" ಕನ್ನಡ ಪ್ರಭ " ದಿನಪತ್ರಿಕೆ 29.11.2012
ನೀವೆಲ್ಲ ಓದಿರುತ್ತೀರಿ. ಮುಖಪುಟದಲ್ಲಿ ಮೈಯ್ಯಾಸ್ ಬಗ್ಗೆ ಒಂದು ವರದಿ ರೂಪದಲ್ಲಿ ಲೇಖನವಿತ್ತು. ಆ ಲೇಖನ ಕುರಿತು ನಾನೊಂದು ಪ್ರತಿಕ್ರಿಯೆ ಕಳಿಸಿದ್ದೆ. ನನ್ನಂತೆ ಸಾವಿರಾರು ಜನರು ಪ್ರತಿಕ್ರಿಯಿಸುವದರಿಂದ ಪ್ರಕಟಣೆಗೆ ಅವಕಾಶವಾಗಿರಲಿಕ್ಕಿಲ್ಲ , ಎಂದುಕೊಂಡಿದ್ದೇನೆ . ನೀವೊಮ್ಮೆ ಓದಿ , ಪ್ರಕಟಣೆಗೆ ಈ ಪ್ರತಿಕ್ರಿಯೆ ಅಹ್ರವಾಗಿತ್ತೆ , ಬರೆಯಿರಿ :
ವಿ. ಭಟ್ ರಿಗೆ ವಂದನೆಗಳು.
ಮಯ್ಯಾಸ್ ಏನೇ ಮಾಡಿದರೂ ಅಲ್ಲೊಂದು ಹೊಸ ಆವಿಷ್ಕಾರ ಇರುತ್ತದೆ. ಅಲ್ಲದೆ ಆ ಆವಿಷ್ಕಾರ ಜನೋಪಯೋಗಿ ಆಗಿರುತ್ತದೆ. ಹೊಸ ಹೊಸ ಚಿಂತನೆಗಳಿಗೆ ಮೂರ್ತ ರೂಪ ಕೊಡುವಲ್ಲಿ ಮಯ್ಯರವರು ಯಶಸ್ವಿಯಾಗುತ್ತಾರೆಂಬುದು ಅಭಿಮಾನದ ಹಾಗು ಸಂತೋಷದ ವಿಷಯ. ಶುಚಿ, ರುಚಿ ಕಾಯ್ದುಕೊಂಡು , ಗಿರಾಕಿಗಳಿಗೆ ಸ್ನೇಹಪರರಾಗಿರುವದು, ನೌಕರರು ಸ್ನೇಹ ರೀತಿಯಿಂದ ಗಿರಾಕಿಗಳ ಜೊತೆ ವ್ಯವಹರಿಸುವಂತೆ ನೋಡಿಕೊಳ್ಳುವದು ಮಯ್ಯರವರ ವಿಶೇಷ ಸಾಮರ್ಥ್ಯ .
ಈಗ ಮುರು, ನಾಲ್ಕು ತಿಂಗಳು ಕಾಯ್ದಿಡಬಹುದಾದ ಆಹಾರ ಪದಾರ್ಥಗಳನ್ನು ಜನರಿಗೆ ನೀಡಬಯಸುವದು ಆಹಾರ ಕ್ರಮದಲ್ಲಿ ಒಂದು ಕ್ರಾಂತಿಯಾದೀತು. ಆದರೆ ಇಲ್ಲೊಂದು ವಿಚಾರ. ಈ ಆವಿಷ್ಕಾರವನ್ನು ಜನತೆಗೆ ಬಿಡುಗಡೆ ಮಾಡುವ ಮುನ್ನ ಸೂಕ್ತ ವೈಜ್ಞಾನಿಕ ವಿಶ್ಲೇಷಣೆಗೊಳಪಡಿಸಿದ್ದಾರೆಯೇ ? ಪ್ರಾಯೋಗಿಕವಾಗಿ ಬಿಡುಗಡೆ ಮಾಡಿ ಅನುಕೂಲಕರ ಎಂದು ಕಂಡುಕೊಂಡಿದ್ದಾರೆಯೇ ?
