ಚಿಕ್ಕ ಚಿಕ್ಕ ವಿಚಾರಗಳು, ...................
ನ ಬ್ರೂಯಾತ್ ಸತ್ಯಮಪ್ರಿಯಂ //
ಸತ್ಯವನ್ನು ಅಪ್ರಿಯವಾಗಿ ಹೇಳಬಾರದು. ಅಂದರೆ ಕೇಳುಗನ ಮನಸ್ಸು ವಿಕಾರಗೊಂಡು ನೀವು ಹೇಳಿದ ಸತ್ಯವಾದ ಮಾತು ವ್ಯರ್ಥವಾದೀತು . ಹಾಗಾಗಿ ಅಪ್ರಿಯವಾದ ರೀತಿಯಲ್ಲಿ ಸತ್ಯವನ್ನು ಹೇಳಬಾರದೆಂಬ ಅಭಿಪ್ರಾಯ. ಸತ್ಯವನ್ನೆಂದೂ ಹೇಳದೆ ಇರಬಾರದು ಎಂದಲ್ಲ , ಆದರೆ ಅಪ್ರಿಯವಾಗಿ ಹೇಳಬಾರದು ಎಂಬುದು ಈ ಮಾತಿನ ತಾತ್ಪರ್ಯ.
ನೋಡಿ ಇತ್ತೀಚೆ ನಮ್ಮ ಮನೆಯ ಪಕ್ಕದಲ್ಲಿ ಒಂದು ಕಿರಾಣಿ ಅಂಗಡಿ ಆರಂಭವಾಗಿದೆ. ನಮಗೆ ಅನುಕೂಲ. ಆದರೆ ಅಲ್ಲಿ ನಿಂತು ಸಿಗರೇಟು ಸೇದುವವರಿಂದ ಅನಾನುಕೂಲ . ಏನು ಮಾಡುವದು ? ನೇರವಾಗಿ ಹೇಳಿದರೆ ಈ ಕಾಲದಲ್ಲಿ ಯಾರೂ ಕೇಳುವದಿಲ್ಲ. ಹಾಗೆಂದು ಸಹಿಸಲಸಾಧ್ಯವಾದ ಹೊಗೆಯ ಅನಾನುಕುsಲ. ನಯವಾಗಿ ಅಂಗಡಿಕಾರನಿಗೆ ಹೇಳಿದೆ. " ನೀವೇನೋ ವ್ಯಾಪಾರ ಮಾಡೋದು ಸರಿ, ನಮಗೆ ಈ ಪರಿ ಕಷ್ಟ , ಏನ ಮಾಡೋದ್ರಿ ?" ಸರ್ , ನಾನು ಗಿರಾಕಿಗೆ ಹೇಳ್ತೀನಿ ಕೇಳೋದಿಲ್ಲ ? ಎಂಬುದು ಅಂಗಡಿಕಾರನ ಉತ್ತರ. ಏನ ಮಾಡೋದು ? " ಸರಿ ನಾವು ನೀವು ಇಲ್ಲೇ ಇರೋರು ? ಸುಮ್ಮನೆ ಜಗಳ ಯಾಕೆ ? ನಿಮ್ಮ ಗಿರಾಕಿ ಸಿಗರೇಟು ಸೇದುವಾಗ ನಾನು ನಿಮಗೆ ಜೋರಾಗಿ ಹೇಳುತ್ತೇನೆ, ನೀವು ಬೇಸರ ಮಾಡಿಕೊಳ್ಳಬೇಡಿ. ಯಾವ ಸಿಗರೇಟು ಸೇದುವವನೂ ತಿರುಗಿ ದಬಾಯಿಸುವದಿಲ್ಲ. ಮುಂದೆ ನೋಡೋಣ " ಎಂದೆ. ಸರಿ ಸರಿ , ಸರ್ ಎಂದರು ಅಂಗಡಿಯವರು. ನೀವು ಹೇಳೋದು ಹೇಳಿ, ಇಲ್ಲಿ ಸೇದಬಾರದು ಎಂದು, ಮುಂದೆ ನೋಡೋಣ ಎಂದು ತಿರುಗಿ ಬಂದೆ. ಒಂದೆರಡು ದಿವಸಗಳ ಕಾಲ ಕೀಟಲೆ ಇರಲಿಲ್ಲ. ಮತ್ತೆ ಮೊದಲಿನಂತೆ. ಅಂಗಡಿಯವರು ಯಾಕೆ ಹೇಳುತ್ತಾರೆ ? ಸಿಗರೇಟು