೇಪಣೀಯವಾದರೂ , ಎತ್ತಿ ತೋರ್ಪಡಿಸುವಂತಹದ್ದೇನಲ್ಲ. 



ನಾಟಕದಲ್ಲಿ ಸಾಗರ ಜಾತ್ರೆಯ ಸಂಯೋಜನೆ, ಹಿನ್ನೆಲೆ ಸಂಗೀತ, ಜಾತ್ರೆಯ ಗೌಜು ಗದ್ದಲ ಬಹು ನೈಜವಾಗಿ  ಜಾತ್ರೆಯಲ್ಲಿದ್ದೇವೋ ಅನಿಸುವಂತಿತ್ತು.  ಡಾನ್ಸ್ ನಡೆಯುವಾಗ ಶಂಭಣ್ಣ, ಶಂಕರ ಪ್ರೇಕ್ಷಕರ ಎದುರು ಸಾಲಿನಲ್ಲಿ ಕುಳಿತು , ಡಾನ್ಸ್ ಎಂಜಾಯ್ ಮಾಡುವವರು ಮಾಡುವ ಗದ್ದಲ, ಪುಂಡಾಟಿಕೆಗಳನ್ನು ತೋರಿಸಿದ್ದರೆ ಇನ್ನೂ ಪ್ರಭಾವಿಯಾಗುತ್ತಿತ್ತೇನೊ !! ಜಾತ್ರೆಯ ಗೊಂಬೆ ಕುಣಿತವನ್ನು ಅತ್ಯದ್ಭುತವಾಗಿ ಗಾಳಿ ಭಟ್ರು , ಅವರ ಮಗ ಅಚ್ಯುತ್ ಭಟ್ ಪ್ರಸ್ತುತಪಡಿಸಿದರು. ವಿವಿಧ ಮುಖ ವರ್ಣಿಕೆಗಳನ್ನು ಕ್ಷಣದಲ್ಲಿಯೇ  ಅಚ್ಚುಕಟ್ಟಾಗಿ ಬದಲಾಯಿಸುತ್ತ , ಪ್ರೇಕ್ಷಕರಿಗೆ   ಹಿಮ್ಮುಖವಾಗಿ, ಮುಮ್ಮುಖವಾಗಿ ಆಂಗಿಕ ಹಾವ ಭಾವಗಳ ಪ್ರದರ್ಶನ  ಮಾಡುತ್ತ , ಒಮ್ಮೊಮ್ಮೆ ಪ್ರೇಕ್ಷಕರೇ, ನರ್ತಿಸುವವರು ನಮ್ಮತ್ತ ಮುಖ ಮಾಡಿ ನರ್ತಿಸುತ್ತಿದ್ದಾರೆಯೇ ಅಥವಾ ಬೆನ್ನು ಮಾಡಿ ಅಂದರೆ ಹಿಮ್ಮುಖವಾಗಿ ನರ್ತಿಸುತ್ತಿದ್ದಾರೆಯೇ  ಎಂಬ ಯೋಚನೆಮಾಡಲಾಗದ ರೀತಿಯಲ್ಲಿ ಪರಿಪಕ್ವವಾಗಿ ನರ್ತನ ನೀಡಿದರು. ಈ ಡಾನ್ಸ್ ಗೆ ನೀಡಿದ ವ್ಯಾಖ್ಯಾನದ   ಅವಶ್ಯಕತೆ ಇರಲಿಲ್ಲ . ವ್ಯಾಖ್ಯಾನ ರಸಾಭಾಸ , ರಸಭಂಗ   ಉಂಟುಮಾಡಿತು. ಅಲ್ಲದೆ ಡಾನ್ಸ್ ಬಹು ಹೊತ್ತು ನಡೆದಿದ್ದರಿಂದ , ಏಕತಾನತೆ ಮೂಡಿ , ಸಮಯ ಡಾನ್ಸ್ ಗೆ ಜಾಸ್ತಿಯಾಯಿತೆನಿಸಿತು. ಇದೆ ಸಮಯದಲ್ಲಿ ಇನ್ನೊಂದು ಗುಡಗುಡಿ ಮಂಡಲದಂತಹದನ್ನು ತೋರಿಸಬಹುದಿತ್ತು .



