ಶತಾವಧಾನಿ Dr. Ganesh ಏಕೆ ನಮಗೆ ಅಸ್ಟು ಆಪ್ತವಾಗುತ್ತಾರೆ ? ಅವರ ಅವಧಾನಗಳಿಗೇಕೆ ಅಸ್ಟೊಂದು ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರುತ್ತಾರೆ ? ಕಂಡು ಕೇಳರಿಯದ , ಸತತ ಮೂರೂ ದಿನಗಳಲ್ಲಿ ಅವ್ಯಾಹತವಾಗಿ ಇಪ್ಪತ್ತು ಘಂಟೆಗಳ ಕಾಲ ನಡೆದ ಶತಾವಧಾನಕ್ಕೆeಕೆ ದಿನದಿಂದ ದಿನಕ್ಕೆ ಆಗಮಿಸುವವರ ಸಂಖ್ಯೆ ಜಾಸ್ತಿಯಾಗಿತ್ತು ? ಪ್ರೆಕ್ಷಕರೆeಕೆ ಆ ಪರಿ ಚಪ್ಪಾಳೆ ತಟ್ಟಿ , ತಟ್ಟಿ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದರು ? ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಎಲ್ಲರು ಎದ್ದು ನಿಂತು ( standing ovation ) ಏಕೆ ಗೌರವ ಸೂಚಿಸುತ್ತಿದ್ದರು ? ಈ ಎಲ್ಲ ವಿಚಾರವಾಗಿ ಘಂಬಿeರವಾಗಿ ಚಿಂತಿಸುವ ಅವಶ್ಯಕತೆ ಇದೆ.
ಗಣೇಶ್ ರವರು ಬಹು ಭಾಷಾ ಪಂಡಿತರು. ನಿರರ್ಗಳವಾಗಿ ಇಂಗ್ಲಿಶ್ , ಸಂಸ್ಕ್ರತ , ಕನ್ನಡ , ತೆಲಗು , ತಮಿಳು , ಉರ್ದು ಭಾಷೆಗಳಲ್ಲಿ ಮಾತನಾಡಬಲ್ಲರು. ಸಲಿಲತವಾಗಿ ಓದಿ ಈ ಭಾಷೆಗಳಲ್ಲಿರುವ ತತ್ವ , ಸತ್ವಗಳನ್ನು ಅರಗಿಸಕೊಳ್ಳಬಲ್ಲವರು. ಹಿಂದೂ , ಕ್ರಿಸ್ತ , ಮುಸಲ್ಮಾನ ಧರ್ಮ ಗ್ರಂಥಗಳಲ್ಲಿ ಅಡಕವಾಗಿರುವ ಸತ್ಯಗಳನ್ನೆಲ್ಲ ಮಥಿಸಿ , ಶ್ರೇಷ್ಟ ಜ್ಞಾನವನ್ನು ತಮ್ಮದಾಗಿಸಿಕೊಂಡವರು. ವಿಚಾರದಂತೆ ಆಚಾರವುಳ್ಳವರು. ಆಚಾರದಿಂದಲೂ , ವಿಚಾರದಿಂದಲೂ ಈ ಭುವಿಯ ಸಕಲರನ್ನು ಏಕೋ ಭಾವದಿಂದ ಕಾಣುವವರು. ವಿಚಾರದಿಂದಲೂ , ಆಚಾರದಿಂದಲೂ ದೈವ ಮೆಚ್ಚುವ ಬ್ರಹ್ಮಚಾರೀ ಜೀವನ ಸಾಗಿಸುತ್ತಿರುವವರೆಂದು ಅವರ ನಡೆ , ನುಡಿ , ಮುಖ ಕಮಲದಲ್ಲಿ ಮಿನುಗುವ ಕಾಂತಿ ಸ್ಪಸ್ಟಪಡಿಸುತ್ತದೆ .
ಹಾಗಾದರೆ , ಗಣೇಶರವರಂತಹ ಮೇಧಾವಿ , ಚುರುಕುತನದ ವ್ಯಕ್ತಿಗಳು ಅಲ್ಲಲ್ಲಿ ನಮ್ಮ ಕಣ್ಣಿಗೆ ಕಾಣ ಸಿಗುತ್ತಾರೆ . ಆದರೆ ಜನರೇಕೆ ಆ ಮಹಾನೀಯರುಗಳನ್ನು ಮನ್ಹಪುರ್ವಕವಾಗಿ ಒಪ್ಪಿಕೊಳ್ಳುವದಿಲ್ಲ, ಆರಾಧಿಸಬೇಕಾದಂತಹ ವಿದ್ಯಾಸಂಪನ್ನರಾದರೂ ಜನರೇಕೆ ಬಹುಸಂಕ್ಯೆಯಲ್ಲಿ ಆ ರೀತಿಯ ಮಹನೀಯರುಗಳನ್ನು ಒಪ್ಪಿಕೊಳ್ಳುವದಿಲ್ಲ ?ಆರಾಧಿಸುವದಿಲ್ಲ ? ಏಕೆ ? ಯೋಚಿಸಬೇಕಾದ ವಿಷಯ.
