Saturday, November 24, 2012

October 31 , 2012.

ನೋಡಿ ನಮ್ಮ ಶ್ರೀ ಅಖಿಲ ಹವ್ಯಕ ಮಹಾಸಭೆಯ ಸದಸ್ಯರ ಸಂಖ್ಯೆ ಈಗ ಹತ್ತ ಹತ್ತರ ಹದಿನಾರು ಸಾವಿರ ಆಗ್ತಾ ಇದ್ದು. ಸಂತೋಷದ ವಿಷಯ . ಈ ಸಂಸ್ಥೆಯ ಆಡಳಿತಾನೂಕೂಲಕ್ಕಾಗಿ ಒಂದು ಆಡಳಿತ ಮಂಡಳಿ ಇದ್ದು. ನಿಮಗೆಲ್ಲ ತಿಳಿದಿರುವ ವಿಚಾರ. ಈ ಆಡಳಿತ ಮಂಡಳಿಗೆ ಆಯ್ಕೆಯಾದ ಸದಸ್ಯರ ಅವಧಿ ನಾಲ್ಕು ವರ್ಷಗಳು. ಪ್ರತಿ ಎರಡು ವರ್ಷಕ್ಕೆ ಅರ್ಧದಸ್ಟು ಸದಸ್ಯರು ನಿವ್ರತ್ತರಾಗಿ , ಆ ಸ್ಥಾನಗಳಿಗೆ ಚುನಾವಣಾ ಅಥವಾ ಸರ್ವ ಸಂಮತಿಯಿಂದ ಆಯ್ಕೆ ನಡೆಯಬೇಕು. ಇದು ನಿಯಮ.

ಈಗೇನಾಗುತ್ತಿದೆ ನೋಡೋಣ. ಮಹಾಸಭೆಯ ವಾರ್ಷಿಕಾಧಿವೇಶನ ನಡೆದಾಗ ಅರವತ್ತರಿಂದ ತೊಮಭತ್ತು , ಹೆಚ್ಚೆಂದರೆ ಒಂದು ನೂರಾ ಇಪ್ಪತ್ತು ಸದಸ್ಯರು ಹಾಜರಾಗಿ , ಈ ಪ್ರತಿನಿಧಿಗಳ ಆಯ್ಕೆ ನಡೆಯುತ್ತದೆ. ಅಂದರೆ ಹದಿನೈದರಿಂದ ಹದಿನಾರು ಸಾವಿರ ಜನರ ಪ್ರತಿನಿಧಿಗಳನ್ನು ಅರವತ್ತು ಎಂಭತ್ತು ಜನ ಆರಿಸುತ್ತಾರೆ. ಇನ್ನೂ ಗುಟ್ಟಿನ ವಿಷಯವೆಂದರೆ ಕೇವಲ ಎಂಟೋ ಹತ್ತೋ ಜನರು ಆಯ್ಕೆಯನ್ನು ನಿರ್ಧರಿಸುತ್ತಾರೆ. ಆಸಕ್ತಿಯುಳ್ಳವರು ಹತ್ತು ವರುಷಗಳ ವಾರ್ಷಿಕಾಧಿವೇಶನದ ವರದಿ ಪಡೆದು ಪರೀಕ್ಷಿಸಬಹುದು.

ಇದು ಸಮಂಜಸವೇ ? ಹಾಗಿದ್ದರೆ ಏನು ಮಾಡಬೇಕು ? ನಮ್ಮ ಹವ್ಯಕರು ಬೆಂಗಳೂರಿನಲ್ಲಿ ಅಲ್ಲದೆ ವಿವಿಧ ಪ್ರದೇಶಗಳಲ್ಲಿ ಹಂಚಿ ಹೋಗಿದ್ದಾರೆ. ಎಲ್ಲ ಕಡೆ ವಾಸಿಸುವ ಸದಸ್ಯರಿಗೂ ಸಮಾನವಾದ ಅವಕಾಶಗಳಿರಬೇಕು. ಪ್ರಜಾಪ್ರಭುತ್ವ ರೀತಿ , ಆಯ್ಕೆಯಾಗಬೇಕು. ಎರಡು ವರ್ಷಗಳಿಗೊಮ್ಮೆ ಬರುವ ಈ ಆ
ಯ್ಕೆಗೆ , postal ballot ಅಂದರೆ ಸದಸ್ಯರು ಯಾರು ಸಭೆಗೆ ಬರಲಾಗುವದಿಲ್ಲವೋ ಅವರು ಮನೆಯಿಂದಲೇ ತಮ್ಮ ನಿರ್ಧಾರವನ್ನು ballot paper ಮುಖಾಂತರ ತಿಳಿಸುವ ಅವಕಾಶವನ್ನು ಒದಗಿಸಬೇಕು. ಇದಕ್ಕೆ ಬೇಕಾಗುವ ಹಣಕಾಸು ಖರ್ಚು ಎಸ್ಟಾದರೂ ಸಮಾಜದ ಸಾರ್ವಜನಿಕ ಸಂಸ್ಥೆಗೆ ಇದು ಅತಿ ಅವಶ್ಯಕ. ಅಲ್ಲದೆ ಒಂದು ವರ್ಷ ವ್ಯಾವಹಾರಿಕ ಖರ್ಚು ( administration expenses ) ಎಂದು 32 . 58 ಲಕ್ಷ ( Rs. 32,58,135 /= please refer page 16 of Havyak masa patrike of september,2012 Receipts and Payments account ) ಇರುವ ಸಾರ್ವಜನಿಕ ಸಂಸ್ತೆಗೆ , ಸರ್ವ ಸದಸ್ಯರ ಪ್ರತಿನಿಧಿತ್ವ ಇರಲು ಈ ರೀತಿಯ ಆಯ್ಕೆ ಸಮಂಜಸವಲ್ಲವೇ ? ಅತಿ ಅವಶ್ಯಕವಲ್ಲವೇ ?