ಇನ್ನೊಂದು ಆಕರ್ಷಣೀಯವಾಗಿ ಮೂಡಿಬಂದ ಪಾತ್ರ ಕೊನೆಗೌಡ. ಅಡಿಕೆ ಕೊನೆ ಕೊಯ್ಯುವ ಕೆಲಸದವ. ವೇ.ಮೂ. ರಾಮಚಂದ್ರ ಭಟ್ ರ ಸುಪುತ್ರ ಮಂಜು  ತುಂಬಾ ಅಚ್ಚುಕಟ್ಟಾಗಿ ಈ ಪಾತ್ರ ನಿರ್ವಹಿಸಿದರು. ಅಡಿಕೆ ಬೆಳೆಯುವ ಹಳ್ಳಿಗಳಲ್ಲಿ , ಹಳ್ಳಿಗಳ ಸಮೀಪವಿರುವ ಪೇಟೆಗಳಲ್ಲಿ  ಈ ನಾಟಕ ಅಭಿನಯಿಸಿದರೆ ಮತ್ತು ಮಂಜು ಈ ಪಾತ್ರ ನಿರ್ವಹಿಸಿದರೆ,  ಅತಿ ಬೇಡಿಕೆಯಿರುವ ಕೊನೆಗೌಡನ ಕೊರತೆಯನುಭವಿಸುತ್ತಿರುವ  ತೋಟದ ಮಾಲೀಕರು ಈ ಕೊನೆ ಗೌಡನನ್ನು ಎತ್ತಿ ಕೊಂಡೊಯ್ದಾರು . ಮಂಜು   ಹುಷಾರು !!!!!!


ನಾಟಕದ ಅಂತ್ಯ ಇನ್ನೂ ಸ್ವಲ್ಪ ಪ್ರಭಾವಿಯಾಗಿ ಆಯೋಜಿಸಬೇಕಾಗಿದೆ. ಪ್ರೇಕ್ಷಕ ಹೊರಡುವಾಗ ನಾಟಕ ಹೇಳಬಯಸಿದ ತಥ್ಯವನ್ನು ಚಿಂತನೆಗೆ ಹಚ್ಚುತ್ತ ಸಾಗುವಂತೆ ಮಾಡಲು  ನಿರ್ದೇಶಕ ಯೋಚಿಸಬೇಕು. ಇದು ಗಾಳಿಯವರ ಮೊದಲ್ನೇ ಸಾಹಸ . ಸಾಹಸದಲ್ಲಿ ಗೆದ್ದಿದ್ದಾರೆ ಎನ್ನುವದರಲ್ಲಿ ಎರಡು ಮಾತಿಲ್ಲ.


ಹವ್ಯಕ ಪ್ರಾಂಗಣ ತುಂಬಿ ತುಳುಕುತ್ತಿತ್ತು. ಹವ್ಯಕೇತರರೂ   ಪ್ರೇಕ್ಷಕ ವೃಂದದಲ್ಲಿದ್ದುದು , ಅವರೆಲ್ಲ ನಾಟಕವನ್ನು ತುಂಬು ಮನಸ್ಸಿನಿಂದ ಸವಿಯುತ್ತಿದ್ದುದೂ ( ನಾಟಕ ಪೂರ್ತಿ ಹವಿಗನ್ನಡ ಭಾಷೆಯಲ್ಲಿದ್ದರೂ   ಸಹ ) ಅಲ್ಲಲ್ಲಿ ಕಾಣಬರುತ್ತಿತ್ತು.



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
Feb  03 , 2013 .

Saturday, February 2, 2013

ಹವ್ಯಕ ಮಕ್ಕಳ ನಾಟಕ .

