Tuesday, November 27, 2012

ಮಹಾಭಾರತ್ ........ಮಹಾಭಾರತ್ ..........
ದೂರದಿನ್ದೆಲ್ಲೊ ಯಾರದೋ ಮನೆಯ ಟಿ ವಿ ಯಲ್ಲಿ ಮೊಳಗುತ್ತಿತ್ತು . ಒಹ್ ಇನ್ನೂ ಮುಗಿದಿಲ್ಲ ಈ ಮಹಾಭಾರತ್ , ಯಾವಾಗ ಮುಗಿಯುವದೋ ಇನ್ನು .........ಎಂದು ನನ್ನ ಮಿತ್ರ ಸಿಡಿಮಿಡಿ ಗೊಂಡ. ನಾನು ಹೇಳಿದೆ ರಾಮಾಯಣ , ಮಹಾಭಾರತ ಮುಗಿಯುವದು ಎನ್ನುವದಿಲ್ಲ, ಎಲ್ಲಿಯವರೆಗೆ ನಾವೆಲ್ಲಾ ರಾಮಾಯಣ , ಮಹಾಭಾರತದ ಪಾತ್ರಗಳಾಗಿರುತ್ತೆವೋ ಅಲ್ಲಿಯವರೆಗೂ ಈ ಮಹಾಕಾವ್ಯಗಳು ಸತ್ವ ಕಳೆದುಕೊಳ್ಳುವದಿಲ್ಲ ಎಂದೆನು. ಮಿತ್ರನ ಕೀಟಲೆ ಶುರು. ಆರಂಭಿಸಿಬಿಟ್ಯಾ ? ನಿನ್ನ ಉಪ
ನ್ಯಾಸ ಎಂದ. ಕೇಳಲು ನಿeನಿರುವಾಗ , ಇನ್ನೇನು ತಾಳು ಎಂದು ಆರಂಭಿಸಿದೆ.


ಅಂದು ತುಂಬಿದ ಸಭೆಯಲ್ಲಿ ಹಿರಿಯರಾದ ಅಜ್ಜಯ್ಯ ಭೀಷ್ಮ ಪಿತಾಮಹ, ಶ್ರೇಷ್ಟ ಗುರು ದ್ರೋಣಾಚಾರ್ಯ, ಧರ್ಮದ ಪ್ರತಿರೂಪ ಯುಧಿಸ್ಟಿರ , ಕೌರವ ಕುಲ ಶ್ರೇಷ್ಟ ಹಸ್ತಿನಾಪುರಾಧೀಶ್ವರ ದ್ರತರಾಷ್ಟ್ರ , ಪತಿ ಪಾರಾಯಣೆ ಶ್ರೇಷ್ಟ ಸ್ತ್ರೀ ಗಾಂಧಾರಿ ಎಲ್ಲರು ಉಪಸ್ತಿತರಿದ್ದಾಗ ಅಲ್ಲವೇ ಪಾಂಚಾಲೆ ದ್ರೌಪತಿಯ ವಸ್ತ್ರ ಅಪಹರಣಕ್ಕೆ ದುಶ್ಯಾಸನ ಮುಂದಾಗಿದ್ದು ? ಈ ಎಲ್ಲ ಪ್ರಜಾ ಶ್ರೇಷ್ಟರ ಎದುರೆ ಅಲ್ಲವೇ , " ತಮ್ಮಾ ದುಷ್ಯಾಸನಾ, ಎಳೆದು ತಾ , ಆ ಪಂಚಾಲೆಯನ್ನು " ಎಂದು ಆಣತಿ ಇತ್ತಿದ್ದಲ್ಲವೇ ? ಎಂದು ಯಕ್ಷಗಾನ ಶೈಲಿಯಲ್ಲಿ ನನ್ನ ಮಿತ್ರನನ್ನು ಪ್ರಶ್ನಿಸಿದೆ. ನನ್ನ ಮಿತ್ರನೂ ಕಮ್ಮಿಯೇನಿಲ್ಲ. ಅಲ್ಲಯ್ಯಾ ನಾನೇನು ಮಾಡಲಿ ? ಅಲ್ಲಿ ನಾನಿದ್ದೆನೆ ? ಎಂದು ನನಗೆ ತಿರುಗೇಟು ನೀಡಿದ.

