Thursday, November 29, 2012

ಮೊನ್ನೆ ರಮಾರಮಣನ ಪತ್ನಿ ಶ್ರೀ ವಲ್ಲಭೆ ಸಿಕ್ಕಿದ್ದಳು. ಬಾವ ನಾಲಗೆ ದಪ್ಪ ಆಗೊeಜು  ಅಂದ್ಲು.  ಬಜೆ ಹತ್ರ ಹೋಗೆ ಅಂದೆ . ಎಂಥದಾ ಬಾವಾ ಅಂದ್ಲು.  ಬಜೆ  ತಿಕ್ಕೆ  ಎಂದೇ.  ಅಯ್ಯೋ.... ಭಾವಾ ,  ಆ  ಬಜೆ ಡಾಕ್ಟರ್ ಸಹವಾಸ ಬ್ಯಾಡದೋ ಅಂದ್ಲು. ಯಾಕೆ ? ಎಂಥಾ ಆತೆ  ಶ್ರೀ ವಲ್ಲಭೆ ಎಂದೆ.

ತಗಾ ಶುರು ಹಚ್ಕ0ಡಳು . ಭಾವ.... ಕೆಳಗಿನ ಮನೆ ಚೆರಬಿ ,  ಆ.......  ಎಂದೆ . ಅದೆಯೋ !  ಚೆನ್ನಿಗರಾಯ ರಮಾರಮಣನ ಬಾ-ಮೈದನ ಹೆಂಡ್ತಿ , ಬಿಜಿ ಬಿಜಿ ರಾಮಕ್ಕ ........ ಒಹೋ ಎಂದೆ. ಹೇಳು ಮತ್ತೆ ಎಂದಾಗ ಶುರುವಾಯ್ತು.  ಆ ರಾಮಕ್ಕನ ಮನೇಲಿ ಮೊನ್ನೆ ಮಳೆ ಬಂದಾಗ ಕೆಂಪಿರವೇ   ಎಲ್ಲ ಕಡೇ  ಹರಡಕಂಡ್ಬಿಟ್ಟಿತ್ತು.  ಅದರ ಮಗಳು ರೂಮಿ , ಅದೇ MBA ಓದ್ತಲಾ , ಅದರ ಮೈಮೇಲೆಲ್ಲ ರಾತ್ರೆ ಕೆಮ್ಪಿರವೇ  ಕಚ್ಚಿ ದಪ್ಪ ದಪ್ಪ ದಡಸ್ಲೆ ಆಗೋಗಿತ್ತು. ಎಂಗೆ ಫೋನ್ ಮಾಡಿದ ರಾಮಕ್ಕ ಹಿಂಗೆಲ್ಲ ಆಗೋತು , ಏನ್ ಮಾಡಲೇ, ಕೂಸು ಉರಿ ಉರಿ ಹೇಳ್ತು ಎಂತು.  ಅಲ್ಲೇ ಹುಣಿಸೆ ಹಣ್ಣು ನೀರ್ ಮಾಡಿ ತಿಕ್ಕೆ ರಾಮಕ್ಕ , ಎಂಗ ಸಣ್ಣಕ್ಕಿದ್ದಾಗ ಅಜ್ಜಿ ಹಿಂಗೆ ಮಾಡ್ತಿತ್ತು. ಹಳೆ ಕಾಲದ ದುಡ್ಡಿನಾಕಾರದ ದಡಸ್ಲೆ ಎಲ್ಲ ಮಾಯಾ ಆಗೊeಗ್ತಿತ್ತು ಹೇಳದೆ.  ಹೌದನೇ ........  ನೋಡು ಮನೇಲಿ ಅಜ್ಜಿ ಇರಾಕು ಹೇಳುದು ಇದಕ್ಕೇ ಹೇಳಿ ಇಪ್ಪತ್ತು ನಿಮಿಷಾ ಮಾತಾಡ್ತು ರಾಮಕ್ಕ.

