ಜನರನ್ನು ಬೇಸ್ತು ಬೀಳಿಸುವ ಸುದ್ದಿ ಮಾಧ್ಯಮಗಳು ಮತ್ತು ಟೀ . ವಿ ವಾಹಿನಿಗಳು .
ಈ ದಿನಗಳಲ್ಲಿ ಯಾವುದೇ ಸುದ್ದಿ ಮೂಲಗಳ ಸತ್ಯಾಸತ್ಯತೆಯನ್ನು ಅರಿಯುವ ಗೋಜಿಗೆ ಹೋಗದೆ , ಟಿ. ಆರ್. ಪಿ ಹೆಚ್ಚಿಸುವ ಒಂದೇ ಉದ್ದೇಶದಿಂದ ಯಾರೋ ಪುಂಡ ಪೋಕರಿಗಳು ನೀಡುವ ಸುದ್ದಿಯನ್ನು ಆಧರಿಸಿ ಕೂಡಲೇ ಪ್ರಸಾರ ಮಾಡುವ ತೆವಲಿನಿಂದ ಸುದ್ದಿ ಮಾಧ್ಯಮಗಳು ಹೊರ ಬರಬೆಕಾಗಿದೆ . ಅಲ್ಲದೆ ತಾವು ಮಾಡಿದ ತಪ್ಪುಗಳನ್ನು ಮುಚ್ಚಿ ಹಾಕಲು ಅನುಕೂಲವಾಗುವಂತೆ ಎರಡು ಮೂರು ಸುದ್ದಿ ವಾಹಿನಿಗಳು, ಪತ್ರಿಕೆಗಳು ಮುಂತಾದವುಗಳ ಒಡೆತನ ಹೊಂದಿ, ಒಂದೆಡೆ ನೀಡಿದ ಸುದ್ದಿ ಸುಳ್ಳೆಂದು ಜಗ ಜಾಹೀರಾದಾಗ , ಆ ಸುದ್ದಿ ಸುಳ್ಳೆಂದು ತಿಳಿದುಬಂದಿದೆಯೆಂದು ಇನ್ನೊಂದು ತಮ್ಮದೇ ಒಡೆತನದ ಸುದ್ದಿ ಮಾದ್ಯಮದಲ್ಲಿ ಪ್ರಕಟಿಸಿ , ತಮ್ಮ ಅಜಾಗರೂಕತೆಯನ್ನು ಮುಚ್ಚಿಹಾಕುವ ಪ್ರವ್ರತ್ತಿ ಜಾಸ್ತಿಯಾಗುತ್ತಿದೆ.
ಮಾಧ್ಯಮ ಮಿತ್ರರ ಈ ಟಿ. ಆರ್. ಪಿ ತೆವಲುಗಳನ್ನು ದುರುಪಯೋಗಪಡಿಸಿಕೊಂಡು ಸಮಾಜ ಘಾತುಕ ವ್ಯಕ್ತಿಗಳು, ರಾಜಕೀಯ ವಿರೋಧಿಗಳ ವಿರುದ್ಧ ಪಿತೂರಿ ನಡೆಸಿ ತಮ್ಮ ಬೇಳೆ ಬೇಯ್ಸಿಕೊಳ್ಳುವ ಕುಟಿಲ ರಾಜಕಾರಣಿಗಳು........ ಇತ್ಯಾದಿ ವ್ಯವಸ್ಥೆಯ ದುರುಪಯೋಗಪಡಿಸಿಕೊಳ್ಳುತ್ತಿರುವದು ಆಘಾತಕಾರಿ ವಿಚಾರ.
ಆದರಿಂದ ತಮ್ಮ ಮೇಲೆ ಸದಾ ಸ್ವನಿಯಂತ್ರಣ ಹೊಂದಿರಲಿ, ಸಮಾಜಕ್ಕೆ ಪತ್ರಿಕಾ ಮಿತ್ರರಿಂದ ಒಳ್ಳೆಯ ಸಂದೇಶಗಳು ರವಾನಿಸಲ್ಪಡಲಿ, ಸ್ವಸ್ತ ಸಮಾಜ ಕೆಡಲು ಪತ್ರಿಕಾ ಮಿತ್ರರ ಕೊಡುಗೆ ಇರದಿರಲಿ ಮತ್ತು ಈ ದಿಶೆಯಲ್ಲಿ ಪತ್ರಿಕಾ ಮಿತ್ರರು ಸ್ವ ಅವಲೋಕನ ಮಾಡಿಕೊಳ್ಳಲಿ ಎಂಬ ಸದಾಶಯ ಇಂದಿನ ಕಾಲಘಟ್ಟದಲ್ಲಿ ಬಹು ಪ್ರಸ್ತುತವಾಗುತ್ತಿದೆ.
ಹರಿಹರ ಭಟ್, ಬೆಂಗಳೂರು .
ಶಿಕ್ಷಕ, ಚಿಂತಕ, ವಿಮರ್ಶಕ
ಸೆಪ್ಟೆಂಬರ್ ೦೫ , ೨೦೧೩
www.facebook.com/hariharsatyanarayan.bhat
www.hariharbhat.blogspot.com