Sunday, December 16, 2012

About Modi , Anantkumar.


ಓದಿ ,  ನಿಮ್ಮ ಪ್ರತಿಕ್ರಿಯೆ ನೀಡಿ:

______________________________________________________________


ಮೋದಿ ವರದಿ ಓದುತ್ತಿದ್ದೇನೆ. ಒಂದು ವಿಚಾರ . ಮೋದಿ ಯಾವುದೇ ವೋಟ್ ಬ್ಯಾಂಕ್ ಸಮುದಾಯಕ್ಕೆ ಸೇರಿದವರಲ್ಲ. ಆದರೂ ಗೆಲ್ಲುವ ಕುದುರೆಯಾಗಿದ್ದಾರೆ. ಕೇವಲ ಅಧಿಕಾರವೊಂದೆ ಅವರನ್ನು ಈ ಹಂತಕ್ಕೆ   ತಂದು ನಿಲ್ಲಿಸಿದೆ ಅನ್ನುವಂತಿಲ್ಲ. ಸಿಕ್ಕ ಅವಕಾಶಗಳನ್ನು ಬಳಸಿ ಎಲ್ಲೆಡೆ ವಿಜಯಿಯಾಗುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ ಆಗಲೇ ಅಮೆರಿಕಾದಿಂದ ವಾಪಸ್ಸಾದ ಉದ್ಯಮಿಯೊಬ್ಬರನ್ನು , ಭಾವಿ ಮುಖ್ಯಮಂತ್ರಿಯನ್ನಾಗಿಸಿ   , ಪ್ರಧಾನಮಂತ್ರಿ ಗದ್ದುಗೆಯತ್ತ ನೋಟವಿಟ್ಟಿದ್ದಾರೆ.


ಸಹಜವಾಗಿ ನಾವು ಕರ್ನಾಟಕದವರು ಈ ರೀತಿ ಚಟುವಟಿಕೆಗಳನ್ನು ಬೆಂಗಳೂರಿನ ಅನಂತಕುಮಾರರವರಿಂದ ನಿರೀಕ್ಷಿಸುತ್ತೇವೆ. ಮುಂದಾಳತ್ವದ ಗುಣಗಳಿಗೆ ಕೊರತೆಯಿಲ್ಲದ ಅನಂತಕುಮಾರರವರಲ್ಲಿ ಬೇಕಾದಷ್ಟು , ಸಾಕಾಗುವಸ್ಟು ಧನಲಕ್ಷ್ಮಿ ಸೇರಿದ್ದಾಳೆ.  ವಿಷಾದದ ವಿಷಯ , ಚುನಾವಣಾ ಸಮಯದಲ್ಲಿ ಕ್ಷೇತ್ರದಲ್ಲಿ ಗೆಲ್ಲಲು ಸಾಕಷ್ಟು ತಿಣುಕಾಡಬೇಕಾಯಿತು ನಮ್ಮ ಅನಂತಕುಮಾರರು.


ಮೋದಿಯಂತೆ ನಮ್ಮ ಅನಂತಕುಮಾರರವರು ವೋಟ್ ಬ್ಯಾಂಕ್ ಅಲ್ಲದ / ಆಗದ ಸಮುದಾಯಕ್ಕೆ ಸೇರಿದವರು. ಆದರೆ ಮೋದಿಯಂತೆ ಮೈ ಚಳಿ ಬಿಟ್ಟು ರಾಜಕೀಯ ಮಾಡುತ್ತಿಲ್ಲವೇ ಅನಿಸುತ್ತದೆ. ಒಂದು ರೀತಿ ಅಕ್ಕ ಬರಬೇಕು , ಅಕ್ಕಿ ಖರ್ಚಾಗಬಾರದು ಎಂಬಂತಹ ಮನಸ್ತಿತಿ ಹೊಂದಿದ್ದಾರೆಯೇ ಅನ್ನಿಸುವದಿಲ್ಲವೇ ?  


ಈಗ ಇರುವದು ಸುಸಮಯ. ಆಚೆ ಕೆ.ಜೆ.ಪಿ ಎಂದು ಒಂದು ವಿಘ್ನ  ಪರಿಹಾರವಾಗಿದೆ.  ಈಗ ಮಾಡು ಇಲ್ಲ ಓಡು ಎನ್ನುವಂತೆ ಅನಂತಕುಮಾರ ಕಾರ್ಯಪ್ರವತ್ತವಾಗಬೇಕಾಗಿದೆ. ಒಬ್ಬ ಸಜ್ಜನ ರಾಜಕೀಯ ಮುಖಂಡನ ಕೈಯಲ್ಲಿ ಅಧಿಕಾರ ಸಿಕ್ಕರೆ ಜನಸಾಮಾನ್ಯನಿಗೆ ಒಳಿತಾಗುವಂತಹ   ಹತ್ತಾರು ಕಾರ್ಯಕ್ರಮಗಳಾದಾವು , ಕಸದಂತಹ ಚಿಲ್ಲರೆ ಸಮಸ್ಯೆಗಳು ಬೆಟ್ಟದಂತಾಗದೆ , ಹತ್ತಾರು ವರ್ಷಗಳಲ್ಲೂ ನೆನಪಿನಲ್ಲುಳಿಯುವಂತಹ ಆಡಳಿತ ಕೊಟ್ಟಾರು ಎಂಬ ಚಿಕ್ಕದೊಂದು ಆಸೆ.


ಹರಿಹರ ಭಟ್ , ಬೆಂಗಳೂರು.
ಶಿಕ್ಷಕ , ಚಿಂತಕ , ವಿಮರ್ಶಕ , ಫೇಸ್ ಬುಕ್ ಬರಹಗಾರ.
ಡಿಸೆಂಬರ್ ೧೭ , ೨೦೧೨.

No comments:

Post a Comment