Wednesday, December 19, 2012

ಹೆಣ್ಣಿನ ಮೇಲೆ ಕ್ರೌರ್ಯ - ಮಿಡಿದ ಕಂಬನಿ


                                              ಹೆಣ್ಣಿನ ಮೇಲೆ ಕ್ರೌರ್ಯ -  ಮಿಡಿದ ಕಂಬನಿ




photo , courtesy: Internet



ವ್ಯಕ್ತಿಯಿಂದ ಸಮಾಜ. ಯಾವ ಸಮಾಜದಲ್ಲಿ ಶುದ್ಧ ಚಾರಿತ್ಯದ ವ್ಯಕ್ತಿಗಳಿರುತ್ತಾರೋ ಅಂತಹ ಸಮಾಜದಲ್ಲಿ ಅತಿಯಾದ ಆಚಾರ ಅಂದರೆ ಅತ್ಯಾಚಾರಗಳಿಗೆ ಆಸ್ಪದವೇ ಇರುವದಿಲ್ಲ. ಇಂದಿನ ಭಾಷೆ ಯಲ್ಲಿ ಹೇಳುವದಾದರೆ  ಪೋಲಿಸ್ ಟ್ಹಾಣೆಗಳ   ಅವಶ್ಯಕತೆಯೇ ಇರುವದಿಲ್ಲ.  ವ್ಯಕ್ತಿಯಿಂದ ಸಮಾಜ ಅಂದರೆ ಆ ರೀತಿ ಸುಖಮಯವಾದ ಸಮಾಜ ಒಮ್ಮೆಲೇ ನಿರ್ಮಿತಿಗೊಳ್ಳುವದಿಲ್ಲ  . ವ್ಯಕ್ತಿ , ಸಮಾಜ ಎಂಬ ಈ ಪದ ಪುಂಜದ ಮಧ್ಯೆ ಕುಟುಂಬ ಎಂಬುದೊಂದಿದೆ. ಯಾವುದೇ ಕುಟುಂಬದಲ್ಲಿ ಕೆಟ್ಟ ವ್ಯಕ್ತಿಯೇ ಇಲ್ಲದಿದ್ದರೆ ಸಮಾಜದಲ್ಲಿ ಕೆಟ್ಟ ವ್ಯಕ್ತಿಗಳೇ ಇರುವದಿಲ್ಲ. ಕೆಟ್ಟ ವ್ಯಕ್ತಿಯೇ ಇಲ್ಲದಿರುವಲ್ಲಿ ಕೆಟ್ಟ ಕುಟುಂಬ, ಕೆಟ್ಟ ಸಮಾಜದ ಪ್ರಶ್ನೆಯೇ ಉದ್ಭವಿಸುವದಿಲ್ಲ.  ಇನ್ನು ಸರಳವಾಗಿ ಹೇಳುವದಾದರೆ ಸಿಂಗಪುರ್ ನಂತಹ ಶಹರದಲ್ಲಿ ಹೋಗಿ , " ವಾಟ್ ಇಸ್ ಲಿಟರಿಂಗ್ " ಎಂದರೆ  "ಸೀ ದಿ ಡಿಕ್ಷನರಿ " ಎಂದಾರು , ಅದೇ ಬೆಂಗಳೂರಿನಲ್ಲಾದರೆ    "  ಲಿಟರಿಂಗ್  ಇಸ್ ಲೈಫ್ "  ಎಂದಾರು.



