Monday, December 31, 2012

About Newspaper Editors.

ಮಾನ್ಯರೇ,

ಜಗತ್ತಿನ ಎಲ್ಲ ಆಗು ಹೋಗುಗಳನ್ನು ಜನತೆಗೆ ತಿಳಿಸ ಬಯಸುವ ಜನ ತಾವು. ಯಾವುದೇ ಪೂರ್ವಾಗ್ರಹವಿಲ್ಲದೆ ಘಟನೆಗಳನ್ನು, ಘಟನೆಯ ವಿಶ್ಲೇಷಣೆಗಳನ್ನು ಸಾರ್ವಜನಿಕರಿಗೆ ತಿಳಿಸಬೇಕಾದುದು ತಮ್ಮೆಲ್ಲರ  ಕರ್ತವ್ಯದ ಒಂದು ಅಂಶ.  ತಮ್ಮ ಹಿರಿಯ ಸಹೋದ್ಯೋಗಿಗಳನ್ನು , ಕಾರ್ಯ ಕ್ಷೇತ್ರ ಬಳಗದ ಹಿರಿಯರನ್ನು ಗುರುತಿಸಿ, ಅವರನ್ನು ಸ೦ಮಾನಿಸಿದಾಗ   ಅವರ ಹೆಸರುಗಳನ್ನೂ ಪ್ರಕಟಿಸದಷ್ಟು  ಸಣ್ಣತನ ಪತ್ರಿಕೋದ್ಯಮವನ್ನು ಆವರಿಸಿದೆಯೇ ಎಂಬ ಸಂಶಯ , ಇಂದಿನ ( ಡಿಸೆಂಬರ್ ೩೧, ೨೦೧೨ )ಪತ್ರಿಕೆಗಳ ವರದಿ  -  ಮುಖ್ಯಮಂತ್ರಿಗಳಿಂದ  ಪತ್ರಿಕಾರಂಗದ ಹಿರಿಯರ ಸ೦ಮಾನ ,  ಓದಿದಾಗ ಅನಿಸಿತು.

ವೈಯಕ್ತಿಕ ಜೀವನದಲ್ಲಿ ದಾಯಾದಿ ಕಲಹ ಸುಧಾರಿಸಲಸಾಧ್ಯವಾದರೂ, ಎಲ್ಲ
ಸುಶಿಕ್ಷಿತರಿ೦ದೊಡಗೂಡಿರುವ  ಪತ್ರಿಕಾ ರಂಗದಲ್ಲಿ  ದಾಯಾದಿ ಕಲಹ  ಅಪೆeಕ್ಷಣೀಯವೂ  ಅಲ್ಲ, ಸಮರ್ಥನೀಯವೂ   ಅಲ್ಲ .  ಅಲ್ಲದೆ  ಹಿರಿಯ  , ಅನುಭವಿಕ  ಪತ್ರಕರ್ತರ  ಸ೦ಮಾನ ಕಾರ್ಯಕ್ರಮಗಳ ವರದಿಯಲ್ಲಿ ಅವರ ಹೆಸರು, ಚಿತ್ರ ಹಾಕುವದರಿಂದ ಅವರು ಕೆಲಸ ಮಾಡುವ ಪತ್ರಿಕೆಗಾಗಲೀ, ವೈಯಕ್ತಿಕವಾಗಿ ಅವರಿಗಾಗಲೀ ಹೆಚ್ಚಿನ ಪ್ರಚಾರದ ಅನುಕೂಲತೆಯೊದಗಿಬರುವ  ಹಂತವನ್ನು ಆಗಲೇ ಆ ಮಹನೀಯರುಗಳು ದಾಟಿರುತ್ತಾರೆ. ಸಮಾಜದ ಆದರಣೀಯ ಸ್ಥಾನದಲ್ಲಿರುವ ಪತ್ರಕರ್ತರೆಲ್ಲರೂ ಈ ದಿಶೆಯಲ್ಲಿ ಯೋಚಿಸುವಿರಾಗಿ ಆಶಾಭಾವನೆ ಹೊಂದಿದ್ದೇನೆ.

ಹರಿಹರ ಭಟ್, ಬೆಂಗಳೂರು.
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
ಡಿಸೆಂಬರ್ ೩೧,೨೦೧೨.


ಗೆ,
ಎಲ್ಲ ಗೌರವಾನ್ವಿತ ಪತ್ರಕರ್ತರಿಗೆ.

ದಯಮಾಡಿ ಎಲ್ಲ ಪತ್ರಕರ್ತರ ಗಮನಕ್ಕೆ ತನ್ನಿ.

No comments:

Post a Comment