Saturday, December 29, 2012

ವಿಶ್ವೇಶ್ವರ ಭಟ್  ರಿಗೊಂದು ಪತ್ರ ಬರೆದಿದ್ದೇನೆ. ನಿಮ್ಮೊಡನೆ ಅದನ್ನು ಹಂಚಿಕೊಂಡಿದ್ದೇನೆ.

                                               ***************


 "  ತಪ್ಪಾಯ್ತು ತಿದ್ಕೋತೀವಿ  "  ಕೊನೆಯಿಲ್ಲದ ( perpetual ) ಅಂಕಣಾನಾ ??????


ಪಕ್ಕದ ಮನೆಯಲ್ಲಿ ಗಂಡ ಹೆ೦ಡತಿ ಜಗಳ ಮಾಡಿ ಕೊಳ್ಳುತ್ತಿದ್ದಾರೆ ಎಂದಾದರೆ ಅದನ್ನು ನೋಡಿ ಮಜಾ ತೆಗೆದುಕೊಳ್ಳುವ ಜನಗಳಿಗೆ ತಮ್ಮ ಮನೆಯ ಮಗ ಸೊಸೆ ಏರು ದ್ವನಿಯಲ್ಲಿ ಮಾತನಾಡಿದಾಗ   ಕರುಳು ಚುರ್ ಎಂದು ಸಮಾಧಾನ ಹೇಳಲು ಮುಂದಾಗುತ್ತಾರೆ. ಎಲ್ಲಿ ಭಾವನಾತ್ಮಕ ಸ೦ಬ೦ಧ   ಇರುತ್ತದೆಯೋ ಅಲ್ಲಿ ಕೂಡಲೇ ಪ್ರತಿಕ್ರಿಯಿಸುವದು ಮಾನವ ಸಹಜ ಸ್ವಭಾವ. ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುವ ಜನ ನಾಲ್ಕಾರು ಸಲ ಮುಖ ನೋಡಿದೊಡನೆ , ಮುಂದೆ ಶುಭಾಷಯ ವಿನಿಮಯ ಮಾಡಿಕೊಳ್ಳುವದು ಮನುಷ್ಯನ    ಸಹಜ ಸ್ವಭಾವ. ಈ ರೀತಿಯ ಸಹಜ ಮನುಷ್ಯ ಸಂಬಂಧಗಳು , ಒಂದು ಪತ್ರಿಕೆಯನ್ನೂ, ಲೇಖಕರ ಹಲವಾರು ಲೇಖನಗಳನ್ನೂ , ಸಾಹಿತಿಗಳ ಪುಸ್ತಕಗಳನ್ನೂ ಓದಿದಾಗ, ಹಲವಾರು ವರ್ಷಗಳ ಕಾಲ ಓದಿದಾಗ ಒಂದು ಅವಿನಾಭಾವ ಸ೦ಬ೦ಧ   ಏರ್ಪಡುತ್ತದೆ. ಸಂಪಾದಕರು ಬದಲಾದರೂ , ಲೇಖಕರು , ಸಾಹಿತಿಗಳು ತಮ್ಮ ಇಹ ಜೀವನ ಮುಗಿಸಿದರೂ ಈ ಸ೦ಬ೦ಧ   ಮುಗಿಯುವದಿಲ್ಲ. ಬಹುಷಃ ಇ೦ತಹ ಸ೦ಬ೦ಧಗಳನ್ನೇ ಕರುಳ ಸ೦ಬ೦ಧ   ಎಂದು ಜೀವನಾನುಭವಿಗಳು  ವಿಶ್ಲೇಷಿಸಿದ್ದಾರೆ .