ಶಿಷ್ಣಗಳನ್ನು , ಸ್ತನಗಳನ್ನು, ಪ್ರಸ್ಟಗಳನ್ನೂ   ತಮ್ಮ ವಿಕ್ರತ ಮನೋ ಕಾಮನೆಗಳನ್ನು ತೀರಿಸುವ ಮಾಧ್ಯಮವಾಗಿ ಬಳಸಿಕೊಳ್ಳುವ ಹಾಗು ಆ ರೀತಿಯ ಚಟುವಟಿಕೆಗಳತ್ತ ಆಕರ್ಶಿತವಾಗುವಂತೆ ಪ್ರಚೋದಿಸುವ ,  ನವ ಜನಾಂಗದ ಮುಚ್ಚುಮರೆಯಿಲ್ಲದ ಕ್ರಿಯೆಗಳನ್ನು ಕಂಡೂ ಕಾಣದಂತೆ ಬದುಕುವ ಗೌರವಯುಕ್ತ ಸ್ತಾನಗಳಲ್ಲಿ ವಿಜ್ರಮ್ಭಿಸಿರುವ  ವಯೋಭೆeದವಿಲ್ಲದ ,ಜ್ನಾನ , ಸುಜ್ಞಾನ , ವಿದ್ವಾಂಸ , ದೈವಿe  ಸಂಭೂತ   , ವಿದ್ವತ್ ಪರಂಪರೆಯ ಅಪ್ರತ್ಯಕ್ಷ ಕೊಡುಗೆಯೇ ಇಂದಿನ ದಿನಗಳಲ್ಲಿ ಓಡುವ ವಾಹನಗಳಲ್ಲಿ, ಜನ ನಿಬಿಡ  ರಸ್ತೆಗಳಲ್ಲಿ, ಸಮಾಜದ ಅರ್ಥಿಕ ಬಲಶಾಲಿ  ಸುಂದರ - ಸುಂದರಿಯರಲ್ಲಿ ಮೋಜು ಮಸ್ತಿ ಹೆಸರಿನಲ್ಲಿ ನಡೆಯುವ ಅನಾಚಾರಗಳಿಗೆ ಹೆಚ್ಚಿನ ಕೊಡುಗೆಯೆಂದರೆ ಅತಿಶಯೋಕ್ತಿಯಲ್ಲ.




ಒಮ್ಮೆ ಯೋಚಿಸಿ. ನಮ್ಮ ಕರ್ನಾಟಕವನ್ನೇ ತೆಗೆದುಕೊಳ್ಳಿ. ಆರು ಕೋಟಿ ಕನ್ನಡಿಗರೆಲ್ಲ ಸಬ್ಯ, ಸಹನಶೀಲ, ಸದಾಚಾರದ ವ್ಯಕ್ತಿಗಳಾದರೆ ಸುಖಿ ಸಮಾಜದ ಕಲ್ಪನೆ ಒಮ್ಮೆಲೇ ಸಾಕಾರಗೊಳ್ಳುವದು ತಾನೇ ? ಎಲ್ಲ ಸ್ತ್ರೀ ಪುರುಷರು ಪರಸ್ಪರ ಸೋದರ - ಸೋದರೀ ಭಾವದಿಂದ ನೋಡುವಂತಾದರೆ , ಸ್ತ್ರೀ ಶೋಷಣೆಯ ರಾಕ್ಷಸೀ   ಕ್ರತ್ಯವಾದ  ದೈಹಿಕ ಅತ್ಯಾಚಾರಕ್ಕೆಲ್ಲಿ  ಆಸ್ಪದ ?  ಎಲ್ಲ ಸ್ತ್ರೀ - ಪುರುಷರಲ್ಲಿ ಏಕೋ ಭಾವದಿಂದ ಪರಸೊತ್ತು ಅಪಹರಣದ ವಾಂಚೆಯೇ ಬರದಿದ್ದರೆ  ಅನಾಚಾರಕ್ಕೆಲ್ಲಿ   ಸ್ತಳವಿದೆ ?




