ಇಂದು ತಿಪ್ಪೆಯ ಕುರಿತು ನಾಲ್ಕು ಸಾಲುಗಳನ್ನು ಬರೆಯೋಣ. ಬೆಂಗಳೂರು ಭಾಷೆಯಲ್ಲಿ ತಿಪ್ಪೆ ಅಂದರೆ
ಕಸ ಚೆಲ್ಲಿ ಗಬ್ಬೆದ್ದು ವಾಕರಿಕೆ ಬರುವಂತಹ ದೃಶ್ಯ . ಸಮಾಜದಲ್ಲಿ ಆಚೆ ಹೋದಾಗ ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಕಂಡುಬರುವ ದೃಶ್ಯ. ನಾವು ನೀವೆಲ್ಲ ಉಸಿರನ್ನು ಬಿಗಿಹಿಡಿದೋ ಇಲ್ಲ ಕರ ವಸ್ತ್ರವನ್ನು ಮೂಗಿಗೆ ಹಿಡಿದೋ ಆ ಜಾಗದಿಂದ ಪಾರಾಗುತ್ತೇವೆ. ಈ ಪರಿಸ್ತಿತಿ ಅಲ್ಲಿ ಇಲ್ಲಿ ಅಂತೇನಲ್ಲ ಎಲ್ಲೆಡೆ ಸಾಮಾನ್ಯವಾಗಿಬಿಟ್ಟಿದೆ. ಅಂತೆ ಜನರು , ಮುಖಂಡರುಗಳು ಎಂದಿನಂತೆ ಬೆಳಿಗ್ಗೆ , ಮಧ್ಯಾಹ್ನ, ಸಾಯಂಕಾಲ ದೇವರ ದರ್ಶನ ಮಾಡಿದಂತೆ , ತಿಪ್ಪೆಯ ದರ್ಶನ ಮಾಡಿ ಮುಂದೆ ಸಾಗುತ್ತಾರೆ ವಿನಃ , ಬದಲಾವಣೆಗೆ ಆದ್ಯತೆ ನೀಡುವದಿಲ್ಲ.
ಇದೇನು ಮಹಾ ಎಂದಿರಾ ? ಅಲ್ಲೇ ಇರುವದು - ಎಲ್ಲೆಡೆ ತಿಪ್ಪೆ ದರ್ಶನ. ನಾನೀಗ ಎಂಟು , ಹತ್ತು ವರ್ಷಗಳಿಂದ ನಮ್ಮ ಸಮಾಜದ ಸಂಘಟನೆಯಾದ ಹವ್ಯಕ ಮಹಾಸಭೆಯ ಮಲೇಶ್ವರದ ವಿಘ್ನ ವಿನಾಯಕನ ದರ್ಶನಕ್ಕೆ ಆಗಾಗ ಹೋಗುತ್ತಿರುತ್ತೇನೆ. ಮಹಾಸಭೆಯಿರುವದಂತೂ ನಿಮಗೆ ತಿಳಿದ ವಿಷಯ. ಕಾರ್ಯಾಲಯದ ಮುಂಬಾಗ ದಿನದ ಹೆಚ್ಚಿನ ವೇಳೆ ಗೇಟಿನ ಬಳಿ ನಿಮಗೆ ಅಸಹ್ಯವಾದ ತಿಪ್ಪೆ ದರ್ಶನವಾಗುತ್ತದೆ. ಸಾಮಾನ್ಯವಾಗಿ ವರ್ಷದ ಹೆಚ್ಚಿನ ದಿನಗಳಲ್ಲಿ ಸಭಾಭವನದಲ್ಲಿ ಒಂದಿಲ್ಲೊಂದು ಕಾರ್ಯಕ್ರಮಗಳಿರುತ್ತವೆ. ಮದುವೆ , ಮುಂಜಿ ಶುಭ ಕಾರ್ಯಗಳಿರುವಾಗ ಊಟ ತಿಂಡಿ ನೀಡುವದು ಸಾಮಾನ್ಯ. ನಂತರ ಎಲ್ಲಾ ಆಹಾರ - ತಿಂದು ಬಿಟ್ಟ ಉಳಿಕೆಗಳು ( wastes ) ,
