ನನ್ನ ಹ್ರದಯಕಮಲದಲ್ಲಿ ನೆಲೆಸಿರುವ ಆಂಜನೇಯ ಸೇವಾ ಸಂಪ್ರೀತ , ಸೀತಾ ಲಕ್ಷ್ಮಣ ರನ್ನುಒಳಗೊಂಡ ಶ್ರೀ ರಾಮಚಂದ್ರನ ದರ್ಶನ ಭಾಗ್ಯ ಅನಿರಿeಕ್ಷಿತವಾಗಿ ಬಾಹ್ಯ ರೂಪದಲ್ಲಿ ಒದಗಿ ಬಂತು. ನನಗೆ ಕನ್ಯಾ ದಾನ ಮಾಡಿದ ಅಂದರೆ ನನ್ನ ಮಾವ ಹೇಳುತ್ತಿದ್ದ ವಿಶ್ವಾಸದ ಮಾತೊಂದು " ವಿಶ್ವಾಸೋ ಫಲದಾಯಕಹ " , ನೆನೆಪಿನ ಸ್ಮ್ರತಿಯಲ್ಲಿ ಹಾಯ್ದು ಹೋಯಿತು .
ಹೀಗಾಯ್ತು: ಫೇಸ್ ಬುಕ್ ನೋಡುತ್ತಾ ಕೂತಿದ್ದೆ. ಉತ್ಸಾಹಿ ಮಿತ್ರ ಶ್ರೀಕಾಂತ್ ( ಶ್ರೀಕಾಂತ ಹೆಗಡೆಯವರು ) ಬರೆದಿದ್ದ. ಪ್ರಸಂಗ - ವಾಲಿಯ ಮೋಕ್ಷ
ಕಾಲ : ಈ ದಿನ, 6.12.12, ಸಮಯ ಸಂಜೆ 6ರಿಂದ8
ದೇಶ : ಶ್ರೀರಾಮಾಶ್ರಮ, ಗಿರಿನಗರ ಬೆಂಗಳೂರು.
ಕಲಾವಿದರು - ಕೆರೆಮನೆ ಶಿವಾನಂದ ಹೆಗಡೆ, ಹಡಿನಬಾಳ ಶ್ರೀಪಾದ ಹೆಗಡೆ,
ವಿದ್ವಾನ್ ಜಗದೀಶ ಶರ್ಮಾ, ಮೋಹನ ಭಾಸ್ಕರ ಹೆಗಡೆ ಮತ್ತು ಇತರರು.
ಸದಭಿರುಚಿಯ ಮನರಂಜನಾಸಕ್ತರಿಗೆ ಹಾರ್ದ ಸ್ವಾಗತ.
ವಿ.ಸೂ. ಕಾರ್ತ್ತಿಕದೀಪೋತ್ಸವವೂ ಇದೆ.
ಒಹೋ ಹೋಗಲೇ ಬೇಕು. ಪರಿಚಯವಿರುವ ಮಿತ್ರರ ಮಾತಿನ ಮೋಡಿ , ಯಕ್ಷಗಾನ ರಾಗ ಭರಿತ , ರಸ ಮಿಲನದ ಪದ್ಯಗಳನ್ನು ಆಸ್ವಾದಿಸಲು ಬಂದೊದಗಿದ ಈ ಅವಕಾಶ , ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ಸನ್ನಿಧಾನದಲ್ಲಿ .
ಅಚ್ಚುಕಟ್ಟಾಗಿ ಆಯೋಜಿಸಿದ ಕಾರ್ಯಕ್ರಮದಲ್ಲಿ , ತಮ್ಮ ವಾಕ್ ಪಟುತ್ವದಿಂದ ಪಾತ್ರಧಾರಿಗಳೆಲ್ಲ ಪಾತ್ರಗಳಿಗೆ ಸೂಕ್ತವಾಗಿ ಜೀವ ತುಂಬಿದರು. ನನ್ನ ಪರಿಚಯದ ಮೋಹನ ಹೆಗಡೆಯವರು ಈ ಹದಿನೈದು ವರ್ಷಗಳಲ್ಲಿ ಸಾಧಿಸಿದ ವಿಷಯ ಸಂಗ್ರಹ , ಮಾತಿನ ಚಾತುರ್ಯ ಸಂತೋಷ ನೀಡಿತು. ವಿದ್ವಾನ್ ಜಗದೀಶ್ ಶರ್ಮಾರವರ ಮಾತುಗಾರಿಕೆ ಕೇಳುವ ಬಯಕೆ ಕೈಗೂಡಲಿಲ್ಲ. ಅವರು ಬಂದಿರಲಿಲ್ಲ.
ನಂತರ ಕಾರ್ತಿಕ ದೀಪೋತ್ಸವ , ಅಸ್ಟಾವಧಾನ ಸೇವೆಯೊಂದಿಗೆ ಎಲ್ಲರೂ ಧನ್ಯತೆ ಪಡೆದರು .
ಸನ್ಮಿತ್ರ ಜಿ ಜಿ ಹೆಗಡೆಯವರ ಸಾಂಗತ್ಯ ಹಿತ ನೀಡಿತು. ಮರಳಲ್ಲಿ ಬೆರಳಾಡಿಸಿ ಚಿತ್ತಾರಗಳನ್ನು ಬರೆದು ಮಂತ್ರ ಮುಗ್ಧರನ್ನಾಗಿಸುವ ರಾಘವೇಂದ್ರರ ಪರಿಚಯವಾಯಿತು. ನಮ್ಮ ಕರ್ಕಿ ಅಣ್ಣ ( R M ಭಟ್ , ಕಾಶಿ ) ನವರ ಪ್ರಿಯ ಮಾತುಗಳು ಮನಸ್ಸಿಗೆ ಮುದ ನೀಡಿದವು. ಚುರುಕಾದ ನುಡಿಯ K P ಯವರ ಮಾತುಗಳು ನೆನಪಿನಲ್ಲುಳಿದವು.
ಕಾರ್ಯಕ್ರಮ ಸಂಘಟಕರು ಇಂದಿನ ಕಂಪ್ಯೂಟರ್ ವ್ಯವಸ್ತೆಯ ಅನುಕೂಲವಾದ , ಮೊಬೈಲ್ / ಇ - ಮೇಲ್ ಗಳ ಡಾಟಾ ಬೇಸ್ ತಯಾರಿಸಿ ಒಂದೇ ಕ್ಲಿಕ್ನಿಂದ ಸಾವಿರಾರು ಜನರಿಗೆ ಸಂದೇಶ ಕಳಿಸುವ ವ್ಯವಸ್ತೆ ಮಾಡಿದರೆ , ಇನ್ನೂ ಹೆಚ್ಚಿನ ಸ್ಪಂದನೆ ಸಹಜವಾಗಿ ನಿರೀಕ್ಷಿಸಬಹುದೆಂದು ಹಿರಿಯರೂ , ಮಿತ್ರರೂ ಆದ ಜಿ ಜಿ ಹೆಗಡೆಯವರಲ್ಲಿ ವಿವರಿಸಿದ್ದೇನೆ.
ಹರಿಹರ ಭಟ್, ಬೆಂಗಳೂರು.
ಡಿಸೆಂಬರ್ ೦೬ , ೨೦೧೨.

No comments:
Post a Comment