ಯಾಕೆ ನಮ್ಮ ಸಮಾಜ ಹೀಗಿದೆ ? ಯಾಕೆ ನಮ್ಮ ಜನ ಹೀಗಿದ್ದಾರೆ ? ಯಾಕೆ ನಾವು ಹೀಗಿದ್ದೇವೆ  ? ಕೇವಲ ಮುರೂ ನೂರು ವರುಷಗಳ ಹಿಂದೆ ಅಂದರೆ ಬ್ರಿಟಿಷರು ನಮ್ಮ ನೆಲವನ್ನು ಹೊಕ್ಕು ಲೂಟಿ  ಮಾಡುವ ಮೊದಲಿದ್ದ ವೈಭವದ ಹಿಂದೂ, ಮುಘಲ್ , ಫ್ರೆಂಚ್, ಪೊರ್ತುಗಿಸ್ ಸಮಾಜದಲ್ಲಿದ್ದ ಆಡಳಿತ ವ್ಯವಸ್ತೆ ಶಿಥಿಲಗೊಂಡು   ಇಂದಿನ   ಹೀನ ಸ್ತಿತಿ   ತಲುಪಲು ಏನು ಕಾರಣ ?  ಜಗತ್ತಿಗೆ ಶಾಂತಿ ಮಂತ್ರ ನೀಡಿದ ಈ ನಾಡಿನಲ್ಲೇಕೆ ಮನುಷ್ಯ ಮೃಗೀಯ ಕಾಮನೆಗೊಳಗಾಗಿ ಮನುಷ್ಯ ಸಂಭಂದಗಳನ್ನೇ ಮರೆತು , ತನ್ನ ರಕ್ತ ಸಂಭಂದಿಗಳನ್ನೇ, ತನ್ನ ಒಡ ನಾಡಿಗಳನ್ನೇ , ತನ್ನ ಸಹ ಜೀವಿಗಳನ್ನೇ ಕಾಮುಕತೆಯಿಂದ ನೋಡುವ ಚಪಲತೆ, ಆಕ್ರಮಣ ಶೀಲತ್ವ, ಹಿಂಸಾ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾನೆ, ಯಾವುದೇ ಭಯ , ಭಾಧೆಗಳಿಲ್ಲದೆ  ಅಭಯಂಕರನಾಗಿ  ಯಮ ಕಿಂಕರನಾಗಿ ಬದಲಾವಣೆ ಹೊಂದುತ್ತಿದ್ದಾನೆ?