ವೈಜ್ಞಾನಿಕವಾಗಿ ಅವಲೋಕಿಸಿದಾಗ ಜೀವ ನೆಲೆಸಿರುವ ದೇಹ ಇರುವದೇ ಜೀವಕೋಶ ( cell ) ಒಂದರ ಸಾಮರ್ಥ್ಯದ ಮೇಲೆ. ಅಂದರೆ ಆರೋಗ್ಯ ಸಂಪೂರ್ಣವಾಗಿ , ಈ ಜೀವಕೋಶದ ಮೇಲೆ ಅವಲಂಬಿತವಾಗಿದೆ. ತಯಾರಿಸಿದ ಆಹಾರ ಶಿತಲಿeಕರಣ ( ರೆಫ್ರಿಜರೇಟರ್ ) ವ್ಯವಸ್ತೆಯಲ್ಲಿ ಶೇಖರಿಸಿಟ್ಟು , ಎರಡರಿಂದ ಮೂರು ತಿಂಗಳುಗಳ ವರೆಗೂ ತಿಂದರೆ ದೇಹದ ಜೀವಕೋಶಗಳ ಮೇಲೆ ಯಾವರೀತಿಯ ಪರಿಣಾಮ ಬೀರೀತು ಎಂಬ ಅಧ್ಯಯನದ ಅವಶ್ಯಕತೆ ಉಂಟಲ್ಲವೇ ? ಅದರಲ್ಲೂ ಈಗಿನ ಮಾರುಕಟ್ಟೆ ದರಕ್ಕಿಂತ ಕಡಿಮೆಯಲ್ಲಿ ದೊರಕುವ ಹೊಸ ಆವಿಷ್ಕಾರಕ್ಕೆ ಜನ ಮುಗಿ ಬೀಳುವದು ಸಹಜ. ಎಲ್ಲ ಮನೆಗಳಲ್ಲಿ ಶಿತಲಿeಕರಣ ವ್ಯವಸ್ತೆ ಇರುವದಿಲ್ಲ. ಶೀತಲೀಕರಣ ಇದ್ದ ಮನೆಗಳಲ್ಲೂ ಆಗಾಗ ವಿದ್ಯುತ್ ಇರುವದಿಲ್ಲ. ಹಳ್ಳಿ ಗಳಲ್ಲಂತೂ ಆರರಿಂದ ಎಂಟು ಘಂಟೆ ವಿದ್ಯುತ್ ಇರುವದಿಲ್ಲ.
ಇಸ್ಟೇ ಅಲ್ಲ. ಯೋಚಿಸಿ. ಮನ ಏವ ಮನುಷ್ಯಾಣಾಂ , ಎಂದು ನಮ್ಮ ಹಿರಿಯರು ಸಾರಿ ಸಾರಿ ಹೇಳಿದ್ದಾರೆ .
ಈ ಮನಸ್ಸು ಸರಿಯಾಗಿ ಅಥವಾ ಒತ ಪ್ರೋತವಾಗಿ ನಡೆದುಕೊಳ್ಳುವದು ನಾವು ತಿನ್ನುವ ಆಹಾರವನ್ನು ಅವಲಂಬಿಸಿದೆ ಎಂದು ಹಲವಾರು ವೈಜ್ಞಾನಿಕ ಅಭ್ಯಾಸಗಳು , ನಮ್ಮ ಹಿರಿಯರ ನಂಬಿಗೆಗಳನ್ನು ಪುರಸ್ಕರಿಸಿವೆ. ಇವೆಲ್ಲ ನಮ್ಮ ಮೈಯ್ಯರವರಿಗೆ ಹೊಸ ವಿಚಾರಗಳಲ್ಲ. ಸುಸಂಸ್ಕ್ರತರು , ಸಚ್ಚಾರಿತ್ರರು, ಸಸ್ನೇಹಿಗಳು, ಸರಳ ಜೀವಿಗಳು ಆಗಿದ್ದಾರೆ ನಮ್ಮ ಮಯ್ಯರವರು.
ಈಗಾಗಲೇ ನಾವು ಹಿಂದಿನ ಹೊಸ ಆವಿಷ್ಕಾರಗಳಾದ ಫಿಜ್ಜ್ಯಾ , ಬರ್ಗರ್ , ವಿವಿಧ ರೀತಿಯ ಐಸ್ಕ್ರೀಮ್ಸ , ಒಟ್ಟಾರೆ ಧಿಡೀರ್ ಆಹಾರಗಳು ( ರೆಡಿ ಫುಡ್ಸ್ ) , ಚಿಪ್ಸ್ ನಂತಹ ಎಣ್ಣೆ ಪದಾರ್ಥಗಳು ಇತ್ಯಾದಿ ಆಹಾರ ಆವಿಷ್ಕಾರಗಳಿ0ದಾಗುತ್ತಿರುವ ದುಷ್ಪರಿಣಾಮಗಳನ್ನು ಎದುರಿಸುತ್ತಿದ್ದೇವೆ ಅಲ್ಲದೆ ಆ ಕುರಿತು ಜಗತ್ತಿನ ಜಾಗ್ರತಿಗಾಗಿ ಸಾಕಷ್ಟು ಶ್ರಮಿಸುತ್ತಿದ್ದೇವೆ. ದೊಡ್ಡ ಪ್ರಮಾಣದಲ್ಲಿ ಜಗತ್ತಿನಲ್ಲಿ ಹಣ ವ್ಯಯವಾಗುತ್ತಿದೆ.
ಈ ರೀತಿ ಸಂದಿಗ್ಧ , ಕಲುಷಿತ ವಾತಾವರಣದಲ್ಲಿ ಮಯ್ಯರವರ ಹೊಸ ಸಾಹಸವನ್ನು ಹೇಗೆ ಸ್ವಾಗತಿಸಬೇಕು ಎಂಬುದು ಗೊಂದಲವನ್ನು೦ಟುಮಾಡುತ್ತಿದೆ.
ಹರಿಹರ ಭಟ್, ಬೆಂಗಳೂರು.
ಶಿಕ್ಷಕ , ಚಿಂತಕ , ವಿಮರ್ಶಕ , ಫೇಸ್ ಬುಕ್ ಬರಹಗಾರ.