ನಿಗರ್ವಿಯಾದ ಗಣೇಶರವರು ಎಲ್ಲಿಯೂ ಒಮ್ಮೆಯೂ ಇದು ಮಡಿ ಇದು ಮೈಲಿಗೆ , ಸ್ವೀಕಾರಾರ್ಹವಲ್ಲ ಎಂಬ ಭಾವನೆಯನ್ನೇ ವ್ಯಕ್ತಪಡಿಸುವದಿಲ್ಲ. " ಏನೋ ಶಿಷ್ಯಾ , ಸೊಂಟದ ವಿಷ್ಯಾ" ಎಂಬ ಚಿತ್ರಗೀತೆಯ ಪ್ರಸ್ತಾಪಿಸುತ್ತ , ಪಂಡಿತರಿಗೂ ಇನ್ನೂ ಪೂರ್ಣಪ್ರಮಾಣದಲ್ಲಿ ನಿಲುಕಿರದ ವೇದ , ವೇದಾಂತ , ಉಪನಿಷತ್ , ಭಗವದ್ಗೀತೆ ಗಳತ್ತ ಜನರನ್ನು ಕೊಂಡೊಯ್ಯುತ್ತಾರೆ. ಎಂ . ಜಿ . ರೋಡ , ಬ್ರಿಗೆಡ್ ರೋಡ ಸುದ್ದಿ ಹೇಳುತ್ತಾ ಪ್ರೇಕ್ಷಕರ ಆಸಕ್ತಿ ಕೆರಳಿಸಿ , ವೈದಿಕ ಕಾಲಕ್ಕೆ ಹಾಗೂ ಸಂಸ್ಕ್ರತ ವಾನ್ಗ್ಮಯತೆ , ಹಳಗನ್ನಡದ ಛಂದಸ್ಸು , ಅಲಂಕಾರ ಗಳತ್ತ ಪ್ರೇಕ್ಷಕ ವ್ರನ್ದವನ್ನು ಕರೆದೊಯ್ಯುತ್ತಾರೆ. ಪ್ರಚ್ಚಕರು , ಇಂದಿನ ದಿನಗಳ ಯುವ ಜನಾಂಗ , ಯೌವನ ದಾಟಿಯೂ ಯೋನಿ ಸುಖದ ಸಖ್ಯದಿಂದ ಹೊರಬರಲಾರದವರ ಆಸಕ್ತಿ ಕೆರಳಿಸುವಂತಹ -
" ಕೈಯೋಳ್ ಪಿಡಿದು ಸ್ತನಗಳೆರಡರ , ಕಚ್ಚಿದನು ಸೊಂಟಕ್ಕೆ ತಾನಾಗ "
ಎಂಬಂತಹ ಸಮಸ್ಯಾ ಪೂರ್ತಿ ಪ್ರಶ್ನೆಯನ್ನು ಶಾಂತ ಭಾವದಿಂದ ಈ ಬ್ರಹ್ಮಚಾರಿ ಸ್ವೀಕರಿಸಿ , ಸಮಸ್ಯಾ ಪರಿಹಾರ ನೀಡುವಾಗ ವಿದ್ವನ್ನಮಣಿಗಳೆಲ್ಲಾ ತಲೆದೂಗಿ, ಕಿವಿಗಡಚಿಕ್ಕುವಂತೆ ಚಪ್ಪಾಳೆ ತಟ್ಟುವ ಪರಿಯನ್ನು ನೋಡಿಯೇ ಆನಂದಿಸಬೇಕು. ಈ ರೀತಿ ಪ್ರಚ್ಚಕರ ( ಪ್ರಶ್ನೆ ಕೇಳುವವರು ) ಪ್ರಶ್ನೆಗಳು ಮನದಾಲ್ಹಾಹಕೆ ದಾರಿಯಾದರೆ , ಅವಧಾನಿಗಳ ಪದ್ಯ ರಚನೆಗಳು ಬೌದ್ಹಿಕ ಕಸರತ್ತಿಗೆ ಸಾಕ್ಷಿಯಾಗುತ್ತಿದ್ದವು. ಈಗಿನ ದಿನನಿತ್ಯದ ಜೀವನ ಸಮಸ್ಯೆಗಳಲ್ಲೊಂದಾದ , ತಂಬಾಕು ಚಟದ ಅವತಾರವನ್ನು ತೋರ್ಪಡಿಸುವಂತೆ ಪ್ರಚ್ಚಕರೋರ್ವರು -
ತಂಬಾಕು ಅಗಿದು ಅಗಿದು ಚಟ ಬಿಡಲಾರದವನೊಬ್ಬ, ಪ್ರಯತ್ನಪೂರ್ವಕವಾಗಿ ಚಟ ಬಿಡತೊಡಗಿದರೆ ಸಾಮಾನ್ಯವಾಗಿ ಬರುವ ತಲೆಸುತ್ತುವಿಕೆಯ ಕುರಿತು ಒಂದು ಆಶುಕವಿತೆಯನ್ನು ರಚಿಸುವಂತೆ ಅವಧಾನಿಗಳನ್ನು ಕೇಳಿದಾಗ ,
" ಚತುರ್ಮುಖ ಬ್ರಹ್ಮ್ಹದೇವನ ಸತಿಯರು ಅಸುಹೆಯಿಂದ ಬೀಡಿ , ಸಿಗರೇಟು , ಗುಟ್ಕಾ , ತಂಬಾಕನ್ನು ನಾಲ್ಕು ಬಾಯೋಳಗಿಟ್ಟು , ಬ್ರಹ್ಮದೇವನಿಗೆ ತಲೆಸುತ್ತುಬಂದು , ಆ ಸಮಯದಲ್ಲಿ ನಮ್ಮ ನಿಮ್ಮೆಲ್ಲರ ಹಣೆ ಬರಹ ಬರೆದ ಬ್ರಹ್ಮ ದೇವನಿಂದಾಗಿ ನಾವೆಲ್ಲಾ ಇಂದು , ಹಣೆ ಬರಹ ಸರಿಯಿಲ್ಲ ಎಂದು ಒದ್ದಾಡುತ್ತಿದ್ದೇವೆ "
ಎಂಬುದಾಗಿ ಜಗತ್ತಿನ ಎಲ್ಲ ಹಾಸ್ಯ ಕವಿಗಳನ್ನೂ ಮೀರಿಸುವ ರೀತಿಯಲ್ಲಿ ಆಶುಕವಿತೆ ರಚಿಸಿದರು.
