ಕುಲಪತಿ ನೇಮಕಕ್ಕೆ ರೂ. ಆರು ಕೋಟಿ !!!!!!!!!!!!!!!!!!!!
ವಿಧಾನ ಪರಿಷತ್ ಸದಸ್ಯ ಪಿ.ವಿ ಕೃಷ್ಣ ಭಟ್ ರವರು ಸದನದಲ್ಲಿ ಈ ಹೇಳಿಕೆ ನೀಡಿದ್ದಾರೆ. ' ಇತ್ತೀಚೆಗೆ ರಾಜ್ಯದ ಪ್ರತಿಷ್ಟಿತ ವಿವಿ ಗೆ ಕುಲಪತಿ ನೇಮಕ ನಡೆಯಿತು. ಈ ಸಂದರ್ಭದಲ್ಲಿ ಒಬ್ಬ ಮಹಿಳೆ ಹೆಸರು ಅಂತಿಮ ಪಟ್ಟಿಗೆ ಆಯ್ಕೆಯಾಗಿತ್ತು. ಆಕೆ ನನ್ನ ಬಳಿ ಬಂದು ಹೀಗೆ ಅಲವತ್ತು ಕೊಂಡರು, ನೇಮಕಕ್ಕೆ ರೂಪಾಯಿ ಆರು ಕೋಟಿ ಕೇಳುತ್ತಿದ್ದಾರೆ. ನಾನೇನು ಮಾಡಲಿ ?' ಆದರೆ ನನ್ನ ಬಳಿ ಉತ್ತರವಿರಲಿಲ್ಲ. ಕೊನೆಗೆ ಆಕೆಯ ನೇಮಕವಾಗಲಿಲ್ಲ. ಹಾಗಿದ್ದರೆ ನೇಮಕಕ್ಕೆ ಇನ್ನೂ ದೊಡ್ಡ ಡೀಲ್ ನಡೆಯಿತೆ ? ಕುಲಪತಿ ಹುದ್ದೆಗಳು ಹೀಗೆ ಬಿಕರಿಯಾದರೆ ಹೇಗೆ? ಎಂದು ಕಟುವಾಗಿ ಸರಕಾರವನ್ನು ಪ್ರಶ್ನಿಸಿದ್ದಾರೆ. ಈ ಮೂಲಕ ರಾಜ್ಯದ ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಕ್ಕೆ ವ್ಯವಹಾರ ನಡೆಯುತ್ತಿದೆ ಎನ್ನುವದನ್ನು ವಿಧಾನ ಪರಿಷತ್ತಿನಲ್ಲಿಯೇ ಬಹಿರಂಗಪಡಿಸಿದಂತಾಗಿದೆ .
ಕನ್ನಡ ಪ್ರಭ ಇಂದಿನ ಪತ್ರಿಕೆ ಯಲ್ಲಿ ಪ್ರಕಟವಾಗಿದೆ.
ನಾವು ಯಾವ ರೀತಿಯ ಪ್ರಜಾಪ್ರಭುತ್ವ ಆಡಳಿತದಲ್ಲಿದ್ದೇವೆ?
ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
www.hariharbhat.blogspot.com
February 14, 2013.
No comments:
Post a Comment