ಬಾಳೆ - ಎಂಜಲೆಲೆಗಳು ಎಲ್ಲಾ ಗೇಟಿನ ಬಳಿ ಪ್ಲಾಸ್ಟಿಕ್ ಡಬ್ಬಿಯಲಿ ನರ್ತನ ಮಾಡುತ್ತಿರುತ್ತವೆ. ತಮ್ಮ ಇರುವಿಕೆಯನ್ನು ನೀವೇನಾದರೂ ಗುರುತಿಸದೆ ಮುಂದೆ ಹೋದೀರೆಂದು ಆಗಾಗ ಡಬ್ಬದಿಂದ ಈಚೆ ಇಣುಕುತ್ತ , ಸುರ ಸುಂದರಿಯಂತೆ ತನ್ನ ಸೌಂದರ್ಯವನ್ನೆಲ್ಲ ಲೋಕಕ್ಕೆ ರಾರಾಜಿಸುತ್ತಿರುತ್ತದೆ !!! ಎಷ್ಟೆಂದರೂ ಸುಸಂಸ್ಕೃತ ಜನಾಂಗವಾದ ಹವ್ಯಕ ಬ್ರಾಹ್ಮಣರ ಸಂಘಟನೆಯ ಮಹಾಸಭೆಯಾದ್ದರಿಂದ , ತಿಪ್ಪೆ ವಾಸನೆ ಹೊಡೆಯುವವರೆಗೆ ಇಟ್ಟಿರುವದಿಲ್ಲ ಎಂಬುದೇ ಸಮಾಧಾನ. ಆದರೂ ಸಂಘಟಕರ ಕೈಮೀರಿ ( ಪಾಪ !!! ) ಆಗಾಗ ವಾಸನೆ ಬೀರಿ , ತನ್ನ ಇರುವಿಕೆಯತ್ತ ನಿಮ್ಮೆಲ್ಲರ ಗಮನ ಸೆಳೆಯುತ್ತದೆ.
ಈ ತಿಪ್ಪೆಯ ಭಾಗ್ಯ ನೋಡಿ ! ನಾವು ನೀವೆಲ್ಲ ಈ ತಿಪ್ಪೆಯ ಇರುವಿಕೆಗೆ , ನಾನು ಬಲ್ಲಂತೆ ಎಂಟು ಹತ್ತು ವರುಷಗಳ ಸಾಕ್ಷಿಯಾಗಿದ್ದೆeವೆ . ತಿಪ್ಪೆ ಎಷ್ಟೇ ಗಹ ಗಹಿಸಿ ನಕ್ಕರೂ ನಾವು ನೀವಾಗಲಿ ತಲೆ ಕೆಡಿಸಿಕೊಂಡಿಲ್ಲ. ಯಾರಾದರು ತಲೆ ಕೆಡಿಸಿಕೊಂಡರೂ , ಎನೂ ಆಗದಯ್ಯಾ ಎಂದು , ಈ ಎಂಟು ಹತ್ತು ವರ್ಷಗಳಲ್ಲಿ ಬದಲಾದ ಅಧ್ಯಕ್ಷರು, ಉಪಾಧ್ಯಕ್ಷರು, ಖುರ್ಚಿಪ್ರಿಯರು, ಕಾಸಿಗೆ ಕೊಂಡನು ಕಸ್ತೂರಿ ಎಂದು ತುತ್ತೂರಿ ಊದುತ್ತಿರುವವ ಪಟಾಲಂ , ಇತ್ತ - ಎತ್ತು ಎರೆಗೆ , ಕೋಣ ಕೆರೆಗೆ ಎಂಬ ಹೌದಪ್ಪಗಳ ತಲೆದುಗೂವಿಕೆ ಮಧ್ಯೆ , ಯಾರೇ ಕೂಗಾಡಲಿ , ಎನ್ನ ನೆಮ್ಮದಿಗೆ ಭಂಗವಿಲ್ಲ ಎಂದು ಶಾಶ್ವತವಾಗಿ ಮೆರೆಯುವವರ ಜೊತೆ ಸಂಗಾತಿಯಾಗಿ ನೆಲೆನಿಂತಿರುವ ಈ ತಿಪ್ಪೆಯ ಭಾಗ್ಯವೋ ಭಾಗ್ಯ.