ಯೋಚಿಸಿ . ಈ ರೀತಿ ಶತಾವಧಾನದ ಅವಧಾನಿಯಾಗುವುದು ಎಂದರೆ ಜಗತ್ತಿನ ಎಲ್ಲ ಬದಲಾವಣೆಗಳ ಅರಿವು ಇರಬೇಕು. ಕೇವಲ ವರ್ತಮಾನದ ಅರಿವಿದ್ದರೆ ಸಾಲದು ಭೂತಕಾಲ , ಭಾವಿಶತ್ಕಾಲಗಳ ಅರಿವು , ಆಳ ತಿಳಿದಿರಬೇಕು , ತಿಳಿದಿದ್ದರೆ ಸಾಲದು , ಕೇಳುವ ಪ್ರಚ್ಚಕರು , ಪ್ರಭುದ್ದ ಸಭಿಕರು ತಲೆದೂಗುವನ್ತಿರಬೆಕು . ಆಸಕ್ತರ ಆಸಕ್ತಿ ಕುಂದದಂತೆ ಕಾರ್ಯಕ್ರಮ ಮುನ್ನಡೆಸುವ ಜವಾಬ್ದಾರಿಯೂ ಅವಧಾನಿಯದೆ ಆಗಿದೆ. ಒಂದೆರಡು ಘಂಟೆಗಳ ಕಾರ್ಯಕ್ರಮವಲ್ಲ. ಮೊದಲನೇ ದಿನ ಮೊದಲನೇ ಸುತ್ತಿನಲ್ಲಿ ಹೇಳಿದ್ದು , ಕೇಳಿದ್ದು ನೆನಪಿನಲ್ಲಿಟ್ಟು , ಮುಂದಿನ ಹಂತದಲ್ಲಿ ಮುಂದಿನ ಸಾಲನ್ನು ಹೇಳಬೇಕು. ಸಭಿಕರು ಮರೆತರೆ ನಡೆದೀತು ! ಯಾಕೆಂದರೆ ಹಿಂದೆ ಹೇಳಿದ್ದನ್ನು ನೆನಪಿಸಿ ಮುಂದೆ ಸಾಗುವದೂ ಅವಧಾನಿಯದೆe ಕೆಲಸ. ಶತಾವಧಾನದಲ್ಲಿ ನೂರು ಜನ ಪ್ರಚ್ಚಕರು ಕೇಳುವ ಸಮಸ್ಯೆ , ಪ್ರಶ್ನೆಗಳನ್ನು ನೆನಪಿನಲ್ಲಿಟ್ಟು , ಸಮಾಧಾನಕರವಾಗಿ ವ್ಯಾಕರಣ ಶಾಸ್ತ್ರಕ್ಕೆಲ್ಲೂ ಕುಂದು ಬರದಂತೆ , ಅವಧಾನಿ ಮುನ್ನಡೆಯಬೇಕು. ಅವಧಾನಿಯು ಈ ಎಲ್ಲ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ , ತನ್ನ ವಿದ್ವತ್ತನ್ನೇ ಪಣಕ್ಕಿಟ್ಟು ಯೋಚಿಸುವಾಗ , ಅವಧಾನಿಯ ಸ್ಮರಣ ಶಕ್ತಿ ಕುಂದಿಸಲು , ಅವಧಾನಿಯ ದಾರಿ ತಪ್ಪಿಸಲು , ಅವಧಾನಿ ಕೊeಪಗೊಳ್ಳಲು , ಕೋಪದ ತಾಪದಲ್ಲಿ ಸಿಲುಕಿ ವಿಲ ವಿಲ ಒದ್ದಾಡುವಂತೆ , ಇಲ್ಲ ಸಭೆ ಬಿಟ್ಟು ಓಡೋಡುವಂತೆ ಮಾಡಲು , ಅವಧಾನಿಯ ಎಲ್ಲ ಸಮಸ್ಯೆಗಳಿಗೆ ಕಳಸ ಪ್ರಾಯದಂತಹ ಸಮಸ್ಯೆ ಸ್ರಸ್ಟಿಸಲು , "ಅಪ್ರಸ್ತುತ ಪ್ರಸಂಗಿ "ಎಂಬ ನಾಮಧೇಯ ಹೊತ್ತ ಬಲಿತ ಮೆದುಳೊ0ದು ಕಾಯುತ್ತಿರುತ್ತದೆ , ಕಾಡುತ್ತಿರುತ್ತದೆ.
ಈ ಶತಾವಧಾನದಲ್ಲಿ ಪ್ರಚ್ಚಕರು ಸಮಸ್ಯಾಪೂರಣ , ದತ್ತಪದೀ , ಆಶುಕವಿತ್ವ , ಕಾವ್ಯವಾಚನ , ಸಂಖ್ಯಾಬಂಧ , ಚಿತ್ರ ಕವಿತೆ , ಅಪ್ರಸ್ತುತ ಪ್ರಸಂಗ ವಿಭಾಗಗಳಲ್ಲಿದ್ದರು. ನಾಲ್ಕು ಪಾದಗಳಲ್ಲಿರುವ ಪದ್ಯದ ಒಂದು ಪಾದವನ್ನು ಸಮಸ್ಯೆಯಾಗಿ ಕೊಟ್ಟಾಗ ಅದು ಅಶ್ಲೀಲವಾಗಿಯೋ , ನಿರರ್ಥಕವಾಗಿಯೋ , ಅಸಂಭಾವ್ಯವಾಗಿಯೋ ಅನಿಸೀತು ಆದರೆ ಅವಧಾನಿಗಳು ಆ ಪಾದಕ್ಕೆ ಇನ್ನೂ ಮೂರು ಪಾದಗಳನ್ನು ರಚಿಸಿ ಓದಿದಾಗ ಅದು ಅರ್ಥಪೂರ್ಣ ವಾಗಿರುತ್ತದೆ . ಈ ಪಾದಗಳ ಜೋಡಣೆಯಲ್ಲಿ ಗಣ ಛಂದಸ್ಸು ಸರಿಯಾಗಿ ವ್ಯಾಕರಣ ರೀತ್ಯಾ ಯಾವುದೇ ಅಸಂಬದ್ದತೆ ಇರುವಂತಿಲ್ಲ . ಉದಾಹರಣೆಯಾಗಿ ಹೇಳುವದಾದರೆ ಪ್ರಚ್ಚಕರು
"ಕುಚಮಂ ಕಚ್ಚುತಲಿರ್ಪ ಯತಿಯಂ ಕಂಡೆ " ಎಂದರೆ ಅವಧಾನಿಗಳು
" ಅಚಲ ಮನಸ್ಕಂ ನಿಸ್ಟಾ , ಖಚಿತಾತ್ಮಂ ತಾನೆನಲ್ಕೆ ನಿರ್ಜನವನದೊಳ್ /
