ಸ೦ಮ್ಮಾನ ಕಾರ್ಯಕ್ರಮ ಡಿಸೆಂಬರ್ ೨೫ , ೨೦೧೨ .
"ನಮಗೆ ಈ ಗುರುಗಳ ಸ೦ಬ೦ಧ ಒದಗಿ ಬ೦ದಿದ್ದು ನಮ್ಮ ಸುಕೃತ ಫಲ. ನಮಗೆ ಸ೦ಮಾನವಲ್ಲ , ಇದು ಗುರು ಆಶೀರ್ವಾದ , ಪ್ರೇರಣೆಯಾಗಿದೆ , ಸೇವೆ ಮಾಡಿದ್ದೇವೆ , ಮಾಡುತ್ತಿದ್ದೇವೆ ಅಂತೆಯೇ ನಮ್ಮ ಸೇವೆ ಮುಂದುವರಿಯುತ್ತಿರುತ್ತದೆ." ಈ ರೀತಿ ವಿನೀತ ಭಾವದಿಂದ , ಭಾವನಾತ್ಮಕವಾಗಿ ನುಡಿದವರು
2011 -12 ರಲ್ಲಿ 1 ,454 ಕೋಟಿ ರೂಪಾಯಿ ವ್ಯವಹಾರ ಮಾಡಿದ, ಸರಕಾರಕ್ಕೆ ಸೂಕ್ತ ಟ್ಯಾಕ್ಸ್ ಗಳನ್ನೆಲ್ಲ ನೀಡಿದ ನ೦ತರ 259 ಕೋಟಿ ರೂಪಾಯಿ ಒಂದು ವರ್ಷದಲ್ಲಿ ಲಾಭ ಗಳಿಸಿದ , 31 ಮಾರ್ಚ್ 2012 ರ೦ದು ಮೂಲ ಬಂಡವಾಳ ಮಾರುಕಟ್ಟೆ ದರದಲ್ಲಿ 6 ,100 ಕೋಟಿ ಗೆeರಿಸಿದ ಇಮಾಮಿ ಲಿಮಿಟೆಡ್ ಕಂಪನಿಯ ರಾಧೆಶ್ಯಾಮ್ ಅಗರ್ವಾಲ್ ಮತ್ತು ರಾಧೆಶ್ಯಾಮ್ ಗೋಯೆಂಕಾ. ಈ ಮಹನೀಯರ ಕುರಿತು ಎರಡು ಮಾತು.
ರಾಧೆಶ್ಯಾಮ್ ಅಗರ್ವಾಲ್ ಇಮಾಮಿ ಕಂಪನಿಯ ಛೇರ್ಮನ್ ಮತ್ತು ರಾಧೆಶ್ಯಾಮ್ ಗೋಯೆಂಕಾ ಇದೇ ಕಂಪನಿಯ ಡೈರೆಕ್ಟರ್ . ಇಮಾಮಿ ಕಂಪನಿಯನ್ನು ಹುಟ್ಟು ಹಾಕಿದ ಈ ಪ್ರಮುಖರು ಇಂದು ದೇಶದಲ್ಲಿ ಹೆಸರುವಾಸಿ ಕರೋಡ್ಪತಿಗಳಾಗಿದ್ದಾರೆ. ದೇಶದಲ್ಲಿ ಕರೋಡ್ಪತಿಗಳು ತುಂಬಾ ಜನ ಇದ್ದಾರೆ. ಈ ಕರೋಡ್ಪತಿಗಳ ವಿಶೇಷವೆಂದರೆ ಇವರು ಆಧ್ಯಾತ್ಮಿಕ ಉನ್ನತಿ ಹೊಂದಿದ್ದಾರೆ. ಶ್ರೀ ಕೃಷ್ಣ ಗೋವರ್ಧನ ಗಿರಿಯನ್ನೆತ್ತಿದ ಎಂದು ನಾವು , ನೀವೆಲ್ಲ ಹೇಳಿದರೆ ಈ ಭಾವನಾ ಜೀವಿ ಕರೋಡಪತಿಗಳು ಆ ಗೋವರ್ಧನ ಗಿರಿಯ ಕಣ ಕಣ ಗಳನ್ನೂ ಶ್ರೀ ಕೃಷ್ಣ ನನ್ನೇ ಕಾಣುತ್ತಾರೆ , ಅಷ್ಟೇ ಅಲ್ಲದೆ ತಮ್ಮ ನುಡಿ ಆಲಿಸುವವರನ್ನು ಅದೇ ಪ್ರಪ೦ಚಕ್ಕೆ ಒಯ್ಯುತ್ತಾರೆ. ಭಾರತೀಯ ಕಂಪನಿ ಕಾನೂನಿನಲ್ಲಿ ವಾರ್ಷಿಕ ಶೇಕಡಾ ಲಾಭದ ಎರಡು ಅ೦ಶವನ್ನು ದಾನ ಧರ್ಮಗಳಿಗೆ ನೀಡುವಂತಹ ಅವಕಾಶವಿದೆ, ಈ ಅವಕಾಶವನ್ನು ಸದುಪಯೋಗಪಡಿಸಿ , ರಾಮಚಂದ್ರಾಪುರದ ಗುರುಗಳಂತಹ ಸತ್ಕಾರ್ಯದಲ್ಲಿ ತೊಡಗಿರುವವರ ಜೊತೆ ಕೈ ಜೋಡಿಸಲು ಅವಕಾಶ ಮಾಡುವಂತೆ ನಿಮ್ಮ ಪರಿಚಯದವರನ್ನು ಪ್ರಚೋದಿಸಿ ಎಂದು ಸಾರ್ವಜನಿಕ ಕರೆ ನೀಡುತ್ತಾರೆ.
