ಅತ್ಯಾಚಾರ ಯಾಕಿಂದು ಹೆಚ್ಚು ?
ಬಯಕೆ ( ಕಾಮ ) ಪ್ರಕೃತಿಯಲ್ಲಿ ಸಹಜ ಕ್ರಿಯೆ ಎಂಬುದನ್ನು ಒಪ್ಪಿಕೊಳ್ಳಬೇಕು . ಬಯಕೆ ಎಂದರೇನು ? ತನ್ನಲ್ಲಿಲ್ಲದ್ದನ್ನು ಪಡೆಯುವ ಇಚ್ಛೆಯೇ ಬಯಕೆ. ಗಂಡಿನ ದೇಹದಲ್ಲಿದ್ದದ್ದು ಪಡೆಯುವ ಬಯಕೆ ಹೆಣ್ಣಿಗೆ, ಹೆಣ್ಣಿನ ದೇಹದಲ್ಲಿದ್ದದ್ದು ಪಡೆಯುವ ಬಯಕೆ ಗಂಡಿಗೆ ಸಹಜವಾದುದು. ಅದೇ ಕಾಮ. ಈ ಕಾಮ ಯಾವ ಪರಿ ಹುದುಗಿರುವದೆಂದರೆ ಅನುಭವಸ್ಥ ವಿದ್ವಾ೦ಸರು ಅನುಮಾನಕ್ಕೆಡೆಯಿಲ್ಲದಂತೆ , "ಕಾಮಾತುರಾಣಾ0 ನ ಭಯಂ ನ ಲಜ್ಜಾ ........ " ಎಂದಿದ್ದಾರೆ. ಇಂತಿರುವ ಸ್ಥಿತಿಯಲ್ಲಿ ಹಾಗಾದರೆ ಯೋಚನಾಶಕ್ತಿಯುಳ್ಳ ಮಾನವನು ಅಮಾನುಷವಾಗಿ ಮೃಗೀಯ ರೀತಿಯಲ್ಲಿ , ತನ್ನ ಕಾಮ ತ್ರಷೆ ತೀರಿಸಿಕೊಳ್ಳಲು ಆಕ್ರಮಣಕಾರಿಯಾಗಬೇಕೆ ? ಹಿಂದೆ ರಾಜ ಮಹಾರಾಜರು ತಮ್ಮ ಪೌರುಷ ಶಕ್ತಿಯನ್ನುಪಯೋಗಿಸಿ , ನಿರುಪದ್ರವಿ, ಅಮಾಯಕ ಹೆಣ್ಣನ್ನು ಭೋಗಿಸಿದಂತೆ , ಇಂದಿನ ಪ್ರಜಾಪ್ರಭುತ್ವದಲ್ಲೂ ಅಧಿಕಾರದಲ್ಲಿರುವವರು, ಅವರ ಚೇಲಾಗಳು ರಾಜ ಮಹಾರಾಜರ ಮನ ಸ್ಥಿತಿಗಳಂತೆ ವರ್ತಿಸಲು ಅವಕಾಶವೀಯಬೇಕೆ ? ಖಂಡಿತ ಇಲ್ಲ. ಖಂಡಿತ ಇಲ್ಲ ಎಂದು ಸುಮ್ಮನೆ ಕುಳಿತರೆ ಬದಲಾವಣೆ ತನ್ನಿ೦ದ ತಾನೇ ಬರುವದೇ ? ಸಾಧ್ಯವಿಲ್ಲ. ಅಂದರೆ ಪರಿಹಾರವೇನು ?
ವ್ಯಕ್ತಿಯಿಂದ ಸಮಾಜ. ವ್ಯಕ್ತಿಯ ಮಾನವೀಯ ನಡೆ, ನುಡಿ, ಗುಣ ಗಳಲ್ಲಿ ಇತ್ಯಾತ್ಮಕ ಬದಲಾವಣೆಗಳು ಬಂದರೆ ಎಲ್ಲ ಸಮಸ್ಯೆಗಳಿಗೂ ಸುಲಭ ಪರಿಹಾರ ಸಾಧ್ಯ. ಹಾಗೆಂದು ಹೀಗೇ ಇರಬೇಕು ಎಂಬ ಚೌಕಟ್ಟಿನೊಳಗಿನ ವಿಚಾರ ( box thought ) ಕೇಳಲು ಚೆನ್ನಾಗಿ ಇರುವದೇ ವಿನಃ ಅನುಸರಿಸಲಲ್ಲ . ಆದರೆ ಈ ಬಾಕ್ಸ್ ಥಾಟ್ಸ್ ಗಳನ್ನೂ ಹೆಚ್ಚು ಹೆಚ್ಚು ಅನುಸರಿಸಿದಸ್ಟೂ ಸ್ವಾಸ್ಥ್ಯ ಸಮಾಜಕ್ಕೆ ದಾರಿ ಎಂಬುದು ನಿರ್ವಿವಾದ ವಿಚಾರ.
