Wednesday, March 6, 2013


http://karavalinews.wordpress.com/2013/03/04/siddique/


ಈ ರೀತಿಯ ಲೇಖನಗಳನ್ನು ಒಂದು ಗುಂಪು ಓದುವದು, ಮತ್ತದೇ ಗುಂಪು ತನ್ನ ಶಕ್ತಿಯನ್ನು ವರ್ಧಿಸುವತ್ತ ಪ್ರಯತ್ನಶೀಲವಾಗುವದು , ಈ ರೀತಿಯ ವಿಚಾರಧಾರೆಗೆ ಒಗ್ಗದ ಗುಂಪು ತನ್ನ ಶಕ್ತಿಯನ್ನು ವರ್ಧಿಸಲು ಪ್ರಯತ್ನಶೀಲವಾಗುವದು, ಒಟ್ಟಾರೆ ಅವಕಾಶ ಸಿಕ್ಕಾಗೆಲ್ಲ ಒಂದು ಮನೋಭಾವದವರು ಇನ್ನೊಂದು   ಮನೋಭಾವದವರನ್ನು ಹೆಣೆಯಲು ಅಂದರೆ ಹೊಡೆ ಪಡೆ ಮಾಡಲು ಪ್ರಯತ್ನಿಸುವದು, ನಾವೇ ದೇಶ ಕಟ್ಟುವವರು, ನೀವು ನಾವು ಹೇಳಿದಂತೆ ಕೇಳಿ ಎಂದು ಪರಸ್ಪರ ಕೆಸರೆರಚುವದು , ಇದೇ ರೀತಿ ಸಾಗಿದೆ ಜೀವನ, ಸಮಾಜ, ದೇಶ ಬ್ರಿಟಿಶ್ ದಾಸ್ಯದಿಂದ ಬಿಡುಗಡೆಯಾದ ಮೇಲೆ.



ಚುನಾವಣೆ ಎಂಬುದು ಪ್ರತಿನಿಧಿಯನ್ನಾರಿಸುವದು  , ಆ ಪ್ರತಿನಿಧಿ ಅಯ್ಕೆಯಾದೊಡನೆ ಸರ್ವ ಜನಾಂಗದ ಪ್ರತಿನಿಧಿಯಾಗುವದು ಎಂಬ ಉದಾತ್ತ ಧ್ಯೇಯ ಹೊಂದಿದೆ ನಮ್ಮ ಸಂವಿಧಾನ. ಆದರೆ ನಿಜ ಜೀವನದಲ್ಲಿ ಅಧಿಕಾರವನ್ನು ಒಂದು ಮನೋಭಾವದವರು ಇನ್ನೊಂದು ಮನೋಭಾವದವರನ್ನು ಹತ್ತಿಕ್ಕಲು ಉಪಯೋಗಿಸುವ ಆಯುಧವಾಗಿ ಬಳಸುತ್ತಿದ್ದಾರೆ.  ಈ ಘರ್ಷಣೆಯ ಘೋರ ಪರಿಣಾಮವನ್ನು ಅನುಭವಿಸುವವರು ಜನ ಸಾಮಾನ್ಯ ಅಮಾಯಕರು. ನಮ್ಮ ವ್ಯವಸ್ಥೆಯನ್ನೇ ತಿರುಗು ಮುರುಗು ಮಾಡುವಷ್ಟು ಪ್ರಭಲವಾಗಿ ಬೆಳೆದಿದ್ದಾರೆ ರಾಜಕೀಯದಲ್ಲಿರುವ ಜನಗಳು.



ಆರೋಪ ಪ್ರತ್ಯಾರೋಪಗಳು ಬದಲಾಗುವದಿಲ್ಲ. ಅಧಿಕಾರ ದುರುಪಯೋಗದ ಕ್ರೂರ ವಿಧಾನಗಳು ಬದಲಾಗುವದಿಲ್ಲ. ಅಧಿಕಾರ ದುರುಪಯೋಗದ ವಿಧಾನಗಳು ಬೆಳಕಿಗೆ  ಬಂದರೂ , ಯಾವುದೇ ರೀತಿಯಲ್ಲಿ    ತಪ್ಪು ಭಾವನೆಗಳೇ ಜಾಗೃತವಾಗದಷ್ಟು ಕೆಟ್ಟು ಹೋದ ಮನಸ್ಸುಗಳು  ಎಂದೂ  ಬದಲಾಗುವದಿಲ್ಲ. ಬದಲಾಗುವದೇನಿದ್ದರೂ ಅಧಿಕಾರ ನಡೆಸುವ ಜನಗಳು ಮಾತ್ರ. ಚುನಾವಣೆ  ಗೆಲ್ಲುವ ರಾಜಕೀಯ ಪಕ್ಷಗಳು ಮಾತ್ರ.  ಆ ಪ್ರಮಾಣದಲ್ಲಿ ನಮ್ಮ ವ್ಯವಸ್ಥೆಯ ದುರುಪಯೋಗವಾಗಿ ಇಂದು ಆಡಳಿತ   ಅಷ್ಟು ಜಡ್ಡುಗಟ್ಟಿ , sensitivity  ಯನ್ನೇ ಕಳೆದುಕೊಂಡಿದೆ.