ತಮಾಷೆ ಇರೋದು ಇಲ್ಲಿ ಮಾರಾಯ್ರೇ. ಇಸ್ಟೆಲ್ಲಾ ಕೇಳದ ರಾಮಕ್ಕ ಮಾಡಿದ್ದೇನು ಗೊತ್ತೇ ? ಕೂಸು ಉರಿ ಉರಿ ಹೇಳ್ತು , ಏನ್ ಮಾಡೋದು ಗೊತ್ತಾಗ್ತಿಲ್ಲೆ  ಎಂದು , ನೆರೆಮನೆ ಸೀತಕ್ಕ ಹೇಳ್ತು ಹೇಳಿ ಆ ಬಜೆ ಡಾಕ್ಟರ ಹತ್ರ  ಹೋತು. ಅಯ್ಯೋ ಅಯ್ಯೋ ಒಳ್ಳೆ ಟೈಮಿಗೆ ಬಂದ್ರಿ , ಇನ್ಫೆಕ್ಷನ್ ( infection ) ಆಗೊಗಿದ್ರೆ ಏನ್ ಮಾಡ್ತಿದ್ರಿ, ಯಾವುದಕ್ಕೂ observation  ನಲ್ಲಿಡೋವಾ , ಎಂದು ಸ್ಪೆಷಲ್ ವಾರ್ಡ್ ಗೆ ಸೇರ್ಸ್ಕೊಂಬಿಟ್ರು , ಬಜೆ ಡಾಕ್ಟರ್ .   ಶುರುವಾಯ್ತು ನೋಡಿ. ಯಾವುರವ್ರು ? ಬೆಂಗಳೂರಿಗೆ ಬಂದು ಎಷ್ಟು ವರ್ಷಾ ಆಯ್ತು ?  ಯಜಮಾನ್ರು ಏನ್   ಕೆಲ್ಸಾ ?  ಮನೆ ಯಾವಾಗ ಕಟ್ಟಿದ್ದು ?  40 x 60 ನಾ ...........?   50 x 80 ನಾ .......... ?  ಜಾತಕಾ ತಗೊಮ್ಬಂದ್ರಾ  ಕೇಳೋದೊಂದೇ ಉಳಿದಿದ್ದು,  ಎಲ್ಲ ವಿವರಣೆ ಸಿಕ್ತು.  ಕೂಸು ಏನ್ ಕಲಿತ್ರಿ .........?   ಒಹ್  MBA ಅಂದ್ರೆ ಈಗಿನ ಕಾಲದಲೀ .........  ಒಳ್ಳೆ ಕೆಲಸ , ಒಳ್ಳೆ ಗಂಡ ಸಿಗ್ತು ಬಿಡಿ ಎಂಬ ಆಶೀರ್ವಾದ.

ತಂಗೀ , ಎಲ್ಲೆಲ್ಲೆಲ್ಲ ದಡಸ್ಲೆ ಆಯ್ದು ನೋಡವಾ, ನಿಂಗಳು waiting room ನಲ್ಲಿ ಕೂಡ್ರಿ , ಡಾಕ್ಟರ್ ಆಜ್ಞೆ. ಆನೊಬ್ಬ ಇರ್ತೆ ಡಾಕ್ಟ್ರೆ ....... , ರಾಮಕ್ಕ ಹೇಳ್ದ ಮಾತು.  ಏನಿಲ್ಲ, ಎಲ್ಲ ಅಲ್ಲೇ ಕುತ್ಗಳಿe..... ಎಂದರು. ತಿರುಗಿ ಏನು ಹೇಳದೆ ರಾಮಕ್ಕ, ರಾಮಕ್ಕನ ಅಣ್ಣ ಆಚೆ ಬಂದು ನಿಂತರು. ಇತ್ತ ಡಾಕ್ಟರ್ ವಿವಿಧ ರೀತಿ ಹತ್ತಾರು ಟೆಸ್ಟ್ , ಅರ್ಧ ಗಂಟೇಲಿ ಮುಗಿಸಿದರು. ಆರು ಚೂರ್ಣ , ಮುರು ನಿeರೌಶದ  ಆಸ್ಪತ್ರೆ ಅಂಗಡಿಯಿಂದ ತರುವಂತೆ ಆಣತಿ ನೀಡಿ ಹೋದರು. ರಾಮಕ್ಕ ಕೂಸಿನ ಹತ್ರ ಬಂದಾಗ ಕೂಸಿನ ಕಣ್ಣಲ್ಲಿ ನೀರು. ಎಂತಾ ಆತೆ ಕೂಸೆ, ನೋವನೆ, ಅಳ್ತಿದ್ದಿ........ ಎಂದ ರಾಮಕ್ಕಗೆ ಕೂಸಿನಿಂದ  ಒಮ್ಮೆಲೇ ಒತ್ತಾಯ, ಮನೆಗೆ ಹೋಪನ ನಡಿ , ಮನೆಗೆ ಹೋಪನ ಈಗಲೇ.........  ಎಂತದೆ ಕೂಸೆ ,  ಆ  ಬಜೆ ಡಾಕ್ಟರ್ ಹೇಳಿದ್ರು  infection  ಆದ್ರೆ ಕಷ್ಟ , ಎರಡ ದಿವ್ಸ ಇರ್ಲಿ ಹೇಳಿ.  ಕೂಸು ಧಮಕಿ ಕೊಡ್ತು, ನೀ ಇರು ನಾ ಈಗಲೇ ಒಡಿ ಮನೆ ಸೇರ್ಕಂಬವ. ನಮ್ಮನೆ ಬದಿಗಿದ್ದ ಶಾಂತಲ ಲೇಡಿ ಡಾಕ್ಟರ್ ಸಾಕು. ನಡಿ.........  ನಡಿ .............. ಎಂದು ಕೂಸಿನ ಒತ್ತಾಯ. ರಾಮಕ್ಕಂಗೆ ಪೇಚು. ಅಂತು ಇಂತೂ ಡಾಕ್ಟರ್ ಕಡೆ ಮಾತಾಡಿ, ಎಗರಾಡಿ, ಡಾಕ್ಟರಿಗೆ ಧಮಕಿ ಕೊಟ್ಟು ಮನೆಗೆ ಬಂದು ಸೇರ್ಕಂಡ ರಾಮಕ್ಕ ಸುಸ್ತೋ ಸುಸ್ತೋ.  ಎರಡು ದಿನ ರಾಮಕ್ಕಂಗೆ ರೆಸ್ಟು !!!!!!.