ಹೌದ್ರೀ ಸುಮ್ಮನೆ ಮಾತನಾಡುತ್ತೀರಿ , ಪರಿಹಾರ ಹೇಳಿ ಎಂಬುವರಿಗೊಂದು ಮಾತು. ಇವೆಲ್ಲ ನಮ್ಮ ವ್ಯವಸ್ತೆ ಜಡ್ಡು ಗಟ್ಟಿರುವದರ ದ್ಯೋತಕ. ಶೃಂಗರವಾಗಿ ರಚಿಸಿಹ ದೇವಮಂದಿರದಲ್ಲಿ ಸೂಕ್ತ ರೀತಿಯಲ್ಲಿ ದೇವರೇ ಪ್ರತಿಷ್ಟಾಪನೆಯಾಗದಿದ್ದರೆ ಹೇಗೆ ಅನಿಸಿಕೆ ಹಾಗೆ, ಯಾವುದೇ ಸಂಸ್ಥೆಯ ಚೇತನ ಅಳೆಯುವದು ಚಿಕ್ಕ ಚಿಕ್ಕ ವಿಚಾರದತ್ತ ಎಷ್ಟು ಗಮನ ನೀಡುತ್ತಾರೆ, ಸಮಾಜದಲ್ಲಿ ಅತಿ ಕೆಳಸ್ಥರದಲ್ಲಿ ಇರುವವರಿಗೆ ಅಂದರೆ ನಮ್ಮ ಹವ್ಯಕರಲ್ಲಿ ಆರ್ಥಿಕವಾಗಿ ಅತಿ ಕೆಳ ಹಂತದಲ್ಲಿರುವವರಿಗೆ , ಕೇವಲ ಮಾತುಗಳ ಸ್ಪಂದನೆಯಲ್ಲದೆ, ಧೀರ್ಘಕಾಲ ಪ್ರಯೋಜನವಾಗಬಲ್ಲ ಯಾವ ಯಾವ ಕಾರ್ಯಕ್ರಮಗಳಿವೆ ಎಂಬುದರ ಮೇಲೆ ಯಾವುದೇ ಸಂಘ -ಸಂಸ್ಥೆಗಳ ಮೌಲ್ಯವನ್ನು ಅಳೆಯಲಾಗುತ್ತದೆ. ನಮ್ಮ ಮಿತ್ರರೊಬ್ಬರು ಹೇಳುತ್ತಿದ್ದ ಮಾತು - ವರ್ಣಾಶ್ರಮ ರೀತ್ಯ ಅತಿ ಕೆಳ ಸ್ಠರದಲ್ಲಿರುವ ಜನಾಂಗದ ಸಂಘ , ಕೋಟಿ - ಕೋಟಿ ಮೌಲ್ಯದ ನೂರಾರು ಕಟ್ಟಡಗಳನ್ನು ಹೊಂದಿದೆ, ಆದರೆ ಈ ಯುಗದಲ್ಲೂ ಸಹ ಬ್ರಾಹ್ಮಣರನ್ನು ಅಂದರೆ ಈ ನನ್ನ ಮಿತ್ರರನ್ನು ಕಾಲು ಮುಟ್ಟಿ ಆ ಸದಸ್ಯರು ನಮಸ್ಕರಿಸುತ್ತಾರೆ . ಈ ರೀತಿ ಶ್ರೇಷ್ಠ ಜನಾಂಗವೊಂದಕ್ಕೆ ಸೇರಿದ ನಮ್ಮ ಜನ ಪ್ರತಿನಿಧಿ ಸಂಘಟನೆಗೆ ಚಿಕ್ಕ ಚಿಕ್ಕ ವಿಚಾರಗಳತ್ತ, ಆರ್ಥಿಕವಾಗಿ ಹಿಂದುಳಿದು ಬದುಕುತ್ತಿರುವ ಸದಸ್ಯರತ್ತ , ಅವರ ಅವಲಂಬಿಗಳತ್ತ ಸೂಕ್ತ ಗಮನವಿeಯಲಾಗದಿದ್ದುದು ವ್ಯಕ್ತ ಪಡಿಸಲಾಗದ ವಿಷಾದದ ಸಂಗತಿ.