ಈಗ ನೀವೊಮ್ಮೆ ಯೋಚಿಸಿ. ಅಂದು ಮಹಾಭಾರತದ ಆ ಘಳಿಗೆಯಲ್ಲಿ ಭೀಷ್ಮ ಪಿತಾಮಹನಾದಿಯಾಗಿ ಯಾರೊಬ್ಬರಾದರೂ ತಾಳು ಧುರ್ಯೋಧನ , ತಾಳ್ಮೆ , ಯೋಚಿಸು ಎಂದಿದ್ದರೆ , ಸಾವಿರ ಸಾವಿರ ಸಂಖ್ಯೆಯಲ್ಲಿ ಪ್ರಜಾ ಜನರು ತಾಳು, ತಾಳು ದೊರೆಯೇ ಎಂದು ಮೊರೆಯಿಡುತ್ತಿದ್ದಿಲ್ಲವೇ ? ವಿಶ್ಲೇಷಕರು ಹೇಳುವಂತೆ ದೊರೆಯ ಅನ್ನವನ್ನು ತಿಂದ ಋಣ ಅವರನ್ನೆಲ್ಲ ಕಟ್ಟಿ ಹಾಕಿತ್ತು. ಅನ್ನ ನೀಡಿದ ದೊರೆ ಮಾಡಿದ ಅನ್ಯಾಯಗಳನ್ನು ಪ್ರತಿಭಟಿಸುವ ಶಕ್ತಿಯನ್ನೇ ಅಂದಿನ ಶ್ರೇಷ್ಟರು ಕಳೆದುಕೊಂಡಿದ್ದಾರೆ ಎಂದಾದರೆ, ಇಂದಿನ ಶ್ರೇಷ್ಟರು ಮಾಡುವದೇನು ನೋಡೋಣ .

ವೈದ್ಯೋ ನಾರಾಯಣೋ ಹರಿ : ಎಂದು ಸಮಾಜ ವೈದ್ಯರಿಗೆ ಮಾನವರಲ್ಲೇ ಹೆಚ್ಚಿನ ಗೌರವ ನೀಡಿದೆ. ಎಸ್ಟೋ ನಮ್ಮ ಹೆಮ್ಮಕ್ಕಳ ಕಥೆ ಕೇಳಿ. ಚೂರ್ಣ ಕೊಡುವ ಡಾಕ್ಟರ್ ಪೂರ್ಣ ತೋರಿಸು ಎಂತಾನೆ , ಸ್ತೆಥೆಸ್ಕೋಪ್ ( stethoscope ) ಹಾರ್ಟಿಗಿಡಬೇಕಾದವನು ಯಾವ್ಯಾವದೋ ಪಾರ್ಟಿಗಿಡುತ್ತಾನೆ, ಬಜೆ ಎಂದರೆ ಸಾಕು ಸಜೆ ಎಂದು ಓಡೋ ಕಾಲ ಬಂದಿದೆ , ಸಜೆ ಯಾಗಿರುವ ಇಂಥ ವ್ಯವಹಾರಗಳು ಬಜೆಗೆಲ್ಲಿ ಅರ್ಥವಾಗಬೇಕು. ಹಾಗೆಂದು ಎಲ್ಲರು ಹಾಗೆ , ಜಗತ್ತೇ ಹಾಗಿದೆ ಎಂದಲ್ಲ. ಅದಕ್ಕೆ ಗೂಢವಾಗಿ ಹೇಳಿದ್ದೇನೆ. ಅಂದಿನ ಮಹಾಭಾರತದ ಶ್ರೇಷ್ಟ ರಂತೆ ಇಂದಿನ ಶ್ರೇಷ್ಟ ರು ವ್ಯವಹರಿಸುತ್ತಾರೆ. ಕೂಡಲೇ ಪತ್ರಿಕಾ ಹೇಳಿಕೆಗಳನ್ನು ನೀಡಿ ಘಟನೆ ಖಂಡಿಸುತ್ತಾರೆ. ಹಿಂದೆ ಅಪರಾಧಿಯನ್ನು ರಕ್ಷಿಸುತ್ತಾರೆ. ಇದೆ ತಾನೇ ಈ ನಾಲ್ಕು ದಶಕಗಳಲ್ಲಿ ನಡೆಯುತ್ತಿರುವದು ? ಈಗ ಹೇಳಿ ಮಹಾಭಾರತ ಸದಾ ಕಾಲ ಪ್ರಸ್ತುತ ಯಾಕೆ ?

