Saturday, November 24, 2012

23.11.2012

ಈಗ ಮೂವತ್ತು ನಲವತ್ತು ವರ್ಷಗಳ ಹಿಂದೆ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಮಿತ್ರರಿಗೆಲ್ಲ ಒಂದು ಸುಖಕರ ಅನುಭವವಿತ್ತು. ವರ್ಷದಲ್ಲಿ ಆಗಾಗ ದೇವಸ್ತಾನದಲ್ಲಿ ದೇವಕಾರ್ಯ , ಕಾರ್ತಿಕ , ವನಭೋಜನ , ರಾತ್ರೆ ಉತ್ಸವ, ಭಜನಾ ಸಪ್ತಾಹ (ಯಾಮಾಸ್ಟಕ ) ಮುಂತಾದ ಕಾರ್ಯಕ್ರಮಗಳು ನಡೆಯುತ್ತಿದ್ದವು. ಒಂದು ಸಮಾಜದವರು ತಳಿರು ತೋರಣ ಹಾಕಿದರೆ, ಇನ್ನೊಂದು ಸಮಾಜದವರು ವಾದ್ಯ (ವಾಲಗ ) ನುಡಿಸುತ್ತಿದ್ದರು, ಡೋಲು ಬಾರಿಸುತ್ತಿದ್ದರು. ಭ್ರಾಹ್ಮಣ ಧೀರರೆಲ್ಲ ಕೊಪ್ಪರಿಗೆಯಲ್ಲಿ ಅನ್ನ, ಹುಳಿ, ಪಲ್ಯ, ಕೋಸಂಬರಿ ಮಾಡಿದರೆ ಪುರೋಹಿತರು, ದ್ವಿಜರೆಲ್ಲ ಸ್ವರಬದ್ಧವಾಗಿ ದೇವರ ಮಂತ್ರೋಚ್ಚಾರಣೆ ಮಾಡುತ್ತಿದ್ದರು. ದೇವರಿಗೆ ಭವ್ಯವಾದ ಅಲಂಕಾರದೊಂದಿಗೆ , ಭುವಿಯೇ ಸ್ತಬ್ದವಾಗುವಂತಹ ಹತ್ತಾರು ಆರತಿಗಳು ಅರ್ಧ ಗಂಟೆಯಿಂದ ಮುಕ್ಕಾಲು ಗಂಟೆಯ ವರೆಗೂ ಬೆಳಗುತ್ತಿದ್ದವು. ದೇವರಿಗೆ ಅಸ್ಟಾವಧಾನ ಸೇವೆ ( ಎಂಟು ವಿಧಗಳಲ್ಲಿ ವೇದ ಮಂತ್ರ, ಸಂಗೀತ, ತಾಳ, ಡೋಲು, ನಗಾರಿ , ಬಾನ್ಸುರಿ ಇತ್ಯಾದಿ ) ನಡೆಯುತ್ತಿತ್ತು.

ಈಗ್ಯಾಕೆ ಈ ನೆನಪುಗಳು ಅಂದಿರಾ ?

ನನ್ನ ಮಿತ್ರ , ಸ್ನೇಹ ಜೀವಿ ಶ್ರೀ ಜಿ ಜಿ ಹೆಗಡೆ ಯವರು, ನಿನ್ನೆ ಮಲ್ಲೇಶ್ವರದ ಹವ್ಯಕ ಸಿದ್ದಿವಿನಾಯಕ ದೇವಸ್ಥಾನದಲ್ಲಿ ನಡೆದ ಕಾರ್ತೀಕ ದೀಪೋತ್ಸವಕ್ಕೆ ನನ್ನನ್ನು ಆಮಂತ್ರಿಸಿದ್ದರು. ಅಲ್ಲಿ ಹೋದಾಗ ರುದ್ರ ಪಠಣ ನಡೆಯುತ್ತಿತ್ತು. ಒಮ್ಮೆಲೇ ಹಳ್ಳಿ ಜೀವನದ ನೆನಪು ಚಿಗುರಿತು.
ಎಲ್ಲರನ್ನೂ ಒಮ್ಮೆ ಗಮನಿಸಿದರೆ , ಹಗಲಲ್ಲಿ ಪ್ಯಾಂಟ್ ಶರ್ಟ್ ಧರಿಸಿ , ಇಂದಿನ ನಗರ ಜೀವನದಲ್ಲಿ ಏನೇನೋ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ಹವ್ಯಕ ಭಂದುಗಳು ಶಲ್ಯ, ಪಂಚೆ ಧರಿಸಿ ಸ್ವರ ಬದ್ಧವಾಗಿ ಗೋಕರ್ಣ ಭಟ್ಟರಂತೆ ರುದ್ರ ಪಠಣ ಸ್ವರ ಯುಕ್ತವಾಗಿ ಪಟಿಸುತ್ತಿದ್ದರು .