ಇನ್ನು ತಿಪ್ಪೆಗೆ ಪರಿಹಾರ. ಹವ್ಯಕ ತಿಪ್ಪೆಗೆ ಪರಿಹಾರ ಸುಲಭ. ಯಾಕೆಂದರೆ ನಮ್ಮಲ್ಲಿ ತಿಪ್ಪೆಗಳ ಮಧ್ಯೆಯೂ ಎಲೆಮರೆಯ ಕಾಯಿಯಂತೆ ಬದುಕುವ ಸಾವಿರಾರು ಶುದ್ಧ, ಸಕಾರಾತ್ಮಕ ಚಿಂತನೆಯ ಹವ್ಯಕ ಚೇತನಗಳಿವೆ. ಈ ಚೇತನಗಳನ್ನು ಬಳಸಿ , ಸಂಘಟನೆಯನ್ನು ಬೆಳಗಿಸುವ ಕಾರ್ಯವಾಗಬೇಕಾಗಿದೆ ಅಷ್ಟೇ . ಈ ಮೇಲೆ ಹೇಳಿದ ಕಣ್ಣು ಕುಕ್ಕುವ ತಿಪ್ಪೆಗೆ ಸುಲಭ ಪರಿಹಾರ ಇಂತಿದೆ. ಯಾವ ಪ್ರಮಾಣದಲ್ಲಿ ತಿಪ್ಪೆ ದಿನಾಲೂ ಸೇರುತ್ತದೆಯೋ ಅದಕ್ಕಿಂತ ಜಾಸ್ತಿ ಹಿಡಿಸಬಲ್ಲ ದೊಡ್ಡ ಪ್ರಮಾಣದ ಪ್ಲಾಸ್ಟಿಕ್
ಡಬ್ಬದಲ್ಲಿಟ್ಟು ಸರಿಯಾದ ಮುಚ್ಚಳ ಹಾಕಿ , ಈಗಿನಂತೆ ಕಸ ಎತ್ತುವವರಿಗೆ ವಿಲೇವಾರಿ ಮಾಡಿದರಾಯಿತು. ಒಳಗಡೆ ಎಲ್ಲೋ ಕತ್ತಲೆ ಮೂಲೆಯಲ್ಲಿ ಈ ತಿಪ್ಪೆರಾಯನನ್ನು ಸ್ಠಳಾಂತರಿಸಿದರಾಯಿತು . ಈ ರೀತಿ ಚಿಕ್ಕ ಪುಟ್ಟ ವಿಚಾರಗಳು ಹೊಳೆಯದಂತಹ ಶ್ರೇಷ್ಠ ??? ರೇನೂ ಈ ಎಂಟು ಹತ್ತು ವರುಷಗಳಲ್ಲಿ ನಮ್ಮನ್ನು ಮನ್ನಡೆಸುತ್ತಿಲ್ಲ. ಯಾರೋ ಪರಿಹಾರ ಸೂಚಿಸಿದಾಗ ಅದನ್ನು ಒಪ್ಪಿ ಬದಲಾವಣೆ ತರಲು ಅಡ್ಡ ಬರುವ ಅಹಂಭಾವವೆ ನಮ್ಮ ಸಮಾಜಕ್ಕಿರುವ ದೊಡ್ಡ ಶಾಪ.
ನಿಮ್ಮ ಬಿಚ್ಚು ಮನಸ್ಸಿನ ಅನಿಸಿಕೆ ಹೇಳಿ. ನನ್ನ ಅಕ್ಷರಗಳನ್ನು ಖಂಡಿಸಿ . ಹೊಗಳಿಕೆಯೇ ಇರಲಿ ತೆಗಳಿಕೆಯೆe ಬರಲಿ , ಸಮ ಚಿತ್ತದಿಂದ ಸ್ವೀಕರಿಸಲಾಗುವದು. ಆದರೆ ಬದಲಾವಣೆ ತರುವ ಸ್ಥಾನದಲ್ಲಿ ನಾನಿಲ್ಲ. ಸಾಗರ( ಸಮುದ್ರ ) ದಲ್ಲೊಂದು ಬಿಂದಿಗೆ ಪ್ರಮಾಣದ ನೀರನ್ನು ಎರೆಯುವಂತೆ , ಈ ಅಕ್ಷರಗಳನ್ನು ಜೋಡಿಸಿದ್ದೇನೆ. ಸ್ವೀಕರಿಸಿ.
ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ , ವಿಮರ್ಶಕ, ಫೇಸ್ ಬುಕ್ ಬರಹಗಾರ.
Jan 06 , 2013.

No comments:
Post a Comment