photo , courtesy: Internet





ನಮ್ಮ ಇಂದಿನ ಸಾರ್ವಜನಿಕ ಜೀವನವನ್ನೊಮ್ಮೆ ಅವಲೋಕಿಸಿದರೆ , ಸಾರ್ವಜನಿಕವಾಗಿ ಮಹತ್ವದ ಸ್ತಾನಗಳೆಂದು ಈ ಸಮಾಜ ಯಾವ ಯಾವ ಅಧಿಕಾರದ ಹುದ್ದೆಗಳನ್ನು ಪರಿಗಣಿಸಿದೆಯೋ , ಆ ಸ್ತಾನಗಳನ್ನೆಲ್ಲಾ ವಿಕ್ಷಿಪ್ತ ಮನೋಭಾವದ ಜನರು ಆಕ್ರಮಿಸಿದ್ದಾರೆ ಅಥವಾ ಅಂತಹ ಸ್ತಾನಗಳಲ್ಲಿರುವವರು ಅಸಹಾಯಕರಾಗಿ , ವಿವೇಚನಾ ರಹಿತರಾಗಿ ವಿಕ್ಷಿಪ್ತ ಮನೋಭಾವನೆಯ ಜನಗಳಿಗೆ , ಸ್ವಾರ್ಥ ಲೋಲುಪತೆಯಿಂದ ಸಹಕರಿಸುತ್ತಿದ್ದಾರೆ.  ಈ ವಾಕ್ಯದ ಜೊತೆ ಎಲ್ಲರೂ ಅಲ್ಲ ಎಂದು ಪದ ಪುಂಜ ಸೇರಿಸಲು ನಾಚಿಕೆ ಪಡುವಂತ ಪರಿಸ್ತಿತಿ ಇದೆ.  ಸಮಾಜದಲ್ಲಿ ಸಾಂಸ್ಕ್ರತಿಕ ಹೆಗ್ಗುರುತುಗಳಾದ ಸಂಘ ಸಂಸ್ತೆಗಳಲ್ಲಿ ಮುಖಂಡತ್ವ ವಹಿಸುವವರ ವೈಯಕ್ತಿಕ   ಜೀವನದ ಆಚಾರ ವಿಚಾರಗಳಿಗೂ , ಅವರ ಕಾರ್ಯ ವಿಧಾನಗಳಿಗೂ ಅಜಗಜಾಂತರ ವ್ಯತ್ಯಾಸ ಇಂದಿನದಾಗಿದೆ. ಒಂದು ಉದಾಹರಣೆಯಾಗಿ ಯೋಚಿಸುವದಾದರೆ , ರಸ್ತೆಯಲ್ಲಿ ನಿಂತು ಸಿಗಾರ್ ಸೇದಿ  ಹೊಗೆ  ಉಗುಳುವ, ಸ್ತ್ರಿಲೋಲುಪನಾಗಿರುವ , ಮದಿರಾ ಸೇವನೆಯಲ್ಲಿ ಮುಳುಗೇಳುವ , ಕಲೆಯ ಗಂಧ ಗಾಳಿಯೇ ಇಲ್ಲದಿರುವ ವ್ಯಕ್ತಿಯೊಬ್ಬ ನಾಲ್ಕಾರು ಪೇಂಟಿಂಗ್ ಗಳನ್ನು ಚಿತ್ರಿಸಿ , ತನ್ನ ಆಶ್ರಯದಾತ ( godfather) ನ   ಕ್ರಪೆಯಿಂದ ಜಗದಲ್ಲೆಲ್ಲ ತನ್ನ   ಈ ಪೇಂಟಿಂಗ್  ಪ್ರದರ್ಶಿಸಿ , ಹಿಂದೂ ಸಂಸ್ಕೃತಿಯನ್ನು ಪ್ರತಿನಿಧಿಸುವ ಶ್ರೇಷ್ಟ ಜಗದ್ವಿಕ್ಯಾತ ಸಂಸ್ತೆಯೊಂದರ ಅಧಿಪತಿಯಾಗಿ ಪ್ರತಿಸ್ತಾಪನೆಯಾದಾಗ, ಸಮಾಜದ ಶ್ರೇಷ್ಟರೆಲ್ಲ   ಉಘೆ ಉಘೆ ಎಂದು ತಲೆಬಾಗಿ " ಕುರಿಗಳು ಸಾರ್ ಕುರಿಗಳು  " ಎಂಬ ಜನಾನುರಾಗಿ ಹಾಡನ್ನು ನೆನಪಿಸುವಂತಹ ಸ್ತಿತಿಗೆ ಇಂದು ಈ ಸಮಾಜ ತಲುಪಿದೆ ಎಂದಾದರೆ ಇವಕ್ಕೆಲ್ಲ ಕಾರಣೀಕರ್ತರಾರು   ಎಂದು  ಧೀರ್ಘವಾಗಿ ಯೋಚಿಸುವ ಹಂತ ಇದಾಗಿದೆ.



photo , courtesy: Internet




ನೆನಪಿಸಿಕೊಳ್ಳಿ . ಜೀವನ ನಿರ್ವಹಣೆಗೆ ಅವಶ್ಯಕತೆ   ಎಂದು ಕೆಲಸವನ್ನರಸಿ ದಿನಾಲು ಇಪ್ಪತ್ತೈದು ಮೂವತ್ತು ಕಿಲೋಮೀಟರು ಸಾಗುತ್ತ ತನ್ನ ಅವಲಂಬಿತರಿಗೊಂದು ನೆಮ್ಮದಿಯ ಜೀವನ ನೀಡಬಯಸುವ ಹೆಣ್ಣು ಮಗಳೊಂದು , ದಿನ ನಿತ್ಯ ತಾನು ನೋಡುವ, ತನಗೆ , ತನ್ನ ಕೆಲಸಕ್ಕೆ ಸಹಕಾರಿಯಾಗುಳ್ಳ ವಾಹನ ಚಾಲಕನಿಂದಲೇ ಅತ್ಯಾಚಾರಕ್ಕೆ ಒಳಗಾಗಿದ್ದ ಘಟನೆಯನ್ನು ಸಮಾಜ ಹದಿನೈದು ಇಪತ್ತು   ದಿವಸಗಳಲ್ಲೇ ಮರೆತುಬಿಡುತ್ತದೆ. ನ್ಯಾಯ ವ್ಯವಸ್ತೆಯ೦ತೂ ,  ನ್ಯಾಯಾನ್ಯಾಯ ವಿಮರ್ಶೆಯುನ್ನು ಹಲವಾರು ವರ್ಷಗಳ ಕಾಲ ಎಳೆದು ಎಳೆದು , ಯಾವುದೋ ಅಧಿಕಾರಿ ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ , ಹೆಣ್ಣು ಮಗಳಿಗಾದ ಅನ್ಯಾಯಕ್ಕೊಂದು ಶಮನ ನಿeಡುವಂಥ, ಸಮಾಜಘಾತುಕರಿಗೊಂದು ಪಾಠ ಪ್ರದರ್ಶಿಸುವಂತಹ  ಅವಕಾಶದಿಂದಲೇ ವಂಚಿತವಾಗುತ್ತದೆ. ಇಂತಾದರೆ ನಾವು ಎಂತಹ ಹೀನಾಯ ಸ್ತಿತಿ ತಲುಪಿರುವ ಸಮಾಜದಲ್ಲಿಂದು ಜೀವಿಸುತ್ತಿದ್ದೇವೆ ಎಂದು ಚಿಂತನೆ ಮಾಡಬೇಕಾಗಿದೆ.



