Saturday, March 9, 2013


ಬೋರ್ ನೀರೆತ್ತಿ ಊರಿಗೆಲ್ಲಾ ಬಿಕರಿ.

http://epapervijayavani.in/Details.aspx?id=4435&boxid=3426546


ವರದಿ ಅಧಿಕಾರಿಗಳ , ರಾಜಕೀಯ ನೇತಾರರ ಕಣ್ಣು ತೆರೆಸಬೇಕಾಗಿದೆ.


ನಮ್ಮ ದೇಶದಲ್ಲಿ ಯಾವುದೇ ಪಟ್ಟಣ ಕ್ಕೆ ಹೋದರೂ ಕಣ್ಣಿಗೆ ರಾಚುವಂತೆ ಸಮಸ್ಯೆಗಳ ಆಗರವೇ ತೋರಿಬರುತ್ತದೆ. ನಮ್ಮ ವ್ಯವಸ್ಥೆಯಲ್ಲಿ ಈ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ರಾಜಕೀಯ, ಅಧಿಕಾರಿ ಶಾಹಿ ವ್ಯವಸ್ತೆಯೇ ಇದೆ. ಆದರೆ ವ್ಯವಸ್ಥೆ ಮಾತ್ರ ಸರಿದಾರಿಯಲ್ಲಿ ನಡೆಯುವದೇ ಇಲ್ಲ. ಎಲ್ಲ ಸೌಲಭ್ಯಗಳು ರಾಜಕಾರಣಿಯ, ಅಧಿಕಾರಿಯ ಸಾಮಿಪ್ಯ, ಸ್ನೇಹ , ಪ್ರಭಾವ ಇದ್ದವರಿಗಷ್ಟೇ ದೊರೆಯುತ್ತಿದೆ.


ಸಮಸೆಗಳನ್ನು ಅರಿತು ಪರಿಹಾರ ಕಂಡುಕೊಳ್ಳಬೇಕಾದ ಅಧಿಕಾರಿಗಳೇ ತಮ್ಮ ಕಚೇರಿಗಳನ್ನು ಬಿಟ್ಟು ಆಚೆ ಬಂದು ಸಮಸ್ಯೆಗಳನ್ನರಿಯದೆ , ಸಾರ್ವಜನಿಕರು ದೂರು ನೀಡಲಿ ಎಂದು ನಿರೀಕ್ಷಿಸುವದು ಹಾಸ್ಯಾಸ್ಪದ. ಅವಶ್ಯಕವಾದ  ಸಿಬ್ಬಂದಿ, ವಾಹನಗಳು ಈ ಎಲ್ಲ ವ್ಯವಸ್ಥೆಯ ಹೊರತಾಗಿಯೂ , ಸಮಸ್ಯೆಗಳನ್ನು ಅಲ್ಲಲ್ಲೇ, ಆಗಾಗಲೇ ಪರಿಹರಿಸದೆ , ಸಮಸ್ಯೆ ಅಗಾಧವಾಗಿ ಬೆಳೆಯಲು ಅನುವು ಮಾಡಿ ಕೊಡುವವರು ಇಂದಿನ ಅಧಿಕಾರಿ ವರ್ಗ ಮತ್ತು ಅಧಿಕಾರಿ ವರ್ಗಗಳಿಗೆ ಸಮಸ್ಯೆ ಪರಿಹರಿಸಲು ಪೂರಕ ವಾತಾವರಣಕ್ಕೆ ಅಡೆ ತಡೆ ಒಡ್ಡುವ   ರಾಜಕೀಯ ವರ್ಗ. ಇಂದಿನ ಈ ರೀತಿ ಕಲುಷಿತ ವಾತಾವರಣ ಅಸಹನೀಯ ಮತ್ತು ಶೋಚನೀಯ. ಅಲ್ಲದೆ ಪ್ರತಿಯೊಬ್ಬರೂ ಖಂಡಿಸಿದಾಗ ಮಾತ್ರ ಸ್ವಲ್ಪ ಮಟ್ಟಿಗೆ ಪರಿಹಾರ ದೊರಕುವ ಸಾಧ್ಯತೆಗಳಿವೆ.


ಇಂದಿನ ದಿನಗಳಲ್ಲಿ ಪತ್ರಿಕೆಗಳನ್ನು ನಡೆಸಲು   ಸರಕಾರೀ ಜಾಹೀರಾತುಗಳಿಂದ, ವ್ಯಾಪಾರೀ ಜಾಹೀರಾತುಗಳಿಂದ ಹಣ ಹೊಂದಿಸಬೇಕಾಗಿದೆ.  , ಯಾವುದೋ ಒಂದೆಡೆ ರಾಜಕಾರಣಿಗಳ , ಅಧಿಕಾರಿಗಳ ಜೊತೆ ಅನಿವಾರ್ಯ ಹೊಂದಾಣಿಕೆಯೊಂದಿಗೇ ಪತ್ರಿಕೆ ನಡೆಸುವದು ವಾಸ್ತವವಾಗಿದೆ. ಹೀಗಾಗಿ ಪತ್ರಿಕೆಗಳಲ್ಲಿ ವಸ್ತು ನಿಷ್ಟ ವರದಿಗಳು , ಸತ್ಯನಿಷ್ಟ ವರದಿಗಳು  ಕಾಣುವದು ಅಪರೂಪವಾಗಿದೆ.


ಆದರೂ ವಿಜಯವಾಣಿ ಪತ್ರಿಕೆ ಈ ಮೇಲಿನ ವರದಿ ಪ್ರಕಟಪಡಿಸಲು ಕೈಗೊಂಡ ನಿರ್ಣಯ ಬಹು ಶ್ಲಾಘನೀಯ ಅಲ್ಲದೆ ಎಲ್ಲಾ ಪತಿಕೆಗಳು ಅನುಸರಿಸಲು ಯೋಗ್ಯವಾದ ಹೆಜ್ಜೆ.  ದಿನ ನಿತ್ಯ ಈ ರೀತಿ ಹತ್ತಾರು ಸಮಸ್ಯೆಗಳು ಕಣ್ಣಿಗೆ ಬಡಿಯುತ್ತಿರುತ್ತಿವೆ. ಎಲ್ಲ ಸಮಸ್ಯೆಗಳನ್ನು ಜನರ, ಅಧಿಕಾರಿಗಳ, ರಾಜಕಾರಣಿಗಳ ಗಮನಕ್ಕೆ ತಂದು ಇನ್ನೂ ಹೆಚ್ಚಿನ ಪತ್ರಿಕಾ ಸೇವೆ ವಿಜಯವಾಣಿಯಿಂದ ದೊರೆಯಲಿ, ತನ್ಮೂಲಕ ವಿಜಯವಾಣಿ ಪತ್ರಿಕೆ ಕರ್ನಾಟಕದಲ್ಲಿ ನಂಬರ್ ಒನ್ ಆಗಲಿ ಎಂದು ಆಶಿಸುತ್ತೇನೆ / ಹಾರೈಸುತ್ತೇನೆ .


ಹರಿಹರ ಭಟ್, ಬೆಂಗಳೂರು.
ಶಿಕ್ಷಕ , ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.

www.hariharbhat.blogspot.com
March 10 , 2013.

No comments:

Post a Comment