ಈ ರೀತಿ ವಿಚಾರಧಾರೆಗಳೇಕೆ ಇ೦ದು ಮನಸ್ಸಿನಲ್ಲಿ ಸ್ಪುರಿಸುತ್ತಿವೆ ಎ೦ದು  ವಿಮರ್ಶಿಸಿದಾಗ  ಈ ತಾದಾತ್ಮ್ಯ ಸ೦ಬ೦ಧದ   ಹೊಳವು  ಹರಿಯಿತು. ನಮ್ಮ ವಿಶ್ವೇಶ್ವರ ಭಟ್ ರು ಆರಂಭಿಸಿದ ಅ೦ಕಣ "ತಪ್ಪಾಯ್ತು   ತಿದ್ಕೊeತೀವಿ"  ಓದಿ  ಓದಿ , ಇ೦ದು ಏನೆನಿಸುತ್ತಿದೆ ಎ೦ದರೆ ನಮ್ಮ ಅಭಿಮಾನದ ಪತ್ರಿಕೆಗಳಲ್ಲಿ ಅಕ್ಷರ ಜೋಡಣೆಯ ತಪ್ಪುಗಳು ,  ನಿವಾರಿಸಲು ಸಾಧ್ಯವಿಲ್ಲದ ಸಮಸ್ಯೆಯೇ ? ವಿಷಯ  ನೀರೂಪಣೆಗಳಲ್ಲಿ ಮೇಲ್ನೋಟಕ್ಕೇ ಕಂಡು ಬರುವ ವ್ಯಾಕರಣ ದೋಷಗಳು ತಿದ್ದಲಾಗದ೦ತಹ ಸಮಸ್ಯೆಯೇ ? ಪ್ರಥಮ ಹ೦ತದಲ್ಲಿಯೆe ( at the outset )  ತೋಚಿದ್ದು ಸರಿ ಎಂದು ಒಪ್ಪಿ ಕರಡು ತಿದ್ದುಪಡಿ ಪೂರೈಸುವ ಉಪಸಂಪಾದಕರುಗಳು   ಪುನರ್ಯೋಚನೆ ಮಾಡಿ , ಪತ್ರಿಕೆ ಹಿಡಿದೊಡನೆ ಧುತ್ತೆಂದು ಎರಗುವ ಅತಿಸಾಮಾನ್ಯ ತಪ್ಪುಗಳು ನಿವಾರಿಸಲಾಗದ೦ತಹ ಸಮಸ್ಯೆಗಳೇ ?    ಎ೦ಬ ಇತ್ಯಾದಿ ವಿಚಾರಗಳು ಮನ ಕಲುಕುತ್ತವೆ.


ಒಗ್ಗಟ್ಟೇ ಬಲ ಎ೦ಬ ಉಕ್ತಿಯು ಇ೦ದು ಎಲ್ಲೆಡೆ ಪ್ರಯೋಗಗೊಂಡು  ವಿಪರೀತಗಳಿಗೆಡೆಮಾಡಿರುವಾಗ   ಈ ರೀತಿ ತಪ್ಪುಗಳಾಗದಂತೆ ಸ೦ಬ೦ಧಿಸಿದ   ವ್ಯಕ್ತಿಗಳನ್ನು ವಿಚಾರಿಸಿಕೊಳ್ಳಲು ಸ೦ಪಾದಕರು ,
ಆಡಳಿತ ಮ೦ಡಳಿ ಅಸಹಾಯಕರಾಗಿರುತ್ತಾರೆ ಎನ್ನುವದು ವಾಸ್ತವಿಕ ಸತ್ಯವಾದರೂ , ಕಾರ್ಯಕ್ಷಮತೆಯನ್ನು   ಹೆಚ್ಚಿಸುವತ್ತ  ಕೈಗೊಳ್ಳಬಹುದಾದ  ಹಲವಾರು  ಉಪಾಯಗಳಿವೆ , ಪರಿಹಾರಗಳಿವೆ ಎಂಬುದನ್ನು ಅರಿಯದವರಾಗಿರುವದಿಲ್ಲ ಈ ಸ೦ಪಾದಕರು ಮತ್ತು ಆಡಳಿತ
ಮ೦ಡಳಿ. ಇ೦ತಿಪ್ಪಾಗ ಬದಲಾವಣೆಗೆ ಅವಶ್ಯವಿರುವ ಕಾಲ ( breathing time ) ಮುಗಿದಿದ್ದರೂ , ತಪ್ಪುಗಳಾಗದಂತೆ ಮತ್ತು ಘಟಿಸಿದ ತಪ್ಪುಗಳು ಪುನರಾವರ್ತನೆಯಾಗದಂತೆ ಕೈಗೊಳ್ಳಬೇಕಾದ ಕ್ರಮಗಳು ಕೈಗೊಂಡಂತೆ ಮೇಲ್ನೋಟಕ್ಕ೦ತೂ ಕಾಣಿಸುತ್ತಿಲ್ಲ ಅನ್ನುವದು ನಿರ್ವಿವಾದ.


ವ್ಯಕ್ತಿತ್ವದ ಪರಿಪೂರ್ಣತೆಯತ್ತ   ಪಕ್ವವಾಗಿರುವ  ವಿ.ಭಟ್ ರು  ನನ್ನ ಈ ಅಕ್ಷರ ವ್ಯಕ್ತನೆಗಳನ್ನು ಓದಿ , ನನ್ನನ್ನು  ಬ್ಲಾಕ್  ಲಿಸ್ಟ್ ( black list )ಗೆ ಸೇರಿಸ್ಲಿಕ್ಕಿಲ್ಲವೆಂಬ ವಿಶ್ವಾಸದಿಂದ ಬರೆಯುತ್ತಿದ್ದೇನೆ.