ಈ ಎಲ್ಲ ಅಮಾನವೀಯ ಸ್ತಿತಿ ತಲುಪಿಹ ಸಮಾಜದ ಧನಾತ್ಮಕ ಬದಲಾವಣೆಗೆ ದಾರಿಯಿಲ್ಲವೇ ? ದಾರಿಯಿದೆ. ತಾಯಂದಿರು ಮನಸ್ಸು ಮಾಡಬೇಕು. ಸಮಸ್ಯೆಯ ಆಳ , ಹರಿವುಗಳ ಅರಿವು ಮಾಡಿಕೊಳ್ಳಬೇಕು. ಪರಿಹಾರ ತಮ್ಮಲ್ಲಿದೆ ಎಂಬ ಖಚಿತ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಮಕ್ಕಳು   ದ್ರಢ , ಧನಾತ್ಮಕ, ಸಹನೆಯ ವ್ಯಕ್ತಿತ್ವ ವಾಗಿ ರೂಪುಗೊಳ್ಳಲು   ತಾಯಿ ತನ್ನನ್ನು ಅಣಿಗೊಳ್ಳಿ ಸಬೇಕು  .  ಹದಗೆಟ್ಟ ಸಮಾಜದಲ್ಲಿ ತನ್ನ ಮಗುವಿನ ಜೀವನ ಶೊeಚನೀಯವಾಗಬಾರದೆ೦ಬ  ಆಸೆಯನ್ನು  ತನ್ನ ಮನ ತುಂಬಿಕೊಳ್ಳಬೇಕು ಆ ಮಹಾ ತಾಯಂದಿರು. ಬಾಲ್ಯದಲ್ಲೇ ಮಗುವಿನ ಮನಸ್ಸನ್ನು ಹದಗೊಳಿಸಬೇಕು. ಬಾಲ್ಯದಲ್ಲಿ ಮಗುವಿನ ಮನಸ್ಸನ್ನು ತೀಡಿ ತಿದ್ದುವದು ಸುಲಭ . ಒಮ್ಮೆ  ಹದ ಗೊಂಡ ಮನಸ್ಸು ಎಂದೂ ಬುದ್ಧಿಯ ಮೇಲೆ ಸವಾರಿ ಮಾಡಲಾಗದು ಎಂಬ ಸತ್ಯವನ್ನು ತಾಯಂದಿರು ಅರಿಯಬೇಕು ಮತ್ತು ತಮ್ಮ ತ್ಯಾಗ, ಶ್ರಮದಿಂದ ರೂಪುಗೊಳ್ಳುವ ತಮ್ಮ ಮಕ್ಕಳ ಭವಿಷ್ಯವನ್ನು ನೋಡಿ ಆನಂದತುಲಿತರಾಗುವ ಭಾಗ್ಯವಂತರಾಗಲು ಪಣತೊಡಬೇಕು.



