ನಾನೇನೂ ಈ ಕೃತಿ ಇನ್ನೂ ಓದಿಲ್ಲ. ಆದರೆ ಪುಸ್ತಕ ಕುರಿತು ಇಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಈ ಮಹಾಶಯರುಗಳೆಲ್ಲ ಕೃತಿ ಓದಿ ಅಭಿಪ್ರಾಯ ವ್ಯಕ್ತಪಡಿಸಿದರೆ? ಎಂಬ ಸಂಶಯ ಉಂಟಾಗುತ್ತದೆ. ಹೌದಾದರೆ ಕೃತಿ ಬಿಡುಗಡೆಯಾದ ಎರಡೇ ದಿವಸಗಳಲ್ಲಿ ಈ ಎಲ್ಲ ಮಹಾಶಯರುಗಳು ಅದ್ಯಾವ ಚಮತ್ಕಾರದಿಂದ ಪುಸ್ತಕ ಪಡೆದು, ಅಲ್ಲಿರುವ ಅಂಶಗಳನ್ನು ಜೀರ್ಣಿಸಿ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು ಎಂಬ ಜಿಜ್ಞಾಸೆ ಉಂಟಾಗುತದೆ. ಒಂದು ಪತ್ರಿಕೆಯ ವರದಿಗಾರ ನೀಡಿದ ವರದಿಯನ್ನಾಧರಿಸಿ ಈ ರೀತಿ ಅಭಿಪ್ರಾಯ ಮಂಡನೆ ಸರಿಯೇ ?
ನಮ್ಮ ಸನಾತನ ಸಂಸ್ಕ್ರತಿ ಯಲ್ಲಿ ಚಾರ್ವಾಕನ ಉದಾಹರಣೆ ಬರುತ್ತದೆ. ಅಲ್ಲಿ ಚಾರ್ವಾಕನ ಸ್ಥಾನ ಇಂದಿನ ಎಡಬಿಡಂಗಿಗಳಂತಲೂ ಆಗಿರಲಿಲ್ಲ ಅಥವಾ ತನ್ನ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡಿ ವಂಧಿ ಮಾಘಧರಿಂದ ಚಪ್ಪಾಳೆ ಗಿಟ್ಟಿಸುವ ವರ್ತಮಾನದ ಬಹುತೇಕ ವಿಧ್ವಂಸರುಗಳಂತೆಯೂ ಇರಲಿಲ್ಲ. ಅಂತೆಯೇ ಶ್ರೀ ಶಂಕರರ ಮತ್ತು ಮಂಡನ ಮಿಶ್ರರ ಅವಿರತ ಅಹೋ ರಾತ್ರಿ ಮಂಡನೆ ಖಂಡನೆಗಳಿಂದೊಡಗೂಡಿದ ಚರ್ಚೆಯನ್ನೂ ಉದಾಹರಿಸಬಹುದು.
ಇಂದು ಜಗತ್ತು ಚಿಕ್ಕದಾಗುತ್ತಿದೆ ಅಂತೆಯೇ ಸಮಾಜದ ಗಣ್ಯರ ಮನಸ್ಸು, ಬುದ್ಧಿಗಳೂ ಆಕುಂಚನ ಹೊಂದುತ್ತಿವೆ. ಇದು ವಿಷಾದನೀಯ ಮತ್ತು ಸಮಾಜ ವಿಕಸಿತತೆಗೆ ಹಾನಿಕರ.
http://epapervijayavani.in/Details.aspx?id=8093&boxid=14755119
ಹರಿಹರ ಭಟ್, ಬೆಂಗಳೂರು .
ಚಿಂತಕ, ವಿಮರ್ಶಕ.
August 27 , 2013.

No comments:
Post a Comment