Dr. C. N. Ramachandran ರವರ ಜೊತೆ ನಿನ್ನೆ ಭಾರತೀಯ ವಿದ್ಯಾಭವನದಲ್ಲಿ ಏರ್ಪಟ್ಟಿದ್ದ ಕಾರ್ಯಕ್ರಮ " ಕನ್ನಡ ಸಾಹಿತ್ಯ ಉತ್ಸವ" ದಲ್ಲಿ, CNR ಜೊತೆ ಮಾತನಾಡುವ ಅವಕಾಶ ಸಿಕ್ಕಿತ್ತು. ಸಾಹಿತ್ಯದ ಆರಂಭ ಹೇಗಾಯಿತು ಎಂದು ಚರ್ಚಿಸುತ್ತ, ಮೌಖಿಕ ಸಾಹಿತ್ಯ ಕುಶ ಲವರಿಂದ ಆರಂಭವಾಯಿತು ಎಂಬ ಅವರ ಮಾತಿನ ಎಳೆಯನ್ನು ಹಿಡಿದು ," ಸರ್, ಕುಶ ಲವ ತ್ರೇತಾಯುಗದ ವಿಷಯವಾಯಿತು, ನಾರದ ಮಹರ್ಷಿಗಳು ಸತ್ಯಯುಗದಲ್ಲಿ ಹೇಳಿದ್ದೆಲ್ಲ ......." ಎಂದೊಡನೆ ಮೈಮೇಲೆ ಬಿಸಿ ನೀರು ಚೆಲ್ಲಿದಂತೆ , " ಅವೆಲ್ಲಾ ನಿಜವಲ್ಲಾ, ಪುರಾಣಗಳು ಸತ್ಯವಲ್ಲ, ......" ಎಂದರು.
" ಹೌದು ಸರ್, ಸತ್ಯವಲ್ಲ ಎಂದೇ ಒಪ್ಪಿಕೊಂಡರೂ , ರಾಮಾಯಣದ ಉದಾಹರಣೆ ಕೊಟ್ಟಾಗ, ಇದೂ ಅಂದರೆ ನಾರದರ ವಿಷಯವನ್ನೂ ಗಮನಿಸಬೇಕಲ್ಲವೇ? ಎಂದರೆ .......... " ಇವೆಲ್ಲ ಯಾವುದೂ ಸತ್ಯವಲ್ಲ, ನಾನು ನಂಬುವುದಿಲ್ಲ ........" ಎಂದು ನನ್ನ ಮಾತನ್ನೇ ತಿರಸ್ಕರಿಸಿಬಿಟ್ಟರು. .... ನಾನು ಬಿಡಬೇಕಲ್ಲ ?...... " ಸರ್ ಹಾಗಿದ್ದರೆ ಇತಿಹಾಸ ಸಾಹಿತ್ಯವೇ? " ಎಂದೊಡನೆ , ಇತಿಹಾಸ ಸಾಹಿತ್ಯ ಪ್ರಕಾರವಲ್ಲ, ಕಾದಂಬರಿಗಳಲ್ಲಿ ಬರೆಯುವ ಇತಿಹಾಸದ ಸಂಗತಿಗಳು ಸಾಹಿತ್ಯ ಎಂದು , ಗೋಜು ಗೋಜಲಾಗಿ ಹೇಳಿದರು.
" ಸರ್ ಇವೆಲ್ಲಾ conflicts of thoughts , ಅಲ್ಲವೇ? ಎಂದು ನಾನು ಮುಂದುವರಿದಾಗ, ಇಪ್ಪತ್ತೈದು - ಮೂವತ್ತು ವಯಸ್ಸಿನ ಮಹಾಶಯನೊಬ್ಬ ಮಧ್ಯೆ ಪ್ರವೇಶಿಸಿ , CNR ಬಚಾವೋ ಕಾರ್ಯ ಕೈಗೊಂಡನು.
ವಿಚಿತ್ರ ಸಂಘಟಕರು. ಸಾಹಿತಿಗಳಿಗೆ ಇಪ್ಪತ್ತು ನಿಮಿಷ ಮಾತನಾಡಿ ಎಂದು ಮೂರು ಸಾಹಿತಿಗಳಿಗೆ ಮಾತನಾಡಲು ಅವಕಾಶ ನೀಡಿ , "ಈಗ ಪ್ರೇಕ್ಷಕರೊಡನೆ ಸಂವಾದ " ಎಂದು ಐದಾರು ಪ್ರಶ್ನೆಗಳಾದೊಡನೆ , ಸಮಯ ಮಿತಿ ಮುಗಿದೋಯಿತು ಎಂದು ಕಾರ್ಯಕ್ರಮ ಮುಗಿಸುವವರು. ಅಂದ ಹಾಗೆ ಕಾರ್ಯಕ್ರಮ ನಾಳೆಯೂ ಇದೆ, ಬಂದು ನೋಡಿ ಕಾರ್ಯಕ್ರಮದ ವೈವಿಧ್ಯ . ಒಳ್ಳೆ ಊಟ , ಕಾಫಿ - ಟೀ ವ್ಯವಸ್ಥೆ ಇರುತ್ತದೆ. ಐದಾರು ತಾಸಿನ ಕಾರ್ಯಕ್ರಮಕ್ಕೆ ಹತ್ತಾರು ಲಕ್ಷಗಳನ್ನು ಸುರಿದು, ವಿಡಿಯೋ - ಫೋಟೊ ಗಳನ್ನೇ ಭರ್ಜರಿಯಾಗಿಸಿ , ಸಾಹಿತ್ಯದ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಸಾಹಿತಿಗಳೇ, ಸಾಹಿತ್ಯ ಪ್ರಿಯರೆ ಇಲ್ಲ, ಎಲ್ಲ All India Radio, Prasaara Bhaarati ನೌಕರರ ಸಮ್ಮೇಳನ , ಸಾಹಿತ್ಯದ ಸೋಗಿನಲ್ಲಿ !!!!!!!!
ಇಂದೂ ನಡೆಯುತ್ತಿದೆ, ನಾಳೆಯೂ ಇದೆ.
Organised by Prasar Bharati
(Broadcasting Corporation of India)
All India Radio
from 22nd March 2013 to 24th March 2013
ಸ್ಥಳ: ಖಿಂಚಾ ಹಾಲ್ , ಭಾರತೀಯ ವಿದ್ಯಾಭವನ, ರೇಸ್ ಕೋರ್ಸ್ ರೋಡ್.
ಹರಿಹರ ಭಟ್, ಬೆಂಗಳೂರು.
ಚಿಂತಕ, ವಿಮರ್ಶಕ, ಹವ್ಯಾಸಿ ಬರಹಗಾರ.
www.hariharbhat.blogspot.com
March 23 , 2013.
No comments:
Post a Comment