ಸಂಕೇತ ಶರ್ಮಾ, ಶರತ್ ಹೆಗಡೆ, ಅಭಿಷೇಕ್ ಹೆಗಡೆ, ಸುದರ್ಶನ್ ಹೆಗಡೆ, ಶಾಂತಕುಮಾರ .ವಿ , ನಿಶಾಂತ ಹೆಗಡೆ, ಕೃಷ್ಣಾನಂದ ಹೆಗಡೆ , ಗಣಪತಿ ಹೆಗಡೆ, ಭರತಕುಮಾರ   ಹೆಗಡೆ , ಗಣೇಶ್ ಭಟ್ಟ  , ನಾರಾಯಣ ಹೆಗಡೆ , ಗುರುಪ್ರಸಾದ ಹೆಗಡೆ .......... ಇದೇನ್ರೋ  ಹವ್ಯಕ  ಮಕ್ಕಳಿಗೆ ಜಾತಕ ಕೇಳ್ತಿದ್ರೇನ್ರೋ   ಎಂದ್ರಾ ?  ಹಾಗಲ್ಲ ಮಾರಾಯ್ರೇ.....   ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಪುಸ್ತಕ, ಕಂಪ್ಯೂಟರ್ಸ್ ಜೊತೆ ವಿಹರಿಸುವ ಈ ಮಕ್ಕಳೆಲ್ಲ ಸೇರಿ ಒಂದು ನಾಟಕ ಮಾಡಿದ್ದೋ. ನಾಟಕವೋ ಅದೇನು ಮಹಾ , ದಿನಾ ಇನ್ನೇನು ಮಾಡ್ತಾ? ಓದ್ಯೇನೋ ಕೇಳಿದ್ರೆ ನಾಳೆ, ಪರೀಕ್ಷೆ   ಹೇಗಾತೋ ಕೇಳಿದ್ರೆ ಚೆನ್ನಾಗಾತು , ರಿಸಲ್ಟ್ ಬಂದಾಗ ಕೇಳಿದ್ರೆ - ಮುಂದಿನ ಸಾರಿ ಒಳ್ಳೆ ಮಾರ್ಕ್ ತೆಗಿತಿ - ಈಗ ನೀ ಸುಮ್ನಿರು , ಸಿ.ಈ.ಟಿ ರೆಂಕ್ ಬಂದಾಗ ಪಿ.ಯು.ಸಿ ನೋಡೆ ಅಮ್ಮ/ ಆಯಿ ತೊಂಭತ್ತಾರು , ತೊಂಭತ್ತೇಳು ಮಾರ್ಕ್ - ಸಿ.ಇ.ಟಿ ಎಲ್ಲವು ಹಾಗೇ ಮಾಡಿದ್ದು ಒಂದುವರೆ ಸಾವಿರದ ಮೇಲೆ ನಂಬರು ಹೀಗೆಲ್ಲ ನಾಟಕದ ಮಾತುಗಳನ್ನೇ ಕೇಳಿದ ಅಪ್ಪ ಅಮ್ಮ " ನಾಟಕ ಮಾಡದೆ ಇನ್ನೇನ್ ಮಾಡ್ತ್ಯ ಈಗಿನ ಮಕ್ಕ"  ಹೇಳುವದು ಸಾಮಾನ್ಯ. ಆದರೆ ಇಂದಿನ ನಾಟಕ ಅಂತಿರಲಿಲ್ಲ . ಹೇಗಿತ್ತು ಎಂದರೆ ಐವತ್ತು ಅರವತ್ತು ವರುಷ ಸಂದಿರುವವರೆಲ್ಲ ತಮ್ಮ ಪ್ರಾಯದ ದಿನಗಳಲ್ಲಿ ನಡೆದು ಬಂದ ಹುಡುಗಾಟದ ದಾರಿ ನೆನಪಿಸುವಂತಿತ್ತು. ಓಹೋ ಈ ಮಕ್ಕಗೆಲ್ಲ ನಾವ್ ಮಾಡಿದ್ದು ಹೇಗ್ ಗೊತ್ತಾತು, ನಾವ್ಯಾರಿಗೂ ಹೇಳ್ದಾಯಿಲ್ಲೆ  , ಬದಿಮನೆಯವಕ್ಕೆ ನಮ್ಮನೆ ಕಂಡರೆ ಅಷ್ಟಾಕ್ಕಷ್ಟೇ , ಹಾಗಾಗಿ ಅವ್ರೇನಾದ್ರೂ ಹೆಳ್ದ್ವೋ, ಎಂದು ನಾಟಕ ನೋಡಿ ನಗುತ್ತಿದ್ದ ಜನರು ಅಲ್ಲಲ್ಲಿ  "ಹೆಗಲು ಮುಟ್ಟಿ ನೋಡದ " ಎಂಬ ಗಾದೆಮಾತಿನಂತೆ ತಮ್ಮ ಅಂದಿನ ದಿನಗಳನ್ನು ನೆನಪಿಸಿಕೊಂಡಿರಬಹುದು. ಅಂದ ಹಾಗೆ ಈ ಮಕ್ಕಳೆಲ್ಲ ಇಂಜಿನಿಯರಿಂಗ್ ಓದುತ್ತಿರುವ ಮಕ್ಕಳು. ಹವ್ಯಕ ಹಾಸ್ಟೆಲ್ನಲ್ಲಿ  ತಂಗಿರುವ ಈ ಮಕ್ಕಳು , ಇಂದು ಹವ್ಯಕ ಸಮಾಜ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಾದ ಹವ್ಯಕ ಹುಡುಗಿಯರು ಇತರೆ ಸಮಾಜದ ಗಂಡುಮಕ್ಕಳ ಜೊತೆ ಓಡಿಹೋಗುವದು, ಹಳ್ಳಿಗಳಲ್ಲಿ  ಶಾಲಾ , ಕಾಲೇಜು ಗಂಡು  ಮಕ್ಕಳು ವರ್ತಿಸುವ ರೀತಿ  , ಹಳ್ಳಿಯ ಹಿರಿಯ ಜನಗಳು  ಅಗಂತುಕರನ್ನು   ಎಷ್ಟು ಸುಲಭವಾಗಿ ನಂಬಿ ಮೋಸಹೊಗುತ್ತಾರೆ ಇತ್ಯಾದಿ ವಿಷಯವನ್ನಿಟ್ಟು ಅರ್ಧ ಘಂಟೆಯಲ್ಲಿ ಮಾರ್ಮಿಕವಾಗಿ, ಸರಳ ವೇಷ ಭೂಷಣಗಳೊಂದಿಗೆ   , ಮನಸ್ಸಿಗೆ ನಾಟುವಂತೆ , ಅಲ್ಲಲ್ಲಿ ಕಚಗುಳಿ ಇಡುವ ನೈಜವಾದ  ಸಂಭಾಷಣೆಗಳೊಂದಿಗೆ , ಹವ್ಯಕ ಭಾಷೆಯಲ್ಲಿ  ಪ್ರಸ್ತುತಪಡಿಸಿದ ನಾಟಕ ಪ್ರತಿಯೊಬ್ಬರನ್ನೂ ರಂಜಿಸುವದರ ಜೊತೆಗೆ ಪ್ರಭಾವಿತವಾಗಿ ನಿನ್ನೆಯ, ಇಂದಿನ , ನಾಳಿನ ಹವ್ಯಕರ ಸಮಸ್ಯೆಗಳಿಗೆ ಹವ್ಯಕರೇ ಹೇಗೆ ಕಾರಣ ಎಂಬ ಅಂಶವನ್ನು ಅರಿತೋ ಅರಿಯದೆಯೋ ಅನಾವರಣಗೊಳಿಸಿತ್ತು  . 

ಈ ನಾಟಕದ ಎಲ್ಲ ಪಾತ್ರಧಾರಿಗಳು ಅತಿ ಉತ್ತಮವಾದ ಅಭಿನಯ ನೀಡಿದರು.  ಹೆಸರಿಸಲೇಬೇಕಾದ ನೈಜ ಅಭಿನಯ ಮತ್ತು ಮಾತುಗಳು,  ಭರತಕುಮಾರ ಹೆಗಡೆ ಮತ್ತು ನಾರಾಯಣ ಹೆಗಡೆ ಕ್ರಮವಾಗಿ ಓಡಿ ಹೋಗುವ  ಹವೀಕ ಹುಡುಗಿ ಮತ್ತು ಓಡಿಸಿಕೊಂಡು ಹೋಗುವ  ಸಾಬರ ಹುಡುಗ ಪಾತ್ರಗಳು. ಇನ್ನೂ ಹೆಚ್ಚಿನ  ಕಲಾತ್ಮಕ ಅಭಿನಯ ಉಂಡಾಡಿ ಗುಂಡ ಹವೀಕ ಹುಡುಗರ ಪಾತ್ರಮಾಡಿದವರು ಮಾಡಬಹುದಿತ್ತು. ಶರತ್ ಮತ್ತು ಸಂಕೇತ್ ಸೇರಿ ಬರೆದ ಈ ನಾಟಕದ ಮಾತುಗಳು ನೈಜವಾಗಿ ಹವ್ಯಕರ ಜನ ಜೀವನವನ್ನು ಪ್ರತಿನಿಧಿಸಿದೆ. ನಿರೂಪಣೆಯಲ್ಲಿ ಸುಧಾರಣೆಗೆ ಸಾಕಷ್ಟು ಅವಕಾಶಗಳಿವೆ.

ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
hariharbhat.blogspot.com

Feb 02 , 2013.