ಶ್ರೀ ಶ್ರೀ ಮಹಾಗಣಪತಿ ಎದುರು ಸಾಲು ಸಾಲಾಗಿ ಅಚ್ಚುಕಟ್ಟಾಗಿ ಜೋಡಿಸಿದ್ದ , ಜ್ಯೋತಿಗಾಗಿ ಕಾಯುತ್ತಿದ್ದ ಎಣ್ಣೆ ತುಂಬಿದ ಹಣತೆಗಳು ಸಂಚಾಲಕರ ಶ್ರಮವನ್ನು ಹೊಗಳುವಂತಿತ್ತು. ಅರ್ಚಕರು ಪೂಜಾ ಕಾರ್ಯ ಆರಂಭಿಸಿದೊಡನೆ ಎಲ್ಲರು ಭಕ್ತಿ ಭಾವದಿಂದ ಪೂಜಾ ಕೈಂಕರ್ಯದಲ್ಲಿ ತೊಡಗಿಕೊಂಡರು. ಎಲ್ಲ ಹಣತೆಗಳಿಗು ಜ್ಯೋತಿಯಿಂದ ಜೀವ ಬಂತು. ಎಲ್ಲೆಡೆ ಪ್ರಕಾಶ ಪ್ರತಿಫಲಿಸತೊಡಗಿತು .

ಮಹಾಮಂಗಳಾರತಿ , ಅಸ್ಟಾವಧಾನ ಸೇವೆ ಅಚ್ಚ್ಚುಕಟ್ಟಾಗಿ ಸಾಗಿತು. ಎಲ್ಲವನ್ನು ಏಕಚಿತ್ತದಿಂದ ವೀಕ್ಷಿಸುತ್ತಿದ್ದ ನನ್ನ ಗಮನ , ಹಿರಿಯ ಮಹನೀಯರು ಸಿರಿ ಕಂಠದಿಂದ , ಲಯಯುಕ್ತವಾಗಿ ಹಾಡಿದ ಭಜನೆಯತ್ತ ಕೆಂದ್ರೀಕ್ರತಗೊಂಡಿತು. ನಾವೆಲ್ಲಾ ಚಿಕ್ಕವರಿದ್ದಾಗ " ವಂದಿಪೆ ನಿನಗೆ ಗಣನಾಥ , ಮೊದಲ ವಂದಿಪೆ ನಿನಗೆ ಗಣನಾಥ " ಎಂದು ಭಜಿಸುತ್ತಿದ್ದೆವು. ಇಂದು ಹಿರಿಯ ಜೀವ " ವಂದಿಪೆ ನಿಮಗೆ ಗಣನಾಥ , ಮೊದಲ ವಂದಿಪೆ ನಿಮಗೆ ಗಣನಾಥ " ಎಂದು ಅಸ್ಟಾವಧಾನ ಸೇವೆಯಲ್ಲಿ ಭಜಿಸಿದಾಗ , ದೇವರ ಜೊತೆ ತಾದಾತ್ಮ್ಯ ಹೊಂದಿ "ನಿನಗೆ" ಎಂಬುದು , ಈಗಿನ ಸಮಾಜಗಳ ಅರಿವು "ದೇವರಿಗೆ ಏಕವಚನವೇ " ಎಂಬುದನ್ನು ಪುಸ್ಟಿeಕರಿಸಿ , " ನಿಮಗೆ " ಎಂದು ಬದಲಾವಣೆಗೊಳಗಾಗಿದ್ದು ಯೋಚನೆಗಿಟ್ಟಿಕೊಂಡಿತು.

ಡಿಸೆಂಬರ್ ಹದಿನೆಂಟರ ವರೆಗೆ ಈ ಕಾರ್ತಿಕ ದೀಪೋತ್ಸವ ಸೇವೆ ಪ್ರತಿ ರಾತ್ರೆ ಏಳರಿಂದ ಮಲ್ಲೇಶ್ವರದ ಹವ್ಯಕ ಸಿದ್ದಿವಿನಾಯಕ ದೇವಸ್ತಾನದಲ್ಲಿ ವಿಜ್ರಂಬಣೆಯಿಂದ ಆಚರಿಸಲ್ಪಡುತ್ತದೆ. ಬೆಂಗಳೂರಿನಲ್ಲಿರುವ ಹವ್ಯಕರೆಲ್ಲರು ಎಷ್ಟು ಸಾಧ್ಯವೋ ಅಸ್ಟೂ ದಿನಗಳಲ್ಲಿ ಪಾಲ್ಗೊಳ್ಳಿ. ಬೆಂಗಳೂರಿನ ಆಚೆ ಎಲ್ಲೇ ಇರಲಿ, ಬೆಂಗಳೂರಿಗೆ ಬಂದರೆ ಮುದ್ದಾಂ ಒಮ್ಮೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿ.

ಸದಾ ನಿಮ್ಮ ಪ್ರೋತ್ಸಾಹ , ಪ್ರತಿಕ್ರಿಯೆ ನನ್ನ ಬರವಣಿಗೆಗಳಿಗಿರಲಿ ಎಂದು ಆಶಿಸುತ್ತ,

ಹರಿಹರ ಭಟ್, ಬೆಂಗಳೂರು.

No comments:

Post a Comment