ರುಚಿರರಸಾರ್ದ್ರಸುಪಕ್ವ ಲಿ -
ಕುಚಮಂ ಕಚ್ಚುತಲಿರ್ಪ ಯತಿಯಂ ಕಂಡೆ "
ಎಂದು ತಮ್ಮ ಜ್ಞಾನಭಂಡಾರವನ್ನು ಅಗೆದಗೆದು ಪ್ರೇಕ್ಷಕರಿಗೆ ರಂಜನೆ ನೀಡುತ್ತಾರೆ, ಜ್ನಾನದಾಹಿಗಳಿಗೆ ಜ್ನಾನನೀಡುತ್ತಾರೆ , ಜ್ಞಾನದ ದುರಹಂಕಾರಿಗಳನ್ನು ನಿಶಸ್ತ್ರಗೊಳಿಸುತ್ತಾರೆ. ( ಲಿಕುಚ ಎಂದರೆ ಹೆಬ್ಬಲಸಿನ ಮರ )
ಇನ್ನೊಂದು ಸಮಸ್ಯಾ ಪುರಾಣ ಓದಿ. ಐಫೆಲ್ನಿರ್ಮಿತಿ , ತಾಜ್ಮಹಲ್ , ಕುತುಬ್ಮಿನಾರ್ ಬೆಂಗಳುರೊಳ್ ಗಡಾ ಎಂಬ ಸಮಸ್ಯೆಗೆ ಹಿಂದೆ ಇನ್ನೊಂದು ಅವಧಾನದಲ್ಲಿ ಗಣೇಶ್ರವರು ನೀಡಿದ ಸಮಸ್ಯಾ ಪರಿಹಾರ :
ಸಾಫಲ್ಯಂ ಗಡ ಕಣ್ಗಳಿರ್ಪುದಕೆನಲ್ ಕ್ರಿಸ್ಮಸ್ ಮಹಾಪರ್ವಕೆಂ -
ದಾ ಫಾಲಾಕ್ಷ ಜಟಾ ಕಿರೀಟ ಶಶಿಸಂಕಾಶಂ ಸುಧಾಸಾಂದ್ರ ಶೋ- /
ಭಾಷಾಣಿ ಪ್ಲುತಮಲ್ತೆ ನೀಲಗಿರಿಯಾ ಖಾದ್ಯಂಗಳಾ ಕಾರದಿಂ -
ಧೈಫೆಲ್ನಿರ್ಮಿತಿ , ತಾಜಮಹಲ್ , ಕುತುಬುಮೀನಾರ್ ಬೆಂಗಳುರೊಳ್ ಗಡಾ //
ಅಂದರೆ ಕ್ರಿಸ್ಮಸ್ ವೇಳೆಯಲ್ಲಿ ಬಹುಜನರು ವಿeಕ್ಷಿಸುವ ನಿಲ್ಗಿರಿಸ್ ಕಂಪನಿಯವರ ಕೇಕ್ ಪ್ರದರ್ಶನ ಕುರಿತು ಈ ಸಮಸ್ಯಾ ಪೂರ್ತಿ ಪದ್ಯ ರಚನೆ. ಇದೆe ರೀತಿ ಈ ಶತಾವಧಾನ ದಲ್ಲೂ
೧) "ತೊಡೆ ನಡುವಿಹ ಬೀಜ ಕೊಡಹಿ ಬಾಯ್ಗಿಡೆ ಚೆನ್ನಂ "
೨) "ಕುಡಿತ ಮಿರದ ಬಾಳು ಸೊಗವೇ "
೩) "ಭುಮಿಜೆಗಾರಾಮನೆ ಪತಿನಾಲ್ಕನೆಯಾತಂ "
೪) " ರತಿಕೆeಳಿಯೋಳು ಮೈಮರೆತು ಮನೆಯವರು ಧನ್ಯರಾದರ್ "
೫) "ಖಗವಲ್ಲದಹುದೆ ಸ್ತನಿಕುಲಂ ನರಂ ನಗೆಗೆeಡಿಗಲ್ಲದೇಂ ಜಗಕೀಮಹಾದ್ಭುತಂ "
ಮುಂತಾದ ಸಮಸ್ಯಾಪೂರ್ತಿ ಮಾಡಿ , ಗಣೇಶ್ ಅವಧಾನಿಗಳು ತಮ್ಮ ಜ್ಞಾನ ಶ್ರೆeಸ್ಟತೆ ಮೆರೆದರು.
ಇನ್ನು ದತ್ತಪದಿ . ಪ್ರಚ್ಚಕನು ಒಂದು ನಿರ್ಧಿಸ್ಟ ವಸ್ತುವನ್ನು ಮತ್ತು ಅದರ ಭಾವವನ್ನು ನೀಡಿ ನಾಲ್ಕೂ ಪಾದಗಳಲ್ಲಿ ನಿರ್ಧರಿಸಿದ ಒಂದೊಂದು ಶಬ್ದಗಳು ಬರುವಂತೆ , ಸುತ್ತಿಗೊಂದು ಪಾದದಂತೆ ಕವನ ರಚಿಸಬೇಕು. ಪ್ರಚ್ಚಕನು ಯಾವುದೇ ಭಾಷೆಯ ಯಾವುದೇ ಶಬ್ದಗಳನ್ನು , ಯಾವುದೇ ಶೀಲ - ಅಶ್ಲೀಲ , ಸಮಂಜಸ - ಅಸಮಂಜಸ , ಪರಿವರ್ತಿತ - ಪುನರಾವರ್ತಿತ ಮುಂತಾದ ಯಾವುದೇ ಕಟ್ಟು ಪಾಡುಗಳಿಲ್ಲದೆ ಕೇಳಬಹುದು. ನೋಡಿ ಒಮ್ಮೆ ಕೇಳಿದ ದತ್ತಪದಿಯ ಮಜಾ :
ಸೈನ್ , ಕೊಸೈನ್ , ಟ್ಯಾನ್ , ಕಾಟ್ ಶಬ್ದಗಳನ್ನು ಬಳಸಿ ಕಂದ ಪದ್ಯದಲ್ಲಿ ಯುದ್ದದ ವರ್ಣನೆ :
ರಿಪುಸೈನ್ಯಂಗಳ್ ಕಲೆಯಲ್
ವಿಪುಲಂ ಮ್ರತಿ , ಆರ ದಾಹಕ್ಕೋ ಸೈನ್ಯಸಮಿ-/
ತ್ತಪನಂ ವೈಕಟ್ಯಾ0ತರ-
ಮುಪಮಿಸಲಿಲ್ಲಂ ಸೊಗಕ್ಕೆ ಶನಿಕಾಟಮಿದೆe //
ಗ್ರಹಿಸಿ , ಮೊದಲನೇ ಪಾದದಲ್ಲಿ ಸೈನ್ , ಎರಡನೇ ಪಾದದಲಿ ಕೊಸೈನ್ , ಮೂರನೆ ಪಾದದಲ್ಲಿ ಟ್ಯಾನ್ ಮತ್ತು ನಾಲ್ಕನೇ ಪಾದದಲ್ಲಿ ಕಾಟ್ ಶಬ್ದಗಳು ಬಂದಿವೆ.