Grama Rajya - Hare Rama.in

ಹರೇ ರಾಮ. ಹರೇ ರಾಮ ರಾಮ ರಾಮ ಹರೇ ಹರೇ.

ಇಷ್ಟು ದಿವಸ ಈ ವಿಚಾರಗಳು ನನ್ನ ಗಮನಕ್ಕೆ ಬಂದಿರಲಿಲ್ಲ. ಶ್ರೀಕಾಂತ್ ಹೆಗಡೆಯವರು ಫೇಸ್ ಬುಕ್ ನಲ್ಲಿ ನೀಡಿದ ಲಿಂಕ್ ನೋಡಿದಾಗ ಈ ವಿಚಾರಗಳು ನನ್ನ ಗಮನಕ್ಕೆ ಬಂದವು. ಇದಕ್ಕೆ ನನ್ನ ಅನಿಸಿಕೆಗಳನ್ನು ಹಂಚಿಕೊಳ್ಳದಿದ್ದರೆ , ನಾವು ಸನಾತನಿಯಾಗಿ ಸ್ವತಂತ್ರವಾಗಿ ಇರುವ ವೈಚಾರಿಕ ಮನೋಧರ್ಮವನ್ನು ಅಡವಿಟ್ಟು ಬದುಕುವ ವರ್ತಮಾನ ಪರಿಸ್ಥಿತಿಗಳೊಡನೆ ಸಂಪೂರ್ಣ ರಾಜಿ ಮಾಡಿಕೊಂಡಂತಾದೀತು ಮತ್ತು ಪರಿಣಾಮವಾಗಿ ಅತ್ಮಸಾಕ್ಷಿಗನುಗುಣವಾಗಿ ನಡೆಯದವ ದೇವದ್ರೋಹ , ಧರ್ಮದ್ರೋಹ, ಗುರುದ್ರೋಹ ಮಾಡಿದಂತಾದೀತು ಎಂದು ಈ ವಿಚಾರಗಳನ್ನು ಹಂಚಿಕೊಂಡಿದ್ದೇನೆ.

Author , ಶ್ರೀಕಾಂತ್ ಹೆಗಡೆ , ಅಂತರವಳ್ಳಿ ಬರೆದ ವಾಕ್ಯಗಳೆಲ್ಲ ಈ ವಿಚಾರಗಳನ್ನು ಮೊದಲ ಸಲ ಓದುವವನಿಗೆ ಅಥವಾ ಜೀವನದ ಇಪ್ಪತ್ತೈದರಿಂದ ನಲವತ್ತು ವರ್ಷಗಳ ವಯೋಮಾನದಲ್ಲಿರುವ ಶಿಷ್ಯರೆಲ್ಲರಿಗೂ ಅತಿ ಆಕರ್ಷಕವಾಗಿ ತೋರುತ್ತವೆ . ಪ್ರಸ್ತುತ ಪಡಿಸಿದ ರೀತಿ ಮೆಚ್ಚಲೇ ಬೇಕು. ಇದು ಯಾವುದೋ ಬಹುರಾಸ್ಟ್ರೀಯ ಕಂಪನಿಯೊಂದು ತನ್ನ ಉತ್ಪನ್ನಗಳನ್ನು ಗ್ರಾಹಕನಿಗೆ ತಲುಪಿಸಲು ಯೋಜಿಸುವ ಯೋಜನೆಯ ಮಾದರಿಯಲ್ಲಿದೆ. ಇನ್ನು ತಿಳಿಸಿದ ಧ್ಯೇಯೋದ್ದೇಶಗಳು ಅತಿ ಆದರ್ಶವಾದದ್ದು ಎಂಬುದರಲ್ಲಿ ಎರಡು ಮಾತಿಲ್ಲ.