ಈಚೆ ಆರೆಂಟು ವರ್ಷಗಳ ಹಿಂದೆ ತಾವೆಲ್ಲ ತು೦ಬ ಕಷ್ಟದ ದಿನಗಳಲ್ಲಿದ್ದಾಗ , ಈ ಗುರುಗಳ ಸಂಪರ್ಕದಲ್ಲಿ ಬಂದೆವು. ಗುರು ಕರುಣೆಯಿಂದ ಕಷ್ಟ ಗಳೆಲ್ಲ ಪರಿಹಾರವಾಗಿ ವೃದ್ಧಿಯ ಈ ದಿನಗಳನ್ನು ಕಾಣುತ್ತಿದ್ದೇವೆ. ನಮ್ಮ ಸೇವೆ ಸದಾ ಈ ಗುರುಗಳಿಗೆ ಮೀಸಲಿದೆ. ಗುರುಗಳೊಡನೆ ವಿನೋದವಾಗಿ ಮಾತನಾಡುವ ಸಮ್ಮ೦ದವನ್ನು ನಾವು ಹೊಂದಿದ್ದೇವೆ ಜೊತೆ ಜೊತೆಗೆ ಅದೇ ರೀತಿಯ ಗುರು - ಶಿಷ್ಯ ಆಧ್ಯಾತ್ಮಿಕ ನಂಟು ನಮ್ಮಲ್ಲಿದೆ , ಇದು ನಮ್ಮ ಭಾಗ್ಯ ಎಂದು ಯಾವುದೇ ಹಮ್ಮು - ಬಿಮ್ಮು ಗಳಿಲ್ಲದೆ ಸರಳವಾಗಿ , ಸಹಜವಾಗಿ, ಕಣ್ಣಾಲಿಗಳನ್ನುತುಂಬಿಕೊಂಡು ನುಡಿ ನಮನಗಳನ್ನು ಸಲ್ಲಿಸಿದ ಈ ಸಂದರ್ಭಕ್ಕೆ ಸಾಕ್ಷಿಯಾದವರು ತುಮಕೂರ್ ಯೂನಿವರ್ಸಿಟಿ ವೈಸ್ ಚಾನ್ಸಲರ್ ಡಾ.ಎಸ್.ಸಿ .ಶರ್ಮಾ ಮತ್ತು ಕರ್ನಾಟಕ ಸಂಸ್ಕೃತ ಯೂನಿವರ್ಸಿಟಿ ವೈಸ್ ಚಾನ್ಸಲರ್ ಶ್ರೀ ಮಲ್ಲೇಪುರಂ ವೆಂಕಟೇಶ್.
ದಿನಾ೦ಕ 25.12.2012 ರಂದು ಈ ಕಾರ್ಯಕ್ರಮ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ , ಶ್ರೀ ಗುರುಗಳ ಆಶಿeರ್ವಚನದೊಂದಿಗೆ ಸಂಪನ್ನಗೊಂಡಿತು.
ಹರಿಹರ ಭಟ್, ಬೆಂಗಳೂರು.
ಶಿಕ್ಷಕ , ಚಿಂತಕ , ವಿಮರ್ಶಕ, ಫೇಸ್ ಬುಕ್ ಬರಹಗಾರ.
December 26 , 2012.
No comments:
Post a Comment