" ಮನೆಯೇ ಮೊದಲ ಪಾಠಶಾಲೆ , ಜನನಿ ತಾನೇ ಮೊದಲ ಗುರುವು ...... " ಎಂದು ನಾವೆಲ್ಲಾ ಓದಿದ್ದೇವೆ, ಕೇಳಿದ್ದೇವೆ, ತಿಳಿದೂ ತಿಳಿದಿದ್ದೇವೆ. ಆ ಜನನಿ ಸಮಯವನ್ನು ಮೀಸಲಿಡಿಸಿ ತನ್ನ ಮಕ್ಕಳನ್ನು ಅನಿಷ್ಟ ಪರಂಪರೆಗಳಿಂದ ರಕ್ಷಿಸಬೇಕಾದ ಸಮಯ ಬಂದೊದಗಿದೆ. ತಾಯಿ ಚಿಕ್ಕವಳಿದ್ದಾಗ ಆಧುನಿಕತೆಯ ಗಾಳಿಗೆ ಸೋ೦ಕಲಾಗದೇ , ಕೈಗೂಡದ ಬಯಕೆಯೇ ಇಂದು ಬಹು ತಾಯಂದಿರನ್ನು " ತಮ್ಮ ಮಗಳಾದರೂ ಹಾಗಿರಲಿ " ಎಂದು ಚಿಕ್ಕ ಮಗುವು ಆರಂಭದಿಂದಲೇ ತುಂಡುಡುಗೆಯತ್ತ ಆಕರ್ಶಿತವಾಗುವದನ್ನು ತಡೆಯಲು ಪ್ರಯತ್ನಿಸುವದಿಲ್ಲ. ಇನ್ನೆಷ್ಟೋ ಸನಾತನ ಪ್ರಜ್ಞೆಯ ಕೌಟುಂಬಿಕ ಹಿನ್ನೆಲೆಯಿಂದ ಬಂದ ತಾಯಂದಿರು ಮಠಕ್ಕೆ , ಮಂದಿರಕ್ಕೆ ಹೋಗಲು ತುಂಬು ತೋಳಿನ ರವಿಕೆ , ಮಾರ್ಕೆಟ್ಟಿಗೆ, ಸಿನೆಮಾ ಥಿಯೇಟರ್ ಗೆ ಹೋಗಲು ಕಿರು ದಾರದ , ದೇಹ ಸಿರಿಯನ್ನು ಅಖಂಡವಾಗಿ ತೋರ್ಪಡಿಸುವ , ಮೈ ಮಾಟಕ್ಕೊಪ್ಪುವ ರಂಗು ರಂಗಾದ ಕಿರು ಗಾತ್ರದ ಬಟ್ಟೆ , ಎಂಬ ಜಾಣ ನಡೆಯವರಾಗಿದ್ದಾರೆ. " ಬೇಕಾದ ಡ್ರೆಸ್ ಹಾಕಿಕೊಳ್ಳುವದು ನನ್ನ ಆಯ್ಕೆ, ನನ್ನ ಡ್ರೆಸ್ ಆಯ್ಕೆಯ ಹಕ್ಕನ್ನು ನಿನಗ್ಯಾರು ಕೊಟ್ಟವರು ಗಂಡೇ ? " ಎಂದು ಎದೆಯುಬ್ಬಿಸಿ ತಿರುಗ ಹೊರಟರೆ , ಪ್ರತಿಯಾಗಿ " ನನಗೇಕೆ ಡ್ರೆಸ್ಸು, ಬೇಕಿಲ್ಲ ಡ್ರೆಸ್ಸು " ಎಂದು ಗಂಡು ಸೆಟೆಸಿ ನಡೆದರೆ , ಸಮಾಜದ ನಾಳೆಗಳು ಏನಾದಾವು ? ಎಂದೂ ಯೋಚಿಸಬೇಕಲ್ಲವೇ ?