ಮಾರಿ, ಸೇದಬೇಡ ಎನ್ನಲಾಗುತ್ತದೆಯೇ ? ಅಂತೆಯೇ ನಾವು ತೊಂದರೆ ಒಮ್ಮೆ ಎರಡು ಬಾರಿ ಆದರೆ ತಡೆದುಕೊಳ್ಳಬಹುದು. ದಿನಾಲು ಅಂಗಡಿ ತೆರೆದಿದ್ದಾಗೆಲ್ಲ ಈ ಕೀಟಲೆ ನಮಗೆ ಇದ್ದದ್ದೇ ? ಯೋಚಿಸಿದೆ. ಸರಿ ಎಂದು ಮರುದಿನ ಗಿರಾಕಿಯೊಬ್ಬ ಸಿಗರೇಟು ಸೇದುತ್ತಿದ್ದಾಗ ಹೋಗಿ , ಅಂಗಡಿಯವನ ಜೊತೆ ಏರಿದ ದ್ವನಿಯಲ್ಲಿ ಹೇಳತೊಡಗಿದೆ. " ನೀವು ಸಿಗರೇಟು ಮಾರುವವರು ನಿಮ್ಮ ಗಿರಾಕಿಗಳಿಗೆ ಹೇಳ್ಬೇಕ್ರಿ ? ನಾವು ಸಿಗರೇಟು ಸೇದದವರೆeಕೆ ತೊಂದರೆ ಅನುಭವಿಸಬೇಕು ? ನಿಮ್ಮ ಗಿರಾಕಿಗೆ ನೀವು ಹೇಳಬೇಕು . " ಎಂದು ತಿರುಗಿ ಬಂದೆನು. ನೋಡಿ ಪರಿಣಾಮ , ಈಗ ಸಿಗರೇಟು ಕೊಂಡು ದೂರ ಹೋಗಿ ಸೇದಿ ಪುನಃ ಅಂಗಡಿಗೆ ಬಂದು ಹರಟೆ ಹರಟುತ್ತಾರೆ.
ಇದೆe ರೀತಿ ಸಿಗರೇಟು ಸೇದುವವನೊಬ್ಬ , ಕಿರುದಾಗಿ ನನ್ನ ನೋಡಿ ನಕ್ಕನು. ಇದೆ ಸಮಯ ಎಂದು ಆತನ ಪರಿಚಯ ಮಾಡಿಕೊಂಡೆನು. ಉದ್ಯೋಗ , ಸಂಸಾರ ಎಲ್ಲ ತಿಳಿದೆ. ಸಿಗರೇಟಿನ ಹೊಗೆಯಿಂದ ಸಿಗರೇಟು ಸೇದದವರಿಗೆ ಹೇಗೆ ಆರೋಗ್ಯ ಕೆಡುತ್ತದೆ ಎಂದು ವಿವರಿಸಿದೆ. ಮನೆಯಲ್ಲಿ ಚಿಕ್ಕ ಮಗು ಇದೆ ಎಂದು ತಿಳಿದು, ಮನೆಯಲ್ಲಿ ಸಿಗರೇಟು ಸೇದುವದರಿಂದ ಆ ಮಗುವಿನ ಆರೋಗ್ಯದಲ್ಲಿ ಹೇಗೆ ಏರು ಪೇರು ಆಗುವದು ಎಂದು ವಿವರಿಸಿದೆ. ದಿನವೊಂದಕ್ಕೆ ಎಷ್ಟು ಸಿಗರೇಟು ಸೇದುತ್ತಿeರಿ ಎಂದು ಕೇಳಿದೆ ? ಹದಿನೈದರಿಂದ ಇಪ್ಪತ್ತು ಎಂದನು. ದಿನವೊಂದಕ್ಕೆ ಒಂದು ನೂರು ರುಪಾಯಿ ಸಿಗರೇಟು, ತಿಂಗಳಿಗೆ ಮುರು ಸಾವಿರ ರುಪಾಯಿ ಖರ್ಚೂ ಅಲ್ಲ ವೇಸ್ಟು , ಎಷ್ಟು ವರ್ಷ ಆತರೀ ? ಈ ಸಿಗರೇಟು ಎಂದೆ. ಹತ್ತು, ಹನ್ನೆರಡು ವರ್ಷ, ಸರ್ ಎಂದೊಡನೆ ಒಂದು ಸ್ಕೂಟರ್ ಬರುತ್ತಿತ್ತಲ್ರಿe ಎಂದೆ . ಏನೂ ಮಾತನಾಡಲಿಲ್ಲ ಆ ಮನುಷ್ಯ .