ಇದೆ ರೀತಿ ಅವಧಾನಿಗಳು ಈ ಶತಾವಧಾನದಲ್ಲೂ ,
೧) ರಾಗಿ , ಭತ್ತ , ಕಂಬು , ಹಾರಕ ಶಬ್ದಗಳನ್ನು ಬಳಸಿ ಕಿರಾತಾರ್ಜುನ ಪ್ರಸಂಗ
೨) ಸ್ಟಾರ್ , ಪೆಗ್ , ಕಸಬ್ , ನಿತ್ಯಾನಂದ ಶಬ್ದಗಳನ್ನು ಬಳಸಿ ಸೊಬಗಿನ ಸೋನೆಯಲ್ಲಿ ಗಣೇಶ ದೇವರ ಪ್ರಾರ್ಥನೆ
೩) ಹೈದರ್ , ಖಾದರ್ , ಕರೀಂ , ಮಹಮದ್ ಶಬ್ದಗಳನ್ನು ಬಳಸಿ ದೇವಿ ಸ್ತುತಿ
೪) ವಾನ , ಅಮೇ , ಯಾಮೂರ್ ( ತುರ್ಕಿ ಭಾಷೆಯ ಶಬ್ದ ) , ರಿಯನ್ ( ಆಫ್ರಿಕಾ ಭಾಷೆಯ ಶಬ್ದ ) ಬಳಸಿ ಪದ್ಯ
೫ ) ಕಡು , ಬಡವ , ಪರಮ , ಸುಖಿ ಶಬ್ದಗಳನ್ನು ಬಳಸಿ ಕಂದ ಪದ್ಯ
೬) ಸಾಗು , ಚಪಾತಿ , ಪೂರಿ , ರಸಂ ಶಬ್ದಗಳನ್ನು ಬಳಸಿ ಉತ್ಪಲ ಮಾಲಾ ವ್ರತ್ತದಲ್ಲಿ
ಹೀಗೆ ಸಾಗಿತು ದತ್ತಪದಿಯ ಚಮತ್ಕಾರ , ಶತಾವಧಾನಿಗಳ ನಾಲಿಗೆಯಲ್ಲಿ ಸರಸ್ವತಿಯ ಸುಲಲಿತ ನಾಟ್ಯ ಲೀಲೆ.
ಮುಂದೆ ಇನ್ನೊಂದು ಅಂದರೆ ಆಶುಕವಿತೆ ರಚನೆ. ಶಾರ್ದೂಲವಿಕ್ರೀಡಿತ , ಸೀಸಪದ್ಯ , ರತ್ಹೊeದ್ಧಥ , ಕಂದಪದ್ಯ , ಚಂಪಕಮಾಲಾ ವೃತ್ತ ಗಳಲ್ಲಿ ಯಾವುದೊಂದನ್ನು ಪ್ರಚ್ಚಕ ಆಯ್ದು ಪದ್ಯಕ್ಕೊಂದು ವಿಷಯ ನೀಡುತ್ತಾನೆ . ಅವಧಾನಿ ಆವಿಶಯವನ್ನೋಳಗೋ0ಡು , ಆ ವೃತ್ತ ದಲ್ಲಿ ಕವಿತೆ ರಚಿಸಬೇಕು. ಈ ಶತಾವಧಾನದಲ್ಲಿ " ಸೋರುತಿಹ ನಲ್ಲಿ ( ಕೊಳಾಯಿ ) ಗೆ ಬಟ್ಟೆ ಸುತ್ತಿದ ವಿಷಯ ಕುರಿತು ರಚಿಸಿದ ಕಂದ ಪದ್ಯ :
ಸೋರುವ ನಲ್ಲಿಗೆ ಬಟ್ಟೆಯ ಚೂರೆ
ಕಾರಿಪುದಂತೆ ಗಾಂಧಾರಿಯನ್ತೊಲ್
ನೂರು ಜನ ಮಕ್ಕಳಿರಲ್ , ತೋರದ ಕಂಗಳಿಗೆ
ಕಟ್ಟೆ ಬಟ್ಟೆಯ ನೋಡಲ್
ಕಾರ್ಪೋರೇಶನ್ ನವರು ಗಿಡ ನೆಟ್ಟು ಬೇಲಿ ಹಾಕಿ , ಯಾರದೋ ಹೆಸರು ಬರೆದು , ನೀರೆರೆಯದೆ ಆ ಗಿಡ ಸೊರಗಿದೆ ಕುರಿತು , ಕಂದ ಪದ್ಯ :
ಪೆಸರ್ವೆತ್ತೋಡ ನೀ ನೆಲದೊಳ್ ಸಸಿಗೆಲ್ಲಿಯ ಬಾಳ್ಪೆ
ಬಾಡಿ ಬಳಲುವದೆe ಫಲಂ
ಸುಸಿಲೆeನ್ ನುಡಿದೊಡೆ ಪಿರಿಯರ ಪೆಸರಂ
ರಸಮೊಸರಿ ಬಂದು ಸಂತೈಸುವದೆಮ್ ?