ಒಬ್ಬ ಡಾಕ್ಟರ್ ಹುಚ್ಚು ಹುಚ್ಚಾಗಿ ಹೇಳುತ್ತಾನೆ , ಚಳಿಗಾಲ ಬಂದರೆ ಡಾಕ್ಟರುಗಳಿಗೆ ಕೆಲಸ ಕಡಿಮೆ ಅಂದರೆ ಆದಾಯ ಕಡೆಮೆ ಎಂದು ಸೂಚ್ಯವಾಗಿ ಹೇಳೋ ಪ್ರಯತ್ನ. ಚಿಕ್ಕ ಮಗುವಾದರೂ ಗೂಕಿ ಅಜ್ಜಿಯನ್ನೋ, ಆಂಟಿಯನ್ನೋ ಕಂಡೊಡನೆ , " ಡಾಕ್ಟರ್ ಕಂಡ್ರಾ " ಎನ್ನುತ್ತದೆ. ಈ ಗೂಕತನ ( ಅಸ್ತಮಾ ) ಬರುವದು, ಹೆಚ್ಚಾಗುವದೆe ಚಳಿಗಾಲದಲ್ಲಿ. ಈ ಜನಸಂಖ್ಯಾ ಪ್ರವಾಹದಲ್ಲಿ ಸದಾಕಾಲ ಜನರನ್ನು ಹೆರೆಯುವ ಉದ್ಯೋಗವೊಂದಿದ್ದರೆ ಅದು ವೈದ್ಯಕೀಯ . ಸುಮ್ಮನೆ ಶುಂಟಿ ಜಗಿದರೆ ನಿವಾರಣೆ ಯಾಗುವ ದೇಹಾಲಸ್ಯಕ್ಕೆ ಹತ್ತಾರು ಅನಾವಶ್ಯಕ ಔಷಧ ನೀಡಿ ಕಾಸು ಕೀಳುವ ಇಂದಿನ ವೈದ್ಯೋ ನಾರಾಯಣೋ ಹರಿ : , ಸಾಕಷ್ಟು ಮಂದಿ ಕಾಣಬರುತ್ತಾರೆ. ಅಲ್ಲಿ ಶುಂಟಿ , ಬಜೆಗಳೇ ಜಾಸ್ತಿ. ಅಯ್ಯೋ ಡಾಕ್ಟರ್ ಹೇಳಿದ್ದಾರೆ ಕಣ್ರೀ ಎಂದು ನಂಬಿ  ಮಾತ್ರೆ  ನುಂಗೆ ನುಂಗುತ್ತಾರೆ ಸಾಮಾನ್ಯ ಜನ . ಶಿಕ್ಷಣಕ್ಕೆ ತೆರೆದುಕೊಂಡ ಧೂರ್ತರು , ನಮಗ್ಯಾಕ್ರೀ ಎಂದು ಬಾಯ್ಬಿಡದೆ ಸಜ್ಜನರಾಗುತ್ತಾರೆ. ಕಾಲಕ್ರಮೇಣ ಸಮಾಜವೇ ಈ ರೀತಿಯ ಲಫಂಗರಿಂದ ತುಂಬಿರುತ್ತದೆ.

ಈಗ ಹೇಳಯ್ಯ , ಈ ಶುಂಟಿ, ಬಜೆಗಳ ಸಂತತಿ ಜಾಸ್ತಿಯಾಗಲು ಕಾರಣ ಈ ಕಾಲದ ಭೀಷ್ಮ , ದ್ರೋಣರು. ಏನಂತಿಯಾ ಎಂದೆ ? ಮಹಾಭಾರತ ಅಂದೂ ಪ್ರಸ್ತುತ , ಇಂದೂ ಪ್ರಸ್ತುತ , ಎಂದೆಂದೂ ಪ್ರಸ್ತುತ - ಎಲ್ಲಿಯವರೆ ಭೋ ಪರಾಕು ನಿಲ್ಲುವದಿಲ್ಲವೋ, ಎಲ್ಲಿಯವರೆಗೆ ನಿಸ್ಟುರವಾಗಿ ಸತ್ಯ ಹೇಳುವ ಛಾತಿ, ಛಲ ಜನರಲ್ಲಿ ಮನೆಮಾಡುವದಿಲ್ಲವೋ ಅಲ್ಲಿಯವರೆಗೂ ಈ ಮಹಾಭಾರತ್ ಪ್ರಸ್ತುತವಾಗಿರುತ್ತದೆ. ಯೋಚಿಸು ನಮ್ಮ ಹಿರಿಯರು ಹೇಳುವ ಸತ್ಯ ಯುಗದಲ್ಲಿ ಈ ಮಹಾಭಾರತ ಪ್ರಸ್ತುತವಿತ್ತೆe ? .
ಆಗ ಮಹಾಭಾರತ ಯಾಕಿರಲಿಲ್ಲ ಎಂದರೆ ಈ ಭೀಷ್ಮ , ದ್ರೋಣಾದಿಗಳಿರಲಿಲ್ಲ.

ತಿರುಗಿ ನೋಡಿದರೆ ನನ್ನ ಮಿತ್ರ ಮುಸಿ ಮುಸಿ ನಗುತ್ತಿದ್ದ.

ಹರಿಹರ ಭಟ್, ಬೆಂಗಳೂರು.
ಶಿಕ್ಷಕ , ಚಿಂತಕ , ವಿಮರ್ಶಕ, ಫೇಸ್ ಬುಕ್ ಬರಹಗಾರ.
November 27, 2012.
...................... English version of this posting will follow .................

No comments:

Post a Comment