ಹಿಮಾಲಯವನ್ನೇರುತ್ತೇನೆ ಎಂಬವರಿಂದ ಹಿಮಾಲಯದ ತುದಿ ತಲುಪುವದನ್ನು ನಿರಿeಕ್ಷಿಸುತ್ತಾರೆ ವಿನಃ  ಕಾಂಚನಗಂಗಾ ತುದಿಯಲ್ಲಿದ್ದೇನೆ ಎಂದರೆ ಅಭಿಮಾನಿಗಳು ಸಂತಸಪಡುವದಿಲ್ಲ  . ಅಲ್ಲದೆ ಹಿಮಾಲಯವನ್ನೇರುವ ಸಾಧ್ಯತೆಯಿರುವವರು ಹಿಮಾಲಯದ ತುದಿ ತಲುಪದಿದ್ದರೆ ಅನುಭಾವಿಕರಿಗೆ ನಿರಾಸೆ ಸಹಜವಾಗುವದು ಹಾಗು ಸ೦ಬ೦ಧಿಸಿದವರು ಅದನ್ನು ಅರಿಯದಿದ್ದರೆ ಅಭಿಮಾನಿಗಳು ನಿರಾಸೆಗೊಳ್ಳುತ್ತಾರೆ.  ನಮ್ಮ ವಿ.ಭಟ್ ರು, ಯಾವುದೇ ರೀತಿಯ ಅನೈಸರ್ಗಿಕ ಸ೦ಕಷ್ಟಗಳು ಜೀವನದಲ್ಲಿ ಎದುರಾದರೂ ಅವೆಲ್ಲವುಗಳನ್ನು ಸೂಕ್ತವಾಗಿ ಹಿಂದಿಕ್ಕಿ ಯಶಸ್ಸನ್ನು ಕಾಣಬಲ್ಲವರು ಎಂಬುದಾಗಿ ಪತ್ರಿಕೆಯೊಂದರ  ಸಂಪಾದಕತ್ವ ದಿಂದ  ಹೊರಬಂದು , ಇನ್ನೊಂದು ಸಂಪಾದಕ ಖುರ್ಚಿಯಲ್ಲಿ ಕೂತ ಮಧ್ಯದ ಅವಧಿಯಲ್ಲೇ ನಿರೂಪಿಸಿದ್ದಾರೆ.   ವ್ಯಕ್ತಿತ್ವವನ್ನೊಮ್ಮೆ  ರೂಡ್ಹಿಸಿಕೊಂಡರೆ  , ಆವ್ಹಾನಿಹಿಸಿಕೊಂಡರೆ ಆ ವ್ಯಕ್ತಿಯನ್ನು ಅನುಸರಿಸುವವರು   , ವ್ಯಕ್ತಿಯ ಅಭಿಮಾನಿಗಳು  , ವ್ಯಕ್ತಿಯು ಜೀವಿಸುವ ಸಮಾಜ ಅವರಿಂದ ನೀರಿಕ್ಷೆಗಳನ್ನಿಟ್ಟುಕೊಳ್ಳುವದು ಸಹಜ ತಾನೇ ?  ನ್ಯಾಯ ತಾನೇ ?  ಅಂತೆಯೇ ಪತ್ರಿಕೆಯ ತಪ್ಪುಗಳ ಮನನ , ಪುನರ್ಮನನಗಳಿಗೆ  ಸಾಕಷ್ಟು ಸಮಯ ಸಂದಿದೆ. ತಪ್ಪುಗಳು ಆಗದಂತೆ, ಕನಿಷ್ಠ  ಪುನರಾವರ್ತನೆಯಾಗದ೦ತಾದರೂ  ದ್ಹ್ರಡ  ಸಂಕಲ್ಪದೊಂದಿಗೆ ಕಾರ್ಯಪ್ರವ್ರತ್ತರಾಗಲು ಇದು ಸೂಕ್ತ ಕಾಲ ಎಂದೆನಿಸುತ್ತಿದೆ. 

ಹರಿಹರ ಭಟ್, ಬೆಂಗಳೂರು
ಶಿಕ್ಷಕ , ಚಿಂತಕ, ವಿಮರ್ಶಕ, ಫೇಸ್ ಬುಕ್ ಬರಹಗಾರ.

                                           *************

ಮಿತ್ರರೇ ,

ನಿಮ್ಮ ಮಾತುಗಳಿಗೆ ಕಾಯ್ದಿದ್ದೇನೆ.
December 30 , 2012. 

No comments:

Post a Comment