ಈ ರೀತಿ ಲೇಖನಗಳನ್ನು ಎಲ್ಲ ಆಯಾಮಗಳಿಂದ ಯೋಚಿಸಿದಾಗ ಯಾವುದು ಸತ್ಯ, ಯಾವುದು ಅಸತ್ಯ ಎಂದ ಜನ ಸಾಮಾನ್ಯನಿಗೆ ನಿರ್ಧಾರ ಕಷ್ಟ. ಆರಕ್ಷಕರು, ಅಧಿಕಾರಿಗಳು ಎಲ್ಲರೂ ರಾಜಕೀಯ ಪಕ್ಷಗಳ ಹಗ್ಗ ಜಗ್ಗಾಟದಿಂದ ಬೇಸತ್ತು , ಅಸಾಹಯಕರಾಗಿ ಅಧಿಕಾರದಲ್ಲಿರುವ ರಾಜಕೀಯ ಪಕ್ಷದ ಮುಖಂಡರುಗಳು , ಅವರ ಚೇಲಾಗಳು ಹೇಳುವ  ಮಾತಿಗೆ ಗೋಣು ಆಡಿಸುತ್ತ, ನ್ಯಾಯ - ಅನ್ಯಾಯಗಳ ಯೋಚನೆ ಬದಿಗಿಟ್ಟು, ಅಧಿಕಾರದಲ್ಲಿರುವವರು ಹೇಳಿದಂತೆ ನಡೆದುಕೊಳ್ಳುತ್ತ ತಮ್ಮ ತಮ್ಮ ಕಾರ್ಯದ ಹುದ್ದೆ, ಸ್ಥಳ ರಕ್ಷಿಸುತ್ತ ದಿನ ದೂಡುತ್ತಿದ್ದಾರೆ. ಈ ದಿಶೆಯಲ್ಲಿ ಒಳ್ಳೆಯ  ತಾಜಾ ಉದಾಹರಣೆಯೆಂದರೆ , ವಾರ್ತಾ ಪತ್ರಿಕೆಗಳಲ್ಲಿ ಓದಿದಂತೆ, ಶಾಸಕನನ್ನು ಸ್ಥಳೀಯ ವೈಯಕ್ತಿಕ ಕಾರ್ಯಕ್ರಮಕ್ಕೆ ಅವ್ಹಾನಿಸಲಿಲ್ಲವೆಂದು ಪೋಲಿಸ್ ಅಧಿಕಾರಿಗೆ ಆ ಶಾಸಕನು ಸೂಚನೆಯಿತ್ತು , ಆ ಸಂಘಟಕನನ್ನು  ಠಾಣೆಯಲ್ಲಿ ಕೂಡಿಟ್ಟು ಧೈಹಿಕ ಹಿಂಸೆ ನೀಡುವ ನೀಚ ಬುದ್ಧಿಯ ಶಾಸಕ .


ಇಂದು ಈ ಬೆಳವಣಿಗೆಗಳು ಸಮಾಜದ , ಪ್ರಜಾಪ್ರಭುತ್ವದ ಯಾವ ಅಂಗಗಳನ್ನೂ ಬಿಟ್ಟಿಲ್ಲ  , ನಾಲ್ಕನೆಯ ಅಂಗ ಪತ್ರಿಕಾ ಪ್ರಪಂಚವನ್ನೂ ಒಳಗೊಂಡು , ಎಂಬುದೇ ಅತೀ ಶೋಚನೀಯ  ಸಂಗತಿ.



ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.

www.hariharbhat.blogspot.com
March 07,2013.

No comments:

Post a Comment