ಮಿತ್ರರೇ,
ನಾವು ಯಾರನ್ನು ಸಮಾಜದಲ್ಲಿ ದೊಡ್ಡವರು , ಜೀವನದಲ್ಲಿ ಮೇಲೆ ಬಂದವರು ಎಂದು ಒಪ್ಪಿರುತ್ತೆeವೆಯೋ ಅವರೆಲ್ಲ ನೂರಕ್ಕೆ ನೂರು ದೊಡ್ಡವರಾಗಿರುವದಿಲ್ಲ. ಮಾಂಸ ಮಜ್ಜೆಯಿಂದ ಕೂಡಿದ ಈ ದೇಹದಲ್ಲಿ ಅರಿಶಡ್ವೈರಗಳು ಸುಮ್ಮನಿರುತ್ತವೆ ಅಂದರೆ ಸುಪ್ತವಾಗಿ ಅಡಗಿರುತ್ತವೆ ಎಂದರ್ಥ. ಆಚೆ ನೈಜ ಸ್ಥಿತಿ ತೋರ್ಪಡಿಸದಂತೆ ಮನಸ್ಸಿನ ಮೇಲೆ, ಬುದ್ಧಿ ಹಿಡಿತ ಹೊಂದಿರುತ್ತದೆ. ಆ ಅರಿಶಡ್ವೈರಗಳು ಬುದ್ಧಿಯ ಹಿಡಿತ ತಪ್ಪಿಸಿಕೊಂಡು ಪ್ರದರ್ಶಿತವಾಗಲು ಸಮಯೋಚಿತ ಸಂಧರ್ಭಗಳು ಒದಗಿ ಬಂದಾಗ ತಮ್ಮತನ ತೋರ್ಪಡಿಸುತ್ತವೆ. ಒಮ್ಮೆ ಆ ರೀತಿಯ ಸಂಧರ್ಭಗಳು ಒಮ್ಮೆಯಲ್ಲ , ಆಗಾಗ ಒದಗಿ ಬಂದರೂ ಅರಿಶಡ್ವೈರಗಳ ಮುಷ್ಠಿಯಲ್ಲಿ ಸಿಗಲಿಲ್ಲ ಎಂದರೆ ಆ ಮಹನೀಯರು , ಪ್ರತಿಶತ ನೂರರಸ್ಟೂ ದೊಡ್ಡವರು ಎಂದು ಒಪ್ಪಿಕೊಳ್ಳಲಡ್ಡಿಯಿಲ್ಲ.
ಬಾಹ್ಯ ಸೌಂದರ್ಯ, ಸಾರ್ವಜನಿಕವಾಗಿ ತೋರಿಬರುವ ವ್ಯಕ್ತಿತ್ವದ ಮುಖ , ಬಹುಪಾಲು ಅಡಗಿಸಿಕೊಂಡಿರುವ ನಿಜವ್ಯಕ್ತಿತ್ವ ಅನಾವರಣಗೊಳ್ಳದಂತೆ ಕಾಳಜಿವಹಿಸುವ ಪರಿಯಷ್ಟೇ. ಈ ರೀತಿ ನಿಜವ್ಯಕ್ತಿತ್ವ ಅನಾವರಣಗೊಳ್ಳದಂತೆ ಜತನದಿಂದ ಹೊರವ್ಯಕ್ತಿತ್ವ ಕಾಪಿಟ್ಟುಕೊಂಡವರೇ , ದ್ವಿಮುಖ ವ್ಯಕ್ತಿತ್ವದ ನಾಯಕರ, ಮುಂದಾಳುಗಳ ಹಿಂಬಾಲಕರು. ದ್ವಿಮುಖವ್ಯಕ್ತಿತ್ವ ಹೊಂದಿರದಿದ್ದರೆ ಇಂದಿನ ಜನ ಜೀವನದಲ್ಲಿ ಶೀಘ್ರವಾಗಿ ದುಡ್ಡು ಮಾಡಲು ಅಸಾಧ್ಯ. ಒಮ್ಮೆ ಬಹು ಪ್ರಯತ್ನದಿಂದ ದುಡ್ಡುಮಾಡಿದರೆ , ದ್ವಿಮುಖ ವ್ಯಕ್ತಿತ್ವದ ಜನರು ಸುತ್ತ ಸೇರಿ, ದ್ವಿಮುಖ ವ್ಯಕ್ತಿತ್ವದ ಜಾಲದಲ್ಲಿ ಅವರನ್ನು ಸೇರಿಸಿಕೊಂಡುಬಿಡುತ್ತಾರೆ . ಒಮ್ಮೆ ಆ ಜಾಲದ ಪರಿಧಿಯ ಒಳಸೇರದಿದ್ದರೆ ಇಂದಿನ ಜನ ಜೀವನದಲ್ಲಿ ಜನಪ್ರಿಯರಾಗದೆ, ಸಾರ್ವಜನಿಕವಾಗಿ ಗುರುತಿಸಲ್ಪಡದೇ ಉಳಿದುಬಿಡುತ್ತಾರೆ. ಹೀಗೆಂದು ಆ ಪರಿಧಿಯೊಳಸೇರಿದರೆ ಕ್ರಮೇಣ ತನ್ನತನ ಕಳೆದುಹೋಗಿ , ಸಾರ್ವಜನಿಕ ಜೀವನದ ಉತ್ತುಂಗಕ್ಕೇರಿದರೂ , ವೈಯಕ್ತಿಕ ಜೀವನದಲ್ಲಿ ನಿರಾಸೆಹೊಂದುತ್ತಾರೆ. ಈ ರೀತಿಯ ಜೀವನದ ಉತ್ತುಂಗ ಹಂತ ತಲುಪಿದಾಗ , ಸುಪ್ತವಾಗಿದ್ದ ಅರಿಶಡ್ವೈರಗಳು ಜಾಗ್ರತವಾಗಿ ಉನ್ಮತ್ತನಾಗಿ denotify ಹಗರಣಗಳು, rape the known and unknown ಅಂತಹ ನೀಚ ಪ್ರವ್ರತ್ತಿಗೆ ಉದ್ಯುಕ್ತನಾಗುತ್ತಾನೆ. ಒಮ್ಮೆ ಈ ನೀಚ ಪ್ರವೃತ್ತಿಗಳು ಜಾಹೀರಾದಾಗ ತನ್ನನ್ನು ಸುಭಗನಂತೆ ತೋರ್ಪಡಿಸಲು ಅಧಿಕಾರದ ಮದ, ತಾನೇ ಬೆಳೆಸಿದ ಹಿಂಬಾಲಕರು, ಅಸಮರ್ಪಕ ವಿಧಾನಗಳಿಂದ ಗಳಿಸಿದ ಸಂಪತ್ತು ಎಲ್ಲ ಉಪಯೋಗಿಸಿ ಆಪತ್ತುಗಳಿಂದ ಪಾರಾಗಲು ಕಾರ್ಯ ಪ್ರವೃತ್ತನಾಗುತ್ತಾನೆ .ಈ ವರ್ತುಲದಿಂದ ಹೊರ ಬರಲಿ , ಬರದಿರಲಿ ಕಾಲ ಕ್ರಮೇಣ ಸಮಾಜದಲ್ಲಿ ಸ್ಥಾನ ಬ್ರಷ್ಠನಾಗುತ್ತಾನೆ .
ವಾನಪ್ರಸ್ಥದ ಹಂತ ತಲುಪಿರುವ ಹಿರಿಯರ ಜೊತೆ ಆತ್ಮೀಯವಾಗಿ ಹರಟಿದರೆ ಇಂತಹ ನೂರಾರು ಜನರ ಇತಿಹಾಸ ಬೆಳಕಿಗೆ ಬರುತ್ತದೆ. ಇತಿಹಾಸ ರಚಿಸಿದವರಸ್ಟೇ ಅಲ್ಲ, ಪ್ರಸಕ್ತ ಕಾಲದಲ್ಲೂ ಇತಿಹಾಸ ರಚಿಸುತ್ತಿರುವವರ ನಿಜ ಮುಖಗಳ ಅರಿವಾಗುತ್ತವೆ. ಆದ್ದರಿಂದಲೇ ಇಂದಿನ ದಿನಗಳಲ್ಲಿ ಸಾರ್ವಜನಿಕ ಜೀವನದಲ್ಲಿ ವ್ಯವಹಾರಗಳ ಜವಾಬ್ದಾರಿತನ ( Accountability ), ಪಾರದರ್ಶಕತೆ
( Transperancy ) ಕುರಿತು ಎಲ್ಲೆಡೆ ಹೆಚ್ಚಿನ ಕೂಗು ಕೇಳಿ ಬರುತ್ತಿರುವದು. ಇಂದಿನ ಈ ಕಾಲ ಮಾನದಲ್ಲಿ ಈ ಬೆಳವಣಿಗೆಗಳು ಸಮಾಜದ ಯಾವ ವಿಭಾಗಗಳನ್ನೂ ಬಿಟ್ಟಿಲ್ಲ. ನಾನು ಇಲ್ಲಿ ಒಂದೊಂದಾಗಿ ಹೆಸರಿಸಬಹುದು, ಹೆಸರಿಸಿದರೆ ಮುಜುಗರವುಂಟಾದೀತು. ಆ ಮುಜುಗರದಿಂದ ತಪ್ಪಿಸಿಕೊಳ್ಳಲು ಅಲ್ಲದೆ ನೀವೆಲ್ಲ ಆ ರೀತಿಯ ಮುಖಂಡರುಗಳು, ಸಮಾಜವನ್ನು ಮುನ್ನಡೆಸುವವರುಗಳ ಮಧ್ಯೆಯೇ ಬದುಕುತ್ತಿರುವದರಿಂದ , ಹತ್ತಾರು ಕಡೆ ಹತ್ತಾರು ಸಲ ಈ ರೀತಿಯ ಘಟನೆಗಳ ಮಾಹಿತಿವುಳ್ಳವರಾಗಿರುತ್ತೀರಿ.
ಯಾವುದೋ ಒಂದು ಘಟನೆಯ ಸುತ್ತ ಚರ್ಚೆಯಲ್ಲಿ ಭಾಗಿಯಾದಾಗ ಈ ಎಲ್ಲ ವಿಚಾರಗಳು ಮನಸ್ಸಿನಲ್ಲಿ ಸುಳಿದವು. ನಿಮ್ಮೊಡನೆ ಹಂಚಿಕೊಂಡೆನು.
ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ , ವಿಮರ್ಶಕ, ಫೇಸ್ ಬುಕ್ ಬರಹಗಾರ.
Jan 10, 2013.

No comments:
Post a Comment