ಇಂದಿನ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ , ವಯಸ್ಸಿಗೆ ಬಂದವರೆಲ್ಲ ಮತ ಹಾಕಿ ಪ್ರತಿನಿಧಿಯನ್ನಾರಿಸುವ ರೂಡ್ಹಿಯಲ್ಲಿ  , ಅಷಿಕ್ಷಿತರೆe ಹೆಚ್ಚಿರುವಾಗ ಹಾಗೂ ಇಂದಿನ ಶಿಕ್ಷಣ ಕೇವಲ ಉದ್ಯೋಗಕ್ಕೊಂದೆ ದಾರಿಯಾಗಿ, ಜೀವನ ಮೌಲ್ಯಗಳು ಇಲ್ಲದಾಗುತ್ತಿರುವ ಕಾಲದಲ್ಲಿ ಮತದಾರರಿಂದೇನು ಬದಲಾವಣೆ ನಿರೀಕ್ಷಿಸುವಂತಿಲ್ಲ. ಇನ್ನು ಹೆಚ್ಚಾಗಿ ರಾಜಕೀಯ ನೇತಾರರು ಮತ ಖರೀದಿಗೆ ಹೊಸ ಹೊಸ ವಿಧಾನಗಳನ್ನು ಅನುಸರಿಸುತ್ತಿರುವದರಿಂದ , ಮತದಾರರಿಂದ ಚುನಾಯಿಸಲ್ಪಡುವ ಈ ನೇತಾರರಿ೦ದಲೂ ಯಾವುದೇ ತೆರನಾದ ಸಾಮಾಜಿಕ ಮೌಲ್ಯ ನಿರೀಕ್ಷಿಸುವಂತಿಲ್ಲ.ಇಂತಿಪ್ಪ ಪರಿಸ್ತಿತಿಯಲ್ಲಿ ಪ್ರತಿ ಕುಟುಂಬದಲ್ಲಿರುವ ಮಾತೆಯರೇ ಇಂದಿನ, ನಾಳಿನ ಮತ್ತು ಎಂದೆಂದಿನ ಆಶಾಕಿರಣವಾಗಿ ಗೋಚರಿಸುತ್ತಾರೆ.  



ದೆಹಲಿಯ ರಸ್ತೆಯಲ್ಲಿ ಓಡುವ ವಾಹನವೊಂದರಲ್ಲಿ ಪುಂಡರ ಕಾಮ ತ್ರಷೆಗೊಳಗಾದ ಹೆಣ್ಣು ಮಗಳೊಬ್ಬಳು ಆಸ್ಪತ್ರೆಯಲ್ಲಿ ಜೀವನ ಮರಣ ಹೋರಾಟದಲ್ಲಿರುವ ಸುದ್ದಿಯ ತುಣುಕೊಂದನ್ನು ಓದಿದಾಗ ಮನಮಿಡಿದು ಈ ಪದ ಗುಚ್ಚಗಳು ಹೊರಬಂದಿವೆ. ಈ ರೀತಿ ಘಟನೆಗಳು ಮರುಕಳಿಸದಿರಲಿ ಎಂದು ಆಶಿಸಿ ದೈವದ ಮೊರೆ   ಹೋಗುವದನ್ನು ಉಳಿದು ಇನ್ನ್ಯಾವುದೇ ಪರಿಹಾರವಿಲ್ಲದ ಶೋಚನೀಯ ಸ್ತಿತಿ ಇಂದಿನದಾಗಿದೆ. ಮ್ರದು  ಮನಸ್ಸಿನವರಿಗನ್ತೂ  ಕಂಬನಿ ಮಿಡಿಯುವದೊಂದೇ ತೋಚುವ ದಾರಿ . ಆ ಹೆಣ್ಮಗಳ ಆರೋಗ್ಯ ಸುಧಾರಿಸಲೆಂದು ಕಂಬನಿ ಸುರಿಸಿ ಪ್ರಾರ್ಥಿಸಿಬಿಡಿ.



ಹರಿಹರ ಭಟ್, ಬೆಂಗಳೂರು.
ಶಿಕ್ಷಕ , ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.
hariharbhat@gmail.com
December 20 , 2012.

Photograph of the writer.




No comments:

Post a Comment