ವಾಸ್ತವಿಕತೆ ಎಂದರೆ ಹದಿನೈದರಿಂದ ಈಪ್ಪತ್ತು ಅಬ್ಬಬ್ಬ ಎಂದರೆ ಮೂವತ್ತು ಸದಸ್ಯರು ಈಗ ಹದಿನೈದರಿಂದ ಇಪ್ಪತ್ತು ವರ್ಷಗಳಲ್ಲಿ ಕಾರ್ಯ ಕೈಗೊಂಡು ತಮ್ಮಿಂದಾದ ಇಷ್ಟ ಪ್ರಯತ್ನಗಳಿಂದ ಸಂಸ್ತೆಗೆ ಸೇವೆ ಸಲ್ಲಿಸುತ್ತಿದ್ದಾರೆ. ಸಹಜವಾಗಿ ಮತ್ತು ನೈಸರ್ಗಿಕವಾಗಿ ಅಲ್ಲೊಂದು ಸ್ವಹಿತ ಒಡ ಮೂಡಿರುತ್ತದೆ. ಮನುಷ್ಯ ಗುಣ ಸಹಜವಾಗಿ ಆ ಸ್ವಹಿತ ರಕ್ಷಣೆಯತ್ತ ಗಮನವಿರುತ್ತದೆ. ಹಾಗಾಗಿ ಹೊಸ ಸದಸ್ಯರಿಗೆ , ಯುವ ಸದಸ್ಯರಿಗೆ ಅವಕಾಶಗಳು ಅಲಬ್ಯವಾಗಿರುತ್ತವೆ. ಹಳೆಯ ವಿಚಾರಗಳಿಂದ ಹೊರಬರಲಾರದವರ ನೆರಳಿನಲ್ಲೇ, ಅವಕಾಶಕ್ಕಾಗಿ ಸ್ತುತಿಯಿಂದ ಸೇವಿಸುವವರಿಗಸ್ಟೇ ಅಲ್ಲಲ್ಲಿ ಅವಕಾಶ ಒದಗಿ ಬರುತ್ತದೆ. ಹೊಸ ವಿಚಾರಗಳು ಇಂದಿನ ದಿನಗಳಿಗೆ ಪ್ರಸ್ತುತ ವಾದದ್ದು ಯುವಕರಿಂದ ಅಥವಾ ಯುವ ವಿಚಾರಗಳಿಂದ ಬಂದ ಸಲಹೆಗಳಿಗೆ ಅರ್ಧದಲ್ಲೇ ಮೋಕ್ಷ ಪ್ರಾಪ್ತಿ.

ನನ್ನ ಅನುಭವದಂತೆ ನಮ್ಮ ಸಮಾಜದಲ್ಲಿ ಸಾವಿರಾರು ವಕೀಲರು , advocates , chartered accountants, industrialists, engineers, doctors, landlords, farmers etc ಇದ್ದ . millionaires ( ದಶ ಲಕ್ಶಾಧೀಶ್ವರರು ) ಸಾಮಾನ್ಯ ಎಲ್ಲೆಡೆ ಇದ್ದ. Billionaires ( 100 ಕೋಟಿ ರುಪಾಯಿಯ ಅಧೀಶ್ವರರು ) ಇದ್ದೇ ಇದ್ದ. ಸಂಶಯ ಬೇಡ. ಈ ರೀತಿಯ ಘನ ಹಿನ್ನೆಲೆಯುಳ್ಳ ಸಮಾಜಕ್ಕೆ ಸಮಂಜಸ ಪ್ರಾತಿನಿದ್ಯವುಳ್ಳ, ಪ್ರಜಾಪ್ರಭುತ್ವ ರೀತಿ ಆಯ್ಕೆಗೊಳ್ಳುವ ವ್ಯವಸ್ತೆ ಬೇಡವೇ ? ಇದು ಇಂದಿನ ಅವಶ್ಯಕತೆ ಯಲ್ಲವೇ ?

ಬದಲಾವಣೆ ಜಗದ ನಿಯಮ. ಬದಲಾವಣೆ ಬರಲೇ ಬೇಕು. ಎಲ್ಲರೂ ಸೇರಿ ಕೈ ಜೋಡಿಸಿದಾಗ ಒಳ್ಳೆಯ ಬದಲಾವಣೆಗಳು ಬರುತ್ತವೆ. ಇದೂ ಜಗದ ನಿಯಮವೇ .

ಹಾಗಿದ್ದರೆ ಈಗ ನೀವೇನು ಮಾಡಬೇಕು ? ಇಲ್ಲಿ ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ವಿವರವಾಗಿ ಬರೆಯಿರಿ. ನಿಮ್ಮೆಲ್ಲ ಅಭಿಪ್ರಾಯಗಳನ್ನು ಶ್ರೀ ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷರಿಗೆ ತಲುಪಿಸುವ ವ್ಯವಸ್ತೆ ಇದೆ.

ಹರಿಹರ ಭಟ್, ಬೆಂಗಳೂರು.
October 31 , 2012.

No comments:

Post a Comment