Friday, March 22, 2013


ಭಾರತೀಯ ವಿದ್ಯಾಭವನ , ರೇಸ್ ಕೋರ್ಸ್ ರೋಡ್ ನ ಆವರಣದಲ್ಲಿ  ಧಾರ್ಸ್ಟ್ಯದಿಂದ  ಸುಲಿಗೆ.
======================================================


ಭಾರತೀಯ ವಿದ್ಯಾಭವನದಲ್ಲಿ  ಏರ್ಪಾಡಾದ ಒಂದು ಕಾರ್ಯಕ್ರಮಕ್ಕೆ ಹೋಗಿದ್ದೆ.  ಮಧ್ಯೆ ಟೀ ಕುಡಿಯೋಣ ಎನಿಸಿ ಅದೇ ಆವರಣದಲ್ಲಿರುವ ಕ್ಯಾಂಟೀನ್ ಪ್ರವೇಶಿಸಿದೆ. ಟೀ ಒಂದು ಕೊಡಿ ಎಂದಾಗ ಹನ್ನೆರಡು ರೂಪಾಯಿ ಎಂದನು. ಸರಿ ಒಳ್ಳೆ ಟೀ ಇದ್ದೀತು ಎಂದು ಬಿಲ್ ಪಡೆದು ಟಿ ತಗೊಂಡೆ. ಪೂರ್ತಿ ಆರಿ ಹೋದ ಟಿ, ಅಲ್ಲದೆ ರಸ್ತೆ ಬದಿಗಳಲ್ಲಿ ಅರ್ಧ ಟೀ ಎಂದು ಐದಾರು ರೂಪಾಯಿಗಳಿಗೆ ಸಿಗುವ ಟೀಗಿಂತಲೂ ಕೆಳಮಟ್ಟದ ಟೀ  ಮತ್ತು  ಕಡಿಮೆ ಪ್ರಮಾಣದ ಟೀ  ಅದಾಗಿತ್ತು.  ಇದೇನಾ ಹನ್ನೆರಡು ರೂಪಾಯಿ ಟೀ ಎಂದರೆ , ಹೌದು ಅದೇ , ಅಷ್ಟೇ ಎಂಬ ಅಹಂಕಾರದ ಉತ್ತರ .



ಯಾಕೆ ಹೀಗಿರಬಹುದು? ಕ್ಯಾಂಟೀನ್ ನಡೆಸುವವರಿಗೆ ಮಾನವೀಯತೆಯೇ ಇಲ್ಲವೇ?  ಕೇಳಿದಷ್ಟು ಹಣ ನೀಡಿ   ಟೀ ಕುಡಿಯಹೋದರೆ, ಯಾಕಪ್ಪ ಬಂದೆ ಎಂಬಂತಹ ಭಾವನೆಯಿಂದ ಹೊರಟುಬರಬೇಕೇ  ವಿನಃ ಬೇರೆ ದಾರಿಯಿಲ್ಲ.



ಭಾರತೀಯ ವಿಧ್ಯಾಭವನದಂತಹ ಶ್ರೇಷ್ಟ ಸಂಸ್ಥೆಯೊಂದರಲ್ಲಿ  , ಈ ರೀತಿ ವ್ಯವಹಾರಗಳು ನಡೆಯುವದು ಸಂಸ್ಥೆಗೆ  ಶೋಭೆ ತರಬಲ್ಲುದೇ?  ನೇರವಾಗಿ ದರೋಡೆಯ ರೂಪದಲ್ಲಿರುವ ಈ ಕ್ಯಾಂಟೀನ್ ಮೇಲೆ ಸಂಸ್ಥೆಗೆ   ಯಾವುದೇ ಹತೋಟಿಯಿಲ್ಲದಿರಬಹುದೇ ?  ಅಥವಾ ಸಭಂಧಿಸಿದವರ್ಯಾರಾದರೂ   ಪ್ರಶ್ನಿಸದಂತೆ , ಸರಕಾರೀ ಕಚೇರಿಗಳಂತೆ ತಮ್ಮನ್ನು ತಾವೇ ಮಾರಿಕೊಂಡಿರಬಹುದೇ ? ಎಂಬ ಜಿಜ್ಞಾಸೆ ಮನದಲ್ಲಿ ಮೂಡಿ ಬಂತು.



ಹರಿಹರ ಭಟ್, ಬೆಂಗಳೂರು.
ಚಿಂತಕ, ವಿಮರ್ಶಕ, ಹವ್ಯಾಸಿ ಬರಹಗಾರ.
www.hariharbhat.blogspot.com
March 22 ,  2013.

No comments:

Post a Comment