ಬೆಂಗಳೂರಿಗರಿಗೊಂದು ಆಶಾದಾಯಕ ಸುದ್ದಿ.
Autonomous Special Purpose Vehicle working with BBMP within a month - Assurance by Mr. Anantakumar , Bangalore MP.
Irreversible Development Programme to be implemented.
Legislation for Solid Waste Management System .
ಇವೆಲ್ಲ ಬಾಜಪ ಎಂ.ಪಿ ಶ್ರೀ. ಅನಂತಕುಮಾರ್ ಭರವಸೆಗಳು. ಅನಂತಕುಮಾರ್ ಹಿಂದೊಮ್ಮೆ ಬರವಸೆ ಕೊಟ್ಟಿದ್ದನ್ನು ಬರೆದಿದ್ದೆ. ನಮ್ಮ ಕನ್ನಡ ಭಾಷೆ ಅಂತರ್ಜಾಲದಲ್ಲಿ ತೀವ್ರ ಬೆಳವಣಿಗೆ ಹೊಂದಲು ಸಹಕಾರಿಯಾಗುವ ಯೂನಿಕೋಡ್ ಒಪ್ಪಿ ಅನ್ವಯಿಸಲು ಸರಕಾರದಿಂದ ಆಗಬೇಕಾದ ಕೆಲಸಗಳು ಆಗುತ್ತಿಲ್ಲ , ಎಲ್ಲಾ ಕಚೇರಿ , ಅಧಿಕಾರಿಗಳನ್ನು ಬೆನ್ನತ್ತಿದರೂ ಸರಕಾರೀ ಗೆಜೆಟ್ ನೋಟಿಫಿಕೇಶನ್ ಆಗುತ್ತಿಲ್ಲ ಎಂದು ಚಂದ್ರಶೇಖರ್ ಕಂಬಾರರವರು ಅನಂತಕುಮಾರ್ ಗಮನಕ್ಕೆ ತಂದಾಗ ಮುಂದಿನ ಮೂರು ತಿಂಗಳಲ್ಲಿ ಈ ಕೆಲಸಗಳು ಸಲೀಸಾಗುವಂತೆ ಸಂಭಂಧಿಸಿದವರಿಗೆಲ್ಲಾ ಹೇಳಿ ಕೆಲಸ ಮಾಡಲಾಗುವದು ಎಂದು ಕೊಟ್ಟ ಭರವಸೆಯಂತೆ ಕಾರ್ಯ ಮಾಡಿದ್ದರಿಂದ , ಬೆಂಗಳೂರಿಗರಿಗೊಂದು ಆಶಾದಾಯಕ ಸುದ್ದಿ ಎಂದು ಬರೆದೆನೀಗ.
ಬೆಂಗಳೂರನ್ನು ಜಗದ್ವಿಖ್ಯಾತ ಗೊಳಿಸಿದ ಐ.ಟಿ , ಬಿ.ಟಿ ಜೊತೆಗೆ ರಾಕ್ಷಸೀ ಸಹೋದರನಾಗಿ ವಿಖ್ಯಾತಿ ಪಡೆದು ದಿನದಿಂದ ದಿನಕ್ಕೆ ತನ್ನ ಅಪಖ್ಯಾತಿಯನ್ನು ವೃದ್ಧಿಗೊಳಿಸುತ್ತಾ ಮುನ್ನುಗ್ಗುತ್ತಿರುವ ಘನ ತ್ಯಾಜ್ಯ ಅಂದರೆ ಕಸ ಅಂದರೆ ಸಾಲಿಡ್ ವೇಸ್ಟ್ ಸಮಸ್ಯೆ ಬಗೆಹರಿಸುವ ಕುರಿತು ಶ್ರೀ ರಾಜೀವ್ ಚಂದ್ರಶೇಖರ್ ನೇತ್ರತ್ವದ ನಮ್ಮ ಬೆಂಗಳೂರು ಪ್ರತಿಷ್ಠಾನ ಮತ್ತು ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ನೇತ್ರತ್ವದ ಅದಮ್ಯ ಚೇತನ ಸಂಸ್ಥೆಗಳು ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಸಹಯೋಗದೊಂದಿಗೆ ಒಂದು ಚಿಂತನ ಮಂಥನ ಕಾರ್ಯಕ್ರಮ ಏರ್ಪಡಿಸಿದ್ದವು. ಹಿಂದೆ ಬೆಂಗಳೂರನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಅಬೈಡ್ (ABIDE) ಎಂಬುದೊಂದು ಸಂಸ್ಥೆ ಕಾರ್ಯಪೃವೃತ್ತವಾಗಿ ಸರಕಾರಕ್ಕೆ ಅನೇಕ ಜನೋಪಯೋಗಿ ಕಾರ್ಯಕ್ರಮಗಳ ಬಗ್ಗೆ ವರದಿ ನೀಡಿದ ನೆನಪಿರಬಹುದು ಹಾಗೆಯೇ ABIDE ವರದಿಯನ್ನು ಚೆಂದಾಗಿ ಬೈಂಡ್ ಮಾಡಿ ಬದಿಗಿಟ್ಟಿದ್ದು ನಿಮಗೆ ನೆನಪಿರಬಹುದು. ಅದೇ ಅಬೈಡ್ ಈಗ ಇನ್ನೊಂದು ರೂಪದಲ್ಲಿ ಕ್ರಿಯಾಶೀಲವಾಗಿದೆ. ಆದರೆ ಈಗ ಬೆಂಗಳೂರಿಗರಿಗೆ ಆಶಾದಾಯಕ ಸುದ್ದಿ ಯಾಕೆಂದರೆ ಅನಂತಕುಮಾರ್ ಹೇಳುವ ಮಾತುಗಳಿಗೆ ಬೆಲೆ ಬರುವ ಕಾಲ ಬಂದಿರುವದರಿಂದ , ನೀಡಿದ ಆಶ್ವಾಸನೆಗಳನ್ನು ನೆನಪಿಟ್ಟು ಕಾರ್ಯರೂಪಕ್ಕೆ ತರುವ ಅನಂತಕುಮಾರ್ ಆಸಕ್ತಿವಹಿಸಿರುವದರಿಂದ ಬೆಂಗಳೂರಿಗರಿಗೆ ಆಶಾದಾಯಕ ಸುದ್ದಿ. ಅನಂತಕುಮಾರ್ ಮಾತುಗಳಲ್ಲೇ ಹೇಳುವದಾದರೆ " we have political will now, ರಾಜಕೀಯ ಇಚ್ಚಾಶಕ್ತಿ ಇದೆ. "
ಉಳಿದೆಲ್ಲ ಎಂದಿನಂತೆ ನಾವು ನೀವೆಲ್ಲ ಮಾಧ್ಯಮಗಳ ಮುಖಾಂತರ ಅರಿತಿರುವ ವಿಷಯಗಳೇ. ಎತ್ತು ಎರೆಗೆ, ಕೋಣ ಕೆರೆಗೆ ಎಂಬ ಕಾರ್ಪೊರೇಟರ್ - ಅಧಿಕಾರಿ ನಡೆ , ಹತ್ತರಿಂದ ಹದಿನೈದು ಲಕ್ಷ ಜನವಸತಿ ಇರುವ ವಿದೇಶಗಳ ಅಚ್ಚುಕಟ್ಟು ಜೀವನದ ಹೊಗಳಿಕೆ, ನಾನು ಹೀಗೆ ಸಲಹೆ ಕೊಟ್ಟೇ.... ಅದಕ್ಕೆ ಬೆಲೆ ಇಲ್ಲ ಎಂಬ ಆಲಾಪಗಳು ಇತ್ಯಾದಿ. ಒಂದು ವಿಶೇಷವೆಂದರೆ ಕಹಿ ಸತ್ಯವನ್ನು ಹೇಳಲು ಪೊಲ್ಯುಶನ್ ಕಂಟ್ರೋಲ್ ಬೋರ್ಡ್ ಅಧ್ಯಕ್ಷರಾದ ವಾಮನ ಆಚಾರ್ಯರು ಧೈರ್ಯ ಮಾಡಿದ್ದು - ಈಗ ಹತ್ತು ಹದಿನೈದು ವರ್ಷಗಳಲ್ಲಿ ಎಲ್ಲಾ ಕಾರ್ಪೊರೇಟರ್ ಗಳು, ಎಲ್ಲಾ ಎಂ.ಎಲ್.ಎ ಗಳು ಹತ್ತಿಪ್ಪತ್ತು ಎಕರೆ ಖರೀದಿ ಸ್ವಂತಕ್ಕೆ ಮಾಡಿದ್ದೀರಿ , ಆದರೆ ಎಲ್ಲರೂ ಕಾರ್ಪೋರೇಶನ್ ಕಡೆ ಯಾರ್ಡ್ ಸಲುವಾಗಿ ಜಾಗ ಇಲ್ಲಾ , ಜಾಗ ಇಲ್ಲ ಅಂತೀರೀ ........., ನೀವೇ ನಾಲ್ಕಾರು ಮಂದಿ ಸೇರಿ ಜಾಗ ಲೀಸ್ ಕೊಡಬಹುದಲ್ಲಾ, ಯಾರು ಯಾಕೆ ಒಪ್ಪೋದಿಲ್ಲಾ ಎಂಬ ಉತ್ತರವಿಲ್ಲದ ಪ್ರಶ್ನೆ ಎಸೆದು , ಸಕತ್ ಚಪ್ಪಾಳೆ ಗಿಟ್ಟಿಸಿಕೊಂಡರು.
ಈ ಎಲ್ಲಾ ಚರ್ಚೆಗಳಲ್ಲಿ ಸಮಯೋಚಿತವಾದ, ಕಾರ್ಯಸಾಧುವಾದ ಸಲಹೆಯನ್ನು ಶ್ರೀ ಅಶ್ವಿನ್ ಮಹೇಶ್ , ಹಿಂದೆ ಅಬೈಡ್ ಸದಸ್ಯರಾಗಿದ್ದವರು , ನೀಡಿದರು. ಅದೇ ಶ್ರೀ ಅನಂತಕುಮಾರ್ ರವರು ಕೊನೆಯಲ್ಲಿ ನೀಡಿದ ಭರವಸೆಗಳು. ಹಾಗಾಗಿ ಪುನರಾವರ್ತನೆ ಬರಹ ಬೇಡ. ಅಂದ ಹಾಗೆ ಇದು ಅಶ್ವಿನ್ ಮತ್ತು ಅನಂತಕುಮಾರ್ ಮಧ್ಯೆ ಮ್ಯಾಚ್ ಫಿಕ್ಸಿಂಗ್ ಆ.... ಗೊತ್ತಿಲ್ಲಾ. ಹೇಗೇ ಇರಲಿ ಬೆಂಗಳೂರಿಗರಿಗಂತೂ ಇದು ಸಿಹಿ ಸುದ್ದಿ ಮತ್ತು ಕಸ ಸಮಸ್ಯೆ ಬಗೆಹರಿಯುವಂತೆ ಆಶಾಕಿರಣವೊಂದು ಗೋಚರಿಸುತ್ತಿದೆ.
ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
Jan 13 , 2013 .

No comments:
Post a Comment