ಇಂತಿರುವಾಗ ಹೆಣ್ಣಿಗಷ್ಟೇ ಜವಾಬ್ದಾರಿಯೇ , ಗಂಡಿಗಿಲ್ಲವೇ ಈ ಜವಾಬ್ದಾರಿಗಳು ? ಎಂಬ ಸಹಜ ಪ್ರಶ್ನೆಯನ್ನು ವಿಶ್ಲೇಷಿಸಬೇಕಾಗುತ್ತದೆ. ಗಂಡಿಗೆ ಜವಾಬ್ದಾರಿ ಹೆಣ್ಣಿಗಿಂತ ಜಾಸ್ತಿ ಇದೆ , ಇರಬೇಕು . ಆದರೆ ಪ್ರಕೃತಿಯಲ್ಲಿ ಸಹಜವಾಗಿ ಹೆಣ್ಣಿಗೆ ನಾಚಿಕೆ ಜಾಸ್ತಿ. ಗಂಡು ಸುಲಭವಾಗಿ ನಾಚಿಕೆ ಬಿಡಬಲ್ಲ ಪ್ರಾಣಿ.ಹೆಣ್ಣು ಹಾಗಲ್ಲ. ಸುಲಭವಾಗಿ ನಾಚಿಕೆ ಬಿಡದಂತಹ ನೈಸರ್ಗಿಕ ದೇಣಿಗೆ ಅವಳಿಗಿದೆ.ಆದರೆ ಹೆಣ್ಣು ನಾಚಿಕೆ ಬಿಟ್ಟರೆ ಏನಾದೀತು ಎನ್ನಲು ನಮ್ಮ ಇಂದಿನ ಸಿನೆಮಾಗಳ ನೃತ್ಯ, ಉಡುಗೆ - ತೊಡುಗೆಗಳೇ ಸಾಕ್ಷಿ . ಹಿಂದೆಲ್ಲ ನಾವು ಪಾಶ್ಚಿಮಾತ್ಯರನ್ನು ಉದಾಹರಿಸಿ ನಾಚಿಕೆ ಬಿಟ್ಟವರು ಎನ್ನುವ ಉಧ್ಗಾರಗಳನ್ನೂ ಮೀರಿ ಇಂದಿನ ಸಿನೆಮಾ ಜಗತ್ತು ಬೆಳೆದಿದೆ. ಆದರೂ ಇಂದಿನ ತಾಯಂದಿರ ಪ್ರಭಲವಾದ ಆಸೆ ತನ್ನ ಮಗಳು ಸಿನೆಮಾ ತಾರೆಯಾಗಲಿ ಎಂಬುದಾಗಿದೆ.
ಯೋಚಿಸಿ . ಇಂದಿನ ಈ ಎಲ್ಲಾ ವಿಷಮ ಜೀವನ ಬೆಳವಣಿಗೆಗೆ ಕಾರಣೀಕರ್ತರು ಸಮಾಜದ ಎಲ್ಲಾ ಸ್ತ್ರೀ - ಪುರುಷರಲ್ಲ. ಒಟ್ಟಾರೆ ಈ ರೀತಿ ವಿಷಮ ಮನೋಧರ್ಮದವರು ಹೆಚ್ಚೆಂದರೆ ಶೇಕಡಾ ಹದಿನೈದು ಈಪ್ಪತ್ತು ಇರಬಹುದು ಎಂಬ ಆಶಯ. ಹೀಗಿರುವಾಗ ನಾವು ದೇಶದ ಎಲ್ಲೆಡೆ ಅತಿ ಭೀಕರ , ಭಯಾನಕ ಅತ್ಯಾಚಾರ ಪ್ರಕರಣಗಳನ್ನು ಕಾಣುತ್ತಿದ್ದೇವೆ. ಇನ್ನು ಭವಿಷ್ಯದಲ್ಲಿ ನಿಧಾನವಾಗಿ ಈ ವಿಷಮ ಮನೋಭಾವದವರೇ ಹೆಚ್ಚಾದಾಗ ಸಮಾಜದ ಪರಿಸ್ಥಿತಿ ಏನಾದೀತು ? ಉಡುಗೆ ತೊಡುಗೆಗಳೇ ಇಲ್ಲದೆ ಶತ ಶತ ಮಾನಗಳು ಸಾಮಾಜಿಕ ನಿರ್ಭಂಧಗಳಿಂದ ಅತ್ಯಾಚಾರಗಳಿಲ್ಲದೆ ಬದುಕಿದ ಮಾನವ ಇತಿಹಾಸವನ್ನು ನಾವು ಓದುತ್ತೇವೆ ಅಲ್ಲದೆ ಇಂದಿನ ದಿನಗಳಲ್ಲೂ ಪ್ರಪಂಚದ ಕೆಲವಡೆ ಇಂದಿನ ನವ ಜೀವನದ ಸೊಂeಕಿಲ್ಲದೆ ಬದುಕುವ ಉದಾಹರಣೆಗಳನ್ನು ಕಾಣುತ್ತೇವೆ. ಹಾಗಿರುವಾಗ ನವೀನ ರೀತಿಯ ಅಭಿವೃದ್ಧಿಯ ಆವಿಷ್ಕಾರಗಳೇ ಇಂದಿನ ಮಾನವನಿಗೆ ಶಾಪವಾಗಿ ಪರಿವರ್ತಿತವಾಗುತ್ತಿದೆಯೇ ?
ಏನಂತೀರಿ ? ಪ್ರತಿಕ್ರಿಯಿಸಿ.
ಹರಿಹರ ಭಟ್, ಬೆಂಗಳೂರು
ಶಿಕ್ಷಕ, ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ .
December 28 , 2012.
No comments:
Post a Comment