ನಮಗೆ ಎಸ್ಟೋ ಸಲ ಜೀವನದಲ್ಲಿ ನಾವು ಅಂದುಕೊಂಡಿರದೆ  ಇದ್ದದ್ದು , ಊಹಿಸಲೂ ಅಸಾದ್ಯವಾದದ್ದು ಆಗಿಹೋಗುತ್ತದೆ. ರಾಮಕ್ಕಳಂತೆ  ನನಗೆ ಒಮ್ಮೆ ಒಬ್ಬ ಬಜೆ ಡಾಕ್ಟರ್ ಗಂಟು ಬಿದ್ದಿದ್ದ.  ಭಾರಿ   ಜನ ಮೆಚ್ಚುವ ಡಾಕ್ಟರ್ ತಾನು ಅಂದುಕೊಂಡವ. ಅಜ್ಜಿ ಹೇಳುವ ಶುಂಟಿ , ಬಜೆ ಕಷಾಯ ಮಾಡಿ, ಚೂರ್ಣ ಮಾಡಿ ಬಾಟಲಿ ತುಂಬಿ ಚೆಂದದ ಹೆಸರು ಹಚ್ಚಿ , ಮುಗ್ಧ ಜನರಿಗೆ ಮಾತಿನ ಮೋಡಿ ಮಾಡಿ , ಇರುವೆ ಕಚ್ಚಿದರೆ infection  ಆದೀತು ಎಂದು ರಾಮಕ್ಕನಂತವಳಿಗೆ ಹೆದರಿಸಿ , ಒಂದು ಚೂರು ಬೆಲ್ಲ ಕಾಯಿಸಿ , food  preservation  ಬೆರಸಿ , ಬಾಟಲಿ ತುಂಬಿ ಎರಡು ರುಪಾಯಿ ಶುಂಟಿ , ಬೆಲ್ಲಕ್ಕೆ ಇಪ್ಪತ್ತು ರುಪಾಯಿ ಕೀಳುವ ಬಜೆ ಡಾಕ್ಟರ್ಗಳು ಎಲ್ಲೆಡೆ ಸಿಗುತ್ತಾರೆ. ನಾವು ಹುಷಾರಾಗಿ, ಜಾಣರಾಗುವದೊಂದೇ   ದಾರಿ. ಅರಿವಿರಲಿ.  ನಾಲಿಗೆ ದಪ್ಪ ಆಗೋದು, ಅಜ್ಜಿ ಬಜೆ ತಿಕ್ಕು ಕೂಸೆ ಎಂಬೋದು ಎಲ್ಲ ಈಗಿನ ಜನಾಂಗದ ಮಕ್ಕಳಿಗೆ ಹೊಸದು.  ಹಳೆಯದೆಂದು ಮೂದಲಿಸದೆ   , ಹೊಸದೆಲ್ಲ ಸ್ವೀಕಾರ ಯೋಗ್ಯ ಎನ್ನದೆ , ವಿಚಾರ ವಿಮರ್ಶೆ ಮಾಡಿ , ಮುಂದಿನ ಜನಾಂಗಕ್ಕೆ ಸೂಕ್ತ ಅರಿವು ಮೂಡಿಸುವದು , ಇಂದಿನ ಜನಾಂಗದ ಕರ್ತವ್ಯ.  ಅರಿವು ನೀಡದಿದ್ದರೆ  ರಾಮಕ್ಕನಿಗೆ ಸಿಕ್ಕಿದಂತ ಬಜೆ ಡಾಕ್ಟರ್ಗಳು ಇನ್ನಸ್ಟು ದುಂಡಗಾಗಿ , ಉಬ್ಬಿ ಎಲ್ಲರನ್ನು ನೋಡಿ ನಗುತ್ತಿರುತ್ತಾರೆ. ಎಚ್ಚರವಿರಲಿ.

ಹರಿಹರ ಭಟ್, ಬೆಂಗಳೂರು.
ಶಿಕ್ಷಕ , ಚಿಂತಕ , ವಿಮರ್ಶಕ , ಫೇಸ್ ಬುಕ್ ಬರಹಗಾರ.
November 30 , 2012.

No comments:

Post a Comment