ಅದೇ ರೀತಿ ಕಾವ್ಯವಾಚನ , ತಮ್ಮ ರಾಗ , ತಾಳ , ಲಯಗಳಿಂದ , ಶ್ರುತಿ , ಸ್ವರಬದ್ಧವಾಗಿ ಹಾಡುವ ಕವನ -ಕಾವ್ಯ. ದ್ವನಿ ಸ್ವಾರಸ್ಯದಿಂದೊಡಗೂಡಿದ ವ್ಯಾಸ , ವಾಲ್ಮೀಕಿ , ಕಾಳಿದಾಸ , ಭವಭೂತಿ , ಭಾರವಿ, ಬಾಣಾದಿಗಳೂ , ಪಂಪ , ರನ್ನ , ಹರಿಹರ , ನಾಗವರ್ಮ , ಕುಮಾರವ್ಯಾಸ, ರಾಘವಾಂಕ, ಲಕ್ಶ್ಮಿeಷ, ಷಡಕ್ಷರಿ , ರುದ್ರ ಭಟ್ಟರು , ಡಿ.ವಿ.ಜಿ. , ಕುವೆಂಪು , ಗೋವಿಂದ ಪೈ , ಪು.ತಿ.ನ ರವರ ಕವನಗಳನ್ನು ವಾಚಿಸುವರು. ಅವಧಾನಿಗಳು ಅದೇ ರಾಗ , ಶ್ರುತಿ , ತಾಳ , ಲಯಗಳಲ್ಲಿ ಕವಿಗಳ ಹೆಸರು ಹೇಳುತ್ತಾ , ಕವಿಯ ಶ್ರೇಷ್ಟ ಗುಣಗಳನ್ನು ಪ್ರೇಕ್ಷಕರ ಗಮನಕ್ಕೆ ತರುತ್ತ ಆಶುಕವಿತೆ ರಚಿಸಿ ಹಾಡುವರು. ಈ ಶತಾವಧಾನ ತುಮ್ಬುಗನ್ನಡದ ಶತಾವಧಾನವಾದ್ದರಿಂದ ಕನ್ನಡ ಕವಿ ಪುಂಗವರ ಶ್ರೇಷ್ಟ ಕವನಗಳನ್ನು , ಜನಪ್ರಿಯ ಗಮಕಿ ಕೆದಿಲಾಯರವರ ಸಿರಿ ಕಂಠ ದಲ್ಲಿ ಆಸ್ವಾದಿಸುವದು ಒಂದು ರೋಮಾಂಚಕ ಅನುಭವವಾಗಿತ್ತು. ಕೆದಿಲಾಯರ ಸಿರಿಕಂಟಕ್ಕೆ ಮುಕುಟಪ್ರಾಯವಾಗಿ ನಮ್ಮ ಜನಾನುರಾಗಿ ಡಾ. ರಾ. ಗಣೇಶ್ ರವರ ಜ್ಞಾನ ಭಂಡಾರ , ದ್ವನಿ ಮಾಧುರ್ಯ ಸವಿಯುವದೇ ಒಂದು ಭಾಗ್ಯ.
ಸಂಖ್ಯಾ ಬಂಧ . ಇದು ಪದಬಂಧವಿದ್ದಂತೆ. ಆರಂಭದಲ್ಲಿ ಪ್ರಚ್ಚಕರು ಅವಧಾನಿಗೆ ಒಂದು ಮೊತ್ತದ ಸಂಖ್ಯೆ ಹೇಳಿ , ಸಂಖ್ಯಾ ಬಂಧದ ಮನೆಗಳಲ್ಲಿ ತುಂಬಬೇಕಾದ ಸಂಖ್ಯೆಗಳನ್ನು , ಆಗಾಗ ಅವಧಾನದ ಮಧ್ಯೆ ಯಾವಾಗ ಬೇಕಾದರೂ ಅವಧಾನಿಯನ್ನು ತಡೆದು ಕೇಳುತ್ತಾರೆ. ಅವಧಾನಿಯು ದೀರ್ಘ ಯೋಚನೆಯಲ್ಲಿದ್ದಾಗ, ಇನ್ನೊಬ್ಬ ಪ್ರಚ್ಚಕರ ಸಮಸ್ಯೆ ಬಿಡಿಸುತ್ತಿದ್ದಾಗ ಮುಂತಾದ ಸಮಯದಲ್ಲಿ ಅವಧಾನಿಯ ಯೋಚನಾಲಹರಿಯನ್ನು ವಿಘ್ನಗೊಳಿಸಲು ಮತ್ತು ಅವಧಾನಿಯ ನೆನಪಿನ ಶಕ್ತಿಯನ್ನು ಒರೆಗೆ ಹಚ್ಚಲು ಇರುವದೀ ಸಂಖ್ಯಾ ಬಂಧ.
ಪ್ರಚ್ಚಕನು ಅವಧಾನಿಗೆ ಚಿತ್ರವೊಂದನ್ನುವಿವರಿಸಿ , ಆ ಚಿತ್ರದ ಭಾವ , ವಿಷಯ ಸರಿಹೊಂದುವಂತೆ ಚಿತ್ರ -ಕವಿತೆ ರಚಿಸಲು ಕೋರುತ್ತಾನೆ .
ಇನ್ನು ಅಪ್ರಸ್ತುತ ಪ್ರಸಂಗಿ. ಜನರೆಲ್ಲಾ ಒಪ್ಪಿಕೊಂಡಿರುವದು ಅಧಿಕಪ್ರಸಂಗಿ ಎಂದು. ಈ ವ್ಯಕ್ತಿಯ ಕೆಲಸವೇ ಅವಧಾನಿಯ ದಾರಿತಪ್ಪಿಸುವದು. ಲೋಕಜ್ನಾನವೆಲ್ಲ ಇರುವವನಾದರೆ " ಅವಧಾನಿಗಳೇ ಇಂದು ನಿಮ್ಮ ಕೈಯಲ್ಲಿ ಬಾಟಲಿ ಹಿಡಿದಿದ್ದಿರಲ್ಲ "ಎಂದು ಕುಚೋದ್ಯದ ಪ್ರಸ್ನೆ ಕೇಳಿ ಅವಧಾನಿಗೆ ಕಸಿವಿಸಿ ಮಾಡಬಹುದು. ಅದೇ ರೀತಿ ಜಾಣ ಅವಧಾನಿ " ಎತ್ತಿಗೆ ಔಷಧ ತರಲು ಬಾಟಲಿ ಕೈಯಲ್ಲಿ ಹಿಡಿದಿದ್ದೆ " ಎಂದುತ್ತರ ನೀಡಬಹುದು. ತಿರುಗಿ ಅಪ್ರಸ್ತುತ ಪ್ರಸಂಗಿ " ಆದರೆ ಅವಧಾನಿಗಳೇ ತೂರಾಡುತ್ತಿದ್ದಿರಲ್ಲ " ಎಂದರೆ , ನೀವು ತೂರಾಡುತ್ತಿದ್ದರಿಂದ , ಹಾಗೆ ಕಾಣಿಸಿತು , ಈಗ ನೋಡಿ ! ಎಂದು ಪ್ರೇಕ್ಷಕರನ್ನು