ನಮ್ಮ ದೇಶ ಬ್ರಿಟಿಷ್ ದಾಸ್ಯದಿಂದ ವಿಮೋಚನೆಯಾದಾಗಲಿಂದಲೂ ಚುನಾವಣೆಗಳಿಗೆ ಸ್ಪರ್ಧಿಸುವ ರಾಜಕೀಯ ಪಕ್ಷಗಳು ತದನಂತರ ಆಡಳಿತ ನಡೆಸುವ ಸರಕಾರಗಳು ಹೇಳುತ್ತಾ ಬಂದಿದ್ದು ಇದೇ ಮಾತುಗಳನ್ನು. ಹೇಳುವ ಭಾಷೆ , ಅಚ್ಚು ಹಾಕುವ ಕಾಗದಗಳು, ಕಾಗದದ ಬಣ್ಣಗಳು ಬೇರೆಯಾದರೂ ಎಲ್ಲ ಜಾತಿ, ಮತ , ಧರ್ಮಗಳೂ ಹೇಳಿದ ವಿಚಾರಗಳೂ ಇವೇ ಆಗಿವೆ. ನಾವ್ಯಾರನ್ನು ರಾಷ್ಟ್ರಪಿತ ಎಂದು ಸಂಭೋಧಿಸುತ್ತೇವೋ ಆ ಗಾಂಧೀ ಮಹಾತ್ಮ ಹೇಳಿದ್ದು ಇವೇ ಮಾತುಗಳು. ರಾಮ ರಾಜ್ಯ ಸ್ಥಾಪನೆಯಾದರೆ ಸುಖ ಶಾಂತಿ ನೆಮ್ಮದಿ ಪ್ರಜೆಗಳಿಗೆ ದೊರೆತೀತು ಎಂಬ ಆಶಾ ಭಾವನೆ ವ್ಯಕ್ತಪಡಿಸಿದ್ದುಂಟು. ನಮ್ಮ ದೇಶದ ನಾಡಿ ಮಿಡಿತವಿರುವದೇ ಹಳ್ಳಿಗಳಲ್ಲಿ ಎಂದು ಎಲ್ಲರೂ ಘಂಟಾ ಘೋಶವಾಗಿ ಸಾರಿದ್ದಾರೆ. ಆದರೆ ವಿಚಿತ್ರವಾದರೂ ಸತ್ಯವೆಂದರೆ ಈ ರೀತಿ ಘೋಶಿಸುವವರು , ಕಾರ್ಯಕ್ರಮಗಳಿಗೆ ಉದ್ಯುಕ್ತರಾಗುವವರು ಸದಾ ಕಾಲ ನಗರ ಜೀವನದ ಥಳಕು ಬಳುಕಿನಲ್ಲಿಯೇ ಕಾಲ ಕಳೆಯುವವರಾಗಿದ್ದಾರೆ . ಆಗಾಗ ನೆಂಟರು ಬಂದಂತೆ ಹಳ್ಳಿಗಳಿಗೆ ” ಧೀಂ ಥಕ ಧೀಂ , ಧೀಂ ಥಕ ಧೀಂ ” ಎಂದು ಆಗೀಗ ಭೇಟಿ ನೀಡಿ ಬರುವವರಾಗಿದ್ದಾರೆ.