ಮರು ದಿನದಿಂದ ಆ ಮನುಷ್ಯ ಕಂಡಾಗೆಲ್ಲ ಕಾಫಿ ಆಯ್ತೆನ್ರ್ರಿe ? ಎಂದು ಬಿಡುತ್ತೇನೆ. ಸಂತೋಷದಿಂದ ಆಯ್ತು ಸರ್......... ಎಂದು , ನನ್ನ ಯೋಗ ಕ್ಷೇಮ ವಿಚಾರಿಸಿ ಹೋಗುತ್ತಾನೆ. ಆಶರ್ಯ !!!!!!!!! ಒಂದು ವಾರದ ನಂತರ ಆ ಮನುಷ್ಯ ಹೇಳಿದ್ದು , " ಸರ್ ಏನೋ ಹೇಳಿದ್ರಿ , ಯಾಕಾಗಬಾರದು ಎಂದು ಯೋಚಿಸಿ ಯೋಚಿಸಿ , ಈಗ ಸಿಗರೇಟು ಕೇವಲ ಎರಡೋ , ನಾಲ್ಕೋ ಸೇದುತ್ತಿದ್ದೇನೆ ಎಂದನು. " ನಾನು ಆತನ ಕೈ ಕುಲುಕಿ , " ಒಮ್ಮೆಲೇ ಬಿಡಲು ಹೋಗಬಾರ್ದ್ರೀ , ಬಿಟ್ಟೆ ಅಂದ್ರೆ ಮತ್ತೆ ಬಂದು ತಗಲಿಕೊಳ್ಳುತ್ತದೆ. ನಿಧಾನಕ್ಕೆ ಒಂದು , ಎರಡು ........... ಎಂದು ಹತ್ತಿಪ್ಪತ್ತಾಗಿದ್ದು , ಒಮ್ಮೆಲೇ ಓಡಿಸಲಾಗುವದಿಲ್ಲ , ನಿಧಾನಕ್ಕೆ ಬೇಡ , ಬೇಡ, ಸಾಕು, ಬರಬೇಡ ........... ಎಂದು ತಿಂಗಳು , ಒಂದೂವರೆ ತಿಂಗಳಲ್ಲಿ ದಿನೇ ದಿನ ಕಡಿಮೆ ಮಾಡುತ್ತಾ ಹೋಗಿರಿ. ಆಮೇಲೆ ಮತ್ತೆ ಬರುವ ಧೈರ್ಯ ಆ ಸಿಗರೆeಟಿಗಿರುವದಿಲ್ಲ. " ಎಂದು ಧೀರ್ಘವಾಗಿ ಬೋದಿಸಿದೆ . ಖುಷಿಯೋ, ಖುಷಿ ನೀರು ಬಿಡುವ ಆ waterman ಗೆ.
ಅಂತೂ ಈಗ ಸಮಸ್ಯೆಗೊಂದು ಪರಿಹಾರ ದೊರಕಿದೆ. ಎಷ್ಟು ದಿನ ಕಾದು ನೋಡೋದೊಂದೆ , ಬೇರೆ ದಾರಿಯಿಲ್ಲ.
ಚಿಕ್ಕ ಚಿಕ್ಕ ವಿಷಯಗಳೂ , ಬಹಳ ಮಹತ್ವ ಹೊಂದಿವೆ, ಬಹಳ ಮಹತ್ವ ಪಡೆಯುತ್ತವೆ ನಾವದನ್ನು ಅನುಭವಿಸುವಾಗ.
ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
November 28 , 2012.
No comments:
Post a Comment