ನಗೆಗಡಲಲ್ಲಿ ತೆeಲಿಸಬಹುದು. ಈ ಅಪ್ರಸ್ತುತ ಪ್ರಸಂಗಿ ಅವಧಾನಿಗಳೇ "ಕಾಮಕ್ಕೆ ಕೊನೆ ಎಂದು ? " ಎಂದು ಬ್ರಹ್ಮಚಾರಿ , ಅವಧಾನಿ ಗಣೇಶ್ ರವರನ್ನು ಕೇಳಿದಾಗ , " ಕಾಮಕ್ಕೆ ಫುಲ್ ಸ್ಟಾಪ್ ಇಲ್ಲ , ನೀವೇ ನೋಡಿ , ಇಂಗ್ಲಿಶ್ ನಲ್ಲಿ i.e ಬರೆಯುವಾಗ ಫುಲ್ ಸ್ಟಾಪ್ ಮೊದಲಿಗೆ ,ಆಮೇಲೆ ಕೊಮಾ ಎಂದು ನಗೆಗಡಲಲ್ಲಿ ತೇಲಿಸಿದರು. ಮುಂದುವರಿದು ಕಾಮವನ್ನು ಗೆಲ್ಲಲಾಗುವದಿಲ್ಲ , ಕಾಮಕ್ಕೆ ಸೋತು ಮಗ , ಮಗಳನ್ನು ಪಡೆದು , ಸಮಾಧಾನ ಕಂಡು ಸಮ್ರದ್ಧ ಜೀವನ ಸಾಗಿಸಬೇಕೆಂದು , ಈ ಬ್ರಹ್ಮಚಾರಿ ಸೋದಾಹರಣವಾಗಿ ವಿವರಿಸಿದರು . ಎಲ್ಲರೂ ತಲೆ ದೂಗಿದರು , ತಲೆ ಬಾಗಿದರು ಈ ವ್ಯಾಖ್ಯಾನಕೆ . ಅವಧಾನಿಗಳೇ ವಿವರಣೆ ಬೇಡ ಹೌದು , ಇಲ್ಲ ಒಂದೇ ಉತ್ತರ ಕೊಡಿ ಎಂದು " ನೀವು ಹೆಂಡ ಕುಡಿಯುವದು ಬಿಟ್ಟಿದ್ದೀರನ್ತಲ್ಲ ! ಎಂದು , ಅವಧಾನಿ ತೀವ್ರತರ ಯೋಚನೆಯಲ್ಲಿದ್ದಾಗ ಒಮ್ಮೆಲೇ ಪ್ರಶ್ನೆ ಎಸೆಯಬಹುದಾದ ಸೌಭಾಗ್ಯ ಈ ಅಪ್ರಸ್ತುತ ಪ್ರಸಂಗಿಯದು. ನಿಮಗೆeನೆನ್ನಿಸುವದು ? ಅವಕಾಶ ಒದಗಿದರೆ ಅವಧಾನಿಯಾಗಬಯಸುವಿರೋ ? ಇಲ್ಲ ಅಪ್ರಸ್ತುತ ಪ್ರಸಂಗಿಯಾಗಬಯಸುವಿರೋ ?
ಡಾ.ರಾ.ಗಣೇಶ್ ರವರು ಅವಧಾನದ ಕಾಲದಲ್ಲಿ ಸದಾಕಾಲ ನಮ್ಮಲ್ಲಿ ಮನನವಾಗುವಂತಹ ನುಡಿಮುತ್ತುಗಳನ್ನು ಸುರಿಸುತ್ತಾರೆ. ಅಮ್ರತತ್ವ ಬರುವದು ಆತ್ಮ ತತ್ವದಿಂದ ಮಾತ್ರ. When we approach great people near and near , we realise they are also people ! ನನಗೆ ( ಗಣೇಶ್ ) ಒನ್ದುನೂರ ಐವತ್ತು ವರ್ಷಗಳ ಜನರ ಸಂಪರ್ಕವಿದೆ ಏಕೆಂದರೆ ಚಿಕ್ಕಂದಿನಲ್ಲಿ ಎಂಭತ್ತು ಆಯಸ್ಸಿನ ಜನಗಳೊಡನೆ ಬೆರೆಯಲು ಆರಂಭಿಸಿ ಇಂದು ಇಪ್ಪತ್ತು ಇಪ್ಪತೈದು ಆಯಸ್ಸಿನ ಜನಗಳೊಡನೆ ಬೇರೆಯುತ್ತಿದ್ದೇನೆ. ಕ್ಯಾಮೆರಾ ಹಿಡಿದು ಫೋಟೋಗ್ರಫಿ ಮಾಡುವದಿಲ್ಲ ಏಕೆಂದರೆ ಎಲ್ಲವನ್ನು ಮನಸ್ಸಿನ ಕ್ಯಾಮರಾದಲ್ಲೇ ಹಿಡಿದಿಡುವ ಬಯಕೆ. ಇಂಗ್ಲಿಷ್ , ಕನ್ನಡ , ತೆಲಗು , ತಮಿಳ್ , ಸಂಸ್ಕೃತ ಸಿನೆಮಾಗಳನ್ನು ನೋಡುತ್ತಾರೆ . ಪುಸ್ತಕಗಳನ್ನು ಓದುತ್ತಾರೆ.
ಪ್ರಚ್ಚಕರಲ್ಲೋಬ್ಬರಾದ ನಿಜಗುಣ ಸ್ವಾಮಿಗಳು ಗಣೇಶ್ರವರ ಕುರಿತು ಪದ್ಯವನ್ನೇ ಬರೆದಿದ್ದಾರೆ. ವಿಶ್ವಕ್ಕೊಬ್ಬನೇ ಆರ್ . ಗಣೇಶ್ ಎಂದು ಸಾರ್ವತ್ರಿಕವಾಗಿ ಸಾರಿದ್ದಾರೆ.
ಶತಾವಧಾನದ ಕೊನೆಯಲ್ಲಿ ಆತ್ಮೀಯವಾಗಿ ಡಾ. ಆರ್. ಗಣೇಶ್ ರವರನ್ನು ಸನ್ಮಾನಿಸಲಾಯಿತು. ಅಭಿಮಾನಿ ಸಭಿಕರೆಲ್ಲ ಎದ್ದು ನಿಂತು ಕರತಾಡನ ಮಾಡತೊಡಗಿದರು. ಎಷ್ಟು ಸಮಯ ಸಂದರೂ ಕರತಾಡನ ನಿಲ್ಲಲೇ ಇಲ್ಲ. ಗಣೇಶ್ ರವರು ಸೂಚಿಸಿದರೂ ಕರತಾಡನ ನಿಲ್ಲಲಿಲ್ಲ . ಗಣೇಶ್ ರವರು ಎದ್ದು ಕೈ ಮುಗಿಯುತ್ತ ತೆರೆಯ ಮರೆ ಸೇರಿದಾಗಲೇ ಧೀರ್ಘ ಕರತಾಡನ ನಿಂತಿದ್ದು.