ಇನ್ನು ಸ್ವತಂತ್ರ ಭಾರತದಲ್ಲಿ ಕಾನೂನು ಮಾಡುವ, ಕಾನೂನು ಜಾರಿಗೊಳಿಸುವ ಸಂಪೂರ್ಣ ಅಧಿಕಾರವನ್ನು ಹೊಂದಿದ ಅಡಳಿತ ನಡೆಸುವ ಸರಕಾರಗಳೇ ಈ ರೀತಿಯ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಸೋತಿರುವಾಗ , ಸಮಾಜದ ಅತಿ ಕಡಿಮೆ ಸಂಖ್ಯೆಯಲ್ಲಿರುವ ಶಿಷ್ಯರ ಗುಂಪೊಂದು ಈ ರೀತಿ ಬೃಹದಾಕಾರದ ಯೋಜನೆಯೊಂದನ್ನು ಕೈಗೆತ್ತಿಕೊಂಡಾಗ ಇದು ಕಾರ್ಯ ಸಾಧುವೇ ಎಂದೂ ಯೋಚಿಸಬೇಕಷ್ಟೇ . ಪ್ರತಿ ವರ್ಷ ಲಕ್ಷ ಲಕ್ಷ ಕೋಟಿ ರೂಪಾಯಿಗಳ ಯೋಜನೆ ಅನುಷ್ಟಾನ ಮಾಡುವ , ಬೃಹತ್ ಸಂಪತ್ತನ್ನು ತನ್ನ ಅಡಿದಾವರೆಗಳಲ್ಲಿ ಅಡಗಿಸಿಕೊಂಡಿರುವ , ಹಿಂದಿನ – ಇಂದಿನ – ಮುಂದಿನ ಆಗುಹೋಗುಗಳನ್ನು ಈ ದೇಶದಲ್ಲಿ ತನ್ನ ಅಂಕುಶದಲ್ಲಿ ಬುದ್ಧಿ ಸಾಮರ್ಥ್ಯದಿಂದ ಹಿಡಿದಿಟ್ಟುಕೊಂಡಿರುವ ಅಧಿಕಾರಿ ವಲಯದ ಗುಂಪುಗಳನ್ನು ತನ್ನ ಅಂಕುಶದಲ್ಲಿಟ್ಟಿರುವ ಸರಕಾರ ಸಾಧಿಸಿ ಯಶಸ್ಸು ಕಾಣಲಾಗದ ಈ ರೀತಿಯ ಗ್ರಾಮಾಧಾರಿತ ಯೋಜನೆಗಳನ್ನು ಅನುಷ್ಟಾನಗೊಳಿಸಲು ಹತ್ತಾರು ಹೆಚ್ಚೆಂದರೆ ನೂರಾರು ಕೋಟಿ ಸಂಪತ್ತಿನ , ಒಂದು ನೂರಾ ಇಪ್ಪತ್ತು ಕೋಟಿ ಜನ ಸಂಖ್ಯೆಯ ದೇಶದಲ್ಲಿ ಅಂದರೆ ಆರು ಕೋಟಿ ಜನಸಂಖ್ಯೆಯ ಈ ರಾಜ್ಯದ ಮೂರರಿಂದ ನಾಲ್ಕು ಲಕ್ಷಗಳಲ್ಲಿರುವ ಶಿಷ್ಯ ಸಮೂಹದಿಂದ , ಬಹುಆದರ್ಶಗಳನ್ನೊಳಗೊಂದ ಈ ಯೋಜನೆ ಯಶಸ್ವಿಯಾದೀತೇ ಎಂಬ ಪ್ರಶ್ನೆಗಳನ್ನೆಬ್ಬಿಸುವದಿಲ್ಲವೇ? ಅಷ್ಟೇ ಅಲ್ಲದೆ ಹಾಲಿ ಸಮಾಜದ ಗ್ರಾಮ ವ್ಯವಸ್ಥೆಯನ್ನು ಅವಲೋಕಿಸಿದರೆ ಗ್ರಾಮವೊಂದರಲ್ಲಿ ಎಲ್ಲ ರೀತಿಯ ಜಾತಿ, ಮತ, ಧರ್ಮಗಳ ಪ್ರಜೆಗಳು ಕಾಣಬರುತ್ತಾರೆ. ಅಲ್ಲದೆ ಪ್ರತಿ ಜಾತಿ, ಮತ, ಧರ್ಮಗಳ ಸಂಘಟನೆಗಳು ಕಾರ್ಯೋನ್ಮುಖವಾಗಿವೆ. ಇನ್ನೊಂದು ಆಘಾತಕಾರಿ ಸತ್ಯ ಸಂಗತಿಯೆಂದರೆ ಇಂದು ಚತುರ್ವರ್ಣ ರೀತಿಯ ಜನಜೀವನವು ಕಂಡುಬರುತ್ತಿಲ್ಲ ಜೊತೆಗೆ ಚಾತುರ್ವರ್ಣ್ಯ ವ್ಯವಸ್ತೆಯಲ್ಲಿ ಒಪ್ಪಿಕೊಂಡ ಬುದ್ಧಿಜೀವಿ ಬ್ರಾಹ್ಮಣರ ವೈಚಾರಿಕ ಮುಖಂಡತ್ವವೂ ಸಮಾಜದಿಂದ ಒಟ್ಟಾರೆ ಸಾಮಾಜಿಕ ಜೀವನದಲ್ಲಿ ಒಪ್ಪಿಗೆಯಿಲ್ಲ.

ನನ್ನ ಅನಿಸಿಕೆಗಳಿಗೆ ತಮ್ಮೆಲ್ಲರ ಪ್ರಭುದ್ಧ ಅನಿಸಿಕೆಗಳು ಜೊತೆಗೂಡಲಿ , ಶ್ರೀಕಾಂತ ಹೆಗಡೆಯವರಿಗೆ ದಾರಿದೀಪವಾಗಲಿ ಎಂದು ಆಶಿಸುತ್ತೇನೆ.

ಹರೇ ರಾಮ.

ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
hariharbhat .blogspot .com

Feb 02 , 2013 .




http://hareraama.in/articles/gramarajya-intro/