ಈ ಎಲ್ಲಾ ಸಾಲುಗಳ ಜೊತೆ ಇನ್ನೊಂದು ಸಾಲು ಸೇರಿಸಿದರೆ ಹೆಚ್ಚಾಗಲಿಕ್ಕಿಲ್ಲ. ನಿನ್ನೆ ( ೦೯.೧೨.೨೦೧೨ ) ಪ್ರೊ. ನಾರಾಯಣಾಚಾರ್ಯರ ಅಭಿನಂದನಾ ಸಮಾರಂಭಕ್ಕೆ ಹೋಗಿದ್ದೆನು. ಗಣೆeಶ್ರವರಿಂದ ಅಭಿನಂದನಾ ಮಾತುಗಳು ಎಂದೊಡನೆ ಕಿವಿಗಡಚಿಕ್ಕುವಂತೆ ಸಭಿಕರ ಕರತಾಡನ ಕೇಳಿ ಮೂಕ ವಿಸ್ಮಿತನಾದೆ.
( ದಿನಾಂಕ ೩೦.೧೧.೨೦೧೨,ಸಾಯಂಕಾಲ ೫ ರಿಂದ ೯ ; ೦೧.೧೨.೨೦೧೨ ಬೆಳಿಗ್ಗೆ ೧೦ ರಿಂದ ೨ ಮತ್ತು ಸಾಯಂಕಾಲ ೪ ರಿಂದ ೮ ಹಾಗೂ ೦೨.೧೨.೨೦೧೨ ಬೆಳಿಗ್ಗೆ ೧೦ ರಿಂದ ೨ ಮತ್ತು ಸಾಯಂಕಾಲ ೪ ರಿಂದ ೮. ೩೦ ರ ಅವಧಿಯಲ್ಲಿ ಅವ್ಯಾಹತವಾಗಿ nmkrv college , ಮಂಗಳ ಮಂಟಪ , ಜಯನಗರ ದಲ್ಲಿ ಎರಡನೇ ಶತಾವಧಾನ ಡಾ. ರಾ. . ಗಣೇಶ್ ರವರಿಂದ ನಡೆಯಿತು. ಇಪ್ಪತ್ತೊಂದು ವರ್ಷಗಳ ಹಿಂದೆ ಮೊದಲನೇ ಶತಾವಧಾನ ಭಾರತೀಯ ವಿದ್ಯಾಭವನದಲ್ಲಿ ಬೆಳಿಗ್ಗೆಯಿಂದ ರಾತ್ರಿ ಒಂದು ದಿವಸ ನಡೆದಿತ್ತು. )
ಹರಿಹರ ಭಟ್ , ಬೆಂಗಳೂರು.
ಶಿಕ್ಷಕ , ಚಿಂತಕ , ವಿಮರ್ಶಕ , ಫೇಸ್ ಬುಕ್ ಬರಹಗಾರ .
ಡಿಸೆಂಬರ್ ೧೦ , ೨೦೧೨.
................. English version of this posting would follow ................
ತಮ್ಮ ಅಭಿಮಾನ-ವಿಶ್ವಾಸಗಳ ಮಹಾಪೂರದಲ್ಲಿ ನಾನು ಕೊಚ್ಚಿಹೋಗಿದ್ದೇನೆ. ದಯಮಾಡಿ ನನ್ನನ್ನು ಇಷ್ಟೊಂದು ಹೊಗಳಿಕೆಯ ಹೊನ್ನಶೂಲಕ್ಕೇರಿಸಬೇಡಿರಿ. ನಿಮ್ಮ ಮಾತುಗಳೆಷ್ಟಕ್ಕೋ ನಾನಿನ್ನೂ ಪಾತ್ರನಲ್ಲ.(ಉದಾ: ನನಗೆ ಉರ್ದೂಭಾಷೆಯು ಹಿಂದಿಯ ಜೊತೆ ಕಲೆತಿರುವ ಮಟ್ಟಿಗಲ್ಲದೆ ಮಿಗಿಲಾಗಿ ಮತ್ತೇನೂ ಬಾರದು,; ನಾನೇನೂ ದೊಡ್ಡ ಆಚಾರ-ಸಂಪ್ರದಾಯಗಳ ಆಗರವಲ್ಲ. ನನ್ನ ದೋಷ-ದೌರ್ಬಲ್ಯಗಳು ಹತ್ತಾರು. ನನ್ನಲ್ಲಿ ಯಾವ ದಿವ್ಯತೇಜಸ್ಸೂ ಇಲ್ಲ; ಐವತ್ತರ ಹರೆಯದ ಸಾಮಾನ್ಯದಕ್ಷಿಣಭಾರತೀಯನ ಮುಖವೆಷ್ಟು ಮಾತ್ರ ಬೆಳಗಬದುದೋ ಅಷ್ಟೇ ನನ್ನ ಕಾಂತಿ) ದಯಮಾಡಿ ಸಾಮಾನ್ಯನಾದ ನನ್ನನ್ನು ಹಾಗೆಯೇ ಕಾಣಿರಿ, ಇನ್ನುಳಿದವರಿಗೂ ಹಾಗೆಯೇ ಕಾಣಿಸುವಂತಿರಲಿ. ನನಗಿರುವ ಅಲ್ಪಸ್ವಲ್ಪ ಪ್ರತಿಭೆ-ವ್ಯಾಸಂಗಗಳನ್ನು ನಾನು ಯಾವ ಸೋಗಿನ ವಿನಯವೂ ಇಲ್ಲದೆ ಒಪ್ಪಿ ಹೇಳಿಕೊಳ್ಳಬಲ್ಲೆ. ಆದರೆ ದಯಮಾಡಿ ನನ್ನನ್ನು ನಾನಲ್ಲದ ಮತ್ತೊಬ್ಬ ಮಹನೀಯನನ್ನಾಗಿ ಚಿತ್ರಿಸಬೇಡಿರಿ.ನಾನು ನನ್ನ ಮಿತಿಗಳಲ್ಲಿ ಇರಲು ಅನುವು ಮಾಡಿಕೊಡಿರಿ:-). ಜೊತೆಗೆ ಪದ್ಯಪಾನದಲ್ಲಿ ಯಾವುದೇ ವ್ಯಕ್ತಿಪೂಜೆ ಬೇಡ.